Vivo V30 5G ಫೋನಿನ ಬೆಲೆ ಭಾರೀ ಇಳಿಕೆ: ಈ ಡಿಸ್ಕೌಂಟ್ 2 ದಿನ ಮಾತ್ರ!
ವಿವೋ ಪ್ರಿಯರಿಗೆ ಭರ್ಜರಿ ಸಿಹಿ ಸುದ್ದಿ ಇದೆ. ವಿವೋ (Vivo) ತನ್ನ ಪ್ರೀಮಿಯಂ ಸ್ಮಾರ್ಟ್‌ಫೋನ್ Vivo V30 5G ಅನ್ನು ಮಾರ್ಚ್‌ನಲ್ಲಿ ಬಿಡುಗಡೆ ಮಾಡಿತು. ಮೊಬೈಲ್ ಪ್ರಿಯರಿಂದ ಈವರೆಗೆ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ. ಆದರೆ, ಈಗ ಕಂಪನಿಯು Vivo V40 ಸರಣಿಯನ್ನು ಬಿಡುಗಡೆ ಮಾಡಲು ಮುಂದಾಗಿದೆ. ಈ ಮಧ್ಯೆಯೇ, ಬ್ರ್ಯಾಂಡ್ ಹಿಂದಿನ ಸ್ಮಾರ್ಟ್‌ಫೋನ್ Vivo V30 5G ಖರೀದಿ ಮೇಲೆ 3,799 ರೂ. ವರೆಗೆ ಡಿಸ್ಕೌಂಟ್ ಘೋಷಿಸಿದೆ. ಈ ಕೊಡುಗೆಯು ಜುಲೈ 31 ರವರೆಗೆ ಮಾತ್ರ ಲಭ್ಯವಿರುತ್ತದೆ. ಹೊಸ ಬೆಲೆ, ಡಿಸ್ಕೌಂಟ್ ಮತ್ತು ಫೋನಿನ ವಿಶೇಷತೆಗಳನ್ನು ತಿಳಿಯೋಣ ಬನ್ನಿ.
Vivo V30 5G ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಕಂಪನಿಯು ಎಲ್ಲಾ ಮೂರು ಮಾದರಿಗಳಲ್ಲಿ HDFC, SBI ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಸ್ವೈಪ್ ಮತ್ತು EMI ವಹಿವಾಟುಗಳ ಮೇಲೆ ಶೇ.10 ರಷ್ಟು ರಿಯಾಯಿತಿಯನ್ನು ನೀಡುತ್ತಿದೆ. ಬ್ಯಾಂಕ್ ಡಿಸ್ಕೌಂಟ್ ಜೊತೆಗೆ, ಬ್ರ್ಯಾಂಡ್ 6 ತಿಂಗಳ ನೋ ಕಾಸ್ಟ್ ಇಎಂಐ ಸೌಲಭ್ಯವನ್ನು ಸಹ ನೀಡುತ್ತಿದೆ. ಹಳೆಯ ಫೋನ್‌ಗೆ ಎಕ್ಸ್‌ಚೇಂಜ್ ಆಯ್ಕೆಯೂ ಇದೆ.

Vivo V30 5G ಡಿಸ್ಕೌಂಟ್ ಆಫರ್!
Vivo V30 5G ಸ್ಮಾರ್ಟ್‌ಫೋನಿನ 8GB RAM + 128GB ಸ್ಟೋರೇಜ್‌ನ ಮೂಲ ಬೆಲೆ 33,999 ರೂ. ಇದೆ. ಪ್ರಸ್ತುತ ರಿಯಾಯಿತಿಯೊಂದಿಗೆ ನೀವು ಕೇವಲ 30,600 ರೂ.ಗಳಿಗೆ ಖರೀದಿಸಬಹುದು. 8GB RAM + 256 GB ಮಾದರಿಯು ಆಫರ್‌ನ ನಂತರ 32,400 ರೂ.ಗೆ ಲಭ್ಯವಿದೆ. ಇದರ ಬೆಲೆ ಮೊದಲು 35,999 ರೂ. ಇತ್ತು.
ಟಾಪ್ ವೇರಿಯಂಟ್ 12 GB RAM + 256 GB ಸ್ಟೋರೇಜ್ ಶೇ.10 ರಷ್ಟು ರಿಯಾಯಿತಿಯೊಂದಿಗೆ 34,200 ರೂ.ಗಳಲ್ಲಿ ಲಭ್ಯವಿದೆ. ಇದನ್ನು ಮೊದಲು 37,999 ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಈ ಆಫರ್ ಪ್ರಸ್ತುತ Vivo E-Store ನಲ್ಲಿ ಮಾತ್ರ ಲಭ್ಯವಿದೆ ಮತ್ತು ಜುಲೈ 31 ರವರೆಗೆ ಮಾತ್ರ ಇರಲಿದೆ. ಅಂಡಮಾನ್ ಬ್ಲೂ, ಪೀಕಾಕ್ ಗ್ರೀನ್ ಮತ್ತು ಕ್ಲಾಸಿಕ್ ಬ್ಲ್ಯಾಕ್ ಬಣ್ಣಗಳಲ್ಲಿ ಈ ಫೋನನ್ನು ಖರೀದಿಸಬಹುದು.
Vivo V30 5G ಫ್ಲಿಪ್‌ಕಾರ್ಟ್ ಆಫರ್
Vivo V30 5G ಫೋನನ್ನು ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿಯೂ ಮಾರಾಟ ಮಾಡಲಾಗುತ್ತಿದೆ. ಇಲ್ಲಿಯೂ ಸಹ ನೀವು ಫೋನಿನ ಖರೀದಿ ಮೇಲೆ 3,400 ರೂ. ವರೆಗೆ ಬ್ಯಾಂಕ್ ಡಿಸ್ಕೌಂಟ್ ಪಡೆಯಬಹುದು. ನೀವು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ, ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು. ಫ್ಲಿಪ್‌ಕಾರ್ಟ್‌ನಲ್ಲಿ ನೀವು 3 ರಿಂದ 6 ತಿಂಗಳ ನೋ ಕಾಸ್ಟ್ ಇಎಂಐ ಆಯ್ಕೆಯನ್ನು ಪಡೆಯಬಹುದು. ಈ ಆಫರ್ ಕೂಡ ಜುಲೈ 31ರವರೆಗೆ ಮಾತ್ರ ಇರುತ್ತದೆ.
Vivo V30 5G ಫೋನಿನ ಫೀಚರ್ಸ್
ಡಿಸ್ಪ್ಲೇ: ವಿವೋ V30 ಫೋನ್ 6.78 ಇಂಚಿನ HD ಪ್ಲಸ್ AMOLED ಡಿಸ್ಪ್ಲೇ ಹೊಂದಿದೆ. ಇದು 2800 x 1260 ಪಿಕ್ಸೆಲ್ ರೆಸಲ್ಯೂಶನ್, HDR 10 ಪ್ಲಸ್, 120Hz ರಿಫ್ರೆಶ್ ದರ ಮತ್ತು 2800nits ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ.
ಪ್ರೊಸೆಸರ್: ಈ ಫೋನ್ Qualcomm Snapdragon 7 Gen 3 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ ಅಲ್ಟ್ರಾ ಸ್ಮಾರ್ಟ್ ಕೂಲಿಂಗ್ ಸಿಸ್ಟಂ ಅಳವಡಿಸಲಾಗಿದೆ.
ಸ್ಟೋರೇಜ್: ಇದು 12 GB RAM ಮತ್ತು 256 GB ವರೆಗೆ ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಇದರೊಂದಿಗೆ, RAM ಅನ್ನು 12 GB ವರೆಗೆ ವಿಸ್ತರಿಸುವ ಸೌಲಭ್ಯವಿದೆ.
ಕ್ಯಾಮೆರಾ: Vivo V30 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದರಲ್ಲಿ OIS ಮತ್ತು ಔರಾ ಲೈಟ್ ವೈಶಿಷ್ಟ್ಯದೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಮತ್ತು 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಒದಗಿಸಲಾಗಿದೆ. ಸೆಲ್ಫಿಗಾಗಿ 50 ಮೆಗಾಪಿಕ್ಸೆಲ್ ಲೆನ್ಸ್ ಕೂಡ ಇದೆ.
ಬ್ಯಾಟರಿ: ಕಂಪನಿಯು ಈ ಫೋನಿನಲ್ಲಿ 5000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಒದಗಿಸಿದೆ. ಇದನ್ನು ಚಾರ್ಜ್ ಮಾಡಲು 80W ವೇಗದ ಚಾರ್ಜಿಂಗ್ ಬೆಂಬಲವಿದೆ.


Click it and Unblock the Notifications








