Vivo X300 ಮತ್ತು X300 Pro ಜಾಗತಿಕ ಬಿಡುಗಡೆಗೆ ಸಜ್ಜು!..ಸಂಪೂರ್ಣ ಮಾಹಿತಿ!
ಜನಪ್ರಿಯ ಮೊಬೈಲ್ ಬ್ರ್ಯಾಂಡ್ ವಿವೋ ತನ್ನ ಹೊಸ ಪೀಳಿಗೆಯ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳಾದ Vivo X300 ಮತ್ತು Vivo X300 Pro ಅನ್ನು ಅಕ್ಟೋಬರ್ 30 ರಂದು ಜಾಗತಿಕವಾಗಿ ಬಿಡುಗಡೆ ಮಾಡಲು ಸಜ್ಜಾಗಿದೆ. ಶಕ್ತಿಶಾಲಿ MediaTek Dimensity 9500 ಪ್ರೊಸೆಸರ್ ಹೊಂದಿರುವ ಹಾಗೂ ಈ ತಿಂಗಳ ಆರಂಭದಲ್ಲಿ ಚೀನಾದಲ್ಲಿ ಪರಿಚಯಿಸಲಾಗಿದ್ದ ಈ ಎರಡೂ ಫೋನ್‌ಗಳ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳ ಭಾಕಿ ಇವೆ. ಈ ವೇಳೆಗೆ ಪ್ರಖ್ಯಾತ ಲೀಕರ್ ಪರಾಸ್ ಗುಗ್ಲಾನಿ ಹಂಚಿಕೊಂಡಿರುವ ಹೊಸ ಮಾಹಿತಿಯು, ಈ ಎರಡೂ ಸ್ಮಾರ್ಟ್‌ಫೋನ್‌ಗಳು ಜಾಗತಿಕವಾಗಿ ಬಿಡುಗಡೆಯಾಗಲಿರುವ ವಿವಿಧ ಬಣ್ಣ ಮತ್ತು ಮೆಮೊರಿ ಆಯ್ಕೆಗಳ ಬಗ್ಗೆ ಮಾಹಿತಿ ಒದಗಿಸಿದೆ.
ಹೌದು, ಪರಾಸ್ ಗುಗ್ಲಾನಿ ಅವರು ಹಂಚಿಕೊಂಡ ಮಾಹಿತಿಯ ಪ್ರಕಾರ, Vivo X300 ಸ್ಮಾರ್ಟ್‌ಫೋನ್ ಹೇಲೋ ಪಿಂಕ್, ಐರಿಸ್ ಪರ್ಪಲ್, ಮಿಸ್ಟ್ ಬ್ಲೂ, ಮತ್ತು ಫ್ಯಾಂಟಮ್ ಬ್ಲ್ಯಾಕ್ ಎಂಬ ನಾಲ್ಕು ಆಕರ್ಷಕ ಬಣ್ಣಗಳಲ್ಲಿ ಲಭ್ಯವಾಗಲಿದೆ. ಜೊತೆಗೆ ಇದು . ಜಾಗತಿಕವಾಗಿ ಗರಿಷ್ಠ 16GB RAM ಮತ್ತು 512GB ಸ್ಟೋರೇಜ್ ದೊರೆಯಲಿದೆ ಎಂದು ಹೇಳಿದ್ದಾರೆ. ಇದು ಚೀನಾದಲ್ಲಿ ಲಭ್ಯವಿರುವ 1TB ಸ್ಟೋರೇಜ್ ಆವೃತ್ತಿಯು ಜಾಗತಿಕ ಮಾರುಕಟ್ಟೆಗೆ ಆಗಮಿಸುವುದಿಲ್ಲ ಎಂಬುದನ್ನು ಸೂಚಿಸುತ್ತಿದೆ.
ಇತ್ತ Vivo X300 Pro ಸ್ಮಾರ್ಟ್‌ಪೋನ್ ಕೂಡ ಮಿಸ್ಟ್ ಬ್ಲೂ, ಫ್ಯಾಂಟಮ್ ಬ್ಲ್ಯಾಕ್, ಕ್ಲೌಡ್ ವೈಟ್, ಮತ್ತು ಡ್ಯೂನ್ ಬ್ರೌನ್ ಎಂಬ ನಾಲ್ಕು ಬಣ್ಣಗಳಲ್ಲಿ ಬರುತ್ತದೆ.ಇತ್ತೀಚಿನ ಸೋರಿಕೆಗಳ ಪ್ರಕಾರ, ಬಣ್ಣ ಲಭ್ಯತೆಯು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ.ಆಸ್ಟ್ರೇಲಿಯಾದಲ್ಲಿ ವಿಶೇಷ ಬಣ್ಣ ಆಯ್ಕೆಗಳು ಲಭ್ಯವಾಗಲಿವೆ - ಅಲ್ಲಿ X300 Pro ಕೇವಲ ಫ್ಯಾಂಟಮ್ ಬ್ಲ್ಯಾಕ್ ಮತ್ತು ಡ್ಯೂನ್ ಬ್ರೌನ್ ಬಣ್ಣಗಳಲ್ಲಿ ಮಾತ್ರ ಲಭ್ಯ, ಹಾಗೆಯೇ X300 ಮಾದರಿಯು ರೆಡ್ ಎಡಿಷನ್ ಎಂಬ ವಿಶೇಷ ಆಯ್ಕೆಯನ್ನು ಪಡೆಯಲಿದೆ ಎನ್ನಲಾಗಿದೆ.
ವಿವೋ X300 ಸರಣಿಯ ಪ್ರಮುಖ ವೈಶಿಷ್ಟ್ಯಗಳು
ನಾವು ಈಗಾಗಲೇ ತಿಳಿದಿರುವಂತೆ, ಹೊಸ Vivo X300 ಸರಣಿ ಫೋನ್‌ಗಳು ಆಕ್ಷರ್ಷಕ ವಿನ್ಯಾಸ, ಕಾರ್ಯಕ್ಷಮತೆ ಮತ್ತು ಕ್ಯಾಮೆರಾ ತಂತ್ರಜ್ಞಾನಗಳಲ್ಲಿ ಸಂಪೂರ್ಣ ಫ್ಲ್ಯಾಗ್‌ಶಿಪ್ ಅನುಭವ ನೀಡಲಿವೆ. ಈ ಫೋನ್‌ಗಳ ಪ್ರಮುಖ ವೈಶಿಷ್ಟ್ಯಗಳನ್ನು ನೋಡುವುದಾದರೆ,
Vivo X300 ಸ್ಮಾರ್ಟ್‌ಫೋನಿನಲ್ಲಿ 6.31 ಇಂಚಿನ ಫ್ಲಾಟ್ LTPO OLED ಡಿಸ್ಪ್ಲೇ ಇದೆ, 1.5K ರೆಸಲ್ಯೂಷನ್ ಮತ್ತು 120Hz ರಿಫ್ರೆಶ್ ರೇಟ್‌ನೊಂದಿಗೆ ಬಂದಿದೆ. ಇತ್ತ X300 Pro ನಲ್ಲಿ ಸ್ವಲ್ಪ ದೊಡ್ಡ 6.78 ಇಂಚಿನ ಮೈಕ್ರೋ-ಕರ್ವ್ಡ್ ಸ್ಕ್ರೀನ್ ದೊರೆಯಲಿದೆ. ಈ ಎರಡೂ ಫೋನ್‌ಗಳು OriginOS 6 (Android 16) ಆಧಾರಿತವಾಗಿವೆ ಮತ್ತು ಹೊಸ Dimensity 9500 ಚಿಪ್‌ನಿಂದ ಚಾಲಿತವಾಗಿವೆ. ಮಾರುಕಟ್ಟೆಯಲ್ಲಿ ಇದು Snapdragon 8 Elite Gen 5 ಗೆ ಸಮಾನವಾದ ಶಕ್ತಿಶಾಲಿ ಪ್ರೊಸೆಸರ್ ಎಂದು ಹೇಳಲಾಗುತ್ತದೆ.

ವಿವೋ X300 ಮತ್ತು X300 ಪ್ರೊ ಸ್ಮಾರ್ಟ್‌ಫೋನ್‌ಗಳು LPDDR5X RAM ಮತ್ತು UFS 4.0 ಸ್ಟೋರೇಜ್ ತಂತ್ರಜ್ಞಾನವನ್ನು ಹೊಂದಿವೆ. ಇದು ಅತ್ಯುತ್ತ ಪ್ರದರ್ಶನ ಮತ್ತು ಮಲ್ಟಿಟಾಸ್ಕಿಂಗ್ ಅನುಭವ ಒದಗಿಸುತ್ತವೆ.. ಬ್ಯಾಟರಿ ವಿಭಾಗದಲ್ಲಿ X300 ನಲ್ಲಿ 6,040mAh, ಮತ್ತು X300 Pro ನಲ್ಲಿ 6,510mAh ಸಾಮರ್ಥ್ಯವಿದೆ. ಇವೆರಡೂ 90W ವೈರ್ಡ್ ಮತ್ತು 40W ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿಸುತ್ತವೆ. ಜೊತೆಗೆ IP68 ರೇಟಿಂಗ್, ಅಲ್ಟ್ರಾಸೋನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್, ಮತ್ತು ಉತ್ತಮ ತಾಪಮಾನ ನಿಯಂತ್ರಣ ವ್ಯವಸ್ಥೆ ಇವೆ.
Zeiss ಜೊತೆಗಿನ ಸುಧಾರಿತ ಕ್ಯಾಮೆರಾ ಇದೆ
ವಿವೋ ಮತ್ತು Zeiss ಸಹಯೋಗವು ಈ ಸರಣಿ ಫೋನ್‌ಗಳ ಮುಖ್ಯ ಆಕರ್ಷಣೆಯಾಗಿದೆ. Vivo X300 ನಲ್ಲಿ 200MP Samsung HPB ಪ್ರಾಥಮಿಕ ಸೆನ್ಸರ್, 50MP ಅಲ್ಟ್ರಾ-ವೈಡ್ Samsung JN1, ಮತ್ತು 50MP Sony LYT-602 ಪೆರಿಸ್ಕೋಪ್ ಲೆನ್ಸ್ ಇವೆ. X300 Pro ನಲ್ಲಿ ಮುಖ್ಯ ಕ್ಯಾಮೆರಾ 50MP Sony LYT-828 ಆಗಿದ್ದು, ನೈಸರ್ಗಿಕ ಪೋರ್ಟ್ರೇಟ್‌ಗಳು ಮತ್ತು ಕಡಿಮೆ ಬೆಳಕಿನ ಫೋಟೋಗಳಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ ಎಂದು ಹೇಳಲಾಗಿದೆ. ಈ ಎರಡೂ ಮಾದರಿಗಳಲ್ಲಿ Zeiss T* ಲೆನ್ಸ್ ಕೋಟಿಂಗ್ ಮತ್ತು Vivo V1 ಮತ್ತು V3+ ಇಮೇಜಿಂಗ್ ಚಿಪ್‌ಗಳು ಅಳವಡಿಸಲಾಗಿವೆ, ಇದರಿಂದ ಬಣ್ಣ ಸಮತೋಲನ ಮತ್ತು ಡೈನಾಮಿಕ್ ಶ್ರೇಣಿಯಲ್ಲಿ ಸ್ಪಷ್ಟತೆ ಹೆಚ್ಚುತ್ತದೆ ಎಂದು ತಿಳಿಸಲಾಗಿದೆ.
ವಿವೋ X300 ಸರಣಿ ಈಗ ಜಾಗತಿಕ ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಸ್ಪರ್ಧೆಯನ್ನು ತರುವುದು ಖಚಿತ. ಭಾರತೀಯ ಮಾರುಕಟ್ಟೆಗೆ ಬಿಡುಗಡೆ ದಿನಾಂಕದ ಬಗ್ಗೆ ಕಂಪನಿ ಶೀಘ್ರದಲ್ಲೇ ಅಧಿಕೃತ ಮಾಹಿತಿ ನೀಡುವ ನಿರೀಕ್ಷೆಯಿದೆ. ಇದಕ್ಕಾಗಿ ನಾವು ಎದುರುನೋಡುತ್ತಿದ್ದೇವೆ.


Click it and Unblock the Notifications








