Vivo V40 ಸರಣಿಯ 2 ಹೊಸ ಫೋನ್ ಎಂಟ್ರಿ; ಖರೀದಿಗೆ ಕ್ಯೂ ಗ್ಯಾರಂಟಿ! ಬೆಲೆ ನೋಡಿ
Vivo V40 or Vivo V40 Pro Launch: ದಿ ವೇಟ್ ಈಸ್ ಓವರ್..! ಇದುವೇ ವಿವೋ ಪ್ರಿಯರು ಕಾಯುತ್ತಿದ್ದ ಹಾರ್ಟ್ ಫೇವರಿಟ್ ಫೋನ್. ಹೌದು, ಅಂತೂ ಇಂತೂ ವಿವೋನ ಎರಡು ಹೊಸ ಸ್ಮಾರ್ಟ್‌ಫೋನ್‌ಗಳು ಭಾರತಕ್ಕೆ ಎಂಟ್ರಿ ಕೊಟ್ಟಿವೆ. ಈ ಫೋನಿನ ಸ್ಟೈಲಿಶ್ ಲುಕ್, ಅದ್ಭುತ ಕ್ಯಾಮೆರಾ, ಅತ್ಯಾಕರ್ಷಕ ಫೀಚರ್ಸ್‌ಗಳು ಗ್ರಾಹಕರ ಕಣ್ಣು ಕುಕ್ಕುತ್ತಿವೆ. ನಾವು ಹೇಳುತ್ತಿರುವುದು ವೀವೋನ 'V40' ಸರಣಿಯ ಎರಡು ನೂತನ ಮೊಬೈಲ್‌ಗಳ ಬಗ್ಗೆ. ವಿವೋ (Vivo) ಕಂಪನಿಯು ಇಂದು Vivo V40 ಮತ್ತು Vivo V40 Pro ಹೆಸರಿನೊಂದಿಗೆ ನೂತನ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ವಿವೋ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ Vivo V40 ಫೋನನ್ನು ಮೂರು ಬಣ್ಣಗಳ ಆಯ್ಕೆಗಳೊಂದಿಗೆ ಮತ್ತು Vivo V40 Pro ಫೋನನ್ನು ಎರಡು ಬಣ್ಣ ಆಯ್ಕೆಗಳೊಂದಿಗೆ ಬಿಡುಗಡೆ ಮಾಡಿದೆ. Vivo V40 ಫೊನನ್ನು ಮೂರು ಸ್ಟೋರೇಜ್ ವೇರಿಯಂಟ್‌ನಲ್ಲಿ ಮತ್ತು Vivo V40 Pro ಸ್ಮಾರ್ಟ್‌ಫೋನನ್ನು ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಲಾಂಚ್ ಮಾಡಿದೆ. ಇದು 5500mAh ಬ್ಯಾಟರಿಯನ್ನು ಹೊಂದಿದೆ. ಬನ್ನಿ, ಈ ಎರಡು ಫೋನ್‌ಗಳ ಬೆಲೆ, ಲಭ್ಯತೆ ಮತ್ತು ಫೀಚರ್ಸ್‌ಗಳ ಬಗ್ಗೆ ತಿಳಿಯೋಣ.

Vivo V40 ಮತ್ತು Vivo V40 Pro ಬೆಲೆ
ಕಂಪನಿಯು Vivo V40 ಫೋನನ್ನು 8GB + 128GB, 8GB + 256GB ಮತ್ತು 12GB + 512GB ಸ್ಟೋರೇಜ್‌ನಲ್ಲಿ ಪರಿಚಯಿಸಿದೆ. ಇನ್ನೂ, Vivo V40 Pro ಫೋನನ್ನು 8GB + 256GB ಮತ್ತು 12GB + 512GB ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಮಾಡಿದೆ. ನೀವು 3 ಬಣ್ಣದ ಆಯ್ಕೆಗಳಲ್ಲಿ ಫೋನ್ ಖರೀದಿಸಬಹುದು. ಗಂಗಾ ನೀಲಿ, ಲೋಟಸ್ ಪರ್ಪಲ್ ಮತ್ತು ಟೈಟಾನಿಯಂ ಗ್ರೇ ಬಣ್ಣದಲ್ಲಿ ಲಭ್ಯವಿದೆ.
Vivo V40 ಬೆಲೆ
8GB + 128GB ಸ್ಟೋರೇಜ್ ಬೆಲೆ = ರೂ. 34,999
8GB + 256GB ಸ್ಟೋರೇಜ್ ಬೆಲೆ = ರೂ. 36,999
12GB+512GB ಸ್ಟೋರೇಜ್ ಬೆಲೆ = ರೂ. 41,999
Vivo V40 Pro ಬೆಲೆ
8GB+256GB ಸ್ಟೋರೇಜ್ ಬೆಲೆ = ರೂ. 49,999
12GB+512GB ಸ್ಟೋರೇಜ್ ಬೆಲೆ = ರೂ. 55,999
Vivo V40 ಫೋನಿನ 8GB+128GB ಸ್ಟೋರೇಜ್ ಬೆಲೆ 34,999 ರೂ. ಇದೆ. 8GB+256GB ಸ್ಟೋರೇಜ್ ಬೆಲೆ 36,999 ರೂ. ಮತ್ತು 12GB+512GB ಸ್ಟೋರೇಜ್ ವೇರಿಯಂಟ್ ಬೆಲೆ 41,999 ರೂ. ಆಗಿದೆ. Vivo V40 Pro ಫೋನಿನ 8GB + 256GB ಸ್ಟೋರೇಜ್ ಬೆಲೆ 49,999 ರೂ. ಮತ್ತು 12GB + 512GB ಸ್ಟೋರೇಜ್ ಬೆಲೆ 55,999 ರೂ. ಆಗಿದೆ. ನೀವು Ganges Blue ಮತ್ತು Titanium Gre ಬಣದಲ್ಲಿ ಖರೀದಿಸಬಹುದು.
ವಿವೋ ಕಂಪನಿಯು ಇಂದು ಮುಂಗಡ ಬುಕ್ಕಿಂಗ್‌ಗೆ ಅವಕಾಶ ಕಲ್ಪಿಸಿದೆ. V40 Pro ಫೋನ್ ಆಗಸ್ಟ್ 13 ರಂದು ಮತ್ತು V40 ಫೋನ್ ಆಗಸ್ಟ್ 19 ರಂದು ಮಾರಾಟವಾಗಲಿದೆ (ಖರೀದಿಗೆ ಲಭ್ಯವಿರುತ್ತದೆ). ನೀವು ಈ ಫೋನ್‌ಗಳನ್ನು ಇ-ಕಾಮರ್ಸ್ ವೆಬ್‌ಸೈಟ್ ಪ್ಲಿಪ್‌ಕಾರ್ಟ್ ಮತ್ತು ವಿವೊ ಅಧಿಕೃತ ವೆಬ್‌ಸೈಟ್‌ನಿಂದ ಖರೀದಿಸಬಹುದು.

Vivo V40 ಮತ್ತು V40 Pro ಫೋನಿನ ಫಿಚರ್ಸ್
Vivo V40 Pro ಫೋನ್ 6.78 ಇಂಚಿನ ಬಾಗಿದ AMOLED ಡಿಸ್ಲ್ಪೇಯನ್ನು ಹೊಂದಿದೆ. 1.5k ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರವನ್ನು ಪಡೆದಿದೆ. ಇದು MediaTek ಡೈಮೆನ್ಸಿಟಿ 9200+ ಚಿಪ್‌ಸೆಟ್ ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಇದು 80W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 55,00mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.
Vivo V40 ಸರಣಿಯ ಪ್ರಮುಖ ಹೈಲೈಟ್ ಕ್ಯಾಮೆರಾ ಸೆಟಪ್. ಇದು Zeiss ಆಪ್ಟಿಕ್ಸ್ ಜೊತೆಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. 50MP ಪ್ರಾಥಮಿಕ ಕ್ಯಾಮೆರಾ, 50MP ಅಲ್ಪಾವೈಡ್ ಮತ್ತು 50MP ಟೆಲಿಫೋಟೋ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 50MP ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಫೋಟೋ ಎಡಿಟಿಂಗ್‌ಗಾಗಿ, ಇದು ಎಐ (Al) ಎರೇಸರ್ ಸಹ ಹೊಂದಿದೆ. ಇದು ಧೂಳು ಮತ್ತು ನೀರಿನ ವಿರುದ್ಧ IP68 ರೇಟಿಂಗ್ ಸಹ ಪಡೆದಿದೆ.
Vivo V40 ಫೋನಿನ ಫೀಚರ್ಸ್
ಇನ್ನೂ Vivo V40 ಫೋನ್ 6.78 ಇಂಚಿನ ಬಾಗಿದ AMOLED ಡಿಸ್ಲ್ಪೇಯನ್ನು ಹೊಂದಿದೆ. Android 14- ಆಧಾರಿತ Funtouchos ಮತ್ತು 50MP ಸೆಲ್ಪಿ ಕ್ಯಾಮೆರಾವನ್ನು ಹೊಂದಿದೆ. Vivo V40 ಸ್ಮಾಪ್‌ಡ್ರಾಗನ್ 7 Gen 3 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಡ್ಯುಯಲ್ ಕ್ಯಾಮೆರಾ ಸೆಟಪ್ ಪಡೆದಿದೆ. 50MP ಪ್ರಾಥಮಿಕ ಮತ್ತು 50MP ಅಲ್ಪಾವೈಡ್ ಲೆನ್ಸ್ ಅನ್ನು ಹೊಂದಿದೆ.


Click it and Unblock the Notifications








