Home
ಮೊಬೈಲ್

Vivo T4 Ultra ಮತ್ತು Vivo T4 Lite ಫೋನ್‌ಗಳ ಆಗಮನ ಖಚಿತ!

ಜನಪ್ರಿಯ ಮೊಬೈಲ್ ಬ್ರ್ಯಾಂಡ್ ವಿವೋ ತನ್ನ ಜನಪ್ರಿಯ ಟಿ ಸರಣಿಯನ್ನು ಮತ್ತೆ ವಿಸ್ತರಿಸಲು ಸಜ್ಜಾಗಿದೆ. ಇತ್ತೀಚಿನ ಬೆಳವಣಿಗೆಗಳ ಪ್ರಕಾರ, ಮುಂಬರುವ ಸ್ಮಾರ್ಟ್‌ಫೋನ್‌ಗಳಾದ Vivo T4 Ultra ಮತ್ತು Vivo T4 Lite 5G ಫೋನ್‌ಗಳು ಬ್ಲೂಟೂತ್ ಎಸ್‌ಐಜಿ ಪ್ರಮಾಣೀಕರಣವನ್ನು ಪಡೆದುಕೊಂಡಿವೆ. ಈ ಬೆಳವಣಿಗೆಗಳು ಈ ಸಾಧನಗಳ ಬಿಡುಗಡೆಯು ಸನ್ನಿಹಿತವಾಗಿದೆ ಎಂಬುದನ್ನು ಸೂಚಿಸುತ್ತವೆ. ಈ ಹಿಂದೆ ಗೀಕ್‌ಬೆಂಚ್ ಡೇಟಾಬೇಸ್‌ನಲ್ಲಿ Vivo V2504 ಮಾದರಿ ಸಂಖ್ಯೆಯೊಂದಿಗೆ ಕಾಣಿಸಿಕೊಂಡಿದ್ದ ಸಾಧನವು Vivo V50 pro ಎಂದು ಭಾವಿಸಲಾಗಿತ್ತು. ಆದರೆ, ಈಗ ಅದು Vivo T4 Ultra ಎಂದು ಅಧಿಕೃತವಾಗಿ ದೃಢಪಟ್ಟಿದೆ.

ಬ್ಲೂಟೂತ್ ಎಸ್‌ಐಜಿ ಪ್ರಾಧಿಕಾರದ ಅನುಮೋದನೆಯು ಈ ಮಾಹಿತಿಯನ್ನು ಖಚಿತಪಡಿಸಿದ್ದು, Vivo T4 Ultra ಫೋನ್‌ T4 ಸರಣಿಯಲ್ಲೇ ಉನ್ನತ ಮಾದರಿಯಾಗಿ ಬರಲಿದೆ. ಈಗಾಗಲೇ Vivo T4x 5G ಮತ್ತು Vivo T4 5G ಮಾರುಕಟ್ಟೆಯಲ್ಲಿವೆ. ಮತ್ತೊಂದು ಗಮನಾರ್ಹ ಬೆಳವಣಿಗೆಯೆಂದರೆ Vivo T4 Ultra ಜೊತೆಗೆ Vivo T4 Lite 5G ಫೋನ್ ಕೂಡ ಬ್ಲೂಟೂತ್ ಎಸ್‌ಐಜಿ ಪ್ರಮಾಣೀಕರಣ ಪಡೆದಿದೆ. V2509 ಮಾದರಿ ಸಂಖ್ಯೆಯನ್ನು ಹೊಂದಿರುವ ಈ ಸಾಧನವು ಡೈಮೆನ್ಸಿಟಿ 6300 ಚಿಪ್‌ಸೆಟ್ ಅನ್ನು ಒಳಗೊಂಡಿರುವ ಐಕ್ಯೂಒಒ Z9 ಲೈಟ್ 5ಜಿ ಫೋನಿನ ಮರುಬ್ರಾಂಡೆಡ್ ಆವೃತ್ತಿಯಾಗಿರಬಹುದು ಎಂದು ನಿರೀಕ್ಷಿಸಲಾಗಿದೆ.

Vivo T4 Ultra ಸ್ಮಾರ್ಟ್‌ಫೋನ್ ಕುರಿತು ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಸಾಧನವು ಶಕ್ತಿಯುತ ಡೈಮೆನ್ಸಿಟಿ 9300 ಪ್ಲಸ್ ಚಿಪ್‌ಸೆಟ್ ಅನ್ನು ಒಳಗೊಂಡಿರಲಿದೆ. ಇದರೊಂದಿಗೆ 8 ಜಿಬಿ RAM ಮತ್ತು ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಮ್ ಇರಲಿದೆ ಎಂದು ಗೀಕ್‌ಬೆಂಚ್ ಪಟ್ಟಿಯು ಬಹಿರಂಗಪಡಿಸಿದೆ. ಕಳೆದ ವರ್ಷ ಬಿಡುಗಡೆಯಾದ Vivo T3 Ultra ಫೋನ್ ಡೈಮೆನ್ಸಿಟಿ 9200 ಪ್ಲಸ್ ಚಿಪ್‌ಸೆಟ್‌ನೊಂದಿಗೆ ಬಂದಿತ್ತು ಎಂಬುದನ್ನು ಇಲ್ಲಿ ಗಮನಿಸಬಹುದು. ಈ ಹೊಸ ಶಕ್ತಿಯುತ ಚಿಪ್‌ಸೆಟ್‌ನಿಂದಾಗಿ T4 Ultra ಉತ್ತಮ ಕಾರ್ಯಕ್ಷಮತೆಯನ್ನು ನೀಡುವ ನಿರೀಕ್ಷೆಯಿದೆ. ಮತ್ತು ಬಿಡುಗಡೆಯು ಸದ್ಯದಲ್ಲೇ ಆಗುವ ಸಾಧ್ಯತೆ ಇದೆ.

Vivo T4 Ultra ಮತ್ತು Vivo T4 Lite ಫೋನ್‌ಗಳ ಆಗಮನ ಖಚಿತ!

ಏಕೆಂದರೆ, ಇತ್ತೀಚೆಗೆ ಭಾರತದಲ್ಲಿ Vivo T3 Ultra ಫೋನ್ ಬೆಲೆಯಲ್ಲಿ ರೂ. 2,000 ಕಡಿತವನ್ನು ಮಾಡಲಾಗಿದೆ. ಸಾಮಾನ್ಯವಾಗಿ, ಹೊಸ ಮಾದರಿ ಬಿಡುಗಡೆಗೆ ಮುಂಚಿತವಾಗಿ ಹಳೆಯ ಮಾದರಿಯ ಬೆಲೆಯನ್ನು ಕಡಿತಗೊಳಿಸಲಾಗುತ್ತದೆ. ಹಿಂದಿನ ಮಾದರಿ Vivo T3 Ultra ಫೋನನ್ನು 2024 ರಲ್ಲಿ ರೂ. 31,999 ಕ್ಕೆ ಬಿಡುಗಡೆ ಮಾಡಲಾಗಿತ್ತು. ಇದು 6.78-ಇಂಚಿನ AMOLED 1.5K 120Hz ಡಿಸ್ಪ್ಲೇ, ಡೈಮೆನ್ಸಿಟಿ 9200+ ಚಿಪ್, 12GB RAM, 256GB ವರೆಗಿನ ಸಂಗ್ರಹಣೆ, 80W ಚಾರ್ಜಿಂಗ್‌ನೊಂದಿಗೆ 5,500mAh ಬ್ಯಾಟರಿ ಮತ್ತು 50-ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಸೆಟಪ್‌ನಂತಹ ಪ್ರಮುಖ ವೈಶಿಷ್ಟ್ಯಗಳನ್ನು ಒಳಗೊಂಡಿತ್ತು.

Vivo T4 ಸರಣಿಯಲ್ಲಿ Vivo T4 pro ಕೂಡ ಸೇರುವ ಸಾಧ್ಯತೆ ಇದೆ. ಆದಾಗ್ಯೂ, ಈ ಮಾದರಿಯ ಮಾದರಿ ಸಂಖ್ಯೆ ಮತ್ತು ಪ್ರಮುಖ ವಿಶೇಷಣಗಳ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಒಟ್ಟಾರೆಯಾಗಿ, ವಿವೋ ತನ್ನ ಟಿ ಸರಣಿಯನ್ನು ವಿಸ್ತರಿಸಲು ಮತ್ತು ವಿವಿಧ ಬೆಲೆ ವಿಭಾಗಗಳಲ್ಲಿ ಸ್ಪರ್ಧಾತ್ಮಕ ಉತ್ಪನ್ನಗಳನ್ನು ನೀಡಲು ಸಜ್ಜಾಗಿದೆ ಎಂದು ಈ ಬೆಳವಣಿಗೆಗಳು ಸೂಚಿಸುತ್ತವೆ. ಮುಂಬರುವ ದಿನಗಳಲ್ಲಿ ಈ ಹೊಸ ಸ್ಮಾರ್ಟ್‌ಫೋನ್‌ಗಳ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ. ಒಟ್ಟಾರೆಯಾಗಿ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ವಿವೋ ತನ್ನ ಸ್ಥಾನವನ್ನು ಬಲಪಡಿಸುವ ಪ್ರಯತ್ನದಲ್ಲಿದೆ.

Best Mobiles in India

English summary
Vivo T4 Ultra and T4 Lite have been officially confirmed by the Bluetooth SIG certification. This listing suggests that their launch is approaching soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+