Vivo V40 vs Vivo V40 Pro: ಜನ ಮೆಚ್ಚಿದ ಫೋನ್‌ಗಳು.. ಯಾವುದು ಬೆಸ್ಟ್? ನೀವೆ ನೋಡಿ
Vivo V40 vs Vivo V40 Pro: ವಿವೋ (Vivo) ಕಂಪನಿಯು ತನ್ನ ಎರಡು ಹೊಸ ಫೋನ್‌ಗಳಾದ Vivo V40 ಮತ್ತು Vivo V40 Pro ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಕಂಪನಿಯು ಈ ಎರಡೂ ಫೋನ್‌ಗಳನ್ನು ಉತ್ತಮ ಗುಣಮಟ್ಟದ ಫೀಚರ್ಸ್‌ಗಳೊಂದಿಗೆ ಪರಿಚಯಿಸಿದೆ. ಎರಡೂ ಫೋನ್‌ಗಳು ಸುಧೀರ್ಘ ಬಾಳಿಕೆಯ ಬ್ಯಾಟರಿ ಮತ್ತು ಅತ್ಯುತ್ತಮ ಕ್ಯಾಮೆರಾ ಸೆಟಪ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹಾಗಿದ್ರೆ, ಈ ಎರಡೂ ಫೋನ್‌ಗಳಿಲ್ಲಿ ಯಾವುದು ಬೆಸ್ಟ್? ಇಲ್ಲಿದೆ ಸಂಪೂರ್ಣ ಮಾಹಿತಿ.
ಹೌದು, ಇದೀಗ ಈ ಎರಡು ಫೋನ್‌ಗಳಿಗೆ ಸಂಬಂಧಿಸಿದಂತೆ ನೀವು ಯಾವ ಫೋನ್ ಖರೀದಿಸಬೇಕು? ಯಾವ ಫೋನಿನಲ್ಲಿ ಏನು ವಿಶೇಷತೆಗಳಿವೆ? ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಉದ್ಭವಿಸಬಹುದು. ಈ ಬಗ್ಗೆ ಹೆಚ್ಚು ಗೊಂದಲ ಬೇಡ. ನಾವು, ಈ ಲೇಖನದಲ್ಲಿ ಈ ಎರಡೂ ಫೋನ್‌ಗಳ ನಡುವಿನ ವ್ಯತ್ಯಾಸಗಳ ಬಗ್ಗೆ ನಿಮಗೆ ತಿಳಿಸಿಕೊಡುವ ಕೆಲಸ ಮಾಡುತ್ತೇವೆ. ಈ ಮೂಲಕ ನೀವು, ನಿಮಗೆ ಯಾವುದು ಉತ್ತಮ ಫೋನ್ ಎನಿಸುತ್ತದೆಯೋ ಆ ಫೋನನ್ನು ಆಯ್ಕೆ ಮಾಡಬಹುದು.

Vivo V40 ಮತ್ತು Vivo V40 Pro ನಡುವಿನ ವ್ಯತ್ಯಾಸ
ಬೆಲೆ ಎಷ್ಟು?: ಕಂಪನಿಯು Vivo V40 ಫೋನನ್ನು 8GB + 128GB, 8GB + 256GB ಮತ್ತು 12GB + 512GB ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆ ಮಾಡಿದೆ. ಆದರೆ, Vivo V40 Pro ಫೋನನ್ನು 8GB + 256GB ಮತ್ತು 12GB + 512GB ಸ್ಟೋರೇಜ್‌ನಲ್ಲಿ ಪರಿಚಯಿಸಿದೆ.
ಈ ಫೋನ್‌ಗಳ ಬೆಲೆ ಬಗ್ಗೆ ಹೇಳುವುದಾದರೆ, Vivo V40 ಫೋನಿನ 8GB + 128GB ಸ್ಟೋರೇಜ್ ಬೆಲೆ 34,999 ರೂ., 8GB + 256GB ಸ್ಟೋರೇಜ್ ಬೆಲೆ 36,999 ರೂ. ಮತ್ತು 12GB + 512GB ಸ್ಟೋರೇಜ್ ಬೆಲೆ 41,999 ರೂ. ಇದೆ. Vivo V40 Pro ಫೋನಿನ 8GB + 256GB ಸ್ಟೋರೇಜ್ ಬೆಲೆ 49,999 ರೂ. ಮತ್ತು 12GB + 512GB ಸ್ಟೋರೇಜ್ ಬೆಲೆ 55,999 ರೂ. ಇದೆ.
ಬಣ್ಣದ ಆಯ್ಕೆ: ನೀವು Vivo V40 ಫೋನನ್ನು ನೀಲಿ, ಲೋಟಸ್ ಪರ್ಪಲ್ ಮತ್ತು ಟೈಟಾನಿಯಂ ಗ್ರೇ ಬಣ್ಣದಲ್ಲಿ ಖರೀದಿಸಬಹುದು. Vivo V40 Pro ಫೋನನ್ನು Ganges Blue ಮತ್ತು Titanium Gre ಬಣ್ಣದಲ್ಲಿ ಖರೀದಿಸಬಹುದು.
ಡಿಸ್ಲ್ಪೇ: Vivo V40 ಫೋನ್ 1260x2800 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.78 ಇಂಚಿನ AMOLED ಡಿಸ್ಲ್ಪೇಯನ್ನು ಹೊಂದಿದೆ. 453ppi ಪಿಕ್ಸೆಲ್ ಸಾಂದ್ರತೆ ಮತ್ತು HDR10+ ಗೆ ಸಪೋರ್ಟ್ ಪಡೆದಿದೆ. ಇದು 4500 ನಿಟ್‌ಗಳ ಬ್ರೈಟ್‌ನೆಸ್ ಹೊಂದಿದೆ. ಇದಲ್ಲದೆ, ಈ ಫೋನಿನ ಡಿಸ್ಲ್ಪೇ 120Hz ರಿಫ್ರೆಶ್ ದರ ಮತ್ತು 480Hz ಟಚ್ ಸ್ಯಾಂಪ್ಲಿಂಗ್ ದರವನ್ನು ಬೆಂಬಲಿಸುತ್ತದೆ. ಇದು ಮೃದುವಾದ ಅನುಭವವನ್ನು ನೀಡುತ್ತದೆ.
Vivo V40 Pro ಫೋನ್ 6.78 ಇಂಚಿನ AMOLED ಡಿಸ್ಲ್ಪೇಯನ್ನು ಹೊಂದಿದೆ. ಇದು HDR10+ ಅನ್ನು ಬೆಂಬಲಿಸುತ್ತದೆ ಮತ್ತು 120Hz ರಿಫ್ರೆಶ್ ದರವನ್ನು ಹೊಂದಿದೆ. ಇದು 4500 ನಿಟ್‌ಗಳ ಬ್ರೈಟ್‌ನೆಸ್, 1260x2800 ಪಿಕ್ಸೆಲ್ ರೆಸಲ್ಯೂಶನ್ ಮತ್ತು 20:9 ಆಕಾರ ಅನುಪಾತ ಹೊಂದಿದೆ. ತೀಕ್ಷ್ಣವಾದ ಮತ್ತು ರೋಮಾಂಚಕ ಚಿತ್ರಗಳನ್ನು ನೀಡುತ್ತದೆ.
ಪ್ರೊಸೆಸರ್: Vivo V40 ಫೋನ್ Android 14 ನಲ್ಲಿ ಕಾರ್ಯನಿರ್ವಹಿಸುತ್ತದೆ. 7.6 mm ದಪ್ಪ ಮತ್ತು 190 ಗ್ರಾಂ ತೂಕವಿದೆ. ಅಲ್ಲದೆ, ಇದು Qualcomm Snapdragon 7 Gen 3 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದು 2.63 GHz ವೇಗದ ಆಕ್ಟಾ-ಕೋರ್ ಪ್ರೊಸೆಸರ್ ಒಳಗೊಂಡಿದೆ. ಬಹುಕಾರ್ಯಕಕ್ಕೆ ಈ ಫೋನ್ ಉತ್ತಮ ಆಯ್ಕೆಯಾಗಿದೆ.
Vivo V40 Pro ಫೋನ್ 164.2x74.9x7.6mm ಅಳತೆ ಮತ್ತು 192 ಗ್ರಾಂ ತೂಕ ಹೊಂದಿದೆ. ಇದು ಡ್ಯುಯಲ್ ಸಿಮ್ ಬೆಂಬಲ (ನ್ಯಾನೋ-ಸಿಮ್, ಡ್ಯುಯಲ್ ಸ್ಟ್ಯಾಂಡ್‌ಬೈ) ಮತ್ತು eSIM ಅನ್ನು ಹೊಂದಿದೆ. Vivo V40 Pro ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಹೊಂದಿದೆ. ಇದನ್ನು 30 ನಿಮಿಷ ಮತ್ತು 1.5 ಮೀಟರ್ ವರೆಗೆ ನೀರಿನಲ್ಲಿ ಮುಳುಗಿಸಬಹುದು.
ಈ ಫೋನ್ Funtouch ಜೊತೆಗೆ Android 14 ನಲ್ಲಿ ರನ್ ಆಗುತ್ತದೆ. MediaTek Dimensity 9200+ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದು ಆಕ್ಟಾ-ಕೋರ್ CPU ಮತ್ತು Immortilus-G715 MC11 GPU ಒಳಗೊಂಡಿದೆ. ಇದು ಎಲ್ಲಾ ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳಿಗೆ ಸುಗಮ ಕಾರ್ಯಕ್ಷಮತೆಯನ್ನು ನೀಡುತ್ತದೆ.
ಕ್ಯಾಮೆರಾ ಸೆಟಪ್: Vivo V40 ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು OIS ನೊಂದಿಗೆ ಎರಡು ಕ್ಯಾಮೆರಾಗಳನ್ನು ಹೊಂದಿದೆ. ಹಿಂಬದಿಯ ಕ್ಯಾಮೆರಾಗಳು 30 fps ನಲ್ಲಿ 4K ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದು. ಮುಂಭಾಗದಲ್ಲಿ 50MP ಸೆಲ್ಫಿ ಕ್ಯಾಮೆರಾ ಇದೆ.
Vivo V40 Pro ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50MP ವೈಡ್ ಲೆನ್ಸ್, 2x OIS ಜೊತೆಗೆ 50MP ಟೆಲಿಫೋಟೋ ಲೆನ್ಸ್ ಮತ್ತು 50MP ಅಲ್ಟ್ರಾವೈಡ್ ಲೆನ್ಸ್ ಒಳಗೊಂಡಿದೆ. ಕ್ಯಾಮೆರಾವು ಝೈಸ್ ಆಪ್ಟಿಕ್ಸ್, ಝೈಸ್ ಟಿ* ಲೆನ್ಸ್ ಲೇಪನ ಮತ್ತು ರಿಂಗ್-ಎಲ್ಇಡಿ ಫ್ಲ್ಯಾಷ್ ಹೊಂದಿದೆ. ಈ ಫೋನ್ 30fps ನಲ್ಲಿ 4K ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ. 50MP ಫ್ರಂಟ್ ಕ್ಯಾಮೆರಾ ಹೊಂದಿದ್ದು, ಡ್ಯುಯಲ್ LED ಫ್ಲ್ಯಾಶ್ ಮತ್ತು 30fps ನಲ್ಲಿ 4K ರೆಕಾರ್ಡ್ ಮಾಡಬಹುದು.
ಬ್ಯಾಟರಿ ಬ್ಯಾಕಪ್: Vivo V40 ಫೋನ್ 5500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 80W ಫ್ಲ್ಯಾಷ್ ಚಾರ್ಜ್ ಬೆಂಬಲಿಸುತ್ತದೆ. ಆದರೆ, Vivo V40 Pro ಫೋನ್ ಅಂಡರ್-ಡಿಸ್ಪ್ಲೇ ಸಂವೇದಕ, ಅಕ್ಸೆಲೆರೊಮೀಟರ್, ಗೈರೊ, ಸಾಮೀಪ್ಯ ಸಂವೇದಕ ಮತ್ತು ದಿಕ್ಸೂಚಿಗಳನ್ನು ಒಳಗೊಂಡಿದೆ. ಇದು 5500mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 80W ವೈರ್ಡ್ ಚಾರ್ಜಿಂಗ್ ಮತ್ತು ರಿವರ್ಸ್ ವೈರ್ಡ್ ಚಾರ್ಜಿಂಗ್ ಬೆಂಬಲಿಸುತ್ತದೆ.
ಕನೆಕ್ಟಿವಿಟಿ ಆಯ್ಕೆಗಳು: Vivo V40 4G ಫೋನ್, 5G ಮತ್ತು VoLTE ಅನ್ನು ಬೆಂಬಲಿಸುತ್ತದೆ. ಇದು Bluetooth v5.4, Wi-Fi, NFC, USB Type-c v 2.0 ಮತ್ತು ಹೆಚ್ಚುವರಿ ಕಾರ್ಯನಿರ್ವಹಣೆಗಾಗಿ IR ಬ್ಲಾಸ್ಟರ್ ಅನ್ನು ಒಳಗೊಂಡಿದೆ. ಆದರೆ, Vivo V40 Pro ಫೋನ್ Wi-Fi 6, Bluetooth 5.3, NFC ಮತ್ತು OTG ಜೊತೆಗೆ USB ಟೈಪ್-C ಅನ್ನು ಹೊಂದಿದೆ.


Click it and Unblock the Notifications








