Vivo V50 Elite ಖರೀದಿಯ ಜೊತೆಗೆ ಉಚಿತ ಇಯರ್‌ಬಡ್ಸ್ ಮತ್ತು ಭಾರೀ ಆಫರ್ಸ್!
ವಿವೋ ಮೊಬೈಲ್ಸ್ ತನ್ನ ಜನಪ್ರಿಯ V50 ಸ್ಮಾರ್ಟ್‌ಫೋನ್‌ನ ವಿಶೇಷ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಗೆ ನೆನ್ನೆಯಷ್ಟೇ ಪರಿಚಯಿಸಿದೆ. Vivo V50 Elite ಎಂದು ಕರೆಯಲ್ಪಡುವ ಈ ಹೊಸ ಮಾದರಿಯು ಗ್ರಾಹಕರಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ (ಉಚಿತವಾಗಿ) ವಿವೋ TWS 3e ಇಯರ್‌ಬಡ್‌ಗಳ ಬಂಡಲ್ ಕೊಡುಗೆಯೊಂದಿಗೆ ಬರುತ್ತದೆ ಎಂದು ಕಂಪೆನಿ ತಿಳಿಸಿದ್ದು, ಈ ವಿಶೇಷ ಆವೃತ್ತಿಯು V50 ಯ 12GB RAM ಮತ್ತು 512GB ಆಂತರಿಕ ಸಂಗ್ರಹಣೆಯ ಕೆಂಪು ಗುಲಾಬಿ (ರೆಡ್ ರೋಸ್) ಬಣ್ಣದ ಮಾದರಿಯಲ್ಲಿ ಖರೀದಿಗೆ ಲಭ್ಯವಿರಲಿದೆ ಎಂದು ಹೇಳಿದೆ. ಇಷ್ಟೇ ಇಲ್ಲದೇ, ಬಾಕ್ಸ್‌ನಲ್ಲಿ ನೀಡಲಾಗುವ ವಿವೋ TWS 3e ಇಯರ್‌ಬಡ್‌ಗಳು ಡಾರ್ಕ್ ಇಂಡಿಗೊ ಬಣ್ಣವನ್ನು ಹೊಂದಿದ್ದು, ಸಕ್ರಿಯ ಶಬ್ದ ರದ್ದತಿ (ANC) ಮತ್ತು ದೀರ್ಘ ಬಾಟರಿ ಬಾಳಿಕೆಯಂತಹ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿವೆ ಎಂದು ಕಂಪೆನಿ ತಿಳಿಸಿದೆ.
ಭಾರತದಲ್ಲಿ Vivo V50 Elite ಸ್ಮಾರ್ಟ್‌ಫೋನ್ ₹41,999 ರ ಆಕರ್ಷಕ ಬೆಲೆಯಲ್ಲಿ ಬಿಡುಗಡೆಯಾಗಿದೆ. ಈಗಾಗಲೇ ಈ ಫೋನ್ ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ವಿವೋ ಇಂಡಿಯಾದ ಅಧಿಕೃತ ವೆಬ್‌ಸೈಟ್ ಹಾಗೂ ದೇಶಾದ್ಯಂತದ ಪ್ರಮುಖ ಮೊಬೈಲ್ ಮಾರಾಟ ಮಳಿಗೆಗಳಲ್ಲಿ ಖರೀದಿಗೆ ಲಭ್ಯವಿದೆ. ಕಂಪನಿಯು ತಿಳಿಸಿರುವಂತೆ, ಆರಂಭದಲ್ಲಿ ಈ ಸ್ಮಾರ್ಟ್‌ಫೋನ್ ಕೇವಲ ಕೆಂಪು ಗುಲಾಬಿ ಬಣ್ಣದ ಆಯ್ಕೆಯಲ್ಲಿ ಮಾತ್ರ ಲಭ್ಯವಿರುತ್ತದೆ. ಈ 12GB RAM ಮತ್ತು 512GB ಸಂಗ್ರಹಣೆಯ ರೂಪಾಂತರದೊಂದಿಗೆ, ಬಾಕ್ಸ್‌ನಲ್ಲಿ ಉಚಿತ TWS ಇಯರ್‌ಬಡ್‌ಗಳು, ವೇಗದ ಚಾರ್ಜರ್ ಮತ್ತು ಫೋನ್ ಕೇಸ್ ಅನ್ನು ಸಹ ನೀಡಲಾಗುತ್ತಿದೆ. ಗಮನಾರ್ಹವಾಗಿ, ಈ TWS ಇಯರ್‌ಬಡ್‌ಗಳ ಮಾರುಕಟ್ಟೆ ಬೆಲೆ ₹1,899 ಆಗಿದೆ. ಇಷ್ಟೇ ಅಲ್ಲದೆ, ವಿವೋ Vivo V50 Elite ಖರೀದಿಸುವ ಗ್ರಾಹಕರಿಗಾಗಿ ವಿಶೇಷ ರಿಯಾಯಿತಿ ಕೊಡುಗೆಗಳನ್ನು ಸಹ ಪ್ರಕಟಿಸಲಾಗಿದೆ.

HDFC, SBI Axis American Express, HSBC, DBS, IDFC First Bank, Yes Bank, Bobcard ಮತ್ತು Federal Bank ಗ ಬ್ಯಾಂಕ್ ಕಾರ್ಡ್‌ಗಳ ಮೂಲಕ ಖರೀದಿಸುವವರಿಗೆ ₹3,000 ವರೆಗೆ ತ್ವರಿತ ಕ್ಯಾಶ್‌ಬ್ಯಾಕ್ ಲಭ್ಯವಿದೆ. ಹಳೆಯ ಫೋನ್‌ಗಳನ್ನು ವಿನಿಮಯ ಮಾಡಿಕೊಳ್ಳುವ ಗ್ರಾಹಕರಿಗೆ ₹3,000 ವರೆಗಿನ ವಿನಿಮಯ ಬೋನಸ್ ಅನ್ನು ಸಹ ನೀಡಲಾಗುತ್ತಿದೆ. ಆಯ್ದ ಬ್ಯಾಂಕ್‌ಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೇಲೆ 6 ತಿಂಗಳವರೆಗೆ ಬಡ್ಡಿ ರಹಿತ (No Cost EMI) ಆಯ್ಕೆ ಲಭ್ಯವಿದೆ. ಇದಲ್ಲದೆ, 10 ತಿಂಗಳವರೆಗೆ ಶೂನ್ಯ ಡೌನ್ ಪೇಮೆಂಟ್ EMI ಆಯ್ಕೆಯೂ ಲಭ್ಯವಿದೆ. ವಿವೋ V-ಅಪ್‌ಗ್ರೇಡ್ ಕಾರ್ಯಕ್ರಮದ ಅಡಿಯಲ್ಲಿ ಗ್ರಾಹಕರು ₹3,000 ವರೆಗಿನ ವಿನಿಮಯ ಬೋನಸ್ ಅನ್ನು ಪಡೆಯಬಹುದು. ಹೆಚ್ಚುವರಿಯಾಗಿ, ವಿವೋ V-ಶೀಲ್ಡ್ ಸಾಧನ ಸಂರಕ್ಷಣಾ ಯೋಜನೆಯು ಲಭ್ಯವಿದ್ದು, ಕೇವಲ ₹499 ಪಾವತಿಸಿ 70% ವರೆಗೆ ಖಚಿತವಾದ ಬೈಬ್ಯಾಕ್ ಪಡೆಯುವ ಅವಕಾಶವಿದೆ.
Vivo V50 Elite ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು,
Vivo V50 Elite ಕೇವಲ 0.757cm ದಪ್ಪದ ಅಲ್ಟ್ರಾ-ಸ್ಲಿಮ್ ದೇಹವನ್ನು ಹೊಂದಿದೆ. ಈ ತೆಳುವಾದ ವಿನ್ಯಾಸದ ಹೊರತಾಗಿಯೂ, ಇದು ಬೃಹತ್ 6,000 mAh ಬ್ಯಾಟರಿಯನ್ನು ಒಳಗೊಂಡಿದೆ. ವಿವೋನ ಸುಧಾರಿತ BlueVolt ತಂತ್ರಜ್ಞಾನ ಮತ್ತು 90 Wಫ್ಲ್ಯಾಶ್‌ಚಾರ್ಜ್ ತಂತ್ರಜ್ಞಾನವು ವೇಗದ ಚಾರ್ಜಿಂಗ್ ಅನ್ನು ಖಚಿತಪಡಿಸುತ್ತದೆ. ಇದರ 6.77 ಇಂಚಿನ (17.19 cm) ಕ್ವಾಡ್-ಕರ್ವ್ಡ್ AMOLED ಡಿಸ್ಪ್ಲೇ 4,500 ನಿಟ್ಸ್ ಗರಿಷ್ಠ ಹೊಳಪನ್ನು ಹೊಂದಿದೆ, , 120 Hz ರಿಫ್ರೆಶ್ ದರ ಅತ್ಯಂತ ಸ್ಪಷ್ಟ ಮತ್ತು ತಲ್ಲೀನಗೊಳಿಸುವ ದೃಶ್ಯ ಅನುಭವವನ್ನು ನೀಡುತ್ತದೆ. ಬಾಳಿಕೆಯ ವಿಷಯದಲ್ಲಿಯೂ Vivo V50 Elite ಗಮನಾರ್ಹವಾಗಿ ಡೈಮಂಡ್ ಶೀಲ್ಡ್ ಗ್ಲಾಸ್ ಜೊತೆಗೆ IP68 ಮತ್ತು IP69 ರೇಟಿಂಗ್‌ಗಳನ್ನು ಪಡೆದುಕೊಂಡಿದ್ದು, ಧೂಳು ಮತ್ತು ನೀರಿನಿಂದ ರಕ್ಷಣೆ ನೀಡುತ್ತದೆ.
ಕಾರ್ಯಕ್ಷಮತೆಗಾಗಿ, ಈ Vivo V50 Elite ಫೋನ್ ಸ್ನಾಪ್‌ಡ್ರಾಗನ್ 7 Gen 3 ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, 12 GB RAM ಮತ್ತು 512 GB ಆಂತರಿಕ ಸಂಗ್ರಹಣೆಯೊಂದಿಗೆ ಲಭ್ಯವಿದೆ. ಸಾಫ್ಟ್‌ವೇರ್ ವಿಭಾಗದಲ್ಲಿ, ಇದು ಆಂಡ್ರಾಯ್ಡ್ 15 ಆಧಾರಿತ ಫಂಟೌಚ್ OS 15 ನಲ್ಲಿ ಕಾರ್ಯನಿರ್ವಹಿಸುತ್ತದೆ. ವಿವೋ ಈ ಫೋನ್‌ಗೆ 3 ವರ್ಷಗಳ OS ನವೀಕರಣಗಳನ್ನು ಮತ್ತು 4 ವರ್ಷಗಳ ಭದ್ರತಾ ನವೀಕರಣಗಳನ್ನು ಭರವಸೆ ನೀಡಿದೆ. ದೀರ್ಘಕಾಲದ ಬಳಕೆಯನ್ನು ಖಚಿತಪಡಿಸಿಕೊಳ್ಳಲು, ಮೊದಲೇ ಹೇಳಿದಂತೆ, ಈ ಸ್ಮಾರ್ಟ್‌ಫೋನ್ 6,000 mAh ಸಾಮರ್ಥ್ಯದ ಬೃಹತ್ ಬ್ಯಾಟರಿಯನ್ನು ಹೊಂದಿದೆ. ಇದರೊಂದಿಗೆ, ಬಾಕ್ಸ್‌ನಲ್ಲಿಯೇ 90 W ವೇಗದ ಚಾರ್ಜರ್ ಅನ್ನು ನೀಡಲಾಗಿದ್ದು, ಫೋನ್ ಅನ್ನು ತ್ವರಿತವಾಗಿ ಚಾರ್ಜ್ ಮಾಡಲು ಸಹಾಯ ಮಾಡುತ್ತದೆ ಎಂದು ಕಂಪೆನಿಯು ಹೇಳಿಕೊಂಡಿದೆ.
ಕ್ಯಾಮೆರಾ ವಿಭಾಗದಲ್ಲಿಯೂ Vivo V50 Elite ಸ್ಮಾರ್ಟ್‌ಫೋನ್ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಹಿಂಭಾಗದಲ್ಲಿ 50 MP ಮುಖ್ಯ ಕ್ಯಾಮೆರಾ ಮತ್ತು 50 MP ಅಲ್ಟ್ರಾವೈಡ್ ಸೆನ್ಸರ್ ಅನ್ನು ನೀಡಲಾಗಿದೆ. ಇದು OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್), ಅಲ್ಟ್ರಾ-ವೈಡ್ ಮತ್ತು ಗ್ರೂಪ್ ಸೆಲ್ಫಿ ಕ್ಯಾಮೆರಾಗಳನ್ನು ಒಳಗೊಂಡಿರುವ 50 MP ZEISS ಆಲ್-ಮೇನ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ವಿಶೇಷವಾಗಿ, ಈ Elite ಆವೃತ್ತಿಯು ZEISS ಮಲ್ಟಿಫೋಕಲ್ ಪೋರ್ಟ್ರೇಟ್‌ಗಳು (23mm, 35mm, 50mm) ಮತ್ತು 7 ಐಕಾನಿಕ್ ZEISS ಭಾವಚಿತ್ರ ಶೈಲಿಗಳನ್ನು ಒಳಗೊಂಡಿದೆ. ಭಾರತೀಯ ಬಳಕೆದಾರರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ವೆಡ್ಡಿಂಗ್ ಸ್ಟೈಲ್ ಪೋರ್ಟ್ರೇಟ್ ಸ್ಟುಡಿಯೋ ಪ್ರತಿ ವಿಶೇಷ ಕ್ಷಣಕ್ಕೂ ಸಿನಿಮೀಯ ಸ್ಪರ್ಶವನ್ನು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.
ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ, Vivo V50 Elite ಸ್ಮಾರ್ಟ್‌ಫೋನಿನ ಮುಂಭಾಗದಲ್ಲಿ 50 MP ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದರಲ್ಲಿ ಸ್ಪಷ್ಟವಾದ ಬ್ಯಾಕ್‌ಲಿಟ್ ಸೆಲ್ಫಿಗಳಿಗಾಗಿ ವಿವೋನ ಸ್ವಯಂ-ಅಭಿವೃದ್ಧಿಪಡಿಸಿದ AI 3D ಸ್ಟುಡಿಯೋ ಲೈಟಿಂಗ್ 2.0 ತಂತ್ರಜ್ಞಾನವನ್ನು ಬಳಸಲಾಗಿದೆ. ಇದು ನೀರೊಳಗಿನ ಛಾಯಾಗ್ರಹಣಕ್ಕೂ ಸೂಕ್ತವಾಗಿದೆ ಎಂದು ಕಂಪೆನಿ ತಿಳಿಸಿದೆ. ಈ ಎಲ್ಲಾ ವೈಶಿಷ್ಟ್ಯಗಳ ಜೊತೆಗೆ ಜನರೇಷನ್ AI ವೈಶಿಷ್ಟ್ಯಗಳಾದ ಸರ್ಕಲ್ ಟು ಸರ್ಚ್, AI ಸ್ಕ್ರೀನ್ ಟ್ರಾನ್ಸ್‌ಲೇಷನ್ ಮತ್ತು ಲೈವ್ ಕಾಲ್ ಟ್ರಾನ್ಸ್‌ಲೇಷನ್, AI ಟ್ರಾನ್ಸ್‌ಕ್ರಿಪ್ಟ್ ಅಸಿಸ್ಟ್, AI ಸೂಪರ್‌ಲಿಂಕ್ ಮತ್ತು ಎರೇಸರ್‌ನಂತಹ ಉಪಯುಕ್ತ ವೈಶಿಷ್ಟ್ಯಗಳನ್ನು ಈ Vivo V50 Elite ಸ್ಮಾರ್ಟ್‌ಫೋನ್ ಒಳಗೊಂಡಿದೆ.


Click it and Unblock the Notifications








