Home
ಮೊಬೈಲ್

ಇಂದು Vivo V40e 5G ಲಾಂಚ್: ಸೋನಿ ಕ್ಯಾಮೆರಾ, 80W ಚಾರ್ಜಿಂಗ್ ಖಚಿತ!

ವಿವೋ ತನ್ನ ಭಾರತೀಯ ಗ್ರಾಹಕರಿಗೆ ಸಂತಸದ ಸುದ್ದಿ ನೀಡಿದೆ. ಹೊಸ ವಿವೋ ಫೋನ್‌ ಅನ್ನು ಬಜೆಟ್‌ ಬೆಲೆಯಲ್ಲಿ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಹೌದು, ಚೀನಾದ ಪ್ರಮುಖ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ವಿವೋ (Vivo) ಇಂದು (ಸೆಪ್ಟೆಂಬರ್ 25) ನೂತನ ವಿವೋ V40e 5G (Vivo V40e 5G) ಮೊಬೈಲ್‌ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಈ ಮೂಲಕ ತನ್ನ 'V' ಸರಣಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ವಿಸ್ತರಿಸಲಿದೆ. ನೂತನ ಫೋನಿನ ಬೆಲೆ, ಲಭ್ಯತೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ ಬನ್ನಿ.

ಕಂಪನಿಯು ಇಂದು (ಸೆಪ್ಟೆಂಬರ್ 25) ಮಧ್ಯಾಹ್ನ 12 ಗಂಟೆಗೆ ವಿವೋ V40e 5G ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಅನಾವರಣಗೊಳಿಸಲಿದೆ. ವಿವೋ ಪ್ರೇಮಿಗಳ ಚಿತ್ತ ಈ ಫೋನಿನ ಮೇಲಿದೆ. ವಿವೋ ಈಗಾಗಲೇ, ತನ್ನ 'V' ಸರಣಿಯಲ್ಲಿ ವಿವೋ V40 ಮತ್ತು ವಿವೋ V40 ಪ್ರೊ ಮೊಬೈಲ್‌ ಅನ್ನು ಪರಿಚಯಿಸಿದೆ. ಇದೀಗ, ವಿವೋ V40e 5G ಅನ್ನು ಬಿಡುಗಡೆ ಮಾಡುತ್ತಿದೆ. ಈಗಾಗಲೇ, ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮೈಕ್ರೋಸೈಟ್ ಲೈವ್ ಆಗಿದೆ.

ಇಂದು Vivo V40e 5G ಲಾಂಚ್: ಸೋನಿ ಕ್ಯಾಮೆರಾ, 80W ಚಾರ್ಜಿಂಗ್ ಖಚಿತ!

ವಿವೋ V40e 5G ಫೋನಿನ ಬಣ್ಣ, ಲಭ್ಯತೆ

ಮೈಕ್ರೋಸೈಟ್ ಮೂಲಕ ವಿವೋ V40e 5G ಫೋನಿನ ಬಣ್ಣಗಳ ಆಯ್ಕೆಯನ್ನು ತಿಳಿಯಬಹುದು. ಈ ಫೋನ್ ರಾಯಲ್ ಬ್ರೋಂಜ್ ಮತ್ತು ಮಿಂಟ್ ಗ್ರೀನ್ ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆ ಬಳಿಕ ವಿವೋ V40e 5G ಮೊಬೈಲ್ ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್ ಮೂಲಕ ಖರೀದಿಗೆ ಲಭ್ಯವಿರಲಿದೆ. ಈ ಹಿಂದೆ, ವಿವೋ V30E ಅನ್ನು ಸಹ ಫ್ಲಿಪ್‌ಕಾರ್ಟ್ ಮೂಲಕ ಮಾರಾಟ ಮಾಡಲಾಗಿತ್ತು.

ವಿವೋ V40e 5G ಫೋನಿನ ವಿನ್ಯಾಸ ಹೇಗಿರಲಿದೆ?

ನೂತನ ವಿವೋ V40e 5G ಫೋನಿನ ಹಿಂಭಾಗದ ಫಲಕದಲ್ಲಿ ಓವಲ್ ಆಕಾರದ ಕ್ಯಾಮೆರಾ ಮಾಡ್ಯೂಲ್ ಇದೆ. ಎಲ್ಇಡಿ ಫ್ಲ್ಯಾಷ್ ಕಾಣಬಹುದು. ಇದರ ಜೊತೆಗೆ ಆರಾ ಲೈಟ್ ಎಲ್ಇ‌ಡಿ ಇದೆ. ಮುಂಭಾಗದ ಫಲಕದಲ್ಲಿ 3D ಬಾಗಿದ ವಿನ್ಯಾಸವನ್ನು ಹೊಂದಿದೆ. ಈ ಫೋನ್ 0.749 ಸೆಂ.ಮೀ ದಪ್ಪ ಮತ್ತು 183 ಗ್ರಾಂ ತೂಕವಿರಲಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಫೋನಿಗೆ ಹೋಲಿಸಿದರೆ, ವಿವೋ V40e 5G ಸ್ಮಾರ್ಟ್‌ಫೋನ್ ವಿಭಿನ್ನ ವಿನ್ಯಾಸವನ್ನು ಹೊಂದಿದೆ.

ವಿವೋ V40e 5G: ಪ್ರಮುಖ ವೈಶಿಷ್ಟ್ಯಗಳು (ನಿರೀಕ್ಷಿತ)

ನೂತನ ವಿವೋ V40e 5G ಮೊಬೈಲ್ 6.77 ಇಂಚಿನ 3D ಕರ್ವ್ಡ್ AMOLED ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 120 Hz ರಿಫ್ರೆಶ್ ದರ, 2392 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ. ವಿವೋ V40e 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಚಿಪ್‌ಸೆಟ್ ಅನ್ನು ಹೊಂದಿರಲಿದೆ. ಇದು Android 14 OS, FuntouchOS 14 ಕಸ್ಟಮ್ ಸ್ಕಿನ್‌ ಮತ್ತು 8GB RAM, 256GB ಸ್ಟೋರೇಜ್ ಆಯ್ಕೆನೊಂದಿಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.

ವಿವೋ V40e 5G ಫೋನ್ 50 ಮೆಗಾಪಿಕ್ಸೆಲ್ ಸೋನಿ OIS ರಕ್ಷಿತ ಮುಖ್ಯ ಕ್ಯಾಮೆರಾವನ್ನು ಹೊಂದಿದೆ. 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್‌ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಎಫ್‌ (AF) ಗುಂಪಿನ ಸೆಲ್ಫಿ ಕ್ಯಾಮೆರಾ ಇದೆ. ಹಿಂಭಾಗದ ಫಲಕದಲ್ಲಿ ಔರಾ ಲೈಟ್ ಕೂಡ ಇದೆ. ಕಂಪನಿಯು ವಿವೋ V40e 5G ಮೊಬೈಲ್ ಅನ್ನು 5,500mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪರಿಚಯಿಸಲಿದೆ. ಇದನ್ನು ವೇಗವಾಗಿ ಚಾರ್ಜ್ ಮಾಡಲು 80 ವ್ಯಾಟ್ ವೇಗದ ಚಾರ್ಜಿಂಗ್ ಸೌಲಭ್ಯ ಇರಲಿದೆ.

ವಿವೋ V40e 5G ಫೋನಿನ ಬೆಲೆ ಎಷ್ಟಿರಲಿದೆ?

ನೂತನ ವಿವೋ V40e 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಮೊಬೈಲ್‌ನ ಮೂಲ ಮಾದರಿ 8GB RAM ಮತ್ತು 128GB ಸ್ಟೋರೇಜ್ ಬೆಲೆ 20,000 ರೂ.ಗೆ ಬಿಡುಗಡೆಯಾಗಬಹುದು. 8GB RAM ಮತ್ತು 256GB ಸ್ಟೋರೇಜ್ ರೂಪಾಂತರದ ಬೆಲೆಯನ್ನು 30,000 ರೂ.ಗಳಿಗೆ ನಿಗದಿಪಡಿಸುವ ಸಾಧ್ಯತೆಯಿದೆ.

Best Mobiles in India

English summary
Vivo V40e 5G Launching in India Today at 12PM: Expected Price, Specs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+