Home
ಮೊಬೈಲ್

ಮೇ 15 ರಂದು ಭಾರತದಲ್ಲಿ Vivo V50 Elite ಫೋನ್ ಬಿಡುಗಡೆ ಸಾಧ್ಯತೆ!

ಜನಪ್ರಿಯ ಮೊಬೈಲ್ ಬ್ರ್ಯಾಂಡ್ ವಿವೋ ಕಂಪೆನಿಯು ಭಾರತದಲ್ಲಿ ತನ್ನ ಇತ್ತೀಚಿನ V50 ಸ್ಮಾರ್ಟ್‌ಫೋನ್ ಸರಣಿಯನ್ನು ವಿಸ್ತರಿಸಲು ಸಜ್ಜಾಗಿದ್ದು, ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ Vivo V50 ಮತ್ತು Vivo V50e ಗೆ ಮತ್ತೊಂದು ಆಯ್ಕೆಯಾಗಿ Vivo V50 Elite ಎಂಬ ಹೊಸ ಸ್ಮಾರ್ಟ್‌ಫೋನನ್ನು ಪರಿಚಯಿಸುತ್ತಿದೆ ಎನ್ನಲಾಗಿದೆ. ಹೌದು, ಇತ್ತೀಚಿನ ವರದಿಗಳ ಪ್ರಕಾರ, Vivo V50 ಮಾದರಿಯ ವಿಶೇಷಣಗಳನ್ನೇ ಒಳಗೊಂಡಿರಲಿರುವ ಹಾಗೂ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ನಿರೀಕ್ಷಿಸಬಹುದಾದ ಹೊಸ Vivo V50 Elite ಸ್ಮಾರ್ಟ್‌ಫೋನ್ ಬಿಡುಗಡೆಗೆ ತಯಾರಾಗಿದೆ ಎಂದು ಹೇಳಲಾಗಿದೆ.

91ಮೊಬೈಲ್ಸ್ ವರದಿಯು ತಿಳಿಸಿರುವಂತೆ, ವಿವೋ ಸಂಸ್ಥೆಯು ಇದೇ ಮೇ 15 ರಂದು ಭಾರತೀಯ ಮಾರುಕಟ್ಟೆಯಲ್ಲಿ Vivo V50 Elite ಎಂಬ ಹೊಸ ಆವೃತ್ತಿಯ ಫೋನನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಈ ವರದಿಯ ಪ್ರಕಾರ, ಹೊಸ Vivo V50 Elite ಫೋನ್ ಕೂಡ ಬಹುತೇಕ Vivo V50 ಮಾದರಿಯ ವಿಶೇಷಣಗಳನ್ನೇ ಒಳಗೊಂಡಿರಲಿದೆ. ಆದರೆ, ಕ್ಯಾಮೆರಾ ಮಾಡ್ಯೂಲ್ ವಿನ್ಯಾಸದಲ್ಲಿ ಬದಲಾವಣೆಯ ಸಾಧ್ಯತೆ ಇದೆ ಎಂದು ಹೇಳಿದೆ. ಆದರೆ, ಈ ಕುರಿತು ಕಂಪನಿಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಹಾಗಾಗಿ, ಗ್ರಾಹಕರು ಕಂಪನಿಯ ಅಧಿಕೃತ ಪ್ರಕಟಣೆಗಾಗಿ ಕಾಯಬೇಕಿದೆ.

ಮುಂಬರುವ Vivo V50 Elite ಫೋನಿನ ವೈಶಿಷ್ಟ್ಯಗಳನ್ನು ನೋಡುವುದಾದರೆ, ಈ Vivo V50 Elite ಫೋನ್ ಕೂಡ ತನ್ನ ಮೂಲ ಮಾದರಿಯಾದ Vivo V50 ರಂತೆಯೇ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ. ವರದಿಗಳ ಪ್ರಕಾರ, ಈ ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ದರ ಮತ್ತು 4,500 ನಿಟ್ಸ್ ಗರಿಷ್ಠ ಹೊಳಪನ್ನು ಹೊಂದಿರುವ 6.77-ಇಂಚಿನ FHD+ ಕ್ವಾಡ್-ಕರ್ವ್ಡ್ AMOLED ಡಿಸ್ಪ್ಲೇಯನ್ನು ಹೊಂದಿರಬಹುದು. ಇದರ ಡಿಸ್ಪ್ಲೇ 2392×1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಅನ್ನು ನೀಡುವ ಸಾಧ್ಯತೆ ಇದೆ, ಇದು ಉತ್ತಮ ವೀಕ್ಷಣೆಯ ಅನುಭವವನ್ನು ನೀಡುತ್ತದೆ ಎಂದು ಹೇಳಲಾಗಿದೆ. ಕಾರ್ಯಕ್ಷಮತೆಯ ವಿಷಯಕ್ಕೆ ಬಂದರೆ, ಈ ಸಾಧನವು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 Gen 3 ಚಿಪ್‌ಸೆಟ್‌ನಿಂದ ಚಾಲಿತವಾಗುವ ಸಾಧ್ಯತೆ ಇದೆ. ಇದು ಆಂಡ್ರಾಯ್ಡ್ 15 ಆಧಾರಿತ ಫನ್‌ಟಚ್ ಓಎಸ್ 15 ನಲ್ಲಿ ಕಾರ್ಯನಿರ್ವಹಿಸಲಿದೆ, ಇದು ಸುಗಮ ಮತ್ತು ಬಳಕೆದಾರ ಸ್ನೇಹಿ ಅನುಭವವನ್ನು ನೀಡುತ್ತದೆ.

ಮೇ 15 ರಂದು ಭಾರತದಲ್ಲಿ Vivo V50 Elite ಫೋನ್ ಬಿಡುಗಡೆ ಸಾಧ್ಯತೆ!

ಕ್ಯಾಮೆರಾ ವಿಭಾಗದಲ್ಲಿ, Vivo V50 Elite ಸ್ಮಾರ್ಟ್‌ಪೋನಿನ ಹಿಂಭಾಗದಲ್ಲಿ OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ನೊಂದಿಗೆ 50MP ಪ್ರಾಥಮಿಕ ಕ್ಯಾಮೆರಾ, 50MP ವೈಡ್-ಆಂಗಲ್ ಕ್ಯಾಮೆರಾ ಮತ್ತು ಉತ್ತಮ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯಲು ನೆರವಾಗುವ ನಿರೀಕ್ಷೆಯಿದೆ. ಮುಂಭಾಗದಲ್ಲಿ, ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ 50MP ಸೆನ್ಸಾರ್ ಅನ್ನು ಅಳವಡಿಸುವ ಸಾಧ್ಯತೆ ಇದೆ. ಬ್ಯಾಟರಿ ವಿಷಯಕ್ಕೆ ಬಂದರೆ, ಈ ಫೋನ್ 90W ವೇಗದ ವೈರ್ಡ್ ಚಾರ್ಜಿಂಗ್ ಬೆಂಬಲದೊಂದಿಗೆ 6,000mAh ಸಾಮರ್ಥ್ಯದ ಬೃಹತ್ ಬ್ಯಾಟರಿಯನ್ನು ಹೊಂದಿರಬಹುದು, ಇದು ದೀರ್ಘಕಾಲದವರೆಗೆ ಬಾಳಿಕೆ ಬರುತ್ತದೆ ಮತ್ತು ತ್ವರಿತವಾಗಿ ಚಾರ್ಜ್ ಆಗಲು ಸಹಾಯ ಮಾಡುತ್ತದೆ.ಇದಲ್ಲದೆ, ಸೋರಿಕೆಯಾದ ಇತರ ಮಾಹಿತಿಗಳ ಪ್ರಕಾರ, Vivo V50 Elite IP68 ಮತ್ತು IP69 ಪ್ರಮಾಣೀಕೃತ ನೀರು ಮತ್ತು ಧೂಳಿನ ಪ್ರತಿರೋಧವನ್ನು ಸಹ ಹೊಂದಿರಬಹುದು. ಈ ವೈಶಿಷ್ಟ್ಯವು ಫೋನ್ ಅನ್ನು ಧೂಳು ಮತ್ತು ನೀರಿನ ಹಾನಿಯಿಂದ ರಕ್ಷಿಸುತ್ತದೆ

ಬೆಲೆಯ ಬಗ್ಗೆ ಊಹಿಸುವುದಾದರೆ, ಮೂಲ Vivo V50 ಫೋನ್ 8GB/128GB ಮಾದರಿಯು ಭಾರತದಲ್ಲಿ ರೂ. 34,999 ರ ಆರಂಭಿಕ ಬೆಲೆಯೊಂದಿಗೆ ಬಿಡುಗಡೆಯಾಗಿದೆ. ಹೀಗಾಗಿ, Vivo V50 Elite ಫೋನ್ ಈ ಮೂಲ ಮಾದರಿಗಿಂತ ಸ್ವಲ್ಪ ಹೆಚ್ಚಿನ ಬೆಲೆಯನ್ನು ಹೊಂದಿರುವ ಸಾಧ್ಯತೆ ಇದೆ. ಮೂಲ ಮಾದರಿಯ ಬೆಲೆಯು ಸುಮಾರು ರೂ. 40,000 ಆಗಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಅಧಿಕೃತ ಬೆಲೆ ಮತ್ತು ಲಭ್ಯತೆಯ ವಿವರಗಳಿಗಾಗಿ ಕಂಪನಿಯ ಪ್ರಕಟಣೆಯನ್ನು ಕಾಯುವುದು ಸೂಕ್ತ. ಈ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Vivo is reportedly set to expand its V50 smartphone series with the introduction of the Vivo V50 Elite. This new model will join the existing Vivo V50 and V50e.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+