ಬಂದೇ ಬಿಡ್ತು ಹೊಸ Vivo V40 SE 4G ಫೋನ್: 50MP ಕ್ಯಾಮೆರಾ, 80W ಫಾಸ್ಟ್ ಚಾರ್ಜಿಂಗ್.. ಬೆಸ್ಟ್ ಬೆಲೆ!
ವಿವೋ ಪ್ರಿಯರಿಗೆ ಸಿಹಿ ಸುದ್ದಿ ಇದೆ. ಸದ್ದಿಲ್ಲದೇ ಹೊಸ ವಿವೋ ಫೋನ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹೌದು, ವಿವೋ (Vivo) ಕಂಪನಿಯು ಅಧಿಕೃತವಾಗಿ Vivo V40 SE 4G ಫೊನನ್ನು ಯುರೋಪ್‌ನಲ್ಲಿ (ಜೆಕ್ ರಿಪಬ್ಲಿಕ್‌ನಲ್ಲಿ) ಜಾಗತಿಕವಾಗಿ ಬಿಡುಗಡೆ ಮಾಡಿದೆ. ಇದು ಬ್ರ್ಯಾಂಡ್‌ನ V40 ಸರಣಿಗೆ ಹೊಸ ಸೇರ್ಪಡೆಯಾಗಿದೆ. ಈ ಹಿಂದೆ AC ಮಾದರಿಯನ್ನು 5G ತಂತ್ರಜ್ಞಾನದೊಂದಿಗೆ ಪರಿಚಯಿಸಲಾಗಿತ್ತು. ಇದೀಗ, 4G ಅನ್ನು ಇನ್ನೂ ಕಡಿಮೆ ಬೆಲೆಗೆ ಲಾಂಚ್ ಮಾಡಲಾಗಿದೆ. ಈ ಹೊಸ ಫೋನಿನ ಬೆಲೆ ಎಷ್ಟು? ಯಾವೆಲ್ಲಾ ಫೀಚರ್ಸ್ ಹೊಂದಿದೆ? ಈ ಕುರಿತು ತಿಳಿಯೋಣ ಬನ್ನಿ.
Vivo V40 SE 4G ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 685 SoC ಪ್ರೊಸೆಸರ್ ಹೊಂದಿದೆ. 120Hz ರಿಫ್ರೆಶ್ ದರದೊಂದಿಗೆ 6.67 ಇಂಚಿನ E4 AMOLED ಡಿಸ್‌ಪ್ಲೇ, 50MP ಪ್ರಾಥಮಿಕ ಕ್ಯಾಮೆರಾ ಹೊಂದಿದೆ. ಇದು Android 14 ಆಧಾರಿತ Funtouch OS 14 ಸಾಫ್ಟ್‌ವೇರ್ ಹೊಂದಿದೆ. 80W ಸ್ಪೀಡ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಪಡೆದಿದೆ. ಇನ್-ಡಿಸ್ಪ್ಲೇ ಫಿಂಗಪ್ರಿಂಟ್ ಸಂವೇದಕ ಮತ್ತು IP54 ರೇಟಿಂಗ್ ಹೊಂದಿದೆ. ಇನ್ನಷ್ಟು ಫೀಚರ್ಸ್ ತಿಳಿಯಲು ಮುಂದೆ ಓದಿ.

Vivo V40 SE 4G ಬೆಲೆ ಮತ್ತು ಲಭ್ಯತೆ
ಕಂಪನಿಯು Vivo V40 SE 4G ಸ್ಮಾರ್ಟ್‌ಫೋನ್ ಅನ್ನು ಎರಡು ಸ್ಟೋರೇಜ್ ವೇರಿಯಂಟ್‌ಗಳಲ್ಲಿ ಬಿಡುಗಡೆ ಮಾಡಿದೆ. ಈ ಮೊಬೈಲ್ ಕ್ರಿಸ್ಟಲ್ ಬ್ಲಾಕ್ ಮತ್ತು ಲೆದರ್ ಪರ್ಪಲ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ. 8GB RAM + 128GB ಸ್ಟೋರೇಜ್‌ನೊಂದಿಗೆ Vivo V40 SE 4G ಫೋನಿನ ಮೂಲ ಬೆಲೆ ಸುಮಾರು 17,500 ರೂ. (4,999 PLN) ಇದೆ. 256GB ಹೊಂದಿರುವ ಟಾಪ್ ಮಾಡೆಲ್‌ನ ಬೆಲೆಯನ್ನು ಇನ್ನೂ ಬಹಿರಂಗಪಡಿಸಿಲ್ಲ.
Vivo V40 SE 4G ಫೋನಿನ ಫೀಚರ್ಸ್
ಡಿಸ್ಪ್ಲೇ: ಇದು 6.67 ಇಂಚಿನ E4 AMOLED ಡಿಸ್ಪ್ಲೇಯನ್ನು ಹೊಂದಿದೆ. ಪೂರ್ಣ HD+ ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 1800 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಬೆಂಬಲಿಸುತ್ತದೆ. ಫೋನ್ ಭದ್ರತೆಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಸಹ ಹೊಂದಿದೆ.
ಪ್ರೊಸೆಸರ್: ಕಂಪನಿಯು Vivo V40 SE 4Gನಲ್ಲಿ ಸ್ನಾಪ್‌ಡ್ರಾಗನ್ 685 ಚಿಪ್‌ಸೆಟ್ ಅಳವಡಿಸಿದೆ. ಈ ಹೊಸ Vivo 4G ಫೋನ್ Android 14 ಆಧಾರಿತ Funtouch OS 14ನೊಂದಿಗೆ ಕೆಲಸ ನಿರ್ವಹಿಸುತ್ತದೆ.
ಸ್ಟೋರೇಜ್: ಈ ಮೊಬೈಲ್ 8GB LPDDR4X RAM, 128GB + 256GB UFS 2.2 ಆಂತರಿಕ ಸ್ಟೋರೇಜ್ ಹೊಂದಿದೆ. ಇದು 8GB ವರೆಗಿನ ವರ್ಚುವಲ್ RAM ಮತ್ತು ಮೈಕ್ರೊ SD ಕಾರ್ಡ್ ಸ್ಲಾಟ್‌ನ ಸೌಲಭ್ಯವನ್ನು ಹೊಂದಿದೆ.
ಈ ಸುದ್ದಿ ಓದಿದ್ದೀರಾ?: ಖುಷಿ ಸುದ್ದಿ! ಇಲ್ಲಿ ಕೇಳಿ.. ಮೊಬೈಲ್, ಚಾರ್ಜರ್ ಬೆಲೆ ಇಳಿಕೆ
ಕ್ಯಾಮೆರಾ: ಈ ಫೋನ್ ಸೆಲ್ಫಿಗಾಗಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಬೊಕೆ ಕ್ಯಾಮೆರಾ ಮತ್ತು ಫ್ಲಿಕರ್ ಸಂವೇದಕ ಇದೆ.
ಬ್ಯಾಟರಿ: Vivo V40 SE 4G ಸ್ಮಾರ್ಟ್‌ಫೋನ್ 80W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಬ್ಯಾಕಪ್ ಹೊಂದಿದೆ. Vivo V40 SE 4G ಫೋನ್ 163.17 x 75.81 x 7.79 ಮಿಮೀ ಮತ್ತು 186 ಗ್ರಾಂ ತೂಕ ಹೊಂದಿದೆ.
ಇತರ ಫೀಚರ್ಸ: ಈ ಫೋನ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 4G VoLTE, 2.4GHz-5GHz Wi-Fi, ಬ್ಲೂಟೂತ್ 5.0, GPS, NFC ಮತ್ತು USB-C ಪೋರ್ಟ್ ನಂತಹ ಸೌಲಭ್ಯ ಒಳಗೊಂಡಿದೆ. ಇದು ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP54 ರೇಟಿಂಗ್ ಅನ್ನು ಪಡೆದಿದೆ.


Click it and Unblock the Notifications








