5500mAh ಬ್ಯಾಟರಿ, 50MP ಸೆಲ್ಫಿ ಕ್ಯಾಮೆರಾ.. ಶೀಘ್ರವೇ 2 ಗಟ್ಟಿಮುಟ್ಟಾದ Vivo ಫೋನ್ ಲಾಂಚ್
ವಿವೋ (Vivo) ಕಂಪನಿಯ ಎರಡು ಹೊಸ ಮೊಬೈಲ್ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿವೆ. ಮುಂದಿನ ತಿಂಗಳು (ಆಗಸ್ಟ್) Vivo V40 ಸರಣಿಯ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. Vivo V40 ಮತ್ತು Vivo V40 Pro ಹೆಸರಿನಲ್ಲಿ ಈ ಫೋನ್‌ಗಳನ್ನು ಲಾಂಚ್ ಆಗಲಿವೆ. ಕಂಪನಿಯು ಈವರೆಗೂ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಆದರೆ, ಈ ಫೋನ್‌ಗಳ ಕುರಿತು ಪ್ರಮುಖ ಮಾಹಿತಿಗಳು ಒಂದೊಂದಾಗಿ ಸೋರಿಕೆಯಾಗುತ್ತಿದೆ. Vivo V40 ಸರಣಿಯ ಪ್ರೊ ಮಾದರಿಯನ್ನು Geekbench, BIS ಮತ್ತು Bluetooth SIG ಸೈಟ್‌ಗಳಲ್ಲಿ ಪಟ್ಟಿ ಮಾಡಲಾಗಿದೆ. ಬನ್ನಿ, ಮತ್ತಷ್ಟು ವಿವರಗಳನ್ನು ತಿಳಿಯೋಣ.
ಮಾಹಿತಿಯ ಪ್ರಕಾರ, ಈ ಫೋನ್ ಭಾರತದಲ್ಲಿ 5500mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ. ಈ ವಿಭಾಗದಲ್ಲಿ ತೆಳ್ಳಗಿರಬಹುದು. Vivo V40 ಸರಣಿಯ ಮೊಬೈಲ್‌ಗಳು ನೀರು ಮತ್ತು ಧೂಳಿನ ರಕ್ಷಣೆಗಾಗಿ IP68 ರೇಟಿಂಗ್ ಅನ್ನು ಹೊಂದಿವೆ ಎಂದು ಬಹಿರಂಗಪಡಿಸಲಾಗಿದೆ. Vivo V40ನ ಭಾರತೀಯ ಮಾದರಿಯು ಯುರೋಪ್‌ನಲ್ಲಿ ಬಿಡುಗಡೆಯಾದ ಫೋನ್‌ಗಳಂತೆಯೇ ಫೀಚರ್ಸ್‌ಗಳನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಈ ಹೊಸ ಸರಣಿಯ ಸ್ಮಾರ್ಟ್‌ಫೋನ್‌ಗಳ ಮತ್ತಷ್ಟು ವಿಶೇಷತೆ ತಿಳಿಯಲು ಮುಂದೆ ಓದಿ.

Vivo V40 ಸರಣಿಯ ಫೀಚರ್ಸ್ ಸೋರಿಕೆ
Vivo V40 Pro ಮಾದರಿಯು 5500mAh ಬ್ಯಾಟರಿ ಮತ್ತು IP68 ರೇಟಿಂಗ್ ಅನ್ನು ಸಹ ಪಡೆಯಬಹುದು ಎಂದು ವರದಿಯಾಗಿದೆ. ಆದರೆ, ಇತರ ವೈಶಿಷ್ಟ್ಯಗಳ ವಿಷಯದಲ್ಲಿ ಇದು ಇನ್ನೂ ಉತ್ತಮವಾಗಿರುತ್ತದೆ. ಸೋರಿಕೆಯ ಪ್ರಕಾರ, Vivo V40 ಸರಣಿಯನ್ನು ಭಾರತದಲ್ಲಿ ನೀಲಿ, ಲೋಟಸ್ ಪರ್ಪಲ್ ಮತ್ತು ಟೈಟಾನಿಯಂ ಗ್ರೇ ಸೇರಿದಂತೆ ಮೂರು ಬಣ್ಣಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. Vivo V40 ಸರಣಿಯು ಮೃದುವಾದ ಡಿಸೈನ್ ಹೊಂದಿರುತ್ತದೆ. ಇದು 3D ಕರ್ವ್ಡ್ ಡಿಸ್ಪ್ಲೇ ಮತ್ತು ಹೊಸ ಇನ್ಫಿನಿಟಿ ಐ ಕ್ಯಾಮೆರಾ ಮಾಡ್ಯೂಲ್ ಅನ್ನು ಸಹ ಪಡೆಯಬಹುದು.
Vivo V40 Pro ಪ್ರೊಸೆಸರ್ ಏನು?
Vivo V40 Pro ಮಾದರಿಯನ್ನು ಮಾದರಿ ಸಂಖ್ಯೆ V2347 ನೊಂದಿಗೆ ಗೀಕ್‌ಬೆಂಚ್, BIS ಮತ್ತು ಬ್ಲೂಟೂತ್ SIG ಪಟ್ಟಿಗಳಲ್ಲಿ ಗುರುತಿಸಲಾಗಿದೆ. Vivo V40 Pro ಸ್ಮಾರ್ಟ್‌ಫೋನ್ Mali G715 Immortalis MC11 GPU ಜೊತೆಗೆ ಆಕ್ಟಾ-ಕೋರ್ ಪ್ರೊಸೆಸರ್ ಅನ್ನು ಪಡೆಯಬಹುದು. ಇದು MediaTek ಡೈಮೆನ್ಸಿಟಿ 9200 ಪ್ಲಸ್ ಚಿಪ್‌ಸೆಟ್ ಮತ್ತು 8GB RAM ಹೊಂದಿರುತ್ತದೆ. ಆಪರೇಟಿಂಗ್ ಸಿಸ್ಟಮ್‌ಗೆ ಸಂಬಂಧಿಸಿದಂತೆ, ಸಾಧನವು ಆಂಡ್ರಾಯ್ಡ್ 14 ಅನ್ನು ಆಧರಿಸಿದೆ ಎಂದು ಹೇಳಲಾಗುತ್ತದೆ.

Vivo V40 ಸರಣಿಯ ನಿರೀಕ್ಷಿತ ಫೀಚರ್ಸ್
ಡಿಸ್ಪ್ಲೇ: ಈ ಸರಣಿಯು 6.78 ಇಂಚಿನ FHD+120Hz AMOLED ಡಿಸ್ಪ್ಲೇಯನ್ನು ಹೊಂದಿರಲಿದೆ. 2,800 x 1,260 ಪಿಕ್ಸೆಲ್‌ಗಳ ರೆಸಲ್ಯೂಶನ್, 4500nits ಗರಿಷ್ಠ ಬ್ರೈಟ್‌ನೆಸ್ ಮತ್ತು 120Hz ರಿಫ್ರೆಶ್ ದರ ಪಡೆದಿರಲಿದೆ.
ಪ್ರೊಸೆಸರ್: Adreno 720 GPU ನೊಂದಿಗೆ ಜೋಡಿಸಲಾದ Snapdragon 7 Gen 3 SoC ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಫೋನ್ ಆಂಡ್ರಾಯ್ಡ್ 14 ಆಧಾರಿತ FuntouchOS 14 ನೊಂದಿಗೆ ಬರುತ್ತದೆ. 12GBಯ LPDDR4X RAM ಮತ್ತು 512GB ವರೆಗಿನ UFS 2.2 ಆನ್‌ಬೋರ್ಡ್ ಸ್ಟೋರೇಜ್ ಹೊಂದಿರಲಿದೆ.
ಕ್ಯಾಮೆರಾ: ಈ ಸರಣಿಯು ಡ್ಯುಯಲ್ ಕ್ಯಾಮೆರಾ ರಚನೆ ಹೊಂದಿರುತ್ತದೆ. 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿರಲಿದೆ.
ಬ್ಯಾಟರಿ: ಇದು 5,500mAh ಬ್ಯಾಟರಿ ಬ್ಯಾಕಪ್ ಹೊಂದಿರಲಿದೆ. 44W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಪಡೆದಿರಲಿದೆ.
ಇತರ ಫೀಚರ್ಸ್: ಈ ಸರಣಿಯಲ್ಲಿ ಡ್ಯುಯಲ್ ಸಿಮ್, 5ಜಿ, ವೈ-ಫೈ 6, ಬ್ಲೂಟೂತ್ 5.4, ಎನ್‌ಎಫ್‌ಸಿ, ಜಿಪಿಎಸ್ ಮತ್ತು ಯುಎಸ್‌ಬಿ ಟೈಪ್-ಸಿ ಕನೆಕ್ಟಿವಿಟಿ ಸೌಲಭ್ಯ ಇರುತ್ತದೆ. ಇದು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟೆಡ್ ಬಿಲ್ಡ್ ಹೊಂದಿದೆ.


Click it and Unblock the Notifications








