ಬಿಡುಗಡೆಗೂ ಮೊದಲೇ.. Vivo V50e ಬೆಲೆ ಲೀಕ್! ಏ.10ಕ್ಕೆ ಬಿಡುಗಡೆ.. ಬೆಲೆ ಎಷ್ಟು, ವಿಶೇಷತೆಗಳೇನು?
ವಿವೋ ಪ್ರಿಯರು ನೋಡಲೇಬೇಕಾದ ಸುದ್ದಿ ಇದು! ಬಿಡುಗಡೆಗೆ ಸಿದ್ಧವಾಗಿರುವ ಹೊಸ ಫೋನಿನ ಬೆಲೆ ಸೋರಿಕೆಯಾಗಿದೆ. ಹೌದು, ವಿವೋ V50 (Vivo V50) ಫೋನನ್ನು ಕಳೆದ ಫೆಬ್ರವರಿಯಲ್ಲಿ ಬಿಡುಗಡೆ ಮಾಡಲಾಯಿತು. ಇದೀಗ ಕಂಪನಿಯು ಇದೇ ಸರಣಿಯಲ್ಲಿ ವಿವೋ V50e (Vivo V50e) ಮೊಬೈಲ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ. ಈ ಹೊಸ ವಿವೋ 5G ಸ್ಮಾರ್ಟ್‌ಫೋನ್ ಏಪ್ರಿಲ್ 10 ರಂದು ದೇಶೀಯ ಮಾರುಕಟ್ಟೆಯಲ್ಲಿ ಅನಾವರಣಗೊಳ್ಳಲಿದೆ. ಈ ಮಧ್ಯೆಯೇ ಮುಂಬರುವ ಫೋನಿನ ಬೆಲೆ ವಿವರಗಳನ್ನು ಬಹಿರಂಗಪಡಿಸಲಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ವಿವೋ V50e ಮೊಬೈಲ್‌ನ ಫೋಟೋಗಳು ಮತ್ತು ಕ್ಯಾಮೆರಾ ವೈಶಿಷ್ಟ್ಯಗಳನ್ನು ಈಗಾಗಲೇ ಕಂಪನಿ ಹಂಚಿಕೊಂಡಿದೆ. ಇದೀಗ ಈ ವಿವೋ ಫೋನಿನ ಬೆಲೆಯನ್ನು ಸಹ ಬಹಿರಂಗಪಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಮುಂಬರುವ ಈ 5G ಮೊಬೈಲ್‌ನ ಬೆಲೆ ಮತ್ತು ಸ್ಟೋರೇಜ್ ರೂಪಾಂತರಗಳ ವಿವರಗಳನ್ನು ಹಂಚಿಕೊಳ್ಳಲಾಗಿದೆ.ಈ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಮತ್ತು 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿರಲಿದೆ. ಈ ಮೊಬೈಲ್ 6.77 ಇಂಚಿನ ಡಿಸ್ಪ್ಲೇ ಹೊಂದಿರುತ್ತದೆ. ಇದರೊಂದಿಗೆ 5600mAh ಬ್ಯಾಟರಿ ಮತ್ತು 90W ವೇಗದ ಚಾರ್ಜಿಂಗ್, ಸ್ಮಾರ್ಟ್ ಎಐ ವೈಶಿಷ್ಟ್ಯಗಳು ಲಭ್ಯವಿರಲಿವೆ.

ಭಾರತದಲ್ಲಿ ವಿವೋ V50e ಬಿಡುಗಡೆ ದಿನಾಂಕ
ಮೊದಲೇ ಹೇಳಿದಂತೆ, ವಿವೋ ಏಪ್ರಿಲ್ 10 ರಂದು ಬಿಡುಗಡೆ ಸಮಾರಂಭ ಆಯೋಜಿಸಿದೆ. ಈ ಈವೆಂಟ್‌ನಲ್ಲಿ ವಿವೋ V50e 5G ಫೋನ್ ಅಧಿಕೃತವಾಗಿ ಭಾರತದಲ್ಲಿ ಲಾಂಚ್ ಆಗಲಿದೆ. ಈ ಬಿಡುಗಡೆ ಕಾರ್ಯಕ್ರಮವು ಏಪ್ರಿಲ್ 10 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದೆ. ಇದನ್ನು ಕಂಪನಿಯ ವೆಬ್‌ಸೈಟ್ ಮತ್ತು ವಿವೋ ಇಂಡಿಯಾದ ಎಲ್ಲಾ ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ನೇರಪ್ರಸಾರ ವೀಕ್ಷಿಸಬಹುದು. ಇದೇ ದಿನ ಈ ವಿವೋ ಫೋನಿನ ಬೆಲೆ ಮತ್ತು ಮಾರಾಟ ದಿನಾಂಕದ ಮಾಹಿತಿಯನ್ನು ತಿಳಿಸಲಾಗುವುದು. ಈ ಫೋನಿನ ನಿರೀಕ್ಷಿತ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯಲು ಮುಂದೆ ಓದಿ.
ವಿವೋ V50e ಬೆಲೆ (ಸೋರಿಕೆ)
8GB RAM + 128GB ಸ್ಟೋರೇಜ್ ಬೆಲೆ = 28,999 ರೂ.
8GB RAM + 256GB ಸ್ಟೋರೇಜ್ ಬೆಲೆ = 30,999 ರೂ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿವೋ V50e ಮೊಬೈಲ್‌ನ ಬೆಲೆಯನ್ನು ಹಂಚಿಕೊಳ್ಳಲಾಗದೆ. ಈ ವಿವೋ 5G ಫೋನ್ ಭಾರತದಲ್ಲಿ 8GB RAM ನೊಂದಿಗೆ ಬಿಡುಗಡೆಯಾಗಲಿದೆ. ಈ ಫೋನಿನ 128GB ಸ್ಟೋರೇಜ್ ರೂಪಾಂತರದ ಬೆಲೆ 28,999 ರೂ. ಮತ್ತು 256GB ಸ್ಟೋರೇಜ್ ವೇರಿಯಂಟ್ 30,999 ರೂ.ಗೆ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಈ ವಿವೋ V50e ಮೊಬೈಲ್‌ನ ಬೆಲೆ ಆಫರ್‌ಗಳನ್ನು ಒಳಗೊಂಡಿದೆಯೇ ಅಥವಾ ಇಲ್ಲವೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಅಧಿಕೃತ ಬೆಲೆ ತಿಳಿಯಲು ನೀವು, ಏಪ್ರಿಲ್ 10 ರವರೆಗೆ ಕಾಯಬೇಕಿದೆ.
ವಿವೋ V50e ಫೋನಿನ ವೈಶಿಷ್ಟ್ಯಗಳು
ವಿವೋ V50e ಡಿಸ್ಪ್ಲೇ
ವಿವೋ V50e ಸ್ಮಾರ್ಟ್‌ಫೋನ್ 6.77 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್ಪ್ಲೇ ಹೊಂದಿರುತ್ತದೆ. ಇದು 120Hz ರಿಫ್ರೆಶ್ ದರದ ಬೆಂಬಲ ಮತ್ತು 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲದೊಂದಿಗೆ ಬರುತ್ತದೆ. ಈ ಫೋನಿನ ಡಿಸ್ಪ್ಲೇ ಡೈಮಂಡ್ ಶೀಲ್ಡ್ ಗ್ಲಾಸ್ ರಕ್ಷಣೆ ಪಡೆದಿದೆ. ಇದು SGS ಫೈವ್ ಸ್ಟಾರ್ ಡ್ರಾಪ್ ರೆಸಿಸ್ಟೆನ್ಸ್ ಪ್ರಮಾಣೀಕರಣದೊಂದಿಗೆ ಬರಲಿದೆ.
ವಿವೋ V50e ಪ್ರೊಸೆಸರ್
ವಿವೋ V50e ಫೋನ್ ಮೀಡಿಯಾ ಟೆಕ್‌ನ ಡೈಮೆನ್ಸಿಟಿ 7300 ಪ್ರೊಸೆಸರ್ ಹೊಂದಿರುವ ಸಾಧ್ಯತೆಯಿದೆ. ಇದು ಉತ್ತಮ ಕಾರ್ಯಕ್ಷಮತೆಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಈ ಫೋನ್ 8GB RAM + 8GB ವರ್ಚುವಲ್ RAM ಹೊಂದಿರುತ್ತದೆ.

ವಿವೋ V50e ಕ್ಯಾಮೆರಾ
ವಿವೋ V50e ಮೊಬೈಲ್ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಹೊಂದಿರಲಿದೆ. ಇದು ಅಲ್ಟ್ರಾವೈಡ್ ಕ್ಯಾಮೆರಾ ಬೆಂಬಲದೊಂದಿಗೆ ಬರುತ್ತದೆ. ವಿಶೇಷವೆಂದರೆ 4K ವಿಡಿಯೋ ರೆಕಾರ್ಡಿಂಗ್ ಆಯ್ಕೆಯು ಫೋನಿನ ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾಗಳಲ್ಲಿ ಲಭ್ಯವಿರುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಐ ಆಟೋಫೋಕಸ್ ಸೆಲ್ಫಿ ಕ್ಯಾಮೆರಾ ಇರುತ್ತದೆ.
ವಿವೋ V50e ಬ್ಯಾಟರಿ
ವಿವೋ V50e ಸ್ಮಾರ್ಟ್‌ಫೋನ್ ದೊಡ್ಡ ಬ್ಯಾಟರಿಯೊಂದಿಗೆ ಬರುತ್ತದೆ. ಈ ಫೋನಿನಲ್ಲಿ ಕಂಪನಿಯು 5600mAh ಸಾಮರ್ಥ್ಯದ ಬ್ಯಾಟರಿ ಅಳವಡಿಸಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 90W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ. ಕೆಲವೇ ನಿಮಿಷಗಳಲ್ಲಿ ಈ ಫೋನನ್ನು ಚಾರ್ಜ್ ಮಾಡಬಹುದು.
ಇತರೆ ವೈಶಿಷ್ಟ್ಯಗಳು
ವಿವೋ V50e ಮೊಬೈಲ್ ಅಂಡರ್ ವಾಟರ್ ಫೋಟೋಗ್ರಫಿಯನ್ನು ಸಹ ಬೆಂಬಲಿಸುತ್ತದೆ. ಇದು ಸ್ಮಾರ್ಟ್ ಎಐ (AI) ವೈಶಿಷ್ಟ್ಯಗಳನ್ನು ಹೊಂದಿದೆ. ಎಐ ಟ್ರಾನ್ಸ್‌ಸ್ಕ್ರಿಪ್ಟ್ ಅಸಿಸ್ಟ್, ವಿವೋ ಲೈವ್ ಕಾಲ್ ಟ್ರಾನ್ಸ್‌ಲೇಷನ್, ಸರ್ಕಲ್ ಟು ಸರ್ಚ್ ಸೇರಿದಂತೆ ಹಲವು ಉತ್ತಮ ಎಐ ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ. ಈ ಫೋನ್ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP68 ಮತ್ತು IP69 ರೇಟಿಂಗ್‌ಗಳನ್ನು ಪಡೆದಿದೆ.

ಭಾರತದಲ್ಲಿ ವಿವೋ V50 ಫೋನಿನ ಬೆಲೆ
ವಿವೋ V50 5G ಫೋನ್ ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ. ಈ ಫೋನಿನ 8GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಮಾದರಿಯನ್ನು 34,999 ರೂ.ಗೆ ಖರೀದಿಸಬಹುದು. 256GB ಸ್ಟೋರೇಜ್ ಹೊಂದಿರುವ ಮೊಬೈಲ್ ಅನ್ನು 36,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು 12GB RAM + 512GB ಸ್ಟೋರೇಜ್ ವೇರಿಯಂಟ್ ಹೊಂದಿರುವ ಮೊಬೈಲ್ ಬೆಲೆ 40,999 ರೂ. ಆಗಿದೆ. ಈ ವಿವೋ V50 5G ಫೋನ್ ರೋಸ್ ರೆಡ್, ಸ್ಟಾರಿ ಬ್ಲೂ ಮತ್ತು ಟೈಟಾನಿಯಂ ಗ್ರೇ ಬಣ್ಣಗಳ ಆಯ್ಕೆಯಲ್ಲಿ ಮಾರಾಟವಾಗುತ್ತಿದೆ.
ವಿವೋ V50 ವೈಶಿಷ್ಟ್ಯಗಳು
ವಿವೋ V50 5G ಫೋನ್ 6.77 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 2,392 × 1,080 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲ ಪಡೆದಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ತಂತ್ರಜ್ಞಾನ ಸಹ ಒಳಗೊಂಡಿದೆ. ಈ ವಿವೋ 5G ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜೆನ್ 3 ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ Funtouch ಓಎಸ್ 15 ಜೊತೆಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 8GB RAM ಮತ್ತು 12GB RAM ಹೊಂದಿದೆ. ಇದಕ್ಕೆ ಪೂರಕವಾಗಿ 256GB ಸ್ಟೋರೇಜ್ ಆಯ್ಕೆ ಲಭ್ಯವಿದೆ.
ವಿವೋ V50 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ ಔರಾ ಲೈಟ್ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 50 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಸಹ ಹೊಂದಿದೆ. ಈ ಮೊಬೈಲ್ 6000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 90W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಫೋನ್ ಧೂಳು ಮತ್ತು ನೀರಿನಿಂದ ರಕ್ಷಣೆಗೆ IP68 + IP69 ರೇಟಿಂಗ್ ಅನ್ನು ಪಡೆದಿದೆ.


Click it and Unblock the Notifications








