Home
ಮೊಬೈಲ್

Vivo; Vivoನ ಹೊಚ್ಚ ಹೊಸ ಫೋನ್‌ ಬಿಡುಗಡೆ: ನಿಮ್ಮ ನೆಚ್ಚಿನ ಅಗ್ಗದ ಮತ್ತು ದುಬಾರಿ ಮೊಬೈಲ್ ಆಯ್ಕೆಮಾಡಿ!

ವಿವೋ (Vivo) ಕಂಪನಿಯು ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಭಾರೀ ಬೇಡಿಕೆ ಹೊಂದಿದೆ. ತನ್ನ ವಿಭಿನ್ನ ಫೀಚರ್ಸ್‌ಗಳ ಮೂಲಕ ಮೊಬೈಲ್ ಪ್ರಿಯರನ್ನು ಆಕರ್ಷಿಸುತ್ತಿದೆ. ವಿವೋ ಸರಣಿಯ ಮೊಬೈಲ್‌ಗಳು ಮಾರುಕಟ್ಟೆಗೆ ಬರುವುದನ್ನೇ ಕಾದು ಖರೀದಿಸುವ ಗ್ರಾಹಕರನ್ನು ಹೊಂದಿದೆ. ಇದೀಗ, Vivo V40 ಸರಣಿಯ ನೂತನ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಯುರೋಪ್‌ನಲ್ಲಿ Vivo V40 5G ಮತ್ತು V40 Lite 5G ಸ್ಮಾರ್ಟ್‌ಫೋನ್‌ಗಳನ್ನು ಅನಾವರಣಗೊಳಿಸಿದೆ. ಈ ಮೊಬೈಲ್‌ಗಳು ಏನೆಲ್ಲಾ ವಿಶೇಷತೆಗಳನ್ನು ಹೊಂದಿವೆ? ಬೆಲೆ ಎಷ್ಟು? ಎಂಬವುದನ್ನು ತಿಳಿಯೋಣ ಬನ್ನಿ.

Vivo V40 5G ಮತ್ತು V40 Lite 5G ಸ್ಮಾರ್ಟ್‌ಫೋನ್‌ಗಳು V40 5G 120Hz ರಿಫ್ರೆಶ್ ರೇಟ್‌ನೊಂದಿಗೆ 6.78 ಇಂಚಿನ 1.5K AMOLED ಡಿಸ್ಲ್ಪೇಯನ್ನು ಹೊಂದಿದೆ. ಗರಿಷ್ಠ ಬ್ರೈಟ್‌ನೆಸ್ 4500 nits ಮತ್ತು 12GB RAM ಜೊತೆಗೆ Snapdragon 7 Gen 3 SoC ಹೊಂದಿದೆ. ಇವೆರಡೂ ಫೋನ್‌ಗಳು ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP ರೇಟ್ ಪಡೆದಿವೆ. ಈ ಫೋನ್‌ಗಳ ಕುರಿತು ಸಂಪೂರ್ಣ ವಿವರಗಳು ಇಲ್ಲಿವೆ.

Vivo; Vivoನ ಹೊಚ್ಚ ಹೊಸ ಫೋನ್‌ ಬಿಡುಗಡೆ.. ಬೆಲೆ ಎಷ್ಟು? ವಿಶೇಷತೆಗಳೇನು?

ಇದು OIS ಜೊತೆಗೆ 50MP ಮುಖ್ಯ ಕ್ಯಾಮೆರಾ, 50MP UW ಮತ್ತು 50MP ಫ್ರಂಟ್ ಕ್ಯಾಮೆರಾ ಹೊಂದಿದೆ. ZEISS ಆಪ್ಟಿಕ್ಸ್, ಸ್ಮಾರ್ಟ್ ಲೈಟಿಂಗ್ ತಾಪಮಾನ ಹೊಂದಾಣಿಕೆಯೊಂದಿಗೆ ಔರಾ ಲೈಟ್, IP68 ರೇಟಿಂಗ್‌ಗಳನ್ನು ಹೊಂದಿದೆ. 80W ವೇಗದ ಚಾರ್ಜಿಂಗ್‌ನೊಂದಿಗೆ 5500mAh ಬ್ಯಾಟರಿ ಬ್ಯಾಕಪ್‌ ಪಡೆದಿದೆ. ವಿಶೇಷ ನೆಗೆಟಿವ್ ಎಲೆಕ್ಟ್ರೋಡ್ ಗ್ರ್ಯಾಫೈಟ್ ರೀಕನ್‌ಸ್ಟ್ರಕ್ಷನ್ ಟೆಕ್ನಾಲಜಿಯನ್ನು ಹೊಂದಿದ್ದು, ಕ್ಷಿಪ್ರ ಚಾರ್ಜಿಂಗ್ ಮತ್ತು ಹೆಚ್ಚಿನ ಶಕ್ತಿಯ ಸಾಂದ್ರತೆಯ ಪರಿಪೂರ್ಣ ಸಮತೋಲನದೊಂದಿಗೆ ಉನ್ನತ ಮಟ್ಟದ ಕಾರ್ಯಕ್ಷಮತೆಯನ್ನು ನೀಡುತ್ತದೆ.

vivo V40 5G ಫೀಚರ್ಸ್‌ಗಳು

  • ಡಿಸ್‌ಪ್ಲೇ: 6.78 ಇಂಚಿನ (2800×1260 ಪಿಕ್ಸೆಲ್‌ಗಳು) 1.5K AMOLED 20:9 ಡಿಸ್‌ಪ್ಲೇ, 144Hz ರಿಫ್ರೆಶ್ ರೇಟ್, 480Hz ಟಚ್ ಸ್ಯಾಂಪ್ಲಿಂಗ್ ದರ, 4500 nits ಗರಿಷ್ಠ ಬ್ರೈಟ್‌ನೆಸ್‌, HDR10+
  • ಪ್ರೊಸೆಸರ್: Adreno 720 GPU ಜೊತೆಗೆ Qualcomm Snapdragon 7 Gen 3 (4nm) ಮೊಬೈಲ್ ಪ್ಲಾಟ್‌ಫಾರ್ಮ್
  • ಸ್ಟೋರೇಜ್: 12GB LPDDR4X RAM ಜೊತೆಗೆ 256GB / 512GB ಸ್ಟೋರೇಜ್
  • ಸಿಮ್: ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ / ಇಸಿಮ್)
  • ಕ್ಯಾಮೆರಾ: 50MP ಹಿಂಭಾಗದ (f/1.88 ದ್ಯುತಿರಂಧ್ರದೊಂದಿಗೆ) ಕ್ಯಾಮರಾ, OIS, ZEISS ಆಪ್ಟಿಕ್ಸ್, 50MP ಅಲ್ಟ್ರಾ-ವೈಡ್ ಕ್ಯಾಮೆರಾ, f/2.0 ಅಪರ್ಚರ್, 4K ವಿಡಿಯೋ ರೆಕಾರ್ಡಿಂಗ್
  • 50MP ಸ್ವಯಂ ಫೋಕಸ್ ಮುಂಭಾಗದ (f/2.0 ದ್ಯುತಿರಂಧ್ರದೊಂದಿಗೆ) ಕ್ಯಾಮೆರಾ ಮತ್ತು ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸಂವೇದಕ
  • ತೂಕ: 164.16 × 74.93 × 7.58mm, ತೂಕ: 190g
  • ಕನೆಕ್ಟಿವಿಟಿ ಆಯ್ಕೆಗಳು: 5G SA/NSA, ಡ್ಯುಯಲ್ 4G VoLTE, Wi-Fi 6 802.11 be, Bluetooth 5.4, GPS, BeiDou, GLONASS, Galileo, QZSS, USB Type-C 2.0, NFC
  • ಬ್ಯಾಟರಿ: 80W ವೇಗದ ಚಾರ್ಜಿಂಗ್‌ನೊಂದಿಗೆ 5500mAh (ವಿಶಿಷ್ಟ) ಬ್ಯಾಟರಿ
  • Funtouch OS 14 ಜೊತೆಗೆ Android 14
  • ಯುಎಸ್‌ಬಿ ಟೈಪ್-ಸಿ ಆಡಿಯೊ, ಸ್ಟಿರಿಯೊ ಸ್ಪೀಕರ್‌ಗಳು
  • ಧೂಳು ಮತ್ತು ನೀರು ನಿರೋಧಕ (IP68)

vivo V40 Lite 5G ವೈಶಿಷ್ಯಗಳು

vivo V40 Lite 5G ಫೋನ್ 6.78-ಇಂಚಿನ FHD+ 120Hz AMOLED ಡಿಸ್ಲ್ಪೇಯನ್ನು ಹೊಂದಿದೆ. 8GB RAM, 50MP ಮುಖ್ಯ ಕ್ಯಾಮೆರಾ, 8MP UW, 2MP ಮ್ಯಾಕ್ರೋ ಮತ್ತು 32MP ಫ್ರಂಟ್ ಕ್ಯಾಮೆರಾದೊಂದಿಗೆ Snapdragon 6 Gen 1 SoC ಪ್ರೊಸೆಸರ್ ಅನ್ನು ಪಡೆದಿದೆ. ಇದು ಔರಾ ಲೈಟ್, IP64 ರೇಟಿಂಗ್‌ಗಳನ್ನು ಪಡೆದಿದೆ ಮತ್ತು 44W ವೇಗದ ಚಾರ್ಜಿಂಗ್‌ನೊಂದಿಗೆ 5500mAh ಬ್ಯಾಟರಿ ಬ್ಯಾಕಪ್ ಸಾಮರ್ಥ್ಯ ಹೊಂದಿದೆ.

vivo V40 Lite 5G ಫೀಚರ್ಸ್‌ಗಳು

  • ಡಿಸ್‌ಪ್ಲೇ: 6.78 ಇಂಚಿನ (2400×1080 ಪಿಕ್ಸೆಲ್‌ಗಳು) FHD+ ಬಾಗಿದ AMOLED 20:9 ಡಿಸ್‌ಪ್ಲೇ, 120Hz ರಿಫ್ರೆಶ್ ದರ, 1300 nits ಗರಿಷ್ಠ ಬ್ರೈಟ್‌ನೆಸ್
  • ಪ್ರೊಸೆಸರ್: ಆಕ್ಟಾ ಕೋರ್ (4x A78 at 2.2GHz+4x A55 at 1.8GHz Kryo CPU) ಸ್ನಾಪ್‌ಡ್ರಾಗನ್ 6 Gen 1 4nm ಮೊಬೈಲ್ ಪ್ಲ್ಯಾಟ್‌ಫಾರ್ಮ್ ಜೊತೆಗೆ Adreno 710 GPU
  • ಸ್ಟೋರೇಜ್: 8GB LPDDR4X RAM, 256GB UFS 2.2 ಸಂಗ್ರಹಣೆ, ಮೈಕ್ರೊ SD ಜೊತೆಗೆ 1TB ವರೆಗೆ ವಿಸ್ತರಿಸಬಹುದಾದ ಮೆಮೊರಿ
  • ಸಿಮ್: ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ / ಇಸಿಮ್)
  • ಕ್ಯಾಮೆರಾ: 50MP ಹಿಂಬದಿಯ (1/ 1.95″Sony IMX8820 ಸಂವೇದಕದೊಂದಿಗೆ) ಕ್ಯಾಮೆರಾ. f/1.79 ಅಪರ್ಚರ್, LED ಫ್ಲ್ಯಾಷ್, f/2.2 ಅಪರ್ಚರ್‌ನೊಂದಿಗೆ 8MP ಅಲ್ಟ್ರಾ-ವೈಡ್ ಕ್ಯಾಮೆರಾ, f/2.4 ಅಪರ್ಚರ್‌ನೊಂದಿಗೆ 2MP ಮ್ಯಾಕ್ರೋ ಕ್ಯಾಮೆರಾ, 4K ವಿಡಿಯೋ ರೆಕಾರ್ಡಿಂಗ್
  • 32MP ಮುಂಭಾಗದ (f/2.0 ದ್ಯುತಿರಂಧ್ರದೊಂದಿಗೆ) ಕ್ಯಾಮೆರಾ ಮತ್ತು ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸಂವೇದಕ
  • ತೂಕ: 164.36 × 74.75 × 7.75mm (ಕಂದು) / 7.65 mm (ಬಿಳಿ), ತೂಕ: 188g (ಕಂದು) / 179g (ಬಿಳಿ)
  • ಕನೆಕ್ಟಿವಿಟಿ ಆಯ್ಕೆಗಳು: 5G SA/NSA, ಡ್ಯುಯಲ್ 4G VoLTE, Wi-Fi 6 802.11ac, ಬ್ಲೂಟೂತ್ 5.1, GPS, BeiDou, GLONASS, ಗೆಲಿಲಿಯೋ, QZSS, USB ಟೈಪ್-C 2.0, NFC
  • ಬ್ಯಾಟರಿ: 44W ವೇಗದ ಚಾರ್ಜಿಂಗ್‌ನೊಂದಿಗೆ 5500mAh (ವಿಶಿಷ್ಟ) ಬ್ಯಾಟರಿ
  • USB ಟೈಪ್-ಸಿ ಆಡಿಯೋ
  • Funtouch OS 14 ಜೊತೆಗೆ Android 14

V40 5G ಮತ್ತು V40 Lite 5G ಬೆಲೆ ಎಷ್ಟು?

vivo V40 5G ಸ್ಟೆಲ್ಲಾರ್ ಸಿಲ್ವರ್ ಮತ್ತು ನೆಬ್ಯುಲಾ ಪರ್ಪಲ್ ಬಣ್ಣಗಳಲ್ಲಿ ಬರುತ್ತದೆ. 8GB RAM ಮತ್ತು 256GB ಸ್ಟೋರೇಜ್‌ ವೇರಿಯಂಟ್‌ನ ಬೆಲೆ 53,645 ರೂ. (599 ಯುರೋಗಳು/ USD 642). ಜುಲೈ ಆರಂಭದಲ್ಲಿ ಯುರೋಪ್‌ನಲ್ಲಿ ಮೊದಲ ಸೇಲ್ ಆರಂಭವಾಗಲಿದೆ.

vivo V40 Lite 5G ಕ್ಲಾಸಿ ಬ್ರೌನ್ ಅಥವಾ ಡ್ರೀಮಿ ವೈಟ್ ಬಣ್ಣಗಳಲ್ಲಿ ಬರುತ್ತದೆ. ಇದರ ಬೆಲೆ 35,735 ರೂ. (399 ಯುರೋಗಳು/ USD 427). 12GB + 512GB ಸ್ಟೋರೇಜ್‌ ವೇರಿಯಂಟ್‌ನ ಬೆಲೆ ಪ್ರಸ್ತುತ ಬಹಿರಂಗವಾಗಿಲ್ಲ. Vivo V40 5G ಮತ್ತು V40 Lite 5G ಸ್ಮಾರ್ಟ್‌ಫೋನ್‌ಗಳನ್ನು ಯುರೋಪಿಯನ್ ಮಾರುಕಟ್ಟೆಗಳಲ್ಲಿ ಪರಿಚಯಿಸಲಾಗಿದೆ.

Best Mobiles in India

English summary
Vivo V40 5G and the V40 Lite 5G smartphones have been launched in the European markets. Both of them also sport a Snapdragon Processor under the hood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+