Vivo V40e 5G ಮೊದಲ ಮಾರಾಟಕ್ಕೆ ಸಿದ್ಧ: ಬಂಪರ್ ಆಫರ್.. ಬೆಲೆಯೂ ಕಡಿಮೆ!
ವಿವೋ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿ ಇದೆ. ವಿವೋ ಕಂಪನಿಯು ಇತ್ತೀಚೆಗೆ V40 ಸರಣಿಯ ಅಡಿಯಲ್ಲಿ ಹೊಸ 5G ಫೋನನ್ನು ಬಿಡುಗಡೆ ಮಾಡಿದೆ. ಇದು ವಿವೋ V40e 5G (Vivo V40e 5G) ಹೆಸರಿನೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಅಂದಹಾಗೆ, ಈ ಮೊಬೈಲ್ ಇಂದಿನಿಂದ (ಅಕ್ಟೋಬರ್ 2) ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್ ಮೂಲಕ ಮಾರಾಟ ಪ್ರಾರಂಭಿಸಲಿದೆ. ಈ ಫೋನಿನ ಬೆಲೆ, ಆಫರ್‌ಗಳು ಮತ್ತು ವೈಶಿಷ್ಟ್ಯಗಳನ್ನು ತಿಳಿಯಲು ಮುಂದೆ ಓದಿ.
ವಿವೋ V40e 5G ಮೊಬೈಲ್ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಮಾರಾಟವಾಗಲಿದೆ. ಕಂಪನಿಯು ಇದನ್ನು ಬಜೆಟ್ ಬೆಲೆಗೆ ಪರಿಚಯಿಸಿದೆ. ನೀವು, ರಾಯಲ್ ಬ್ರೋಂಜ್ ಮತ್ತು ಮಿಂಟ್ ಗ್ರೀನ್ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಸಬಹುದು. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಶನ್ 7300 ಚಿಪ್‌ಸೆಟ್ ಹೊಂದಿದೆ. 16GB ಯ RAM, ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು 50 ಮೆಗಾಪಿಕ್ಸೆಲ್ ಕ್ಯಾಮೆರಾ, 5500mAh ದೊಡ್ಡ ಬ್ಯಾಟರಿ ಸೇರಿದಂತೆ ಹಲವು ಉತ್ತಮ ಗುಣಮಟ್ಟದ ಫೀಚರ್ಸ್‌ಗಳನ್ನು ಒಳಗೊಂಡಿದೆ.

ವಿವೋ V40e 5G ಫೋನಿನ ಬೆಲೆ
ವಿವೋ V40e 5G ಫೋನಿನ 8GB RAM + 128GB ಸ್ಟೋರೇಜ್ ಬೆಲೆ 28,999 ರೂ. ಆಗಿದೆ. 8GB RAM + 256GB ಸ್ಟೋರೇಜ್ ಬೆಲೆ 30,999 ರೂ. ಇದೆ. ನೀವು, ಹೆಚ್‌ಡಿಎಫ್‌ಸಿ ಮತ್ತು ಎಸ್‌ಬಿಐ ಕಾರ್ಡ್‌ಗಳಲ್ಲಿ ಶೇ.10 ರಷ್ಟು ರಿಯಾಯಿತಿ ಅಥವಾ ಶೇ.10 ರಷ್ಟು ಎಕ್ಸ್‌ಚೇಂಜ್ ಆಫರ್ ಪಡೆಯಬಹುದು. 6 ತಿಂಗಳವರೆಗೆ ನೋ ಕಾಸ್ಟ್ ಇಎಂಐ ಆಯ್ಕೆಯು ಲಭ್ಯವಿದೆ. ನೀವು, ಫ್ಲಿಪ್‌ಕಾರ್ಟ್, ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಚಿಲ್ಲರೆ ಅಂಗಡಿಗಳ ಮೂಲಕ ಮಾರಾಟವಾಗಲಿದೆ.
ಈ ಸುದ್ದಿ ಓದಿದ್ದೀರಾ?: Vivo T3 Ultra: ಬಂತು ಗಟ್ಟಿಮುಟ್ಟಾದ 5G ಫೋನ್.. ಸಖತ್ ಫೀಚರ್ಸ್, ಬೆಲೆ ಇಷ್ಟೇನಾ?
ವಿವೋ V40e 5G ಫೋನಿನ ಫೀಚರ್ಸ್
ಡಿಸ್ಪ್ಲೇ: ವಿವೋ V40e 5G ಫೋನ್ 6.77 ಇಂಚಿನ 3D ಕರ್ವ್ಡ್ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರ, 2392 x 1080 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲವನ್ನು ಹೊಂದಿದೆ.
ಪ್ರೊಸೆಸರ್: ವಿವೋ V40e 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಶನ್ 7300 ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಿದೆ. ಇದು ನಾಲ್ಕು ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ನಲ್ಲಿ ಮಾಡಿದ ಪ್ರೊಸೆಸರ್ ಆಗಿದೆ. ಈ ಫೋನ್ ಆಂಡ್ರಾಯ್ಡ್ 14 ಆಧಾರಿತ ಫನ್ ಟಚ್ ಓಎಸ್ 14 ನೊಂದಿಗೆ ಕಾರ್ಯನಿರ್ವಹಿಸುತ್ತದೆ.
ಸ್ಟೋರೇಜ್: ಕಂಪನಿಯು ವಿವೋ V40e 5G ಮೊಬೈಲ್ ಅನ್ನು 8GB RAM + 128GB ಮತ್ತು 8GB RAM + 256GB ಸ್ಟೋರೇಜ್ ಆಯ್ಕೆಯೊಂದಿಗೆ ಪರಿಚಯಿಸಿದೆ. ಇದು 8GB ವಿಸ್ತೃತ RAMಗೆ ಸಹ ಬೆಂಬಲವಿದೆ. ಇದರ ಸಹಾಯದಿಂದ 16GB ವರೆಗೆ ಬಳಸಬಹುದು.
ಕ್ಯಾಮೆರಾ: ವಿವೋ V40e 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು ಎಲ್‌ಇಡಿ ಮತ್ತು ಔರಾ ಲೈಟ್ ಜೊತೆಗೆ ಬರುತ್ತದೆ. ಇದರಲ್ಲಿ, 50 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಇದೆ. ಸೆಲ್ಫಿ ಪ್ರಿಯರಿಗಾಗಿ, ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ. 4K ವಿಡಿಯೋ ಸೆರೆಹಿಡಿಯಲು ಎಐ ಪೋರ್ಟ್ರೇಟ್ ಸೂಟ್, ಎಐ ಎರೇಸರ್ ಮತ್ತು ಎಐ ಫೋಟೋ ವರ್ಧಕ ಲಭ್ಯವಿದೆ.
ಬ್ಯಾಟರಿ: ಕಂಪನಿಯು ವಿವೋ V40e 5G ಮೊಬೈಲ್ ಅನ್ನು 5500mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಇದು 80W ವೇಗದ ಚಾರ್ಜಿಂಗ್ ಸಪೋರ್ಟ್‌ನೊಂದಿಗೆ ಬರುತ್ತದೆ.
ಇತರೆ ವೈಶಿಷ್ಟ್ಯಗಳು: ನೀರು ಮತ್ತು ಧೂಳಿನ ರಕ್ಷಣೆಗಾಗಿ ಈ 5G ಮೊಬೈಲ್ IP64 ರೇಟಿಂಗ್ ಪಡೆದಿದೆ. ಜೊತೆಗೆ, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, ಡ್ಯುಯಲ್ ಸಿಮ್, 5G, 4G, ವೈ-ಫೈ, ಬ್ಲೂಟೂತ್ 5.4 ಸೇರಿದಂತೆ ಅನೇಕ ಫೀಚರ್ಸ್‌ಗಳನ್ನು ಹೊಂದಿದೆ.


Click it and Unblock the Notifications








