Home
ಮೊಬೈಲ್

ಬಿಡುಗಡೆಗೂ ಮುನ್ನವೇ Vivo T4 Ultra ವೈಶಿಷ್ಟ್ಯಗಳು ಮತ್ತು ಬೆಲೆ ಅನಾವರಣ!

ಭಾರತೀಯರ ನೆಚ್ಚಿನ ಮೊಬೈಲ್‌ ಬ್ರ್ಯಾಂಡ್‌ಗಳಲ್ಲಿ ಒಂದಾದ ವಿವೋ ತನ್ನ ಹೊಸ ಸ್ಮಾರ್ಟ್‌ಫೋನ್ Vivo T4 Ultra ಅನ್ನು ಭಾರತದಲ್ಲಿ ಶೀಘ್ರದಲ್ಲೇ ಅನಾವರಣಗೊಳಿಸಲು ಸಿದ್ಧತೆ ನಡೆಸಿದೆ. ಕಳೆದ ವರ್ಷದ T3 Ultra ಸ್ಮಾರ್ಟ್‌ಫೋನಿನ ಯಶಸ್ಸಿನ ನಂತರ, T4 5G ಮತ್ತು T4x 5G ಮಾದರಿಗಳ ಸರಣಿಯಲ್ಲಿ ಇದು ನಾಲ್ಕನೇ ಸ್ಮಾರ್ಟ್‌ಫೋನ್ ಆಗಿ ಮಾರುಕಟ್ಟೆಗೆ ಪ್ರವೇಶಿಸಲಿದೆ ಎಂಬುದು ಈಗಾಗಲೇ ಭಾರೀ ಸುದ್ದಿಯಾಗಿದೆ. ವಿವೋ ಅಧಿಕೃತವಾಗಿ ಈ ಕುರಿತು ಯಾವುದೇ ವಿವರಗಳನ್ನು ದೃಢೀಕರಿಸದಿದ್ದರೂ, ಖ್ಯಾತ ಟಿಪ್‌ಸ್ಟರ್ ಯೋಗೇಶ್ ಬ್ರಾರ್ ಅವರು ಈ ಸ್ಮಾರ್ಟ್‌ಫೋನ್‌ನ ಬಿಡುಗಡೆಯ ಸಮಯ ಮತ್ತು ಪ್ರಮುಖ ವೈಶಿಷ್ಟ್ಯಗಳ ಕುರಿತು ಮಹತ್ವದ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.!

ಹೌದು, ಯೋಗೇಶ್ ಬ್ರಾರ್ ಅವರ ಪ್ರಕಾರ Vivo T4 Ultra ಸ್ಮಾರ್ಟ್‌ಫೋನ್ ಅನ್ನು ಮುಂದಿನ ವಾರದ ಆರಂಭದಲ್ಲಿ, ಅಂದರೆ ಜೂನ್ ಮೊದಲ ವಾರದಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ Vivo T4 Ultra ಸ್ಮಾರ್ಟ್‌ಫೋನ್ ಅಧಿಕೃತ ಬಿಡುಗಡೆ ದಿನಾಂಕವನ್ನು ವಿವೋ ಕಂಪೆನಿ ಪ್ರಕಟಿಸುವ ನಿರೀಕ್ಷೆ ಇದೆ. ಬೆಲೆಯ ವಿಚಾರಕ್ಕೆ ಬಂದರೆ, ಭಾರತದಲ್ಲಿ Vivo T4 Ultra ಸ್ಮಾರ್ಟ್‌ಫೋನ್ ಬೆಲೆ ₹30,000 ಕ್ಕಿಂತ ಕಡಿಮೆ ಇರಬಹುದೆಂದು ಅಂದಾಜಿಸಲಾಗಿದೆ. ಇದು ಮಧ್ಯಮ ಶ್ರೇಣಿಯ ಫೋನ್ ಆಗಿ ಉತ್ತಮ ಸ್ಪರ್ಧೆಯನ್ನು ನೀಡುವ ಸಾಧ್ಯತೆ ಇದೆ ಎಂದು ಯೋಗೇಶ್ ಬ್ರಾರ್ ಅವರು ಹೇಳಿದ್ದಾರೆ

ಇಷ್ಟೇ ಅಲ್ಲದೆ, Vivo T4 Ultra ಸ್ಮಾರ್ಟ್‌ಫೋನ್ ಹೊಂದಿರುವ ನಿರೀಕ್ಷಿತ ಫೀಚರ್ಸ್ ಕುರಿತು ಸಹ ಯೋಗೇಶ್ ಬ್ರಾರ್ ಅವರು ತಿಳಿಸಿದ್ದಾರೆ. ಮುಂಬರುವ Vivo T4 Ultra ಸ್ಮಾರ್ಟ್‌ಫೋನಿನ ಕಾರ್ಯಕ್ಷಮತೆಯ ವಿಚಾರದಲ್ಲಿ ಪ್ರಬಲವಾಗಿರಲಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 9300 ಅಥವಾ ಡೈಮೆನ್ಸಿಟಿ 9300e ಚಿಪ್‌ಸೆಟ್‌ನಿಂದ ಚಾಲಿತವಾಗಲಿದೆ ಎಂದು ಯೋಗೇಶ್ ಬ್ರಾರ್ ಅವರು ಬಹಿರಂಗಪಡಿಸಿದ್ದಾರೆ. ಡಿಸ್ಪ್ಲೇ ವಿಭಾಗದಲ್ಲಿ, Vivo T4 Ultra ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ದರ ಮತ್ತು 1.5K ರೆಸಲ್ಯೂಶನ್‌ನೊಂದಿಗೆ 6.67-ಇಂಚಿನ pOLED ಡಿಸ್ಪ್ಲೇಯನ್ನು ಒಳಗೊಂಡಿರುತ್ತದೆ. ಇದು ತೀಕ್ಷ್ಣವಾದ ಮತ್ತು ಸ್ಪಷ್ಟವಾದ ದೃಶ್ಯ ಅನುಭವವನ್ನು ನೀಡಲಿದೆ ಎಂದಿದ್ದಾರೆ.

ಬಿಡುಗಡೆಗೂ ಮುನ್ನವೇ Vivo T4 Ultra ವೈಶಿಷ್ಟ್ಯಗಳು ಮತ್ತು ಬೆಲೆ ಅನಾವರಣ!

ಸಾಫ್ಟ್‌ವೇರ್ ವಿಭಾಗದಲ್ಲಿ, Vivo T4 Ultra ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಅನ್ನು ಫನ್‌ಟಚ್ ಓಎಸ್ 15 ಸ್ಕಿನ್‌ನೊಂದಿಗೆ ರನ್ ಮಾಡುತ್ತದೆ, ಇದು ಇತ್ತೀಚಿನ ವೈಶಿಷ್ಟ್ಯಗಳು ಮತ್ತು ಸುಧಾರಣೆಗಳನ್ನು ನೀಡುತ್ತದೆ. ಕ್ಯಾಮೆರಾ ವಿಭಾಗದಲ್ಲಿ, Vivo T4 Ultra ಸ್ಮಾರ್ಟ್‌ಫೋನಿನಲ್ಲಿ OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಬೆಂಬಲದೊಂದಿಗೆ 50MP ಸೋನಿ IMX921 ಪ್ರಾಥಮಿಕ ಸಂವೇದಕ ಮತ್ತು 50MP ಪೆರಿಸ್ಕೋಪ್ ಲೆನ್ಸ್ ಅನ್ನು ಒಳಗೊಂಡ ಡ್ಯುಯಲ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ. ಮುಂಭಾಗದಲ್ಲಿ, ಉತ್ತಮ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಆಟೋಫೋಕಸ್‌ನೊಂದಿಗೆ 50MP ಸೆಲ್ಫಿ ಕ್ಯಾಮೆರಾವನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದ್ದಾರೆ.

ಬ್ಯಾಟರಿ ವಿಷಯದಲ್ಲಿ, Vivo T4 Ultra ಸ್ಮಾರ್ಟ್‌ಫೋನ್ ಸುಮಾರು 6,000 mAh ಸಾಮರ್ಥ್ಯದ ಬೃಹತ್ ಬ್ಯಾಟರಿಯನ್ನು ಹೊಂದಿರುವ ಸಾಧ್ಯತೆ ಇದೆ. ಜೊತೆಗೆ, 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿರುವುದರಿಂದ, ಫೋನ್ ಅನ್ನು ವೇಗವಾಗಿ ಚಾರ್ಜ್ ಮಾಡಬಹುದು ಎಂದು ತಿಳಿಸಿದ್ದಾರೆ. ಒಟ್ಟಾರೆಯಾಗು, Vivo T4 Ultra ಪ್ರಬಲ ಪ್ರೊಸೆಸರ್, ಉತ್ತಮ ಡಿಸ್ಪ್ಲೇ, ಅತ್ಯಾಧುನಿಕ ಕ್ಯಾಮೆರಾಗಳು ಮತ್ತು ದೀರ್ಘಕಾಲೀನ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಂತೆ ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಬರಲಿದೆ ಎಂದುಯೋಗೇಶ್ ಬ್ರಾರ್ ಅವರ ಮಾಹಿತಿಯಿಂದ ನಿರೀಕ್ಷಿಸಲಾಗಿದೆ. ಹೆಚ್ಚಿನ ಅಧಿಕೃತ ವಿವರಗಳು ಮತ್ತು ಬಿಡುಗಡೆ ದಿನಾಂಕದ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್‌ನಲ್ಲಿ ಲೈವ್ ಆಗಿರಿ.

Take a Poll

Best Mobiles in India

English summary
Vivo is set to launch a new smartphone in India shortly. The Vivo T4 Ultra will replace last year's T3 Ultra and will be the fourth addition to the T4 series, following the Vivo T4 5G and T4x 5G.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+