Vivo V50 ಫೋನ್ ಬೆಲೆ ಇಳಿಕೆ!..ಖರೀದಿಸಲು ಈಗ ಸರಿಯಾದ ಸಮಯ!
ನೀವು ಮಧ್ಯಮ ಪ್ರಿಮಿಯಂ ಉತ್ತಮ ಸ್ಮಾರ್ಟ್‌ಫೋನ್ ಒಂದನ್ನು ಹುಡುಕುತ್ತಿದ್ದೀರಾ?..ಹಾಗಾದರೆ, ನಿಮ್ಮ ಆಯ್ಕೆ ಇದೀಗ Vivo V50 ಆಗಬಹುದು. ಇ-ಕಾಮರ್ಸ್ ದೈತ್ಯ ಅಮೆಜಾನ್ ಭಾರತದಲ್ಲಿ Vivo V50 ಸ್ಮಾರ್ಟ್‌ಫೋನ್ ಮೇಲೆ ಗಮನಾರ್ಹ ರಿಯಾಯಿತಿಯನ್ನು ಘೋಷಿಸಿದೆ. ಬಿಡುಗಡೆ ಸಮಯದಲ್ಲಿ ಮೂಲ ₹34,999 ಬೆಲೆಯಿದ್ದ ಈ ಫೋನ್ ಬೆಲೆ ಈಗ ₹28,898ಕ್ಕೆ ಇಳಿಸಿದೆ. ಅಂದರೆ, ಬಳಕೆದಾರರಿಗೆ ನೇರವಾಗಿ ₹6,000 ಕ್ಕಿಂತ ಹೆಚ್ಚು ಉಳಿತಾಯ ಮಾಡುವ ಅವಕಾಶ ದೊರೆತಿದೆ. ಜೊತೆಗೆ ಸುಲಭ EMI ಆಯ್ಕೆಗಳು ಮತ್ತು ₹27,350 ವರೆಗೆ ವಿನಿಮಯ ಕೊಡುಗೆಗಳು ಲಭ್ಯವಾಗುತ್ತಿವೆ.
ಅಮೆಜಾನ್‌ನಲ್ಲಿ Vivo V50 ಇದೀಗ ₹28,898ಕ್ಕೆ ಲಭ್ಯವಾಗಗುತ್ತಿದೆ. ಗ್ರಾಹಕರು ಈ ಫೋನ್ ಮೇಲೆ ತಿಂಗಳಿಗೆ ₹1,401ರಿಂದ ಆರಂಭವಾಗುವ EMI ಪ್ಲ್ಯಾನ್‌ಗಳನ್ನು ಆಯ್ದುಕೊಳ್ಳಬಹುದು. ಜೊತೆಗೆ, ಅಮೆಜಾನ್ ಹಳೆಯ ಫೋನ್‌ಗಳ ವಿನಿಮಯಕ್ಕೆ ಹೆಚ್ಚಿನ ಮೌಲ್ಯವನ್ನು ನೀಡುತ್ತಿದ್ದು, ಬಳಕೆದಾರರು ತಮ್ಮ ಹಳೆಯ ಸಾಧನದ ಸ್ಥಿತಿಯನ್ನು ಅವಲಂಬಿಸಿ ₹27,350ವರೆಗೆ ಹೆಚ್ಚುವರಿ ಕಡಿತ ಪಡೆಯಬಹುದು. ಹಾಗಾದರೆ, Vivo V50 ಸ್ಮಾರ್ಟ್‌ಫೋನ್ ಹೇಗಿದೆ?, ಇದರ ಪ್ರಮುಖ ವೈಶಿಷ್ಟ್ಯಗಳು ಯಾವುವು ಮತ್ತು ಖರೀದಿಸಲು ಯೋಗ್ಯವಾಗಿದೆಯೇ ಎಂಬ ಎಲ್ಲಾ ಅಂಶಗಳನ್ನು ಸಹ ನೋಡೋಣ ಬನ್ನಿ.
ಡಿಸ್‌ಪ್ಲೇ ಮತ್ತು ವಿನ್ಯಾಸ
Vivo V50 ಫೋನಿನಲ್ಲಿ 6.77 ಇಂಚಿನ AMOLED ಡಿಸ್‌ಪ್ಲೇ ನೀಡಲಾಗಿದ್ದು, ಇದು 120Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸುತ್ತದೆ. ಇದರಿಂದ ಸ್ಕ್ರೋಲಿಂಗ್, ಗೇಮಿಂಗ್ ಹಾಗೂ ವಿಡಿಯೋ ವೀಕ್ಷಣೆ ವೇಳೆ ಸ್ಮೂತ್ ಹಾಗೂ ಮನಮೋಹಕ ಅನುಭವ ದೊರೆಯುತ್ತದೆ. 4,500 nits ಗರಿಷ್ಠ ಬ್ರೈಟ್‌ನೆಸ್ ಇರುವುದರಿಂದ ನೇರ ಸೂರ್ಯನ ಬೆಳಕಿನಲ್ಲೂ ಪರದೆ ಸ್ಪಷ್ಟವಾಗಿ ಕಾಣುತ್ತದೆ.
ಕಾರ್ಯಕ್ಷಮತೆ ಮತ್ತು ಮೆಮೊರಿ
ಈ ಫೋನ್ Snapdragon 7 Gen 3 ಚಿಪ್‌ಸೆಟ್‌ನಿಂದ ಶಕ್ತಿಗೊಳ್ಳುತ್ತದೆ, ಇದು ದೈನಂದಿನ ಬಳಕೆ, ಗೇಮಿಂಗ್ ಹಾಗೂ ಮಲ್ಟಿಟಾಸ್ಕಿಂಗ್‌ಗೆ ಉತ್ತಮ ಪರ್ಫಾರ್ಮೆನ್ಸ್ ನೀಡುವ ಸಾಮರ್ಥ್ಯ ಹೊಂದಿದೆ. ಜೊತೆಗೆ 12GB RAM ಮತ್ತು ಗರಿಷ್ಠ 512GB ಸ್ಟೋರೇಜ್ ಆಯ್ಕೆಯನ್ನೂ ಹೊಂದಿದೆ, ಸಂಗ್ರಹಣೆಯ ಕುರಿತು ಯಾವುದೇ ಚಿಂತೆ ಇರದು.

ಬ್ಯಾಟರಿ ಮತ್ತು ಚಾರ್ಜಿಂಗ್
Vivo V50 ನಲ್ಲಿ 6,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಲಭ್ಯವಿದೆ, ಇದು ದಿನಪೂರ್ತಿ ಬಳಸಲು ಸಾಕಾಗುತ್ತದೆ. ಜೊತೆಗೆ ಇದರಲ್ಲಿ 90W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಕೂಡ ಇರುವುದರಿಂದ ಕಡಿಮೆ ಸಮಯದಲ್ಲಿ ಫೋನ್ ಮರು ಚಾರ್ಜ್ ಆಗುತ್ತದೆ.
ಕ್ಯಾಮೆರಾ ವೈಶಿಷ್ಟ್ಯಗಳು
ಹಿಂದಿನ ಭಾಗದಲ್ಲಿ 50MP ಮುಖ್ಯ ಕ್ಯಾಮೆರಾ ಮತ್ತು 50MP ವೈಡ್ ಆಂಗಲ್ ಸೆನ್ಸರ್ ಲಭ್ಯ. OIS ಬೆಂಬಲದಿಂದ ಕಡಿಮೆ ಬೆಳಕಿನಲ್ಲಿಯೂ ಸ್ಪಷ್ಟ ಹಾಗೂ ಶಾರ್ಪ್ ಫೋಟೋಗಳನ್ನು ಪಡೆಯಬಹುದು. ಮುಂಭಾಗದಲ್ಲಿ 50MP ಸೆಲ್ಫಿ ಕ್ಯಾಮೆರಾ ಇರುವುದರಿಂದ ವಿಡಿಯೋ ಕಾಲ್ ಹಾಗೂ ಸೆಲ್ಫಿಗಳಿಗೆ ಅತ್ಯುತ್ತಮ ಗುಣಮಟ್ಟ ದೊರೆಯುತ್ತದೆ.
ಇತರೆ ವೈಶಿಷ್ಟ್ಯಗಳು
ಧೂಳು ಮತ್ತು ನೀರಿನಿಂದ ರಕ್ಷಣೆಗೆ IP68 + IP69 ರೇಟಿಂಗ್ ಅನ್ನು ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ 5G, ಡ್ಯುಯಲ್ 4G VoLTE ವೈ-ಫೈ, ಜಿಪಿಎಸ್, ಬ್ಲೂಟೂತ್, ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ
ಖರೀದಿಸಲು ಯೋಗ್ಯ ಆಯ್ಕೆಯಾ?
₹30,000 ಒಳಗಿನ ಬೆಲೆ ಶ್ರೇಣಿಯಲ್ಲಿ ಫ್ಲ್ಯಾಗ್‌ಶಿಪ್ ಮಟ್ಟದ ಫೀಚರ್ಸ್ ಹೊಂದಿರುವ ಫೋನ್‌ಗಳ ಸಂಖ್ಯೆ ಕಡಿಮೆ. ಪ್ರಸ್ತುತ ಅಮೆಜಾನ್‌ನಲ್ಲಿ ದರಕಡಿತವು ದೊರೆಯುತ್ತಿರುವುದರಿಂದ Vivo V50 ಇನ್ನೂ ಆಕರ್ಷಕ ಆಯ್ಕೆಯಾಗಿದೆ. ನೀವು ಅತ್ಯುತ್ತಮ ಡಿಸ್‌ಪ್ಲೇ, ಶಕ್ತಿಶಾಲಿ ಬ್ಯಾಟರಿ, ವೇಗದ ಚಾರ್ಜಿಂಗ್, ಸಾಮರ್ಥ್ಯವಿರುವ ಪ್ರೊಸೆಸರ್ ಹಾಗೂ ಉತ್ತಮ ಕ್ಯಾಮೆರಾ ಹೊಂದಿರುವ all-rounder ಫೋನ್ ಹುಡುಕುತ್ತಿದ್ದರೆ ಇದನ್ನು ಉತ್ತಮ ಡೀಲ್ ಎನ್ನಬಹುದು. ಮಧ್ಯಮ-ಪ್ರಿಮಿಯಂ ಸೆಗ್ಮೆಂಟ್‌ನಲ್ಲಿ ಈ ಫೋನ್ ಸಾಕಷ್ಟು ಸ್ಪರ್ಧಾತ್ಮಕವಾಗಿದೆ ಎಂಬುದು ನಮ್ಮ ಅಭಿಪ್ರಾಯ.


Click it and Unblock the Notifications








