Home
ಮೊಬೈಲ್

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆ (Q3 2025): ನಂ.1 ಬ್ರ್ಯಾಂಡ್ ಯಾವುದು ನೋಡಿ!

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯು 2025ರ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಸ್ವಲ್ಪ ಮಟ್ಟಿನ ಏರಿಕೆ ಕಂಡಿದೆ. ಮಾರುಕಟ್ಟೆ ಸಂಶೋಧನಾ ಸಂಸ್ಥೆ Omdia ಬಿಡುಗಡೆ ಮಾಡಿದ ಇತ್ತೀಚಿನ ವರದಿಯ ಪ್ರಕಾರ, 2025ರ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಅವಧಿಯಲ್ಲಿ ದೇಶದಲ್ಲಿ ಒಟ್ಟು 48.4 ಮಿಲಿಯನ್ ಯುನಿಟ್‌ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿದ್ದು, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 3% ಹೆಚ್ಚಾಗಿದೆ. ಇದರಲ್ಲಿ ವಿವೋ (vivo) ಕಂಪನಿಯು ತನ್ನ ಮುನ್ನಡೆ ಉಳಿಸಿಕೊಂಡಿದೆ ಎಂದು ವರದಿಯು ತಿಳಿಸಿದೆ.

ಹೌದು, Omdia ಬಿಡುಗಡೆಗೊಳಿಸಿರುವ ವರದಿಯ ಪ್ರಕಾರ, ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ವಿವೋ (iQOO ಹೊರತುಪಡಿಸಿ) ಒಟ್ಟು 9.7 ಮಿಲಿಯನ್ ಫೋನ್‌ಗಳನ್ನು ಮಾರಾಟ ಮಾಡಿದ್ದು, 20% ಮಾರುಕಟ್ಟೆ ಹಂಚಿಕೆ ಗಳಿಸಿದೆ. ಸ್ಯಾಮ್ಸಂಗ್ 6.8 ಮಿಲಿಯನ್ ಯುನಿಟ್‌ಗಳೊಂದಿಗೆ 14% ಹಂಚಿಕೆ ಪಡೆದು ಎರಡನೇ ಸ್ಥಾನ ಪಡೆದಿದೆ. ಶಿಯೋಮಿ ಮತ್ತು ಒಪ್ಪೋ ಕಂಪೆನಿಗಳು ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನಗಳಲ್ಲಿ ಇದ್ದರೆ, ಆಪಲ್ ಈ ಬಾರಿ ಟಾಪ್ 5 ಪಟ್ಟಿಗೆ ಮರುಪ್ರವೇಶ ಮಾಡಿದೆ ಎಂದು ಈ ವರದಿಯು ಹೇಳಿಕೊಂಂಡಿದೆ.

ಇನ್ನು ಈ ಬೆಳವಣಿಗೆಗೆ ಪ್ರಮುಖ ಕಾರಣವೆಂದರೆ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ನಡೆದ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆಗಳು ಮತ್ತು ಮುಂಚಿತವಾಗಿ ಆರಂಭವಾದ ಹಬ್ಬದ ಕಾಲದ ತಯಾರಿ ಎಂದು ವರದಿಯಲ್ಲಿ ಹೇಳಲಾಗಿದೆ. Omdia ವಿಶ್ಲೇಷಕ ಸಂಯಮ್ ಚೌರಾಸಿಯಾ ವದರು, "ಮಾರಾಟದ ವೃದ್ಧಿಗೆ ನೇರ ಗ್ರಾಹಕ ಬೇಡಿಗಿಂತಲೂ ವಿತರಕರಿಗೆ ನೀಡಿದ ಪ್ರೋತ್ಸಾಹಕ ಯೋಜನೆಗಳು ಪ್ರಮುಖ ಪಾತ್ರ ವಹಿಸಿವೆ. ಅನೇಕ ಕಂಪನಿಗಳು ವಿತರಕರಿಗೆ ಕ್ಯಾಶ್ ಬೋನಸ್, ಹೆಚ್ಚುವರಿ ಕಮಿಷನ್ ಮತ್ತು ಉಡುಗೊರೆಗಳಂತಹ ಯೋಜನೆಗಳನ್ನು ನೀಡಿದ್ದವು" ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆ (Q3 2025): ನಂ.1 ಬ್ರ್ಯಾಂಡ್ ಯಾವುದು ನೋಡಿ!

ವೀವೋ ಕಂಪನಿಯ T-ಸೀರಿಸ್, V60 ಮತ್ತು Y-ಸೀರಿಸ್ ಮಾದರಿಗಳು ಈ ತ್ರೈಮಾಸಿಕದಲ್ಲಿ ಜನಪ್ರಿಯವಾಗಿದ್ದು, ಸ್ಯಾಮ್ಸಂಗ್ ತನ್ನ S24 ಸರಣಿ ಮೂಲಕ ಮಧ್ಯಮ-ಪ್ರಿಮಿಯಂ ವಿಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಒಪ್ಪೋ ಕಂಪನಿಯು ತನ್ನ F31 ಸರಣಿ ಮೇಲೆ ಆಧಾರಿತ ಹಬ್ಬದ ಪ್ರಚಾರದ ಮೂಲಕ ಉತ್ತಮ ಮಾರಾಟ ಸಾಧಿಸಿದೆ ಸಣ್ಣ ಮತ್ತು ಮಧ್ಯಮ ನಗರಗಳಲ್ಲಿ ಹೊಸ ಐಫೋನ್ ಮಾದರಿಗಳಾದ iPhone 17 ಹಾಗೂ ರಿಯಾಯಿತಿಯಲ್ಲಿದ್ದ ಹಳೆಯ iPhone 15 ಮತ್ತು 16 ಮಾದರಿಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.

ಆಪಲ್ ಕಂಪನಿಯು Q3 2025ರಲ್ಲಿ 4.9 ಮಿಲಿಯನ್ ಯುನಿಟ್‌ಗಳನ್ನು ಮಾರಾಟ ಮಾಡಿದ್ದು, ಇದು ಕಂಪನಿಗೆ ಭಾರತದಲ್ಲಿ ದಾಖಲೆ ಮಟ್ಟದ ಏರಿಕೆಯನ್ನು ನೀಡಿದೆ. ಇದರಿಂದ ಆಪಲ್‌ನ ಮಾರುಕಟ್ಟೆ ಹಂಚಿಕೆ ಸುಮಾರು 10% ಆಗಿದೆ. ಇನ್ನು ಮೋಟೋರೊಲಾ ಕಂಪನಿಯು ಈ ತ್ರೈಮಾಸಿಕದಲ್ಲಿ 4 ಮಿಲಿಯನ್ ಯುನಿಟ್‌ಗಳ ಮಾರಾಟ ದಾಖಲಿಸಿದ್ದು, ಇದು ಕಳೆದ ವರ್ಷದಿಗಿಂತ 53% ಹೆಚ್ಚಾಗಿದೆ. ನಥಿಂಗ್ (Nothing) ಕಂಪನಿಯು ಕೂಡಾ 66% ಏರಿಕೆ ಕಂಡಿದ್ದು, ಅದರ CMF Phone 2 Pro ಮತ್ತು Phone 3a ಮಾದರಿಗಳು ಯಶಸ್ಸು ಕಂಡಿವೆ.

Omdia ವರದಿ ಪ್ರಕಾರ, 2025ರ ಪೂರ್ಣ ವರ್ಷಕ್ಕೆ ಮಾರುಕಟ್ಟೆಯಲ್ಲಿ ಸ್ವಲ್ಪ ಕುಸಿತ ಕಾಣಬಹುದಾದರೂ, ಹಬ್ಬದ ಕಾಲದ ಪ್ರಭಾವ ಮತ್ತು ಗ್ರಾಹಕರ ಸಣ್ಣ ನಗರಗಳ ಆಸಕ್ತಿ ಮಾರುಕಟ್ಟೆಗೆ ಹೊಸ ಶಕ್ತಿ ನೀಡಿದೆ. ವರದಿಯ ಪ್ರಕಾರ, ವೀವೋ ತನ್ನ ಬಲವಾದ ರಿಟೇಲ್ ಜಾಲ ಮತ್ತು ಹೊಸ ಮಾದರಿಗಳಿಂದ ಮುನ್ನಡೆ ಕಾಯ್ದುಕೊಂಡಿದೆ, ಸ್ಯಾಮ್ಸಂಗ್ ಹಾಗೂ ಆಪಲ್ ತಮ್ಮ ಪ್ರಿಮಿಯಂ ವಿಭಾಗದ ಮಾದರಿಗಳಿಂದ ಸ್ಪರ್ಧೆ ಮುಂದುವರೆಸುತ್ತಿವೆ. ಒಟ್ಟಾರೆಯಾಗಿ, ಈ ವರದಿಯ ಪ್ರಕಾರ, ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರಾಟ ನಿಧಾನವಾದರೂ ಸ್ಥಿರವಾದ ಬೆಳವಣಿಗೆ ಕಾಣುತ್ತಿದೆ ಎನ್ನಬಹುದು. ಏನಂತಿರಾ?

Best Mobiles in India

English summary
A report from Omdia indicates that Vivo, excluding iQOO, sold approximately 9.7 million phones in the Indian mobile market, achieving a 20% market share. Samsung ranked second, selling 6.8 million units and securing a 14% share.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+