ರಕ್ಷಾ ಬಂಧನ: ನಿಮ್ಮ ಸಹೋದರಿಗೆ ಉತ್ತಮ 'ಸೆಲ್ಫಿ ಫೋನ್' ಕೊಡಬೇಕೆ? Vivo V40 5G ಫೋನಿಗೆ ಸಖತ್ ಡಿಸ್ಕೌಂಟ್!
ದೇಶದೆಲ್ಲೆಡೆ ರಕ್ಷಾ ಬಂಧನ ಸಂಭ್ರಮ ಮನೆ ಮಾಡಿದೆ. ಹಬ್ಬದ ಸಂಭ್ರಮವನ್ನು ವಿವೋ ಮತ್ತಷ್ಟು ಇಮ್ಮಡಿಗೊಳಿಸಿದೆ. ಹೌದು, ಹೊಸ ವಿವೋ V40 5G (Vivo V40 5G) ಫೋನ್ ಇಂದಿನಿಂದ (ಆಗಸ್ಟ್ 19) ಮೊದಲ ಮಾರಾಟವನ್ನು ಆರಂಭಿಸಿದೆ. ರಾಖಿ ಕಟ್ಟಿದ ನಿಮ್ಮ ಸಹೋದರಿಗೆ ಉತ್ತಮ 'ಸೆಲ್ಫಿ ಫೋನ್' ಕೊಡಬೇಕೆ? ಹಾಗಿದ್ರೆ, ವಿವೋ V40 5G ಫೋನ್ ಫರ್ಪೆಕ್ಟ್ ಆಯ್ಕೆಯಾಗಲಿದೆ. ಈ ಫೋನನ್ನು ಬಂಪರ್ ಆಫರ್‌ನೊಂದಿಗೆ ಖರೀದಿಸಬಹುದು. ಈ ಸ್ಮಾರ್ಟ್‌ಫೋನ್ 50MP ಸೆಲ್ಫಿ ಕ್ಯಾಮೆರಾ, AMOLED ಡಿಸ್ಲ್ಪೇಯೊಂದಿಗೆ 5500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.
ವಿವೋ V40 5G ಫೋನನ್ನು ಕಳೆದ ವಾರ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು. ಇದು 'V40' ಸರಣಿಯ ಹೊಸ ಸ್ಮಾರ್ಟ್‌ಫೋನ್ ಆಗಿದೆ. ಇಂದಿನಿಂದ (ಆಗಸ್ಟ್ 19) ಖರೀದಿಗೆ ಲಭ್ಯವಿದೆ. ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಈಗಾಗಲೇ ಮಾರಾಟ ಪ್ರಾರಂಭಿಸಿದೆ. ಈ ಫೋನ್ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಲಭ್ಯವಿದೆ. ಇದು ಶಕ್ತಿಯುತ ಕ್ವಾಲ್ಕಾಮ್ ಪ್ರೊಸೆಸರ್, 80W ವೇಗದ ಚಾರ್ಜಿಂಗ್‌ನೊಂದಿಗೆ ಬರುತ್ತದೆ. ಬನ್ನಿ, ಈ ಫೋನಿನ ಬೆಲೆ ಮತ್ತು ಆಫರ್‌ಗಳನ್ನು ತಿಳಿಯೋಣ.

ವಿವೋ V40 5G ಬೆಲೆ ಮತ್ತು ಆಫರ್
8GB RAM + 128GB ಸ್ಟೋರೇಜ್ ಬೆಲೆ - 34,999 ರೂ.
8GB RAM + 256GB ಸ್ಟೋರೇಜ್ ಬೆಲೆ - 36,999 ರೂ.
12GB + 512GB ಸ್ಟೋರೇಜ್ ಬೆಲೆ - 41,999 ರೂ.
ಕಂಪನಿಯು ಈ ವಿವೋ V40 5G ಫೋನನ್ನು ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆ ಮಾಡಿದೆ. ಇದರ 8GB RAM ಮತ್ತು 128GB ಸ್ಟೋರೇಜ್ ಬೆಲೆ 34,999 ರೂ. ಆಗಿದೆ. 8GB ಮತ್ತು 256GB ಸ್ಟೋರೇಜ್ ಅನ್ನು 36,999 ರೂ.ಗೆ ಬಿಡುಗಡೆ ಮಾಡಲಾಗಿದೆ. ಮತ್ತು ಟಾಪ್ ವೇರಿಯಂಟ್ 12GB ಮತ್ತು 512GB ಮಾಡೆಲ್ ಅನ್ನು 41,999 ರೂ.ಗೆ ಖರೀದಿಸಬಹುದು.
ನೀವು ಪ್ರಮುಖ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿಸಿದರೆ, ಈ ಫೋನಿನ ಮೇಲೆ 3,700 ರೂ.ಗಳ ಡಿಸ್ಕೌಂಟ್ ನೀಡಲಾಗುತ್ತದೆ. ಈ ಫೋನ್ ನೋ ಕಾಸ್ಟ್ EMI ಮತ್ತು 35,950 ರೂ.ಗಳ ಎಕ್ಸ್‌ಚೇಂಜ್ ಆಫರ್ ಸಹ ಪಡೆಯಬಹುದು. ಕಂಪನಿಯು 10% ತ್ವರಿತ ಕ್ಯಾಶ್‌ಬ್ಯಾಕ್ ಅನ್ನು ಘೋಷಿಸಿದೆ.
ವಿವೋ V40 5G ವೈಶಿಷ್ಟ್ಯಗಳು
ಡಿಸ್ಲ್ಪೇ: ವಿವೋ V40 5G ಫೋನ್ 6.78 ಇಂಚಿನ ಬಾಗಿದ AMOLED ಡಿಸ್ಲ್ಪೇಯನ್ನು ಹೊಂದಿದೆ. ಇದು 1.5K ರೆಸಲ್ಯೂಶನ್, 120Hz ನ ರಿಫ್ರೆಶ್ ದರ, 480Hz ನ ಸ್ಪರ್ಶ ಮಾದರಿ ದರ ಮತ್ತು 4500 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಇದರ ಡಿಸ್ಲ್ಪೇಯು HDR10+ ಅನ್ನು ಬೆಂಬಲಿಸುತ್ತದೆ.
ಪ್ರೊಸೆಸರ್: ವಿವೋ V40 5G ಮೊಬೈಲ್ Qualcomm ನ Snapdragon 7 Gen 3 ಪ್ರೊಸೆಸರ್ ಹೊಂದಿದೆ. Adreno 720 GPU ಮತ್ತು 512GB ವರೆಗಿನ ಇಂಟರ್ನಲ್ ಸ್ಟೋರೇಜ್ ಒಳಗೊಂಡಿದೆ. ಈ ಹೊಸ ಸ್ಮಾರ್ಟ್‌ಫೋನ್ 12GB RAM ಅನ್ನು ಹೊಂದಿದೆ. ಅಲ್ಲದೆ, ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಆಧಾರಿತ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
ಕ್ಯಾಮೆರಾ: ಈ ಹೊಸ ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. 50MP ಮುಖ್ಯ ಕ್ಯಾಮೆರಾ ಮತ್ತು 50MP ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಅನ್ನು ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 50MP ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.
ಬ್ಯಾಟರಿ: ವಿವೋ V40 5G ಫೋನ್ 5500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 80W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು 190 ಗ್ರಾಂ ತೂಕ ಹೊಂದಿದೆ ಮತ್ತು IP68 ರೇಟಿಂಗ್ ಹೊಂದಿದೆ.
ಇತರೆ ಫೀಚರ್ಸ್: ಈ ಫೋನ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ 4G ವೋಲ್ಟ್, 5G, Wi-Fi, GPS, ಬ್ಲೂಟೂತ್, USB ಟೈಪ್-ಸಿ ಪೋರ್ಟ್‌ನಂತಹ ಸೌಲಭ್ಯಗಳನ್ನು ಹೊಂದಿದೆ. ಈ ಹೊಸ ಫೋನ್ ಫೇಸ್ ಅನ್ಲಾಕ್‌ನೊಂದಿಗೆ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ.


Click it and Unblock the Notifications








