Vivo V30 5G ಫೋನ್ ಮತ್ತಷ್ಟು ಅಗ್ಗ.. ಸಸ್ತಾ ಬೆಲೆಗೆ ಲಭ್ಯ!
Vivo V30 5G Price Cut: ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಮನಸ್ಸು ಮಾಡಿದ್ದರೆ, Vivo V30 5G ಫೋನಿನ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಕಂಪನಿಯು ತನ್ನ ಎಲ್ಲಾ ರೂಪಾಂತರಗಳ ಬೆಲೆಗಳನ್ನು ದಿಢೀರನೆ ಕಡಿತ ಮಾಡಿದೆ. ಈ ಫೋನ್ ಅತ್ಯಾಕರ್ಷಕ ಫೀಚರ್ಸ್‌ಗಳೊಂದಿಗೆ ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ. ಈ ಫೋನಿನಲ್ಲಿ ನೀವು 50MP + 50MP ಡ್ಯುಯಲ್ ಹಿಂಬದಿಯ ಕ್ಯಾಮೆರಾ ಮತ್ತು 50MP ಫ್ರಂಟ್ ಕ್ಯಾಮೆರಾವನ್ನು ಪಡೆಯಬಹುದು.
Vivo V40 ಸರಣಿಯನ್ನು ಬಿಡುಗಡೆ ಮಾಡುವ ಮೊದಲು, ಕಂಪನಿಯು ಹಳೆಯ ಸ್ಮಾರ್ಟ್‌ಫೋನ್‌ನ ಬೆಲೆಯನ್ನು ಇಳಿಕೆ ಮಾಡಿದೆ. ಈ ಮೂಲಕ ಬ್ರ್ಯಾಂಡ್ Vivo V30 ಫೋನನ್ನು ಮತ್ತಷ್ಟು ಅಗ್ಗವಾಗಿಸಿದೆ. ಈ ಫೋನನ್ನು ಈ ವರ್ಷದ ಮಾರ್ಚ್‌ನಲ್ಲಿ Vivo V30 Pro ಸ್ಮಾರ್ಟ್‌ಫೋನ್‌ನೊಂದಿಗೆ ಲಾಂಚ್ ಮಾಡಲಾಗಿತ್ತು. ಈ Vivo V30 5G ಸ್ಮಾರ್ಟ್‌ಫೋನ್ ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿದೆ. ಕಂಪನಿಯು ಎಲ್ಲಾ ಮೂರು ಮಾದರಿಗಳಲ್ಲಿ ಡಿಸ್ಕೌಂಟ್ ನೀಡುತ್ತಿದೆ.

ಇದು Snapdragon 7 Gen 3 ಪ್ರೊಸೆಸರ್ ಹೊಂದಿದೆ. 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರುತ್ತದೆ. ಇದು 80W ವೇಗದ ಚಾರ್ಜಿಂಗ್ ಹೊಂದಿದೆ. ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು 50MP ಮುಖ್ಯ ಲೆನ್ಸ್ ಹೊಂದಿದೆ. ಪ್ರಸ್ತುತ, ನೀವು ಈ ಫೋನ್ ಅನ್ನು ಅಗ್ಗವಾಗಿ ಖರೀದಿಸುವ ಅವಕಾಶವಿದೆ. ಈ ಫೋನಿನ ಹೊಸ ಬೆಲೆ ಮತ್ತು ಇನ್ನಿತರ ವಿಶೇಷತೆಗಳನ್ನು ತಿಳಿಯೋಣ ಬನ್ನಿ.
Vivo V30 5G ಹೊಸ ಬೆಲೆ ಎಷ್ಟು?
Vivo V30 5G ಅನ್ನು ಕಂಪನಿಯು 33,999 ರೂ.ಗಳ ಆರಂಭಿಕ ಬೆಲೆಗೆ ಬಿಡುಗಡೆ ಮಾಡಿದೆ. ಈಗ ಇದು 8GB RAM + 128GB ಸ್ಟೋರೇಜ್ ರೂಪಾಂತರಕ್ಕಾಗಿ 31,999 ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿರುತ್ತದೆ. ಆದರೆ, 8GB RAM + 256GB ಸ್ಟೋರೇಜ್ ರೂಪಾಂತರದ ಬೆಲೆ 35,999 ರಿಂದ 33,999 ರೂ.ಗೆ ಕಡಿಮೆಯಾಗಿದೆ.
12GB RAM + 256GB ಸ್ಟೋರೇಜ್ ರೂಪಾಂತರದ ಬೆಲೆಯನ್ನು 37,999 ರೂ.ನಿಂದ 35,999 ರೂ.ಗೆ ಇಳಿಸಲಾಗಿದೆ. ಅಂದರೆ, ಕಂಪನಿಯು ಎಲ್ಲಾ ರೂಪಾಂತರಗಳ ಬೆಲೆಯನ್ನು 2,000 ರೂ.ಗಳಷ್ಟು ಕಡಿಮೆ ಮಾಡಿದೆ. ಹಳೆಯ ಫೋನ್‌ಗೆ ಎಕ್ಸ್‌ಚೇಂಜ್ ಆಯ್ಕೆಯೂ ಇದೆ. ಈ ಫೋನ್ ಮೂರು ಬಣ್ಣ ಆಯ್ಕೆಗಳಲ್ಲಿ ಬರುತ್ತದೆ. ನೀವು ಅಂಡಮಾನ್ ಬ್ಲೂ, ಕ್ಲಾಸಿಕ್ ಬ್ಲ್ಯಾಕ್ ಮತ್ತು ಪೀಕಾಕ್ ಗ್ರೀನ್ ಬಣ್ಣಗಳಲ್ಲಿ ಖರೀದಿಸಬಹುದು.
8 ತಿಂಗಳ ನೊ ಕಾಸ್ಟ್ EMI ಸೌಲಭ್ಯ
ಹೊಸ ಬೆಲೆಯ ಜೊತೆಗೆ, Vivo ಆಯ್ದ ಪಾಲುದಾರರೊಂದಿಗೆ ಶೇ.10 ರಷ್ಟು ಕ್ಯಾಶ್‌ಬ್ಯಾಕ್ ಮತ್ತು Vivo V ಶೀಲ್ಡ್ ಪ್ರೊಟೆಕ್ಷನ್ ಪ್ಲಾನ್‌ನಂತಹ ಹೆಚ್ಚುವರಿ ಕೊಡುಗೆಗಳನ್ನು ನೀಡುತ್ತಿದೆ. 8GB + 128GB ಸ್ಟೋರೇಜ್ ಖರೀದಿ ಮೇಲೆ ನೀವು 8 ತಿಂಗಳ ನೊ ಕಾಸ್ಟ್ EMI ಆಯ್ಕೆಯ ಲಾಭವನ್ನು ಪಡೆಯಬಹುದು. ಪರಿಷ್ಕೃತ ಬೆಲೆಗಳು ಫ್ಲಿಪ್‌ಕಾರ್ಟ್, ವಿವೋ ಇಂಡಿಯಾ ವೆಬ್‌ಸೈಟ್ ಮತ್ತು ವಿವಿಧ ಚಿಲ್ಲರೆ ಪಾಲುದಾರರ ಮೂಲಕ ಲಭ್ಯವಿದೆ.
Vivo V30 5G ಫೋನಿನ ಫೀಚರ್ಸ್
ಡಿಸ್ಪ್ಲೇ: ವಿವೋ V30 ಫೋನ್ 6.78 ಇಂಚಿನ HD ಪ್ಲಸ್ AMOLED ಡಿಸ್ಪ್ಲೇ ಹೊಂದಿದೆ. ಇದು 2800 x 1260 ಪಿಕ್ಸೆಲ್ ರೆಸಲ್ಯೂಶನ್, HDR 10 ಪ್ಲಸ್, 120Hz ರಿಫ್ರೆಶ್ ದರ ಮತ್ತು 2800nits ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ.
ಪ್ರೊಸೆಸರ್: ವಿವೋ V30 ಫೋನ್ Qualcomm Snapdragon 7 Gen 3 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ ಅಲ್ಟ್ರಾ ಸ್ಮಾರ್ಟ್ ಕೂಲಿಂಗ್ ಸಿಸ್ಟಂ ಒಳಗೊಂಡಿದೆ.
ಸ್ಟೋರೇಜ್: ಈ ಸ್ಮಾರ್ಟ್‌ಫೋನ್ 12GB RAM ಮತ್ತು 256GB ವರೆಗೆ ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಇದರೊಂದಿಗೆ, RAM ಅನ್ನು 12GB ವರೆಗೆ ವಿಸ್ತರಿಸುವ ಸೌಲಭ್ಯವಿದೆ.
ಕ್ಯಾಮೆರಾ: ವಿವೋ V30 ಫೋನ್ ಡ್ಯುಯಲ್ ಕ್ಯಾಮೆರಾ ರಚನೆಯನ್ನು ಹೊಂದಿದೆ. ಇದು OIS ಮತ್ತು ಔರಾ ಲೈಟ್ ವೈಶಿಷ್ಟ್ಯದೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
ಬ್ಯಾಟರಿ: ಕಂಪನಿಯು ಈ ಫೋನಿನಲ್ಲಿ 5000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಒದಗಿಸಿದೆ. ಇದನ್ನು ಚಾರ್ಜ್ ಮಾಡಲು 80W ವೇಗದ ಚಾರ್ಜಿಂಗ್ ಬೆಂಬಲವಿದೆ.


Click it and Unblock the Notifications








