Home
ಮೊಬೈಲ್

Vivo V50 ಪ್ರೀ-ಬುಕಿಂಗ್ ಶುರು! ಬೊಂಬಾಟ್ ಆಫರ್‌ ಘೋಷಣೆ.. ಬೆಲೆ, ವಿಶೇಷತೆಗಳೇನು?

ಬಹುನಿರೀಕ್ಷಿತ ವಿವೋ V50 5G (Vivo V50 5G) ಸ್ಮಾರ್ಟ್‌ಫೋನ್‌ ಭಾರತದಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಕಂಪನಿಯು ಇದೇ ಫೆಬ್ರವರಿ 17 ರಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಲೋಕಾರ್ಪಣೆ ಮಾಡಲಿದೆ. ಬಿಡುಗಡೆಯಾದ ನಂತರ, ಈ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಖರೀದಿಗೆ ಲಭ್ಯವಿರುತ್ತದೆ. ಅಧಿಕೃತ ಬಿಡುಗಡೆಗೂ ಮುನ್ನ, ಕಂಪನಿಯು ಭಾರತದಲ್ಲಿ ಪ್ರಿ-ಬುಕಿಂಗ್ ಆಫರ್‌ ಸಹ ಘೋಷಿಸಿದೆ. ಬನ್ನಿ, ವಿವೋ V50 5G ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಕಂಪನಿಯ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ವಿವೋ V50 5G ಫೋನಿನ ಮೈಕ್ರೋ ಸೈಟ್ ಲೈವ್ ಆಗಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜೆನ್ 3 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇರುತ್ತದೆ. ಜೊತೆಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಮತ್ತು 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಈ ಮೊಬೈಲ್ 6.78 ಇಂಚಿನ ಡಿಸ್ಪ್ಲೇ ಹೊಂದಿದೆ. ಹಾಗೆಯೇ 6000mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೆ ಸಜ್ಜಾಗಿದೆ.

Vivo V50 ಪ್ರೀ-ಬುಕಿಂಗ್ ಶುರು! ಬೊಂಬಾಟ್ ಆಫರ್‌ ಘೋಷಣೆ.. ಬೆಲೆ, ವಿಶೇಷತೆಗಳೇನು?

ವಿವೋ V50 5G ಪ್ರಿ-ಬುಕಿಂಗ್ ಆಫರ್‌ಗಳು

ವಿವೋ V50 5G ಪ್ರಿ-ಬುಕಿಂಗ್ ಆಫರ್‌ ಫೆಬ್ರವರಿ 16 ರವರೆಗೆ ಮಾತ್ರ ಲಭ್ಯವಿರುತ್ತದೆ. ಮುಂಬರುವ ವಿವೋ V50 5G ಅನ್ನು ಮುಂಗಡ ಬುಕಿಂಗ್ ಮಾಡುವ ಗ್ರಾಹಕರಿಗೆ ಕೇವಲ 999 ರೂ.ಗಳಿಗೆ 1 ವರ್ಷದ ವ್ಯಾರಂಟಿ ಮತ್ತು 1 ವರ್ಷದ ಸ್ಕ್ರೀನ್ ಡ್ಯಾಮೇಜ್ ಪ್ರೊಟೆಕ್ಷನ್ ಪ್ಲಾನ್ (V-ಶೀಲ್ಡ್) ಸೇರಿದಂತೆ ಕಾಂಬೊ ಆಫರ್‌ ಲಭ್ಯವಿದೆ. ಪ್ರಿ-ಬುಕಿಂಗ್‌ ಆಫರ್‌ನೊಂದಿಗೆ ನೀವು 30,000 ರೂ.ನಿಂದ 40,000 ರೂ. ವರೆಗಿನ ಫೋನ್‌ಗಳಿಗೆ ಶೇ.80 ರಷ್ಟು ಡಿಸ್ಕೌಂಟ್ ಪಡೆಯಬಹುದು. ಮತ್ತು 40,000 ರೂ.ನಿಂದ 50,000 ರೂ. ವರೆಗಿನ ಫೋನ್‌ಗಳಿಗೆ ಶೇ.82 ರಷ್ಟು ಡಿಸ್ಕೌಂಟ್ ಸಿಗುತ್ತದೆ. ಇದರೊಂದಿಗೆ ಫೋನಿನ ಬೆಲೆ 999 ರೂ.ಗೆ ಇಳಿಕೆಯಾಗುತ್ತದೆ.

ವಿವೋ V50 5G ಬೆಲೆ (ನಿರೀಕ್ಷಿತ)

ವಿವೋ V50 5G ಮೊಬೈಲ್ ಫೆಬ್ರವರಿ 17 ರಂದು ಮಧ್ಯಾಹ್ನ 12 ಗಂಟೆಗೆ ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಫೋನಿನ ಬೆಲೆ ಬಗ್ಗೆ ಕಂಪನಿ ಮಾಹಿತಿ ನೀಡಿಲ್ಲ. ಆದರೆ, ವಿವೋ V40 5G ಮೊಬೈಲ್ ಭಾರತದಲ್ಲಿ 34,999 ರೂ.ಗೆ ಬಿಡುಗಡೆಯಾಗಿದೆ. ವಿವೋ V50 5G ಫೋನಿನ ಬೆಲೆಯು ಇದೇ ರೀತಿ ಇರಬಹುದು. ಅಂದರೆ ಭಾರತದಲ್ಲಿ ವಿವೋ V50 5G ಫೋನನ್ನು 37,999 ರೂ.ಗೆ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಈ ಫೋನ್ ರೋಸ್ ರೆಡ್, ಟೈಟಾನಿಯಂ ಗ್ರೇ ಮತ್ತು ಸ್ಟಾರಿ ಬ್ಲೂ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ.

ವಿವೋ V50 5G ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ವಿವೋ V50 5G ಸ್ಮಾರ್ಟ್‌ಫೋನ್ 6.78 ಇಂಚಿನ ಡಿಸ್ಪ್ಲೇ ಹೊಂದಿರಲಿದೆ. ಇದು ಮೈಕ್ರೋ ಕ್ವಾಡ್ ಕರ್ವ್ಡ್ ಓಎಲ್‌ಇಡಿ ಡಿಸ್ಪ್ಲೇ ಆಗಿದೆ. ಇದು 2800 × 1260 ಪಿಕ್ಸೆಲ್ ರೆಸಲ್ಯೂಶನ್‌ ಮತ್ತು 120Hz ರಿಫ್ರೆಶ್ ದರದ ಬೆಂಬಲ ಪಡೆದಿರಲಿದೆ. ಈ ಫೋನಿನ ಡಿಸ್ಪ್ಲೇಯು Vivo X200 Pro ರೀತಿಯೇ ಇದೆ. ವಿವೋ X200 ಪ್ರೊ ಫೋನ್ 120Hz ರಿಫ್ರೆಶ್ ದರದೊಂದಿಗೆ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 4500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ.

ಪ್ರೊಸೆಸರ್ ಸಾಮರ್ಥ್ಯ

ವಿವೋ V50 5G ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7 ಜೆನ್ 3 ಆಕ್ಟಾಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಇದನ್ನು 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ನಿರ್ಮಿಸಲಾಗಿದೆ. ಈ ಮೊಬೈಲ್‌ ಆಂಡ್ರಾಯ್ಡ್ 15 ಆಧಾರಿತ ಫಂಟೌಚ್ ಓಎಸ್ 15 ಜೊತೆಗೆ ಕೆಲಸ ಮಾಡುತ್ತದೆ. ಈ ಸ್ಮಾರ್ಟ್‌ಫೋನ್‌ 12GB RAM ಮತ್ತು 512GB ಸ್ಟೊರೇಜ್‌ ಆಯ್ಕೆ ಒಳಗೊಂಡಿದೆ.

Vivo V50 ಪ್ರೀ-ಬುಕಿಂಗ್ ಶುರು! ಬೊಂಬಾಟ್ ಆಫರ್‌ ಘೋಷಣೆ.. ಬೆಲೆ, ವಿಶೇಷತೆಗಳೇನು?

ಕ್ಯಾಮೆರಾ ಸೆಟಪ್

ವಿವೋ V50 5G ಮೊಬೈಲ್‌ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿರಲಿದೆ. ಈ ಫೋನಿನಲ್ಲಿ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 50 ಮೆಗಾಪಿಕ್ಸೆಲ್ ದ್ವಿತೀಯ (ಅಲ್ಟ್ರಾ ವೈಡ್ ಲೆನ್ಸ್) ಕ್ಯಾಮೆರಾ ಹೊಂದಿದೆ. ಇದು ಔರಾ ಲೈಟ್ ಎಲ್‌ಇಡಿ ಫ್ಲ್ಯಾಷ್‌ನ ಬೆಂಬಲದೊಂದಿಗೆ ಬರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಈ ಫೋನ್, ಆಟೋಫೋಕಸ್ ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ವಿವೋ V50 5G ಫೋನ್‌ 6,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ ಎಂದು ಕಂಪನಿ ಖಚಿತಪಡಿಸಿದೆ. ದೊಡ್ಡ ಬ್ಯಾಟರಿಯನ್ನು ಹೊಂದಿರುವ ವಿಭಾಗದಲ್ಲಿ ಇದು ಅತ್ಯಂತ ತೆಳ್ಳಗಿನ ಮೊಬೈಲ್ ಆಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 90W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ. ಇನ್ನೂ Vivo V40 5G ಸ್ಮಾರ್ಟ್‌ಫೋನ್ 5500mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಸೌಲಭ್ಯ ಹೊಂದಿದೆ.

ಇತರೆ ವೈಶಿಷ್ಟ್ಯಗಳು

ವಿವೋ V50 5G ಮೊಬೈಲ್ ಎಐ (AI) ಚಾಲಿತ ಇಮೇಜ್ ಎಡಿಟಿಂಗ್, ಆಡಿಯೊ ಟ್ರಾನ್ಸ್‌ಕ್ರಿಪ್ಷನ್‌ ಮತ್ತು ರಿಯಲ್ ಟೈಮ್ ಕರೆ ಅನುವಾದ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ಡ್ಯುಯಲ್ 4G VoLTE, 5G, ವೈ-ಫೈ, ಜಿಪಿಎಸ್‌, ಬ್ಲೂಟೂತ್, ಯುಎಸ್‌ಬಿ ಟೈಪ್ ಸಿ ಪೋರ್ಟ್‌ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒಳಗೊಂಡಿರುತ್ತದೆ.

Best Mobiles in India

English summary
Vivo V50 5G Pre-Booking Starts Ahead of India Launch on February 17: Check Benefits, Price and Specifications
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+