ವಿವೋ V11 ಬೆಲೆಯಲ್ಲಿ ಭಾರೀ ರಿಯಾಯಿತಿ..! ಈಗ ₹ 20,990ಕ್ಕೆ ಲಭ್ಯ..!
Vivo ಇತ್ತೀಚೆಗೆ V11 ಪ್ರೊ, V11 ಮತ್ತು V9 ಪ್ರೊ ಸೇರಿದಂತೆ ಭಾರತದಲ್ಲಿ V ಸರಣಿ ಸ್ಮಾರ್ಟ್‌ಫೋನ್‌ಗಳ ಸರಣಿಯನ್ನು ಮಾರುಕಟ್ಟೆಗೆ ತಂದಿದೆ . ಬಿಡುಗಡೆಯಾದ ಕೆಲವೇ ದಿನಗಳಲ್ಲಿ, ವಿವೋ ಕಂಪನಿ V11 ನ ಬೆಲೆಯನ್ನು 2,000 ರೂಪಾಯಿಗಳಷ್ಟು ಕಡಿತಗೊಳಿಸಿದೆ. Vivo ಭಾರತದಲ್ಲಿ ₹ 22,990 ರೂ. ಆರಂಭಿಕ ಬೆಲೆಗೆ ವಿ 11 ಸ್ಮಾರ್ಟ್‌ಫೋನ್‌ನ್ನು ಮಾರಾಟ ಮಾಡುತ್ತಿತ್ತು. ಈಗ ₹ 20,990 ರೂ.ಗಳಿಗೆ ಗ್ರಾಹಕರಿಗೆ ನೀಡುತ್ತಿದೆ. ಬೆಲೆ ಇಳಿಕೆಯಿಂದ ಬೆಲೆಯಲ್ಲಿ Poco F1 ಸ್ಮಾರ್ಟ್‌ಫೋನ್ ಜತೆ ಸ್ಪರ್ಧೆ ಮಾಡುತ್ತಿದೆ.

ಯಾವ್ಯಾವ ಫೋನ್‌ಗಳ ಮೇಲೆ ಆಫರ್
ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಗಳ ಹಬ್ಬದ ಸೇಲ್‌ಗೂ ಮುಂಚಿತವಾಗಿಯೇ Vivo ಬೆಲೆ ಕಡಿತವನ್ನು ಘೋಷಿಸಿತ್ತು. Vivo ತನ್ನ ಸ್ಮಾರ್ಟ್‌ಫೋನ್‌ಗಳ ಮೇಲೆ ದೊಡ್ಡ ರಿಯಾಯಿತಿಗಳನ್ನು ನೀಡಲು ಬೃಹತ್ ಇ-ಕಾಮರ್ಸ್ ಫ್ಲಿಪ್‌ಕಾರ್ಟ್ ಜೊತೆಗೂಡಿದೆ. V9 ಪ್ರೊ, V11 ಪ್ರೊ, Vivo NEX, Vivi Y83, Vivo Y71i, Y81 ಸೇರಿದಂತೆ ಇನ್ನೂ ಕೆಲವು Vivo ಫೋನ್‌ಗಳು ಆಫರ್ ಗಳಲ್ಲಿ ಲಭ್ಯವಿವೆ. V11 ಇದರಲ್ಲಿ ಒಂದಾಗಿದ್ದು, ಇತರ ಕೊಡುಗೆಗಳಿಗಿಂತ ಭಿನ್ನವಾದ ಆಫರ್ ಹೊಂದಿದೆ. ಅಂದರೆ, V11ನಲ್ಲಿ ರೂ. 2,000 ರಿಯಾಯಿತಿಯಲ್ಲಿ ಯಾವ ಬದಲಾವಣೆಯು ಇಲ್ಲ.

ವಿವೋ V11 ಫೀಚರ್‌ಗಳು
V11 6GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ನ ಒಂದೇ ಒಂದು ರೂಪಾಂತರದಲ್ಲಿ ಬರುತ್ತದೆ. ಈ ಸ್ಮಾರ್ಟ್ ಫೋನ್ ಸ್ಟಾರಿ ನೈಟ್ ಬ್ಲಾಕ್ ಮತ್ತು ನೆಬ್ಯುಲಾ ಪರ್ಪಲ್ ಗಳಂತಹ ಎರಡು ಬಣ್ಣಗಳಲ್ಲಿ ಫ್ಲಿಪ್‌ಕಾರ್ಟ್ , Vivo ಇಂಡಿಯಾ ಇ-ಸ್ಟೋರ್ ಮತ್ತು ಎಲ್ಲಾ ಮೊಬೈಲ್ ಮಳಿಗೆಗಳಲ್ಲಿ (ಆಫ್ಲೈನ್ ಚಾನೆಲ್‌ಗಳಲ್ಲಿ) ಲಭ್ಯವಿದೆ. Pro ಆವೃತ್ತಿಯಂತೆಯೇ (version), V11 ವಾಟರ್ ಡ್ರಾಪ್ ನಾಚ್, ಕನಿಷ್ಠ ಬೆಝೆಲ್, ಸ್ಲಿಕ್ ವಿನ್ಯಾಸದೊಂದಿಗೆ ಬರುತ್ತದೆ.

ವಿವೋ V11 ಡಿಸ್‌ಪ್ಲೇ
Vivo V11 6.3-ಇಂಚಿನ FHD + 2280x1080p ರೆಸಲ್ಯೂಶನ್ ಡಿಸ್‌ಪ್ಲೇ ಮತ್ತು 19: 9 ಆಸ್ಪೆಕ್ಟ್ ರೇಷಿಯೋದೊಂದಿಗೆ ಬರುತ್ತದೆ. ಇದು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 256GB ವರೆಗೆ ವಿಸ್ತರಿಸಬಹುದಾಗಿದೆ. ಮೀಡಿಯಾ ಟೆಕ್ ಹೆಲಿಯೊ(MediaTek Helio) P 60 ನಿಂದ ಕಾರ್ಯನಿರ್ವಹಿಸುತ್ತದೆ.

ಕ್ಯಾಮೆರಾ
ವಿವೋ V11 ಹಿಂಬದಿಯಲ್ಲಿ f/ 2.0 ಅಪರ್ಚಾರ್ ಹೊಂದಿದ 16MP ಪ್ರಾಥಮಿಕ ಸೆನ್ಸಾರ್ ಮತ್ತು f / 2.4 ಅಪಾರ್ಚರ್‌ನ 5MP ಸೆಕೆಂಡರಿ ಸೆನ್ಸಾರ್ ಒಳಗೊಂಡಿದೆ. ಮುಂಭಾಗದಲ್ಲಿ, f/ 2.0 ಅಪಾರ್ಚರ್‌ನ 25MP ಕ್ಯಾಮೆರಾ ಹೊಂದಿದೆ.

ಬ್ಯಾಟರಿ
ವಿವೋ V11 ಸ್ಮಾರ್ಟ್‌ಫೋನ್ 9V2A ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 3315mAh ಬ್ಯಾಟರಿ ಹೊಂದಿದ್ದು, ದೀರ್ಘ ಕಾಲದ ಬಳಕೆಗೆ ಯೋಗ್ಯವಾಗಿದೆ.


Click it and Unblock the Notifications








