ಇದೇ ಸೆಪ್ಟೆಂಬರ್ 6ಕ್ಕೆ ಭಾರತದಲ್ಲಿ ಬಿಡುಗಡೆಯಾಗಲಿವೆ ವಿವೋ ವಿ11, ವಿ11 ಪ್ರೋ..!
ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿ ವಿವೋ ಸೆಪ್ಟೆಂಬರ್ 6 ರಂದು ಕಾರ್ಯಕ್ರಮವೊಂದನ್ನು ಆಯೋಜಿಸಿದೆ. ಹಾಗಾಗಿ ನಿಮ್ಮ ಕ್ಯಾಲೆಂಡರ್ ನಲ್ಲಿ ಆ ದಿನಾಂಕವನ್ನು ಮಾರ್ಕ್ ಮಾಡಿ ಇಟ್ಟುಕೊಳ್ಳುವಂತೆ ಸೂಚಿಸಿದೆ. ಅದ್ಯಾಕೆ ಅಂತಿದ್ದೀರಾ? ಮುಂದೆ ಓದಿ.
ವಿವೋ ಕಳಿಸಿರುವ ಆಮಂತ್ರಣ ಪತ್ರಿಕೆಯಲ್ಲಿ 6.09.2018 ರಂದು 11 ರ ಅನುಭವ ಪಡೆಯಿರಿ ಎಂದು ಬರೆಯಲಾಗಿದೆ. ಇದರ ಅರ್ಥ ಈ ಇವೆಂಟ್ ನಲ್ಲಿ ವಿವೋ ವಿ11 ಮತ್ತು ವಿ11 ಪ್ರೊ ಫೋನ್ ಗಳು ಬಿಡುಗಡೆಗೊಳ್ಳುವ ಬಗ್ಗೆ ನಮಗೆ ಅಧಿಕೃತ ಮೂಲಗಳಿಂದ ಮಾಹಿತಿ ದೊರಕಿದೆ.

ಈ ವಾರದ ಆರಂಭದಲ್ಲಿ ವಿ11 ನ ವೈಶಿಷ್ಟ್ಯತೆಗಳ ಬಗ್ಗೆ ಆನ್ ಲೈನ್ ನಲ್ಲಿ ಬಹಿರಂಗವಾಗಿತ್ತು. ಇದು ವಿವೋ ಕಂಪೆನಿಯ ವಿ9 ಫೋನಿನ ಯಶಸ್ಸಿನ ಮುಂದಿನ ವರ್ಷನ್ ಎಂಬ ಅಭಿಪ್ರಾಯವೂ ಕೇಳಿಬಂದಿತ್ತು.
ಈಗಾಗಲೇ ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಸುದ್ದಿಗಳ ಅನುಸಾರವಾಗಿಯೇ ಹೇಳುವುದಾದರೆ ವಿ11 ನಲ್ಲಿ in-display ಫಿಂಗರ್ ಪ್ರಿಂಟ್ ಸೆನ್ಸರ್ ಇರಲಿದೆ ಮತ್ತು 'waterdrop-like' ನಾಚ್ ಇರಲಿದೆ. ಇದರ ಸುತ್ತಳತೆ 157.9x75x7.9mm ಆಗಿರುತ್ತದೆ ಮತ್ತು ತೂಕ 156gm ಆಗಿರಲಿದೆ.
ಈಗಾಗಲೇ ಲೀಕ್ ಆಗಿರುವ ವೈಶಿಷ್ಟ್ಯತೆಗಳ ವಿವರಗಳನ್ನ ಆಧರಿಸಿ ಹೇಳುವುದೇ ಆದಲ್ಲಿ ವಿವೋ ವಿ11 6.41-ಇಂಚಿನ ಡಿಸ್ಪ್ಲೇ ಜೊತೆಗೆ ಫುಲ್ -HD+ 1080x2340 ಪಿಕ್ಸಲ್ ರೆಸಲ್ಯೂಷನ್ ಮತ್ತು 19.5:9 ಅನುಪಾತನ್ನು ಇದು ಹೊಂದಿರಲಿದೆ.

ಇದು 2.2Ghz ಆಕ್ಟಾ-ಕೋರ್- Qualcomm Snapdragon 660 ಪ್ರೊಸೆಸರ್ ನ್ನು ಹೊಂದಿರಲಿದೆ. ಈ ಸ್ಮಾರ್ಟ್ ಫೋನ್ ಬಹುಶ್ಯಃ 6GB ಮೆಮೊರಿ ಮತ್ತು 128GB ಇಂಟರ್ನಲ್ ಸ್ಟೋರೇಜ್ ಮೂಲಕ ಬರಲಿದ್ದು 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಹಿಗ್ಗಿಸಿಕೊಳ್ಳಲು ಅವಕಾಶ ನೀಡುವ ನಿರೀಕ್ಷೆ ಇದೆ.
ಡುಯಲ್ ಕ್ಯಾಮರಾ ಸೆಟ್ ಅಪ್ ಇರಲಿದ್ದು 12ಮೆಗಾಪಿಕ್ಸಲ್ ನ ಪ್ರೈಮರಿ ಕ್ಯಾಮರಾ ಮತ್ತು 5 ಮೆಗಾಪಿಕ್ಸಲ್ ನ ಸೆಕೆಂಡರಿ ಕ್ಯಾಮರಾವಿರುವ ಸಾಧ್ಯತೆ ಇದೆ. ವಾಟರ್ ಡ್ರಾಪ್ ಲೈಕ್ ನಾಚ್ ಇರಲಿದ್ದು 25 ಮೆಗಾಪಿಕ್ಸಲ್ ನ ಸೆಲ್ಫೀ ಕ್ಯಾಮರಾವನ್ನು ವಿವೋ ವಿ11 ಹೊಂದಿರುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈಗಾಗಲೇ ಹಬ್ಬಿರುವ ಗಾಳಿಸುದ್ದಿಯ ಅನ್ವಯ 3400 mAh ನ ಬ್ಯಾಟರಿಯನ್ನು ಇದು ಹೊಂದಿರಲಿದೆ. ಮತ್ತು ಆಂಡ್ರಾಯ್ಡ್ 8.1 Oreo out-of-the-box ಮೂಲಕ ರನ್ ಆಗಲಿದೆ.
ಇತ್ತೀಚೆಗಷ್ಟೇ ವಿವೋ 10ಜಿಬಿ ಮೆಮೊರಿಯ ಸ್ಮಾರ್ಟ್ ಫೋನ್ ಗಾಗಿ ಕೆಲಸ ಮಾಡುತ್ತಿದೆ ಎಂಬ ವರದಿಯೊಂದು ಕೇಳಿಬಂದಿತ್ತು. ಅದನ್ನು ವಿವೋ ಎಕ್ಸ್ 23 ಎಂದು ಹೇಳುವ ನಿರೀಕ್ಷೆ ಇತ್ತು. ಈ ಕುತೂಹಲಕ್ಕೂ ಅಗಸ್ಟ್ 20 ರಂದು ತೆರೆ ಬೀಳುವ ಸಾಧ್ಯತೆ ಇದೆ. ಆದರೆ ವಿವೋ ಎಕ್ಸ್ 23 ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಲಾಗಿಲ್ಲ. ಆದರೆ ಮಾಹಿತಿಯ ಪ್ರಕಾರ ಇದು ವಿವೋ ಎಕ್ಸ್ 21 ನ ಯಶಸ್ಸಿನ ಅವತರಣಿಕೆ ಆಗಿರಲಿದೆ ಎಂದು ಹೇಳಲಾಗುತ್ತಿದೆ.


Click it and Unblock the Notifications




