ಒಂದೇ ದಿನ! 2 ಹೊಸ Vivo ಫೋನ್ ಬಿಡುಗಡೆ.. ಯಾವುದು? ಬೆಲೆ ಎಷ್ಟು?
ಸ್ಮಾರ್ಟ್‌ಫೋನ್ ಪ್ರಿಯರಿಗೆ ಡಬಲ್ ಸಿಹಿ ಸುದ್ದಿ ಇದೆ. ಶೀಘ್ರದಲ್ಲೇ ವಿವೋನ ಎರಡು ಹೊಸ ಮೊಬೈಲ್‌ಗಳು ಭಾರತಕ್ಕೆ ಎಂಟ್ರಿ ಕೊಡಲಿವೆ. ಹೌದು, ವಿವೋ (Vivo) ಕಂಪನಿಯು ಭಾರತದಲ್ಲಿ ತನ್ನ 'V40' ಸರಣಿಯ ಎರಡು ನೂತನ ಫೋನ್‌ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಒಂದು Vivo V40, ಮತ್ತೊಂದು Vivo V40 Pro ಸ್ಮಾರ್ಟ್‌ಫೋನ್. ಈ ಹೊಸ Vivo ಸ್ಮಾರ್ಟ್‌ಫೋನ್‌ಗಳ ಬೆಲೆ ಎಷ್ಟು? ವಿಶೇಷತೆಗಳೇನು? ಬಿಡುಗಡೆ ಯಾವಾಗ? ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.
Vivo V40 ಸರಣಿಯ ವೆನಿಲ್ಲಾ ಮತ್ತು ಪ್ರೊ ಎರಡೂ ಸ್ಮಾರ್ಟ್‌ಫೋನ್‌ಗಳು ಶೀಘ್ರದಲ್ಲೇ ಭಾರತದಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ. ಕಳೆದ ಮಾರ್ಚ್‌ನಲ್ಲಿ ಬಿಡುಗಡೆಯಾದ Vivo V30 ಮತ್ತು Vivo V30 Proಗೆ ಉತ್ತರಾಧಿಕಾರಿಗಳಾಗಿ ಮೊಬೈಲ್‌ಗಳು ಮಾರುಕಟ್ಟೆಗೆ ಎಂಟ್ರಿ ಕೊಡುವ ಸಾಧ್ಯತೆಯಿದೆ. ಜಾಗತಿಕ ಮಟ್ಟದಲ್ಲಿ ಈಗಾಗಲೇ ಕೆಲವು ಆಯ್ದ ದೇಶಗಳಲ್ಲಿ ಈ ಫೋನ್‌ಗಳನ್ನು ಅನಾವರಣಗೊಳಿಸಲಾಗಿದೆ. ಈ ಭಾರತೀಯ ಸರಣಿಯು ಝೈಸ್ ಬೆಂಬಲಿತ ಕ್ಯಾಮೆರಾಗಳನ್ನು ಹೊಂದಿರುವ ನಿರೀಕ್ಷೆಯಿದೆ. ಫೋನ್‌ಗಳು ಮಲ್ಟಿಫೋಕಲ್ ಪೋರ್ಟ್ರೇಟ್‌ಗಳಿಗೆ ಸಪೋರ್ಟ್ ನೀಡುತ್ತವೆ.

ವಿವೋ V40, ವಿವೋ V40 Pro: ಭಾರತದಲ್ಲಿ ಬಿಡುಗಡೆ ಯಾವಾಗ?
ವಿವೋ V40 ಮತ್ತು ವಿವೋ V40 ಪ್ರೊ ಬಿಡುಗಡೆ ದಿನಾಂಕದ ಕುರಿತು ವಿವೋ ಕಂಪನಿಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದೆ. ಅದರ ಪ್ರಕಾರ, ಈ ಸ್ಮಾರ್ಟ್‌ಫೋನ್‌ಗಳು ಆಗಸ್ಟ್ (2024) ತಿಂಗಳಿನಲ್ಲಿ ಭಾರತೀಯ ಮಾರುಕಟ್ಟೆಗೆ ಬರಬಹುದು.
Vivo V40 ನಿರೀಕ್ಷಿತ ವಿಶೇಷತೆಗಳೇನು?
ಡಿಸ್ಪ್ಲೇ: ಈ ಫೋನ್‌ಗಳು 6.78 ಇಂಚಿನ FHD+120Hz AMOLED ಡಿಸ್ಪ್ಲೇಯನ್ನು ಹೊಂದಿರಲಿದೆ. 2,800 x 1,260 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರ ಪಡೆದಿರಲಿದೆ. 4500nits ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ, Vivo V40ನ ಡಿಸ್ಪ್ಲೇ ಅದ್ಭುತವಾದ ದೃಶ್ಯಗಳು ಮತ್ತು ತಲ್ಲೀನಗೊಳಿಸುವ ಗೇಮಿಂಗ್ ಅನುಭವಗಳನ್ನು ನೀಡುತ್ತದೆ.
ಪ್ರೊಸೆಸರ್: ವಿವೋ V40 ಫೋನ್ Adreno 720 GPU ನೊಂದಿಗೆ ಜೋಡಿಸಲಾದ Snapdragon 7 Gen 3 SoC ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಫೋನ್ ಆಂಡ್ರಾಯ್ಡ್ 14 ಆಧಾರಿತ FuntouchOS 14 ನೊಂದಿಗೆ ಬರುತ್ತದೆ. 12GBಯ LPDDR4X RAM ಮತ್ತು 512GB ವರೆಗಿನ UFS 2.2 ಆನ್‌ಬೋರ್ಡ್ ಸ್ಟೋರೇಜ್ ಅನ್ನು ಹೊಂದಿರುವ ನಿರೀಕ್ಷೆಯಿದೆ.
ಕ್ಯಾಮೆರಾ: ವಿವೋ V40 Zeiss ಆಪ್ಟಿಕ್ಸ್ ಜೊತೆಗೆ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಘಟಕದೊಂದಿಗೆ ಬರುತ್ತದೆ. ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ನೊಂದಿಗೆ ಜೋಡಿಸಲಾದ ಮತ್ತೊಂದು 50 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡಿದೆ. ಹಿಂಭಾಗದ ಕ್ಯಾಮೆರಾ ವ್ಯವಸ್ಥೆಯು ಔರಾ ಲೈಟ್ ಘಟಕದೊಂದಿಗೆ ಇರುತ್ತದೆ. ಫೋನ್ ಸೆಲ್ಫಿ ಕ್ಲಿಕ್ಕಿಸಲು 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.
ಬ್ಯಾಟರಿ: ವಿವೋ V40 ಫೋನ್ 164.16 x 74.93 x 7.58mm ಅಳತೆ ಮತ್ತು 190 ಗ್ರಾಂ ತೂಕ ಹೊಂದಿದೆ. ಇದು ಶಕ್ತಿಯುತ 5,500mAh ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿರಲಿದೆ. ಇದು 44W ವೈರ್ಡ್ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಬ್ಯಾಟರಿ ಖಾಲಿಯಾಗುವುದರ ಬಗ್ಗೆ ಚಿಂತಿಸದೆ ನೀವು ದಿನವಿಡೀ ಫೋನನ್ನು ಬಳಸಬಹುದು.
ಇತರ ವೈಶಿಷ್ಟ್ಯಗಳು: ಈ ಸ್ಮಾರ್ಟ್‌ಫೋನ್, ಡ್ಯುಯಲ್ ಸಿಮ್, 5ಜಿ, ವೈ-ಫೈ 6, ಬ್ಲೂಟೂತ್ 5.4, ಎನ್‌ಎಫ್‌ಸಿ, ಜಿಪಿಎಸ್ ಮತ್ತು ಯುಎಸ್‌ಬಿ ಟೈಪ್-ಸಿ ಕನೆಕ್ಟಿವಿಟಿಯನ್ನು ಸಹ ಹೊಂದಿರಲಿದೆ. ಇದು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟೆಡ್ ಬಿಲ್ಡ್ ಅನ್ನು ಹೊಂದಿದೆ.
ಒಟ್ಟಾರೆ, ವಿವೋ ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಪಡೆದಿದೆ. ವಿವೋ ಮೊಬೈಲ್‌ಗಳು ತನ್ನ ವಿಭಿನ್ನ ಹಾಗೂ ವಿಶಿಷ್ಟ ಶೈಲಿಯ ಫೀಚರ್ಸ್‌ಗಳಿಂದ ಜನರನ್ನು ತನ್ನತ್ತ ಆಕರ್ಷಿಸುವಲ್ಲಿಯೂ ಸಕ್ಸಸ್ ಆಗಿವೆ. ಮೊಬೈಲ್ ಪ್ರಿಯರು ವಿವೋ ಸರಣಿಯ ಮೊಬೈಲ್‌ಗಳು ಮಾರುಕಟ್ಟೆಗೆ ಬರುವುದನ್ನೇ ಕಾದು ಖರೀದಿಸುತ್ತಾರೆ. ಇದೀಗ, Vivo V40 ಮತ್ತು Vivo V40 Pro ಸ್ಮಾರ್ಟ್‌ಫೋನ್‌ಗಳು ಸೌಂಡ್ ಮಾಡಲು ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಮುಂಬರುವ ದಿನಗಳಲ್ಲಿ ಕಂಪನಿಯು ಬಿಡುಗಡೆ ದಿನಾಂಕವನ್ನು ಘೋಷಿಸಲಿದೆ.


Click it and Unblock the Notifications








