ಶೀಘ್ರದಲ್ಲೇ Vivo V40 Lite ಸ್ಮಾರ್ಟ್‌ಫೋನ್ ಲಾಂಚ್ ! ವಿನ್ಯಾಸ, ಫೀಚರ್ಸ್ ಮಾಹಿತಿ ಲೀಕ್
ವಿವೋ (Vivo) ಮೊಬೈಲ್‌ಗಳು ಮಾರುಕಟ್ಟೆಯಲ್ಲಿ ವಿಶೇಷ ಬೇಡಿಕೆ ಹೊಂದಿವೆ, ತನ್ನ ವಿಭಿನ್ನ ಫಿಚರ್ಸ್ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಈ ಸ್ಮಾರ್ಟ್‌ಫೋನ್‌ಗಳು (Smartphones) ಯಶಸ್ವಿಯಾಗಿವೆ. ಈ ನಡುವೆ ವಿವೋ ಸಂಸ್ಥೆ ಕೂಡ ಆಗಾಗ ನೂತನ ಸರಣಿಯ ಮೊಬೈಲ್‌ಗಳನ್ನು ಬಿಡುಗಡೆ ಮಾಡುತ್ತಾ ಬಂದಿದೆ. ಇದೀಗ ವಿವೋ ಸಂಸ್ಥೆ Vivo V40 Lite ಹೆಸರಿನ ನೂತನ ಮೊಬೈಲ್ ಒಂದನ್ನು ಬಿಡುಗಡೆ ಮಾಡಲಿರುವ ಕುರಿತು ಕೆಲವು ಮಾಹಿತಿಗಳು ಸೋರಿಕೆಯಾಗಿವೆ. ಇದು Vivo V40 ಮೊಬೈಲ್‌ನ ಯುರೋಪಿಯನ್ ರೆಂಡರ್ ಆಗಿರಲಿದೆ ಎಂದು ತಿಳಿದು ಬಂದಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್ ಕುರಿತಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.
ಟಿಪ್‌ಸ್ಟರ್‌ನ ಸುಧಾಂಶು ಅಂಬೋರ್ ಅವರ X ಪೋಸ್ಟ್ ಆಧಾರದಲ್ಲಿ ಇದೀಗ ಬರಲಿರುವ ಫೋನ್ Vivo V40 ಗಿಂತ ಅಗ್ಗದ ಬೆಲೆಯಲ್ಲಿ ಸಿಗಲಿದೆ ಎಂದು ಹೇಳಲಾಗಿದೆ. Vivo V40 Lite ಅಧಿಕೃತವಾಗಿ ಬಿಡುಗಡೆಯಾಗಿರು ಚಿತ್ರಗಳು ಫೋನ್‌ನ ಸಂಪೂರ್ಣ ವಿನ್ಯಾಸ ಮತ್ತು ಬಣ್ಣಗಳ ಆಯ್ಕೆಗಳನ್ನು ಬಹಿರಂಗಪಡಿಸುತ್ತವೆ.

ವಿನ್ಯಾಸ:
ಹ್ಯಾಂಡ್‌ಸೆಟ್ ಡಿಸ್‌ಪ್ಲೇ ಸುತ್ತಲೂ ಸಮಂಜಸವಾಗಿ ಸ್ಲಿಮ್ ಬೆಜೆಲ್‌ಗಳೊಂದಿಗೆ ವಕ್ರ ಅಂಚಿನ ವಿನ್ಯಾಸವನ್ನು ಹೊಂದಿದೆ ಮತ್ತು ಮಧ್ಯದಲ್ಲಿ ಪಂಚ್-ಹೋಲ್ ಕಟೌಟ್ ಅನ್ನು ಹೊಂದಿರಲಿದೆ ಎಂದು ತಿಳಿದು ಬಂದಿದೆ. ವಾಲ್ಯೂಮ್ ರಾಕರ್ ಮತ್ತು ಪವರ್ ಬಟನ್‌ಗಳು ಬಲ ತುದಿಯಲ್ಲಿವೆ. ಮಧ್ಯದ ಚೌಕಟ್ಟು ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿದೆ ಎಂದು ತೋರುತ್ತದೆ, ಬಹುಶಃ ಬೆಲೆಯನ್ನು ನಿಯಂತ್ರಣದಲ್ಲಿಡಲು ಹೀಗೆ ಮಾಡಿರಬಹುದು. ಫೋನ್‌ನ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆನ್ಸಾರ್‌ಗಳು ಮತ್ತು ಔರಾ ಸ್ಮಾರ್ಟ್ ಲೈಟ್ ಅನ್ನು ಇರಿಸಲು ನೀವು ದೊಡ್ಡ ವೃತ್ತಾಕಾರದ ಮಾಡ್ಯೂಲ್ ಅನ್ನು ನೋಡಬಹುದಾಗಿದೆ. ಪ್ರಮಾಣಿತ Vivo V40 ನಂತಹ ಯಾವುದೇ Zeiss ಬ್ರ್ಯಾಂಡಿಂಗ್ ಇಲ್ಲದಿರುವುದನ್ನು ಗಮನಿಸಬಹುದಾಗಿದೆ. ಈ ಫೋನ್ ಅನ್ನು ಬಿಳಿ ಮತ್ತು ಮರೂನ್ ಬಣ್ಣಗಳಲ್ಲಿ ನೋಡಬಹುದಾಗಿದೆ.
Vivo V40 Lite ನ ನಿರೀಕ್ಷಿತ ಬೆಲೆ: ಸುಧಾಂಶು ನೀಡಿರುವ ಮಾಹಿತಿ ಆಧಾರದಲ್ಲಿ ನೋಡುವುದಾದರೆ ನಮಗೆ Vivo V40 Lite ನ 8GB + 256GB ವೇರಿಯಂಟ್ EUR 399 ಅಂದರೆ ಸುಮಾರು 35,900 ರೂ. ಬೆಲೆ ಹೊಂದಿರುವ ಸಾಧ್ಯತೆಗಳಿವೆ.
Vivo V40 Lite ಫೀಚರ್ಸ್:
Vivo V40 Lite ಇದು 2400X1080 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.78 ಇಂಚಿನ ಫುಲ್ HD+ AMOLED ಡಿಸ್‌ಪ್ಲೇಯನ್ನು ಹೊಂದಿರುವ ನಿರೀಕ್ಷೆಯಿದೆ. ಇದು Vivo V30 Lite ನ 6.67-ಇಂಚಿನ ಪ್ಯಾನೆಲ್‌ಗಿಂತ ಸ್ವಲ್ಪ ದೊಡ್ಡದಾಗಿರಲಿದೆ. ಹ್ಯಾಂಡ್‌ಸೆಟ್ Qualcomm Snapdragon 6 Gen 1 ನಿಂದ ಚಾಲಿತವಾಗುತ್ತದೆ. ಈ ಸ್ಮಾರ್ಟ್‌ಫೋನ್‌ನ ಚಿಪ್‌ಸೆಟ್ ಅನ್ನು 8GB RAM ಮತ್ತು 256GB ಸ್ಟೋರೇಜ್ ಜೊತೆಗೆ ಜೋಡಿಸಿರುವ ನಿರೀಕ್ಷೆ ಇದೆ.
ಕ್ಯಾಮೆರಾ: Vivo V40 Lite OIS ನೊಂದಿಗೆ 50MP ಪ್ರಾಥಮಿಕ ಕ್ಯಾಮೆರಾ, 8MP ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು 2MP ಸೆನ್ಸಾರ್ ಅನ್ನು ಹೊಂದಿರಲಿದೆ. Vivo V30 Lite 5G ಇದು 64MP + 8MP + 2MP ಟ್ರಿಪಲ್-ಕ್ಯಾಮೆರಾ ಸೆಟಪ್ ಹೊಂದಿತ್ತು. ಸೆಲ್ಫಿಗಾಗಿ ಈ ಫೋನ್ ಮುಂಭಾಗದಲ್ಲಿ 32MP ಶೂಟರ್ ಇರಿಸುವ ನಿರೀಕ್ಷೆ ಇದೆ. ಇನ್ನೂ V30 Lite ಸೆಲ್ಫಿಗಾಗಿ 50MP ಶೂಟರ್ ಅನ್ನು ಹೊಂದಿತ್ತು.
Vivo ಫೋನ್ 44W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,500mAh ಬ್ಯಾಟರಿಯನ್ನು ಪ್ಯಾಕ್ ಮಾಡುವ ಸಾಧ್ಯತೆಯಿದೆ. Vivo V30 Lite 5G ನಲ್ಲಿನ 4,800mAh ಸೆಲ್‌ನಿಂದ ಬ್ಯಾಟರಿ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. Vivo V40 Lite ಅನ್ನು ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, ಡ್ಯುಯಲ್ ಸಿಮ್ ಬೆಂಬಲ, IP64 ರೇಟಿಂಗ್ ಮತ್ತು 8GB ವರ್ಚುವಲ್ RAM ಬೆಂಬಲದೊಂದಿಗೆ ಅಳವಡಿಸಬಹುದಾಗಿದೆ. Vivo V40 Lite ಆಂಡ್ರಾಯ್ಡ್ 14 ಆಧಾರಿತ Funtouch OS ಕಸ್ಟಮ್ ಸ್ಕಿನ್ ಅನ್ನು ಹೊಂದಿರುವ ಸಾಧ್ಯತೆ ಇದೆ.


Click it and Unblock the Notifications








