ಇಂದು Vivo V40 Pro ಮಾರಾಟಕ್ಕೆ ಸಿದ್ಧ! 5,000 ಅಗ್ಗ.. 10% ಡಿಸ್ಕೌಂಟ್ ಇದೆ
ವಿವೋ (Vivo) ತನ್ನ V40 ಸರಣಿಯಲ್ಲಿ ಹೊಸ ವಿವೋ ವಿ40 ಪ್ರೊ (Vivo V40 Pro) ಸ್ಮಾರ್ಟ್‌ಫೋನನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ನೂತನ ಫೋನ್ ಇಂದು (ಆಗಸ್ಟ್ 13) ಮೊದಲ ಮಾರಾಟಕ್ಕೆ ಸಿದ್ಧವಾಗಿದೆ. ಈ ಫೋನ್ ಎರಡು ಸ್ಟೋರೇಜ್ ಆಯ್ಕೆಗಳು ಮತ್ತು ಎರಡು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಈಗಾಗಲೇ ಈ ಫೋನ ತನ್ನ ಅದ್ಭುತ ಫೀಚರ್ಸ್‌ಗಳಿಂದ ಮೊಬೈಲ್ ಪ್ರಿಯರನ್ನು ಆಕರ್ಷಿಸುವಲ್ಲಿ ಸೈ ಎನಿಸಿಕೊಂಡಿದೆ. ಈ ಫೋನಿನ ಬೆಲೆ, ಆಫರ್‌ಗಳು ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ ಬನ್ನಿ.
ವಿವೋ ವಿ40 ಪ್ರೊ 6.78 ಇಂಚಿನ AMOLED ಡಿಸ್ಪ್ಲೇ ಮತ್ತು MediaTek ಡೈಮೆನ್ಸಿಟಿ 9200+ ಚಿಪ್‌ಸೆಟ್ ಹೊಂದಿದೆ. 12GB RAM ಮತ್ತು 512GB ಸ್ಟೋರೇಜ್‌ನೊಂದಿಗೆ ಬರುತ್ತದೆ. ಇದು ZEISS ಚಾಲಿತ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ 50MP ಟ್ರಿಪಲ್ ಮುಖ್ಯ ಕ್ಯಾಮೆರಾ ಮತ್ತು 50MP ಫ್ರಂಟ್ ಕ್ಯಾಮೆರಾ ಇದೆ. 5500mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಸಪೋರ್ಟ್ ಇರಲಿದೆ.

ವಿವೋ ವಿ40 ಪ್ರೊ ಬೆಲೆ ಎಷ್ಟು?
8GB + 256GB ಸ್ಟೋರೇಜ್ ಬೆಲೆ = 49,999 ರೂ.
12GB + 512GB ಸ್ಟೋರೇಜ್ ಬೆಲೆ = 55,999 ರೂ.
ಕಂಪನಿಯು ಈ ಸ್ಮಾರ್ಟ್‌ಫೋನನ್ನು 8GB + 256GB ಮತ್ತು 12GB + 512GB ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಮಾಡಿದೆ. ಇದು ಗಂಗಾ ನೀಲಿ, ಲೋಟಸ್ ಪರ್ಪಲ್ ಮತ್ತು ಟೈಟಾನಿಯಂ ಗ್ರೇ ಬಣ್ಣದಲ್ಲಿ ಮಾರಾಟಕ್ಕೆ ಸಿದ್ಧವಾಗಿದೆ. ಇಂದು (ಆಗಸ್ಟ್ 13) ಮಧ್ಯಾಹ್ನ 2 ಗಂಟೆಯಿಂದ ಈ ಫೋನ್ ಅಧಿಕೃತವಾಗಿ ಮಾರಾಟವಾಗಲಿದೆ. ನೀವು ಇ ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್ ಮತ್ತು ವಿವೊ ಅಧಿಕೃತ ವೆಬ್‌ಸೈಟ್‌ನಿಂದ ಖರೀದಿಸಬಹುದು.
5,000 ರೂ. ಅಗ್ಗ.. 10% ಡಿಸ್ಕೌಂಟ್!
ಐಸಿಐಸಿಐ ಬ್ಯಾಂಕ್ ಮತ್ತು ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು ವಿವೋ ವಿ40 ಪ್ರೋ ಅನ್ನು ಖರೀದಿಸುವ ಗ್ರಾಹಕರು ವಿವೋ ಇ ಸ್ಟೋರ್‌ನಿಂದ 10% ಡಿಸ್ಕೌಂಟ್ ಪಡೆಯಬಹುದು. ಫ್ಲಿಪ್‌ಕಾರ್ಟ್‌ನಲ್ಲಿ ಎಲ್ಲಾ ಪ್ರಮುಖ ಬ್ಯಾಂಕ್‌ಗಳ ಕಾರ್ಡ್‌ಗಳನ್ನು ಬಳಸಿಕೊಂಡು ವಿವೋ ವಿ40 ಪ್ರೋ ಖರೀದಿಸಿದರೆ 5,000 ರೂ.ಗಳ ರಿಯಾಯಿತಿಯನ್ನು ನೀಡಲಾಗುತ್ತಿದೆ.
ವಿವೋ ವಿ40 ಪ್ರೊ ಫೋನಿನ ವೈಶಿಷ್ಟ್ಯಗಳು
ವಿವೋ ವಿ40 ಪ್ರೊ 6.78 ಇಂಚಿನ FHD+ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರ, 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲದೊಂದಿಗೆ ಬರುತ್ತದೆ. ಕಂಪನಿಯು ವಿವೋ ವಿ40 ಪ್ರೊ ಫೋನಿನಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 9200+ ಚಿಪ್‌ಸೆಟ್ ಅನ್ನು ಅಳವಡಿಸಿದೆ. ಇದರ ಹಿಂದಿನ ಮಾದರಿಗೆ ಹೋಲಿಸಿದರೆ ಇದು 10 ಪ್ರತಿಶತ CPU ಮತ್ತು GPU ಸುಧಾರಣೆಗಳೊಂದಿಗೆ ಬರುತ್ತದೆ. ಆಕ್ಟಾ-ಕೋರ್ ಚಿಪ್ 3.35GHz ಗರಿಷ್ಠ ಗಡಿಯಾರದ ವೇಗವನ್ನು ನೀಡುತ್ತದೆ.

ವಿವೋ ವಿ40 ಪ್ರೊ ಸ್ಮಾರ್ಟ್‌ಫೋನಿನಲ್ಲಿ 50MP ಪ್ರಾಥಮಿಕ ಕ್ಯಾಮೆರಾ ಇದೆ. ಇದು 2x ಆಪ್ಟಿಕಲ್ ಜೂಮ್ ಮತ್ತು 50x ಡಿಜಿಟಲ್ ಜೂಮ್‌ಗೆ ಬೆಂಬಲದೊಂದಿಗೆ 50MP ಪೋರ್ಟ್ರೇಟ್ ಸೋನಿ IMX816 ಲೆನ್ಸ್ ಮತ್ತು 50MP ವೈಡ್ ಆಂಗಲ್ ಲೆನ್ಸ್ ಅನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಮುಂಭಾಗದಲ್ಲಿ 50MP ಸೆಲ್ಫಿ ಕ್ಯಾಮೆರಾ ಇದೆ. ಈ ಫೋನ್ ಒಟ್ಟು ನಾಲ್ಕು 50MP ಕ್ಯಾಮೆರಾಗಳನ್ನು ಹೊಂದಿದೆ. ಎಲ್ಲವೂ ZEISS ನೊಂದಿಗೆ ಬರುತ್ತವೆ.
ವಿವೋ ವಿ40 ಪ್ರೊ ಇತ್ತೀಚಿನ Android 14 ನಲ್ಲಿ Funtouch OS 14 ನೊಂದಿಗೆ ಕೆಲಸ ಮಾಡುತ್ತದೆ. ಹೆಚ್ಚಿನ ಸಂಖ್ಯೆಯ ಪೂರ್ವ ಲೋಡ್ ಮಾಡಿದ ಅಪ್ಲಿಕೇಶನ್‌ಗಳು ಇದರಲ್ಲಿ ಲಭ್ಯವಿದೆ. ಕಂಪನಿಯು 3 ವರ್ಷಗಳ ಪ್ರಮುಖ OS ನವೀಕರಣಗಳನ್ನು ಮತ್ತು ವಿವೋ ವಿ40 ಪ್ರೊ ನೊಂದಿಗೆ 4 ವರ್ಷಗಳ ಭದ್ರತಾ ಪ್ಯಾಚ್‌ಗಳನ್ನು ಭರವಸೆ ನೀಡುತ್ತದೆ.
ಇನ್ನೂ, ಈ ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು ವೇಗದ ಚಾರ್ಜಿಂಗ್‌ಗಾಗಿ 80 ವ್ಯಾಟ್ ಬೆಂಬಲವನ್ನು ಹೊಂದಿದೆ. ಇದು ಧೂಳು ಮತ್ತು ನೀರಿನ ವಿರುದ್ಧ IP68 ರೇಟಿಂಗ್ ಸಹ ಪಡೆದಿದೆ.


Click it and Unblock the Notifications








