Home
ಮೊಬೈಲ್

Vivo V50e ಫೀಚರ್ಸ್ ಔಟ್: ವೆಡ್ಡಿಂಗ್ ಸ್ಟುಡಿಯೋ ಮತ್ತು ಅಂಡರ್‌ವಾಟರ್ ಫೋಟೋಗ್ರಫಿ!

Vivo ಕಂಪನಿಯ ಬಹುನಿರೀಕ್ಷಿತ 'Vivo V50e' ಸ್ಮಾರ್ಟ್‌ಫೋನ್, ವಿಶೇಷ ವೆಡ್ಡಿಂಗ್ ಪೋರ್ಟ್ರೇಟ್ ಸ್ಟುಡಿಯೋ ವೈಶಿಷ್ಟ್ಯವನ್ನು ಒಳಗೊಂಡು ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆಯಾಗಲು ಸಜ್ಜಾಗಿದೆ. ಇದೀಗ ಈ ಹೊಸ ವಿ-ಸರಣಿಯ 'Vivo V50e' ಸ್ಮಾರ್ಟ್‌ಫೋನ್‌ ಕುರಿತು ಮತ್ತಷ್ಟು ಅಧಿಕೃತ ಫೀಚರ್ಸ್ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಿವೆ. ಈ ಹೊಸ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ನಯವಾದ ವಿನ್ಯಾಸದ ಜೊತೆಗೆ ಪ್ರೀಮಿಯಂ ಕ್ಯಾಮೆರಾ ಸಾಮರ್ಥ್ಯ, ಎಐ ಎನಾನ್ಸ್ ನಂತಹ ಹಲವಾರು ಹೊಸ ವೈಶಿಷ್ಟ್ಯಗಳನ್ನು ಹೊಂದಿರುವುದನ್ನು Vivo ಕಂಪೆನಿ ಖಚಿತಪಡಿಸಿದೆ. ಹಾಗಾದರೆ, ಮುಂಬರುವ Vivo V50e ಸ್ಮಾರ್ಟ್‌ಫೋನ್‌ ಹೇಗಿದೆ?, ಕ್ಯಾಮೆರಾ, ಬೆಲೆ ಮತ್ತು ಇತರ ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ ಬನ್ನಿ.

Vivo V50e ಸ್ಮಾರ್ಟ್‌ಫೋನಿನ ಡಿಸ್‌ಪ್ಲೇ, ವಿನ್ಯಾಸ ಮತ್ತು ಬಾಳಿಕೆ
ಇದೀಗ Vivo ಕಂಪೆನಿ ಬಹಿರಂಗಪಡಿಸಿರುವ ಮಾಹಿತಿಯಂತೆ, ಮುಂಬರುವ Vivo V50e ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ದರದೊಂದಿಗೆ ಕ್ವಾಡ್-ಕರ್ವ್ಡ್ AMOLED ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ ಸುಗಮ ಸ್ಕ್ರೋಲಿಂಗ್ ಮತ್ತು ರೋಮಾಂಚಕ ದೃಶ್ಯಗಳನ್ನು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನು ಈ Vivo V50e ಸ್ಮಾರ್ಟ್‌ಫೋನ್ ಗಾಜಿನ ಹಿಂಭಾಗದ ಫಲಕವನ್ನು ಹೊಂದಿದ್ದು, ಮರಳಿನಂತಹ ವಿನ್ಯಾಸವನ್ನು ಹೊಂದಿದೆ. ಇದು ಫೋನ್‌ಗೆ ವಿಶಿಷ್ಟ ನೋಟವನ್ನು ನೀಡುತ್ತದೆ. ಆರಾಮದಾಯಕ ಹಿಡಿತಕ್ಕಾಗಿ ಈ ಫೋನ್ ಬಾಗಿದ ಅಂಚುಗಳನ್ನು ಹೊಂದಿದೆ. ಇದರ ಜೊತೆಗೆ, ಈ ಫೋನ್ ಐಪಿ68 ಮತ್ತು ಐಪಿ69 ರೇಟಿಂಗ್‌ಗಳೊಂದಿಗೆ ಬಂದಿದ್ದು, ಇದು ಧೂಳು ಮತ್ತು ನೀರನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

Vivo V50e ಫೀಚರ್ಸ್ ಔಟ್: ವೆಡ್ಡಿಂಗ್ ಸ್ಟುಡಿಯೋ ಮತ್ತು ಅಂಡರ್‌ವಾಟರ್ ಫೋಟೋಗ್ರಫಿ!

Vivo V50e ಸ್ಮಾರ್ಟ್‌ಫೋನಿನ ಕ್ಯಾಮೆರಾ

ಈ Vivo V50e ಸ್ಮಾರ್ಟ್‌ಫೋನ್ ಡ್ಯುಯಲ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ, ಸೋನಿ IMX882 ಪ್ರಾಥಮಿಕ ಸಂವೇದಕ ಮತ್ತು ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಅನ್ನು ಒಳಗೊಂಡಿದೆ. 50MP ಮುಂಭಾಗದ ಕ್ಯಾಮೆರಾ, ತೀಕ್ಷ್ಣವಾದ ಭಾವಚಿತ್ರಗಳಿಗಾಗಿ ಐ ಆಟೋಫೋಕಸ್ ಅನ್ನು ಸಹ ಹೊಂದಿದೆ. ಮುಂಭಾಗ ಮತ್ತು ಹಿಂಭಾಗದ ಎರಡೂ ಕ್ಯಾಮೆರಾಗಳು 4K ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತವೆ. ಇದರ ಜೊತೆಗೆ, ಭಾರತದ ವೆಡ್ಡಿಂಗ್ ಪೋರ್ಟ್ ಸ್ಟುಡಿಯೋ ಮತ್ತು ಅಂಡರ್‌ವಾಟರ್ ಫೋಟೋಗ್ರಫಿ ಮೋಡ್ ಅನ್ನು ಸಹ ಪರಿಚಯಿಸುತ್ತಿದೆ. ಇದರಿಂದ ಗ್ರಾಹಕರು 1x, 1.5x ಮತ್ತು 2x ಫೋಕಲ್ ಉದ್ದಕ್ಕೆ ಸೋನಿ ಫೋಕಲ್ ಪೋರ್ಟ್ರೇಟ್ ಚಿತ್ರಗಳನ್ನು ಬಹು ಚಿತ್ರಿಸಲು ಸಾಧ್ಯವಿದೆ. ಇನ್ನು ಈ ಫೋನ್‌ನ ಮಿಡ್ ಬೆಲೆ ಹೊಂದಿದ್ದರೂ ಸಹ, Vivo V50e, Vivo V50 5G ಗೆ ಹೋಲುವ ಕ್ಯಾಮೆರಾ ಅನುಭವವನ್ನು ಒದಗಿಸುವ ನಿರೀಕ್ಷೆಯಿದೆ

Vivo V50e ಸ್ಮಾರ್ಟ್‌ಫೋನಿನ ಎಐ ಮತ್ತು ಸಾಫ್ಟ್‌ವೇರ್ ವೈಶಿಷ್ಟ್ಯಗಳು
Vivo ಕಂಪೆನಿ ಬಹಿರಂಗಪಡಿಸಿರುವ ಅಧಿಕೃತ ಮಾಹಿತಿಯಂತೆ Vivo V50eಸ್ಮಾರ್ಟ್‌ಫೋನ್ AI-ಚಾಲಿತ ಪರಿಕರಗಳನ್ನು ಹೊಂದಿದೆ, ಅವುಗಳೆಂದರೆ,
ಇಮೇಜ್ ಎಕ್ಸ್‌ಪಾಂಡರ್ - ಫೋಟೋ ಸ್ಪಷ್ಟತೆ ಮತ್ತು ರೆಸಲ್ಯೂಶನ್ ಅನ್ನು ಸುಧಾರಿಸುತ್ತದೆ.
ಮ್ಯಾಜಿಕ್ ಎರೇಸರ್ - ಚಿತ್ರಗಳಿಂದ ಅನಗತ್ಯ ವಸ್ತುಗಳನ್ನು ತೆಗೆದುಹಾಕುತ್ತದೆ.
ನೋಟ್ ಅಸಿಸ್ಟ್ ಮತ್ತು ಟ್ರಾನ್ಸ್‌ಕ್ರಿಪ್ಟ್ ಅಸಿಸ್ಟ್ - ಪಠ್ಯ-ಆಧಾರಿತ ಕಾರ್ಯಗಳಿಗೆ ಸಹಾಯ ಮಾಡುತ್ತದೆ.
ಸರ್ಕಲ್ ಟು ಸರ್ಚ್ - ಗೂಗಲ್‌ನ ದೃಶ್ಯ ಹುಡುಕಾಟ ವೈಶಿಷ್ಟ್ಯ ಇದಾಗಿದೆ.

Vivo V50e ಸ್ಮಾರ್ಟ್‌ಫೋನಿನ ಲಭ್ಯತೆ ಯಾವಾಗ ಮತ್ತು ಬೆಲೆ ಎಷ್ಟಿರಬಹುದು?
Vivo V50e ಸ್ಮಾರ್ಟ್‌ಫೋನನ್ನು ಈಗಾಗಲೇ BIS ಪ್ರಮಾಣೀಕರಣ ಸೈಟ್‌ನಲ್ಲಿ ಗುರುತಿಸಲಾಗಿದೆ. ಕಂಪನಿಯು ಇನ್ನೂ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲವಾದರೂ ಮುಂದಿನ ವಾರದೊಳಗಾಗಿ ದೇಶದಲ್ಲಿ Vivo V50e ಸ್ಮಾರ್ಟ್‌ಫೋನ್ ಬಿಡುಗಡೆಯಾಗಬಹುದು. ಇನ್ನು ಈ ಹಿಂದಿನ ಮಾದರಿಯ Vivo V40e ಸ್ಮಾರ್ಟ್‌ಫೋನ್ ₹28,999 ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಹಾಗಾಗಿ, ಹೊಸ Vivo V50e ಸ್ಮಾರ್ಟ್‌ಫೋನಿನ ಬೆಲೆಯೂ ಇದೇ ರೀತಿ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.

Best Mobiles in India

English summary
Vivo V50e: Specifications, Camera Details, and Additional Information Confirmed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+