DSLR ಪೋಟೋವನ್ನು ಮೀರಿಸುವ ವಿವೋ V11 ಪ್ರೋ ಹೈಎಂಡ್ ಕ್ಯಾಮೆರಾ ಫೋನ್‌..!

By GizBot Bureau
|

ಭಾರತೀಯ ಗ್ರಾಹಕರಿಗೆ ವಿವೋ ಮತ್ತೊಂದು ಶಕ್ತಿಯುತವಾದ ಜೊತೆಗೆ ಭವಿಷ್ಯದ ಕೆಲಸಗಳಿಗೆ ಅನುಕೂಲವಾಗುವಂತಹ ಒಂದು ಸ್ಮಾರ್ಟ್ ಫೋನ್ ನ್ನು ಬಿಡುಗಡೆಗೊಳಿಸಲು ಸಿದ್ಧವಾಗಿದೆ. ಅದುವೇ ವಿವೋ V11 ಪ್ರೋ. ಹೊಸದಾಗಿರುವ ಈ ಮಿಡ್-ರೇಂಜಿನ ಸ್ಮಾರ್ಟ್ ಫೋನ್ ಸೆಪ್ಟೆಂಬರ್ 6,2018 ರಂದು ಬಿಡುಗಡೆಗೊಳ್ಳಲಿದೆ.

ಇತ್ತೀಚೆಗೆ ವಿವೋ ಬಿಡುಗಡೆಗೊಳಿಸಿರುವ ವಿವೋ NEX ಮತ್ತು ವಿವೋ X21 ನಂತೆ ಇದರಲ್ಲೂ ಕೂಡ ಇನ್-ಡಿಸ್‌ಪ್ಲೇ ಫಿಂಗರ್ ಪ್ರಿಂಟ್ ತಂತ್ರಜ್ಞಾನವನ್ನು ಅಳವಡಿಸಲಾಗಿರುತ್ತದೆ. ಜೊತೆಗೆ 4ನೇ ಜನರೇಷನ್ನಿನ ಇನ್-ಡಿಸ್‌ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇದ್ದು ಹೆಚ್ಚು ಪ್ರದರ್ಶನಕ್ಕೆ ಇದು ಸಹಕಾರಿಯಾಗಿರುತ್ತದೆ ಎಂದು ಹೇಳಲಾಗಿದೆ. ಇದನ್ನು ಹೊರತು ಪಡಿಸಿ ವಿವೋ V11 ಪ್ರೋ ಡುಯಲ್ ಇಂಜಿನ್ ಫಾಸ್ಟ್ ಚಾರ್ಜಿಂಗ್ ಮತ್ತು ಕ್ವಾಲ್‌ಕಾಂ ಸ್ನ್ಯಾಪ್ ಡ್ರ್ಯಾಗನ್ 660 AIE ಪ್ರೊಸೆಸರ್ ನ್ನು ಹೊಂದಿದೆ.

DSLR ಪೋಟೋವನ್ನು ಮೀರಿಸುವ ವಿವೋ V11 ಪ್ರೋ ಹೈಎಂಡ್ ಕ್ಯಾಮೆರಾ ಫೋನ್‌..!

ಆದರೆ, ಇದರಲ್ಲಿ ನಿಜಕ್ಕೂ ಎಲ್ಲರ ಗಮನ ಸೆಳೆಯುವಂತಿರುವುದು 2PD ಕ್ಯಾಮರಾ. ವಿವೋ V11 ಪ್ರೋ ಲಭ್ಯವಾಗುವ ಬೆಲೆಯಲ್ಲಿ ಅಧ್ಬುತವಾದ ಹಿಂಭಾಗದ ಕ್ಯಾಮರಾ ಸೆಟ್ ಅಪ್ ಹೊಂದಿದೆ. ಡ್ಯುಯಲ್ ಪಿಕ್ಸಲ್ ಇರುವ ಕ್ಯಾಮರಾವನ್ನು ಇದು ಹೊಂದಿದ್ದು ಉತ್ತಮ ಫೋಟೋಗ್ರಫಿಗೆ ನೆರವು ನೀಡುತ್ತದೆ. ವಿವೋ X21 ಮತ್ತು ವಿವೋ NEXಗಳಲ್ಲಿ ಟೆಸ್ಟ್ ಮಾಡಲಾಗಿರುವ ಕ್ಯಾಮರಾ ಇದಾಗಿದೆ.ವಿವೋ V11 ಪ್ರೋ ನಲ್ಲಿ ಕ್ಯಾಮರಾವು ಹೇಗೆ ಭಿನ್ನವಾಗಿದೆ ಎಂಬ ಬಗ್ಗೆ ತಿಳಿದುಕೊಳ್ಳೋಣ.

ಡ್ಯುಯಲ್ 12MP ಕ್ಯಾಮೆರಾ

ಡ್ಯುಯಲ್ 12MP ಕ್ಯಾಮೆರಾ

ವಿವೋ V11 ಪ್ರೋ ಡುಯಲ್ 12ಎಂಪಿ ಹಿಂಭಾಗದ ಕ್ಯಾಮರಾವನ್ನು ಹೊಂದಿದೆ. ಪ್ರೈಮರಿ ಕ್ಯಾಮರಾವು ಬ್ರೈಟರ್ ಆಗಿ f/1.8 ಎಪರ್ಚರ್ ವ್ಯಾಲ್ಯೂವನ್ನು ಹೊಂದಿದೆ ಮತ್ತು 1.28μm ಪಿಕ್ಸಲ್ ಸಾಮರ್ಥ್ಯವಿದೆ.ಇದರಲ್ಲಿ 24 ಮಿಲಿಯನ್ ಫೋಟೋ ಸೆನ್ಸಿಟೀವ್ ಯುನಿಟ್ಸ್ ಗಳಿದ್ದು, ಇದು ಅತೀ ದೊಡ್ಡ ಸಂಖ್ಯೆಯಾಗಿದ್ದು ಲೋ ಲೈಟ್ ಫರ್ಫಾಮೆನ್ಸ್ ಗೆ ಉತ್ತಮ ಸಹಕಾರ ನೀಡುತ್ತದೆ ಮತ್ತು ಫೋಟೋ ಸೆನ್ಸಿಟಿವಿಟಿಯನ್ನು ಹೆಚ್ಚಿಸುತ್ತದೆ.

25MP ಉತ್ಕೃಷ್ಟ AI ಬೆಂಬಲಿತ ಸೆಲ್ಫೀ ಕ್ಯಾಮರಾ

25MP ಉತ್ಕೃಷ್ಟ AI ಬೆಂಬಲಿತ ಸೆಲ್ಫೀ ಕ್ಯಾಮರಾ

ಸೆಲ್ಫೀ ತೆಗೆದುಕೊಳ್ಳಲು, ವಿವೋ V11 ಪ್ರೋ ನಲ್ಲಿ ದೊಡ್ಡದಾಗ 25ಎಂಪಿ ಮುಂಭಾಗದ ಕ್ಯಾಮಾರಾ ಸೌಲಭ್ಯವಿದೆ. ಸೂಪರ್- ಹೈ ರೆಸಲ್ಯೂಷನ್ ಸೆನ್ಸರ್ ನ್ನು ಹೊಸ AI ಫೇಸ್ ಶೇಪಿಂಗ್ ತಂತ್ರಜ್ಞಾನದೊಂದಿಗೆ ಅಳವಡಿಸಲಾಗಿದೆ. ಇದು ನಿಮಗೆ ಸುಂದರವಾದ ಮತ್ತು ಕ್ಲಿಯರ್ ಆಗಿರುವ ಸೆಲ್ಫೀಯನ್ನು ನೈಸರ್ಗಿಕ ಸ್ಟೈಲ್ ನಲ್ಲೇ ಕ್ಲಿಕ್ಕಿಸಿಕೊಳ್ಳುವುದಕ್ಕೆ ನೆರವು ನೀಡುತ್ತದೆ.

ಡ್ಯುಯಲ್ ಪಿಕ್ಸೆಲ್: ಸವಾಲಿನ ಬೆಳಕಿನಲ್ಲೂ ಉತ್ತಮ ಫೋಟೋಗ್ರಾಫಿ

ಡ್ಯುಯಲ್ ಪಿಕ್ಸೆಲ್: ಸವಾಲಿನ ಬೆಳಕಿನಲ್ಲೂ ಉತ್ತಮ ಫೋಟೋಗ್ರಾಫಿ

ಫೋಟೋಗ್ರಫಿ ಕೆಲಸ ಮಾಡುವುದು ಬೆಳಕಿನ ತತ್ವದಿಂದ. ಬೆಳಕು ಅಗತ್ಯ ಪ್ರಮಾಣದಲ್ಲಿ ಇದ್ದಾಗ ಫೋಟೋ ಅತ್ಯುತ್ತಮವಾಗಿ, ಬೆಟರ್ ಆಗಿ ಬರುತ್ತದೆ. ಆದರೆ ಸ್ಮಾರ್ಟ್ ಫೋನ್ ನಲ್ಲಿ ಫೋಟೋ ಕ್ಲಿಕ್ಕಿಸುವಾಗ ಪ್ರಮುಖ ಅಂಶ ಗಮನಿಸಬೇಕಾಗಿರುವುದು ಬೆಳಕು. ಬೆಳಕು ಸರಿಯಾಗಿ ಲಭ್ಯವಿಲ್ಲದೇ ಇದ್ದಾಗ ಸ್ಮಾರ್ಟ್ ಪೋನ್ ನಲ್ಲಿ ಫೋಟೋ ಕ್ಲಿಕ್ಕಿಸುವುದು ಒಂದು ಚಾಲೆಂಜಿಂಗ್ ಆಗಿರುವ ಕೆಲಸವಾಗಿದೆ.

ಸ್ಮಾರ್ಟ್ ಪೋನ್ ನಲ್ಲಿ ಯಾವಾಗಲೂ ಸಣ್ಣ ಕ್ಯಾಮರಾ ಸೆನ್ಸರ್ ನ್ನು ಅಳವಡಿಸಲಾಗಿರುತ್ತದೆ. ಹಾಗಾಗಿ ಹೆಚ್ಚು ಬೆಳಕು, ಅಥವಾ ಅತ್ಯಂತ ಕಡಿಮೆ ಬೆಳಕು ಇರುವ ಜಾಗಗಳಲ್ಲಿ ಸ್ಮಾರ್ಟ್ ಫೋನ್ ನಿಂದ ಪೋಟೋ ಕ್ಲಿಕ್ಕಿಸುವುದು ಒಂದು ಚಾಲೆಂಜಿಂಗ್ ಕೆಲಸ. ಇಂತಹ ಸಂದರ್ಬಗಳಲ್ಲಿ ಹೆಚ್ಚಾಗಿ ಫೋಟೋಗಳು ಬ್ಲರ್ ಆಗಿ ಬಿಡುತ್ತದೆ ಅಥವಾ ಕೆಟ್ಟ ಕ್ವಾಲಿಟಿಯಲ್ಲಿ ಚಿತ್ರಣಗೊಂಡು ಬಿಡುತ್ತದೆ. ಈ ಸಮಸ್ಯೆಯ ನಿವಾರಣೆಗಾಗಿಯೇ ಬಂದಿರುವುದು ಡುಯಲ್ ಪಿಕ್ಸಲ್ ತಂತ್ರಜ್ಞಾನ.

ಈ ತಂತ್ರಜ್ಞಾನದಿಂದಾಗಿ ನೀವು ಕಡಿಮೆ ಬೆಳಕಿನಲ್ಲೂ ಕೂಡ ಕ್ಯಾಮರಾ ಪ್ರದರ್ಶನವನ್ನು ಅತ್ಯುತ್ತಮವಾಗಿ ನಿರೀಕ್ಷಿಸಬಹುದಾಗಿದೆ.ಪಿಕ್ಸಲ್ ಗಳಲ್ಲಿ ಫೋಟೋಅಯೋಡ್ಸ್ ಗಳನ್ನು ಹೆಚ್ಚಿಸಿ ಇವು ಅತ್ಯುತ್ತಮ ಫೋಟೋಗಳು ಬರುವಂತೆ ಮಾಡುತ್ತದೆ. ಈ ಪಿಕ್ಸಲ್ ಗಳು ಇಮೇಜಿನ ಬಿಲ್ಡಿಂಗ್ ಬ್ಲಾಕ್ಸ್ ಗಳಿದ್ದಂತೆ.

ಯಾವಾಗ ಡುಯಲ್ ಪಿಕ್ಸಲ್ ತಂತ್ರಜ್ಞಾನವು ಫೋಟೋಅಯೋಡ್ಸ್ ಗಳನ್ನು ಹೆಚ್ಚಿಸುತ್ತದೆಯೋ ಆಗ ಲೆನ್ಸ್ ನ ಫೋಕಸ್ ಸ್ಪೀಡ್ ಹೆಚ್ಚಾಗುತ್ತದೆ. ಹಾಗಾಗಿ ಅಬ್ಜೆಕ್ಟ್ ನ ಕ್ಯಾಪ್ಚರ್ ಮಾಡುವ ಅಕ್ಯುರೆಸಿ ಲೆನ್ಸ್ ಗಳಲ್ಲಿ ಅಧಿಕವಾಗುತ್ತದೆ ಅಥವಾ ಕಡಿಮೆ ಬೆಳಕಿನಲ್ಲೂ ಕೂಡ ಅತ್ಯುತ್ತಮವಾಗಿ ಫೋಟೋ ಕ್ಯಾಪ್ಚರ್ ಮಾಡುಲು ಅನುವು ಮಾಡಿಕೊಡುತ್ತದೆ. ಇದೊಂದು ರೀತಿಯ ಬೆಟರ್ ಫೋಕಸಿಂಗ್ ಮೆಕಾನಿಸಮ್ ಎಂದರೆ ತಪ್ಪಾಗಿಲಿಕ್ಕಿಲ್ಲ.

ಟ್ರೈಪಾಡ್ ಬಳಸದೆಯೂ ಕೂಡ ಡುಯಲ್ ಪಿಕ್ಸಲ್ ಸೆನ್ಸರ್ ಕ್ಯಾಮರಾ ಬಳಸಿ ಅತ್ಯುತ್ತಮ ಫೋಟೋವನ್ನು ಚಿತ್ರಿಸಲು ಸಾಧ್ಯವಾಗುತ್ತದೆ. ಯಾಕೆಂದರೆ ಇದು ಫೋಕಸ್ ನ್ನು ಕಡಿಮೆ ಬೆಳಕು ಅಥವಾ ವ್ಯತ್ಯಯಗಳಿರುವ ಬೆಳಕಿನ ಸಂದರ್ಬದಲ್ಲೂ ಕೂಡ ಹೆಚ್ಚಿಸುತ್ತದೆ. ಹಾಗಂತ ಡುಯಲ್ ಪಿಕ್ಸಲ್ ತಂತ್ರಜ್ಞಾನವಿದ್ದೂ ಕೂಡ ನೀವು ಟ್ರೈಪಾಡ್ ಬಳಸಿದರೆ ಏನಾಗೂತ್ತದೆ ಎಂಬ ಪ್ರಶ್ನೆಗೆ ಉತ್ತರ ಮತ್ತಷ್ಟು ಉತ್ತಮವಾದ ಫೋಟೋ ಕ್ಲಿಕ್ಕಿಸಲು ಸಾಧ್ಯವಾಗುತ್ತದೆ ಎಂಬುದೇ ಆಗಿದೆ. ವಿವೋ V11 ಪ್ರೋ ಮೂಲಕ ನೀವು ಕ್ಲಿಯರ್ ಆಗಿರುವ ಬ್ರೈಟ್ ಇಮೇಜ್ ಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಅದ್ಭುತ ಚಿತ್ರಗಳು

ಅದ್ಭುತ ಚಿತ್ರಗಳು

ನಿಜಕ್ಕೂ ಡುಯಲ್ ಪಿಕ್ಸಲ್ ತಂತ್ರಜ್ಞಾನಕ್ಕೆ ಧನ್ಯವಾದ ಸಲ್ಲಿಸಲೇ ಬೇಕು. ಫಾಸ್ಟ್, ಅಕ್ಯುರೇಟ್, ಮತ್ತು ಉತ್ತಮ ಪ್ರದರ್ಶನವನ್ನು ಬೆಳಕಿನ ಕಂಡೀಷನ್ ಚಾಲೆಂಜಿಂಗ್ ಆಗಿರುವ ಸಂದರ್ಬದಲ್ಲೂ ಕೂಡ ನೀಡುವ ಸಾಮರ್ಥ್ಯವನ್ನು ಈ ಸ್ಮಾರ್ಟ್ ಫೋನ್ ಹೊಂದಿರುತ್ತದೆ.

ಡುಯಲ್ ಪಿಕ್ಸಲ್ ನಲ್ಲಿ ಕ್ಯಾಪ್ಚರ್ ಮಾಡಿರುವ ಇಮೇಜಿನ ಪ್ರತಿ ಪಿಕ್ಸಲ್ ಕೂಡ ಎರಡಾಗಿ ವಿಭಜಿಸಲ್ಪಡುತ್ತದೆ. ಈ ಎರಡೂ ವಿಭಜನೆಗಳು ವಯಕ್ತಿಕವಾಗಿ ಆಪರೇಟ್ ಆಗುತ್ತದೆ ಮತ್ತು ಲೈಟ್ ಸೆನ್ಸಿಟಿವಿಟಿಯನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಿಸುತ್ತದೆ. ಹಾಗಾಗಿ ಅತ್ಯುತ್ತಮ ಫೋಟೋಗಳು ಕ್ಯಾಪ್ಚರ್ ಆಗಲು ಸಹಾಯಕವಾಗುತ್ತದೆ.

ಡುಯಲ್ ಪಿಕ್ಸಲ್ ಆಟೋ ಫೋಕಸ್ ತಂತ್ರಜ್ಞಾನವು ಫೋಕಸ್ ವೇಗವನ್ನು ಹೆಚ್ಚಿಸುತ್ತದೆ ಯಾಕೆಂದರೆ ವಸ್ತುವಿನ ಮೇಲೆ ಕ್ಯಾಮರಾ ಸೆನ್ಸರ್ ಬೆಳಕಿನ ಫೋಕಸ್ ನ್ನು ಹೆಚ್ಚಿಸುತ್ತದೆ. ವಿವೋ V11 ಪ್ರೋ ಸ್ಮಾರ್ಟ್ ಫೋನಿನ ಕ್ಯಾಮರಾವು ಫೋಕಸ್ ನ್ನು ಕೇವಲ 0.03 ಸೆಕೆಂಡ್ ನಲ್ಲಿ ಲಾಕ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಸದ್ಯ ಇನ್ನೂ ಸ್ಮಾರ್ಟ್ ಫೋನ್ ನಮ್ಮ ಕೈಸೇರದೇ ಇದ್ದರೂ ಕೂಡ ನಾವು ವಿವೋ V11 ಪ್ರೋ ಕ್ಲಿಯರ್ ಆಗಿರುವ , ಅದ್ಭುತವಾಗಿರುವ, ಬ್ರೈಟ್ ಆಗಿರುವ ಕಡಿಮೆ ಮತ್ತು ಅನಿಯಮಿತ ಬೆಳಕಿನ ಸಂದರ್ಭದಲ್ಲೂ ಕೂಡ ಕ್ಲಿಕ್ಕಿಸುತ್ತದೆ ಎಂಬುದನ್ನು ಖಾತ್ರಿಪಡಿಸಬಹುದು. ನೀವು ಕೂಡ ಫೋಟೋಗ್ರಫಿ ಪ್ರಿಯರಾಗಿದ್ದು ಈ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಿದ್ದಲ್ಲಿ ವಿವೋ V11 ಪ್ರೋ ಬಗೆಗಿನ ಮಾಹಿತಿಗಾಗಿ Kannada Gizbot ಫಾಲೋ ಮಾಡುವುದನ್ನು ಮರೆಯಬೇಡಿ.

ವಿವೋ V11 ಪ್ರೋನ ಇತರೆ ಫೀಚರ್‌ಗಳು

ವಿವೋ V11 ಪ್ರೋನ ಇತರೆ ಫೀಚರ್‌ಗಳು

ಈಗ ತಿಳಿದಿರುವಂತೆ ವಿವೋ V11 ಪ್ರೋನ ಪ್ರಮುಖ ವೈಶಿಷ್ಟ್ಯತೆಗಳು ಎಂದರೆ ಅದು ಕ್ಯಾಮರಾವೇ ಆಗಿದೆ. ಹಾಗಂತ ಕೆಲವು ಇತರೆ ಫೀಚರ್‌ಗಳು ಕೂಡ ವಿವೋ V11 ಅಧ್ಬುತವಾಗಿ ಮಾಡುತ್ತದೆ. ಭದ್ರತೆಯನ್ನು ಹೆಚ್ಚು ನೀಡುವಂತಿರುವ ಅಂದರೆ ಭವಿಷ್ಯದ ಇನ್-ಡಿಸ್‌ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ತಂತ್ರಜ್ಞಾನವನ್ನು ಹೊಂದಿರುವ ಮಿಡ್ ರೇಂಜ್ ನ ಬೆಲೆಯಲ್ಲಿ ದೊರಕುವ ಬೆಸ್ಟ್ ಸ್ಮಾರ್ಟ್ ಫೋನ್ ಗಳಲ್ಲಿ ಇದೂ ಕೂಡ ಒಂದಾಗಿದೆ. ಬೃಹತ್ 25MP ಸೆಲ್ಫಿ ಕ್ಯಾಮರಾದಿಂದ ಚಾಲಿತವಾದ ಇನ್ಫ್ರಾರೆಡ್ ಫೇಸ್ ಅನ್‌ಲಾಕ್ ಅನ್ನು ನೀವು ಇದರಲ್ಲಿ ಗಮನಿಸಬಹುದು.

ಈ ಸ್ಮಾರ್ಟ್ ಫೋನ್ ಪ್ರಸಿದ್ಧ ಕ್ವಾಲ್‌ಕಾಂ ಸ್ನ್ಯಾಪ್ ಡ್ರ್ಯಾಗನ್660 ಚಿಪ್ ಸೆಟ್ ನಿಂದ ಕಾರ್ಯನಿರ್ವಹಿಸುತ್ತದೆ. ಮತ್ತು ಇದು 14nm ತಂತ್ರಜ್ಞಾನದಿಂದ ಬಿಲ್ಟ್ ಇನ್ ಆಗಿದೆ ಜೊತೆಗೆ ಇದು ನಿರ್ವಹಣೆ ಮತ್ತು ದಕ್ಷತೆಗೆ ಹೆಸರುವಾಸಿಯಾಗಿರುವ ಚಿಪ್ ಸೆಟ್ ಆಗಿದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ದೈನಂದಿನ ಸ್ಮಾರ್ಟ್ ಫೋನ್ ಬಳಕೆಯಲ್ಲಿ ಬ್ಯಾಟರಿ, ಕಂಪ್ಯೂಟಿಂಗ್, ಗ್ರಾಫಿಕ್‌ನ ಕಾರ್ಯಕ್ಷಮತೆಯಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚಿಪ್‌ಸೆಟ್‌ನ್ನು ಮಷಿನ್ ಲರ್ನಿಂಗ್‌ನೊಂದಿಗೆ ಅಳವಡಿಸಲಾಗಿದೆ. ಒಟ್ಟಾರೆ ವಿವೋ V11 ಪ್ರೋ ಸೆಪ್ಟೆಂಬರ್ 6,2018 ರಂದು ಮಾರುಕಟ್ಟೆಗೆ ಎಂಟ್ರಿಯಾಗುತ್ತಿದೆ.

Best Mobiles in India

English summary
Vivo is all set to unveil another futuristic and power-packed smartphone for Indian consumers, the Vivo V11 Pro. The new mid-range smartphone will be unveiled on the 6th of September, 2018.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X