Home
ಮೊಬೈಲ್

14,809 ಅಗ್ಗ! 32MP ಸೆಲ್ಫಿ ಕ್ಯಾಮೆರಾ.. 256GB ಸ್ಟೋರೇಜ್‌.. ಈ Vivo ಫೋನಿಗೆ ಭಾರೀ ಡಿಸ್ಕೌಂಟ್

ಹೊಸ ವಿವೋ (Vivo) ಮೊಬೈಲ್ ಖರೀದಿಸುವವರಿಗೆ ಸಿಹಿಸುದ್ದಿ ಇದೆ. 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿರುವ ಈ 5G ಸ್ಮಾರ್ಟ್‌ಫೋನ್‌ ಕಡಿಮೆ ಬೆಲೆಗೆ ಲಭ್ಯವಿದೆ. ಹೌದು, ಕಂಪನಿಯು ವಿವೋ V25 ಪ್ರೊ 5G (Vivo V25 Pro 5G) ಫೋನಿನ ಖರೀದಿ ಮೇಲೆ ಭಾರೀ ರಿಯಾಯಿತಿ ಘೋಷಿಸಿದೆ. ಇ ಕಾಮರ್ಸ್‌ ಸೈಟ್‌ ಫ್ಲಿಪ್‌ಕಾರ್ಟ್‌ನಲ್ಲಿ ಶೇ.37 ರಷ್ಟು ಡಿಸ್ಕೌಂಟ್ ಲಭ್ಯವಿದೆ. ಈ ಫೋನ್ ಖರೀದಿಸಿದರೆ, ನೀವು ಭಾರೀ ಹಣ ಉಳಿತಾಯ ಮಾಡಬಹುದು. ಬನ್ನಿ, ಈ ಫೋನಿ ಬೆಲೆ, ಆಫರ್‌ಗಳು ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ಹೌದು, ವಿವೋ ಮೊಬೈಲ್‌ಗಳಿಗೆ ಭಾರತದಲ್ಲಿ ಭರ್ಜರಿ ಬೇಡಿಕೆ ಇದೆ. ಈ ಫೋನ್‌ಗಳಿಗೆ ಈಗಾಗಲೇ ದೊಡ್ಡ ಮಟ್ಟದಲ್ಲಿ ರಿಯಾಯಿತಿ ನೀಡಲಾಗಿದೆ. ಅದರಂತೆ, ವಿವೋ V25 ಪ್ರೊ 5G ಮೊಬೈಲ್‌ ಸಹ ಗ್ರಾಹಕರನ್ನು ಆಕರ್ಷಿಸುತ್ತಿದೆ. ಈ ಫೋನ್ 64 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 1300 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಫೋನಿನಲ್ಲಿ 6.56 ಇಂಚಿನ ಅಮೋಲೆಡ್ ಡಿಸ್ಪ್ಲೇ, 4830mAh ಬ್ಯಾಟರಿ ಮತ್ತು 66W ವೇಗದ ಚಾರ್ಜಿಂಗ್ ಸಹ ಲಭ್ಯವಿದೆ.

14,809 ಅಗ್ಗ! 32MP ಸೆಲ್ಫಿ ಕ್ಯಾಮೆರಾ.. 256GB ಸ್ಟೋರೇಜ್‌.. ಯಾವ ಫೋನ್?

ವಿವೋ V25 ಪ್ರೊ 5G ಫೋನಿನ ಬೆಲೆ ಮತ್ತು ಆಫರ್‌ಗಳು

ಕಂಪನಿಯು ವಿವೋ V25 ಪ್ರೊ 5G ಫೋನನ್ನು 8GB RAM + 128GB ಮತ್ತು 12GB RAM + 256GB ಸ್ಟೋರೇಜ್‌ ಆಯ್ಕೆಗಳಲ್ಲಿ ಬಿಡುಗಡೆ ಮಾಡಿದೆ. ಪ್ರಸ್ತುತ, 12GB RAM + 256GB ರೂಪಾಂತರದ ಮೇಲೆ ಶೇ.37 ರಷ್ಟು ರಿಯಾಯಿತಿ ಲಭ್ಯವಿದೆ. ಜೊತಗೆ, ಶೇ.5% ಕ್ಯಾಶ್‌ಬ್ಯಾಕ್ ಸಹ ಪಡೆಯಬಹುದು. ಡಿಸ್ಕೌಂಟ್‌ನೊಂದಿಗೆ, ಈ ಫೋನನ್ನು 25,190 ರೂ.ಗೆ ಖರೀದಿಸಬಹುದು. ಇದು ಕಪ್ಪು ಮತ್ತು ಸೈಲಿಂಗ್ ಬ್ಲೂ ಬಣ್ಣ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ.

ವಿವೋ V25 ಪ್ರೊ 5G ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ವಿವೋ V25 ಪ್ರೊ 5G ಮೊಬೈಲ್ 6.56 ಇಂಚಿನ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು 1080 x 2376 ಪಿಕ್ಸೆಲ್‌ ರೆಸಲ್ಯೂಶನ್, 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ.

ಪ್ರೊಸೆಸರ್‌ ಮಾಹಿತಿ

ಕಂಪನಿಯು ವಿವೋ V25 ಪ್ರೊ 5G ಫೋನನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ 1300 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಗ್ರಾಫಿಕ್ಸ್‌ಗಾಗಿ ಮಾಲಿ G77 MC9 ಜಿಪಿಯು ಹೊಂದಿದೆ. ಇದು Funtouch ಓಎಸ್‌ 12 ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಈ ಮೊಬೈಲ್ 8GB RAM ಮತ್ತು 128GB ಆಂತರಿಕ ಸ್ಟೋರೇಜ್‌ ಹೊಂದಿದೆ.

ಕ್ಯಾಮೆರಾ ಸೆಟಪ್

ವಿವೋ V25 ಪ್ರೊ 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ 64 ಮೆಗಾಪಿಕ್ಸೆಲ್‌ ಪ್ರಾಥಮಿಕ ಕ್ಯಾಮೆರಾ ಲಭ್ಯವಿದೆ. ಜೊತೆಗೆ, 8 ಮೆಗಾಪಿಕ್ಸೆಲ್‌ ದ್ವಿತೀಯ (ವೈಡ್ ಆಂಗಲ್) ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್‌ ತೃತೀಯ (ಮ್ಯಾಕ್ರೋ) ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 32 ಮೆಗಾಪಿಕ್ಸೆಲ್‌ ಫ್ರಂಟ್ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಕಂಪನಿಯು ವಿವೋ V25 ಪ್ರೊ 5G ಫೋನಿನಲ್ಲಿ 4830mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಿದೆ. ಈ ಬ್ಯಾಟರಿಯನ್ನು ಚಾರ್ಜ್‌ ಮಾಡಲು, 66W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ವಿವೋ V25 ಪ್ರೊ 5G ಸ್ಮಾರ್ಟ್‌ಫೋನ್ ಅನ್‌ಲಾಕ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5G, 4G, 3G, 2G ನೆಟ್‌ವರ್ಕ್‌ ಬೆಂಬಲ, ಬ್ಲೂಟೂತ್ v5.2, ವೈ-ಫೈ, ಇಪಿಎಸ್‌ ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್, ಎನ್‌ಎಫ್‌ಸಿ, ಆಡಿಯೋ ಜ್ಯಾಕ್ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.

Best Mobiles in India

English summary
Vivo V25 Pro 5G available with 37 percent discount on flipkart: check new price, offers, availability specs and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+