Home
ಮೊಬೈಲ್

Vivo V50e: 50MP + 50MP ಕ್ಯಾಮೆರಾಗಳು.. 5600mAh ಬ್ಯಾಟರಿ.. ಬೆಲೆ, ಲಾಂಚ್ ಯಾವಾಗ?

ವಿವೋ ತನ್ನ ಹೊಸ ಮೊಬೈಲ್ ಬಿಡುಗಡೆಯನ್ನು ಘೋಷಿಸಿದೆ. ಇದನ್ನು ವಿವೋ V50 ಸರಣಿಯ ಅಡಿಯಲ್ಲಿ ಬಿಡುಗಡೆ ಮಾಡಲಾಗುವುದು. ಹೌದು, ಈ ಹೊಸ ಸ್ಮಾರ್ಟ್‌ಫೋನ್ ಭಾರತದಲ್ಲಿ ವಿವೋ V50e (Vivo V50e) ಹೆಸರಿನಲ್ಲಿ ಲಾಂಚ್ ಆಗಲಿದೆ. ಈ ಫೋನ್ ಕಳೆದ ವರ್ಷದ ಬಿಡುಗಡೆಯಾಗಿದ್ದ ವಿವೋ V40e ಉತ್ತರಾಧಿಕಾರಿಯಾಗಿ ಬರಲಿದೆ. ಈ ಬಾರಿ ಕಂಪನಿಯು ವಿನ್ಯಾಸ ಮತ್ತು ವೈಶಿಷ್ಟ್ಯಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ಈ ಮೊಬೈಲ್ ಮಧ್ಯಮ ಶ್ರೇಣಿಯ ವಿಭಾಗದಲ್ಲಿ ಇನ್ನಷ್ಟು ಶಕ್ತಿಶಾಲಿ ಆಯ್ಕೆಯಾಗಲಿದೆ. ಬನ್ನಿ, ಈ ಫೋನ್ ಯಾವೆಲ್ಲಾ ವಿಶೇಷತೆಗಳನ್ನು ಹೊಂದಿದೆ ತಿಳಿಯೋಣ.

ವಿವೋ V50e ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್ ಹೊಂದಿರುತ್ತದೆ. ಈ ಫೋನಿನಲ್ಲಿ 50MP ಐ ಆಟೋಫೋಕಸ್ ಸೆಲ್ಫಿ ಕ್ಯಾಮೆರಾ ಮತ್ತು 50MP ಸೋನಿ ಮುಖ್ಯ ಕ್ಯಾಮೆರಾ ಇರುತ್ತದೆ. ಈ ಮೊಬೈಲ್ 6.77 ಇಂಚಿನ ಡಿಸ್ಪ್ಲೇಯನ್ನು ಹೊಂದಿರಲಿದೆ. ಈ ಫೋನಿನಲ್ಲಿ 5600mAh ಬ್ಯಾಟರಿ ಮತ್ತು 90W ವೇಗದ ಚಾರ್ಜಿಂಗ್ ಅಳವಡಿಸಲಾಗಿದೆ. ಇದಲ್ಲದೆ ಸ್ಮಾರ್ಟ್ ಎಐ (AI) ವೈಶಿಷ್ಟ್ಯಗಳು ಲಭ್ಯವಿರುತ್ತವೆ. ಮಾಹಿತಿಯ ಪ್ರಕಾರ, ಬಿಡುಗಡೆಯ ನಂತರ ವಿವೋ V50e ಮೊಬೈಲ್ ಅಮೆಜಾನ್, ವಿವೋ ಇಂಡಿಯಾದ ಆನ್‌ಲೈನ್ ಸ್ಟೋರ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಈ ಫೋನಿನ ಇನ್ನಿತರ ವಿಶೇಷತೆಗಳನ್ನು ತಿಳಿಯಲು ಮುಂದೆ ಓದಿ.

Vivo V50e: 50MP + 50MP ಕ್ಯಾಮೆರಾಗಳು.. 5600mAh ಬ್ಯಾಟರಿ.. ಲಾಂಚ್ ಯಾವಾಗ?

ವಿವೋ V50e ವಿನ್ಯಾಸ ಮತ್ತು ಬಣ್ಣಗಳು

ವಿವೋ V50e ಸ್ಮಾರ್ಟ್‌ಫೋನ್ ಎರಡು ಅದ್ಭುತ ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ. ಇದು ಸಫೈರ್ ಬ್ಲೂ ಮತ್ತು ಪರ್ಲ್ ವೈಟ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಟೀಸರ್ ಪ್ರಕಾರ ಫೋನಿನ ಸಫೈರ್ ಬ್ಲೂ ರೂಪಾಂತರವು ನೀಲಿ ಮದರ್ ಆಫ್ ಪರ್ಲ್‌ನೊಂದಿಗೆ ಬರುತ್ತದೆ. ಆದರೆ, ಲಿಕ್ವಿಡ್ ಶಿಮ್ಮರ್ ಎಫೆಕ್ಟ್ ಪರ್ಲ್ ವೈಟ್ ಬಣ್ಣದಲ್ಲಿ ಲಭ್ಯವಿರುತ್ತದೆ. ಈ ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು ರಿಂಗ್ ಎಲ್‌ಇಡಿ ಲೈಟ್ ಫ್ಲ್ಯಾಷ್ ಅನ್ನು ಹೊಂದಿದೆ. ಮುಂಭಾಗದಲ್ಲಿ ಪಂಚ್ ಹೋಲ್ ನಾಚ್ ಮತ್ತು ಕರ್ವ್ಡ್ ಕರ್ವ್ ಡಿಸ್ಪ್ಲೇಯನ್ನು ಅಳವಡಿಸಲಾಗಿದೆ.

ವಿವೋ V50e ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ವಿವೋ V50e ಫೋನ್ 6.77 ಇಂಚಿನ ಫುಲ್ ಎಚ್‌ಡಿ ಪ್ಲಸ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಇದು 120Hz ರಿಫ್ರೆಶ್ ದರದ ಬೆಂಬಲ ಮತ್ತು 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲದೊಂದಿಗೆ ಬರುತ್ತದೆ. ಈ ಫೋನಿನ ಡಿಸ್ಪ್ಲೇ ಡೈಮಂಡ್ ಶೀಲ್ಡ್ ಗ್ಲಾಸ್ ರಕ್ಷಣೆ ಪಡೆದಿದೆ. ಇದು SGS ಫೈವ್ ಸ್ಟಾರ್ ಡ್ರಾಪ್ ರೆಸಿಸ್ಟೆನ್ಸ್ ಪ್ರಮಾಣೀಕರಣದೊಂದಿಗೆ ಬರಲಿದೆ.

ಪ್ರೊಸೆಸರ್ ಸಾಮರ್ಥ್ಯ

ವಿವೋ V50e ಮೊಬೈಲ್ ಮೀಡಿಯಾ ಟೆಕ್‌ನ ಡೈಮೆನ್ಸಿಟಿ 7300 ಪ್ರೊಸೆಸರ್ ಹೊಂದಿರುವ ಸಾಧ್ಯತೆಯಿದೆ. ಇದು ಉತ್ತಮ ಕಾರ್ಯಕ್ಷಮತೆಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ, ಈ ಫೋನ್ 8GB RAM + 8GB ವರ್ಚುವಲ್ RAM ಹೊಂದಿರುತ್ತದೆ. ಇದು ಬಹುಕಾರ್ಯಕಕ್ಕೆ ಮತ್ತಷ್ಟು ಸಹಕಾರಿಯಾಗಿದೆ.

Vivo V50e: 50MP + 50MP ಕ್ಯಾಮೆರಾಗಳು.. 5600mAh ಬ್ಯಾಟರಿ.. ಲಾಂಚ್ ಯಾವಾಗ?

ಕ್ಯಾಮೆರಾ ಸೆಟಪ್

ಫೋಟೋಗ್ರಫಿ ಪ್ರಿಯರಿಗೆ ವಿವೋ V50e ಸ್ಮಾರ್ಟ್‌ಫೋನ್ ಉತ್ತಮ ಆಯ್ಕೆಯಾಗಲಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಐ ಆಟೋಫೋಕಸ್ ಸೆಲ್ಫಿ ಕ್ಯಾಮೆರಾ ಇರುತ್ತದೆ. ಹಾಗೆಯೇ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾವನ್ನು ಹೊಂದಿರಲಿದೆ. ಇದು ಅಲ್ಟ್ರಾವೈಡ್ ಕ್ಯಾಮೆರಾ ಬೆಂಬಲದೊಂದಿಗೆ ಬರುತ್ತದೆ. ವಿಶೇಷವೆಂದರೆ 4K ವಿಡಿಯೋ ರೆಕಾರ್ಡಿಂಗ್ ಆಯ್ಕೆಯು ಫೋನಿನ ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾಗಳಲ್ಲಿ ಲಭ್ಯವಿರುತ್ತದೆ.

ಶಕ್ತಿಶಾಲಿ ಬ್ಯಾಟರಿ

ವರದಿಗಳ ಪ್ರಕಾರ, ವಿವೋ V50e ಫೋನ್ ದೊಡ್ಡ ಬ್ಯಾಟರಿಯೊಂದಿಗೆ ಬರುತ್ತದೆ. ಇದರಲ್ಲಿ 5600mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗುವುದು. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 90W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ. ನೀವು ಕೆಲವೇ ನಿಮಿಷಗಳಲ್ಲಿ ಫೋನನ್ನು ಚಾರ್ಜ್ ಮಾಡಬಹುದು.

ಇತರೆ ವೈಶಿಷ್ಟ್ಯಗಳು

ವಿವೋ V50e ಮೊಬೈಲ್ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP68 ಮತ್ತು IP69 ರೇಟಿಂಗ್‌ಗಳನ್ನು ಪಡೆದಿದೆ. ಇದಲ್ಲದೆ, ಈ ಮೊಬೈಲ್ ಅಂಡರ್ ವಾಟರ್ ಫೋಟೋಗ್ರಫಿಯನ್ನು ಸಹ ಬೆಂಬಲಿಸುತ್ತದೆ. ಇದು ಸ್ಮಾರ್ಟ್ ಎಐ (AI) ವೈಶಿಷ್ಟ್ಯಗಳನ್ನು ಹೊಂದಿದೆ. ಎಐ ಟ್ರಾನ್ಸ್‌ಸ್ಕ್ರಿಪ್ಟ್ ಅಸಿಸ್ಟ್, ವಿವೋ ಲೈವ್ ಕಾಲ್ ಟ್ರಾನ್ಸ್‌ಲೇಷನ್, ಸರ್ಕಲ್ ಟು ಸರ್ಚ್ ಸೇರಿದಂತೆ ಹಲವು ಉತ್ತಮ ಎಐ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.

Best Mobiles in India

English summary
Vivo V50e with 50MP Front and Rear Cameras, IP69 Rating Teased ahead of India launch: check details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+