Home
ಮೊಬೈಲ್

ಹೊಸ Vivo ಫೋನ್ ಲಾಂಚ್; 6500mAh ಬ್ಯಾಟರಿ.. 50MP + 32MP ಕ್ಯಾಮೆರಾ.. ಬೆಲೆ ಎಷ್ಟು ಗೊತ್ತಾ?

ವಿವೋ ಸದ್ದಿಲ್ಲದೆ ತನ್ನ ಹೊಸ ಫೋನನ್ನು ಬಿಡುಗಡೆ ಮಾಡಿದೆ. ಇದು ವಿವೋ V50 ಲೈಟ್ 4G (Vivo V50 Lite 4G) ಎಂಬ ಹೆಸರಿನೊಂದಿಗೆ ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಈ ಫೋನ್ ಕಳೆದ ವರ್ಷ ಬಿಡುಗಡೆಯಾಗಿದ್ದ Vivo V40 Lite 4G ಫೋನಿನ ಉತ್ತರಾಧಿಕಾರಿಯಾಗಿ ಬಂದಿದೆ. ಈ ಫೋನಿನ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ವಿವೋ V50 ಲೈಟ್ 4G ಮೊಬೈಲ್ 120Hz ರಿಫ್ರೆಶ್‌ ದರದೊಂದಿಗೆ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಹಾಗೆಯೇ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಸೆಟಪ್, 6500mAh ಶಕ್ತಿಶಾಲಿ ಬ್ಯಾಟರಿ ಮತ್ತು ಹಲವು ಉತ್ತಮ ಗುಣಮಟ್ಟದ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ 8GB RAM + 256GB ಸ್ಟೋರೇಜ್‌ನಲ್ಲಿ ಮಾತ್ರ ಲಭ್ಯವಿದೆ. ಈ ಫೋನಿನ ಇನ್ನಿತರ ವಿಶೇಷತೆಗಳು ಈ ಕೆಳಗಿನಂತಿವೆ.

ಹೊಸ Vivo ಫೋನ್ ಲಾಂಚ್; 6500mAh ಬ್ಯಾಟರಿ, 50MP + 32MP ಕ್ಯಾಮೆರಾ.. ಬೆಲೆ ನೋಡಿ

ವಿವೋ V50 ಲೈಟ್ 4G ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ವಿವೋ V50 ಲೈಟ್ 4G ಸ್ಮಾರ್ಟ್‌ಫೋನ್ 6.77 ಇಂಚಿನ ಫುಲ್ ಎಚ್‌ಡಿ ಪ್ಲಸ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 1,800 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು 120Hz ರಿಫ್ರೆಶ್ ದರದ ಬೆಂಬಲ ಹೊಂದಿದೆ. ಇದು ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿಯೂ ಸುಲಭವಾಗಿ ಗೋಚರಿಸುತ್ತದೆ.

ಪ್ರೊಸೆಸರ್ ಸಾಮರ್ಥ್ಯ

ವಿವೋ V50 ಲೈಟ್ 4G ಮೊಬೈಲ್ ಸ್ನಾಪ್‌ಡ್ರಾಗನ್ 685 ಪ್ರೊಸೆಸರ್ ಜೊತೆಗೆ ಕೆಲಸ ನಿರ್ವಹಿಸುತ್ತದೆ. ಇದು ಸುಗಮ ಕಾರ್ಯಕ್ಷಮತೆ ಮತ್ತು ಉತ್ತಮ ಬಹುಕಾರ್ಯಕ ಸಾಮರ್ಥ್ಯಗಳನ್ನು ನೀಡುತ್ತದೆ. ವಿವೋ V40 ಲೈಟ್ 4G ಫೋನಿನಲ್ಲಿಯೂ ಇದೇ ಪ್ರೊಸೆಸರ್ ಇದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಧಾರಿತ ಫನ್‌ಟಚ್ ಓಎಸ್ 15 ನೊಂದಿಗೆ ಬರುತ್ತದೆ.

RAM ಮತ್ತು ಸ್ಟೋರೇಜ್

ವಿವೋ V50 ಲೈಟ್ 4G ಫೋನ್ 8GB ಭೌತಿಕ RAM ಅನ್ನು ಹೊಂದಿದೆ. ಇದರೊಂದಿಗೆ 8GB ವರ್ಚುವಲ್ RAMಗೆ ಬೆಂಬಲವನ್ನು ಹೊಂದಿದೆ. ನೀವು ಒಟ್ಟು 16GB ವರೆಗೆ RAM ಬಳಸಬಹುದು. ಹಾಗೆಯೇ ಈ ಮೊಬೈಲ್ 256GB ಆಂತರಿಕ ಸ್ಟೋರೇಜ್ ಆಯ್ಕೆ ಹೊಂದಿದೆ.

ಕ್ಯಾಮೆರಾ ಸೆಟಪ್

ವಿವೋ V50 ಲೈಟ್ 4G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಪ್ರಾಥಮಿಕ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು ಔರಾ ಲೈಟ್ ರಿಂಗ್ ಎಲ್‌ಇಡಿ ಫ್ಲ್ಯಾಷ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ವಿವೋ ಸ್ಮಾರ್ಟ್‌ಫೋನ್ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಒಳಗೊಂಡಿದೆ. ಇದು ಅದ್ಭುತ ಫೋಟೋಗ್ರಫಿ ಮತ್ತು ವಿಡಿಯೋ ರೆಕಾರ್ಡಿಂಗ್ ಅನುಭವವನ್ನು ನೀಡುತ್ತದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ವಿವೋ V50 ಲೈಟ್ 4G ಮೊಬೈಲ್ 6,500mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 90W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಇದು ಒಂದು ದಿನ ಪೂರ್ತಿ ಬಾಳಿಕೆ ಬರುತ್ತದೆ.

ಇತರೆ ವೈಶಿಷ್ಟ್ಯಗಳು

ವಿವೋ V50 ಲೈಟ್ 4G ಫೋನ್ ಡ್ಯುಯಲ್ ಸ್ಪೀಕರ್‌ಗಳನ್ನು ಹೊಂದಿದೆ. ಇದು ಇನ್ ಸ್ಕ್ರೀನ್ ಫಿಂಗರ್‌ಪ್ರಿಂಟ್ ಸೆನ್ಸರ್ ಸಹ ಹೊಂದಿದೆ. ಇದು ವೇಗದ ಮತ್ತು ಸುರಕ್ಷಿತ ಅನ್‌ಲಾಕಿಂಗ್ ಒದಗಿಸುತ್ತದೆ. ಈ ಫೋನ್ ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ, IP65 ರೇಟಿಂಗ್ ಪಡೆದಿದೆ.

ವಿವೋ V50 ಲೈಟ್ 4G ಬೆಲೆ

ವಿವೋ V50 ಲೈಟ್ 4G ಮೊಬೈಲ್ ಕಪ್ಪು ಮತ್ತು ಚಿನ್ನದ ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಫೋನ್ 8GB RAM + 256GB ಸ್ಟೋರೇಜ್‌ ಆಯ್ಕೆಯಲ್ಲಿ ಮಾತ್ರ ಲಭ್ಯವಿದೆ. ಇದರ ಬೆಲೆ 46,000 ರೂ. ಆಗಿದೆ. ಪ್ರಸ್ತುತ, ಈ ಫೋನ್ ಜಾಗತಿಕ (ಟರ್ಕಿಯಲ್ಲಿ) ಮಾರುಕಟ್ಟೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ. ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಬರಲಿದೆ.

Best Mobiles in India

English summary
Vivo V50 Lite 4G With 6,500mAh Battery and 120Hz AMOLED Display Launched; Check Price, specifications and more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+