Home
ಮೊಬೈಲ್

ಧೂಳೆಬ್ಬಿಸಲು ಬಂತು Vivo V50e ಫೋನ್; 50MP + 50MP ಕ್ಯಾಮೆರಾಗಳು.. ಬೆಲೆ ಎಷ್ಟು? ಸೇಲ್ ಯಾವಾಗ?

ವಿವೋ ಕಂಪನಿಯು ಭಾರತದಲ್ಲಿ ಇಂದು ತನ್ನ ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಮೊಬೈಲ್‌ನಲ್ಲಿ ಫೋಟೋಗ್ರಫಿ ಮಾಡುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಹೌದು, ಮೊಬೈಲ್ ಪ್ರಿಯರು ಕಾತುರದಿಂದ ಎದುರು ನೋಡುತ್ತಿದ್ದ ವಿವೋ V50e (Vivo V50e) ಅಧಿಕೃತವಾಗಿ ದೇಶೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಮೊಬೈಲ್‌ನ ಕ್ಯಾಮೆರಾ ಮಾತ್ರ ವಿಶೇಷವಲ್ಲ, RAM ಮತ್ತು ಬ್ಯಾಟರಿಯು ಸಹ ಗಮನ ಸೆಳೆದಿದೆ. ಬನ್ನಿ, ಈ ಹೊಸ ವಿವೋ 5G ಫೋನಿನ ಬೆಲೆ, ಲಭ್ಯತೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ವಿವೋ ಕಳೆದ ಫೆಬ್ರವರಿಯಲ್ಲಿ ವಿವೋ V50 (Vivo V50) ಅನ್ನು ಪರಿಚಯಿಸಿತ್ತು. ಇದೇ ಸರಣಿಯಲ್ಲಿ ವಿವೋ V50e ಅನ್ನು ಬಿಡುಗಡೆ ಮಾಡಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್ ಹೊಂದಿದೆ. ಈ ಮೊಬೈಲ್ 6.77 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಮತ್ತು 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 8GB RAM + 256GB ಸ್ಟೋರೇಜ್, 5600mAh ಬ್ಯಾಟರಿ ಮತ್ತು 90W ವೇಗದ ಚಾರ್ಜಿಂಗ್ ಮತ್ತು ಸ್ಮಾರ್ಟ್ ಎಐ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಿದೆ. ಈ ಫೋನಿನ ಲಾಂಚ್ ಆಫರ್ ಮತ್ತು ಮಾರಾಟದ ವಿವರಗಳನ್ನು ತಿಳಿಯಲು ಮುಂದೆ ಓದಿ.

Vivo V50e ಬಿಡುಗಡೆ; 50MP + 50MP ಕ್ಯಾಮೆರಾಗಳು, ಬೆಲೆ ಎಷ್ಟು? ಸೇಲ್ ಯಾವಾಗ?

ವಿವೋ V50e 5G ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ವಿವೋ V50e 5G ಮೊಬೈಲ್ 6.77 ಇಂಚಿನ ಫುಲ್ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು ಪಂಚ್ ಹೋಲ್ ಶೈಲಿಯ ಅಮೋಲೆಡ್ ಸ್ಕ್ರೀನ್ ಆಗಿದೆ. ಈ ಡಿಸ್ಪ್ಲೇಯು 2392 × 1080 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬಿಡುಗಡೆಯಾಗಿದೆ. ಇದರೊಂದಿಗೆ 2160Hz PW ಡಿಮ್ಮಿಂಗ್, 1800 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಮತ್ತು 120Hz ರಿಫ್ರೆಶ್ ದರದ ಬೆಂಬಲ ಹೊಂದಿದೆ. ಈ ಫೋನಿನ ಡಿಸ್ಪ್ಲೇ ಡೈಮಂಡ್ ಶೀಲ್ಡ್ ಗ್ಲಾಸ್ ರಕ್ಷಣೆ ಪಡೆದಿದೆ. ಈ ಮೊಬೈಲ್ ಇನ್ ಡಿಸ್ಪ್ಲೇ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸೆನ್ಸರ್ ತಂತ್ರಜ್ಞಾನವನ್ನು ಸಹ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ವಿವೋ V50e ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್‌ನ ಡೈಮೆನ್ಸಿಟಿ 7300 ಆಕ್ಟಾಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಿದೆ. ಇದು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ನಿರ್ಮಿಸಲಾದ ಸಿಪಿಯು ಆಗಿದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ Funtouch OS 15 ಜೊತೆಗೆ ಕೆಲಸ ಮಾಡುತ್ತದೆ. ಗ್ರಾಫಿಕ್ಸ್‌ಗಾಗಿ, ಈ ಮೊಬೈಲ್ಮಾ ಲಿ G615 ಜಿಪಿಯು ಹೊಂದಿದೆ.

RAM ಮತ್ತು ಸ್ಟೋರೇಜ್

ವಿವೋ V50e 5G ಫೋನ್ 8GB RAM + 8GB ವರ್ಚುವಲ್ RAM ಹೊಂದಿದೆ. ಇದು 8GB ವರ್ಚುವಲ್ RAM ಅನ್ನು 8GB ಭೌತಿಕ RAMಗೆ ಸೇರಿಸುವ ಮೂಲಕ 16GB RAM ಶಕ್ತಿಯನ್ನು ನೀಡುತ್ತದೆ. ನೀವು 128GB ಸ್ಟೋರೇಜ್ ಮತ್ತು 256GB ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಬಹುದು. ಈ ಫೋನ್ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP68 ಮತ್ತು IP69 ರೇಟಿಂಗ್‌ಗಳನ್ನು ಪಡೆದಿದೆ.

ಕ್ಯಾಮೆರಾ ಸೆಟಪ್

ವಿವೋ V50e ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 8 ಮೆಗಾಪಿಕ್ಸೆಲ್ ವೈಡ್ ಆಂಗಲ್ ಲೆನ್ಸ್ ಇದೆ. ಈ ಫೋನಿನಲ್ಲಿ ಎಐ (AI) ಸ್ಟುಡಿಯೋ ಲೈಟ್ ಪೋರ್ಟ್ರೇಟ್ 2.0 ಔರಾ ಲೈಟ್ ವೈಶಿಷ್ಟ್ಯ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ. ವಿಶೇಷವೆಂದರೆ, ಈ ಫೋನಿನ ಮುಂಭಾಗದ ಕ್ಯಾಮೆರಾಗಳಲ್ಲಿ 4K ವಿಡಿಯೋ ರೆಕಾರ್ಡಿಂಗ್ ಮಾಡಬಹುದು.

ಬ್ಯಾಟರಿ ಮತ್ತು ಚಾರ್ಜಿಂಗ್

ವಿವೋ V50e ಸ್ಮಾರ್ಟ್‌ಫೋನ್ 5600mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 90W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ. ಇದು ಕೇವಲ 42 ನಿಮಿಷಗಳಲ್ಲಿ ಶೇ.20 ರಿಂದ ಶೇ.100 ರಷ್ಟು ಸಂಪೂರ್ಣ ಚಾರ್ಜ್ ಆಗಿಲಿದೆ. ಈ ಮೊಬೈಲ್ ಅಂಡರ್ ವಾಟರ್ ಫೋಟೋಗ್ರಫಿ ಹೊಂದಿದೆ. ಇದು ಸ್ಮಾರ್ಟ್ ಎಐ (AI) ವೈಶಿಷ್ಟ್ಯಗಳನ್ನು ಹೊಂದಿದೆ. ಎಐ ಟ್ರಾನ್ಸ್‌ಸ್ಕ್ರಿಪ್ಟ್ ಅಸಿಸ್ಟ್, ವಿವೋ ಲೈವ್ ಕಾಲ್ ಟ್ರಾನ್ಸ್‌ಲೇಷನ್, ಸರ್ಕಲ್ ಟು ಸರ್ಚ್ ಸೇರಿದಂತೆ ಹಲವು ಉತ್ತಮ ಎಐ ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ.

Vivo V50e ಬಿಡುಗಡೆ; 50MP + 50MP ಕ್ಯಾಮೆರಾಗಳು, ಬೆಲೆ ಎಷ್ಟು? ಸೇಲ್ ಯಾವಾಗ?

ವಿವೋ V50e 5G ಬೆಲೆ ಮತ್ತು ಲಭ್ಯತೆ

8GB RAM + 128GB ಸ್ಟೋರೇಜ್ ಬೆಲೆ = 28,999 ರೂ.
8GB RAM + 256GB ಸ್ಟೋರೇಜ್ ಬೆಲೆ = 30,999 ರೂ.

ವಿವೋ V50e 5G ಫೋನ್ 8GB RAM ನೊಂದಿಗೆ ಬಿಡುಗಡೆಯಾಗಿದೆ. ಇದನ್ನು 128GB ಸ್ಟೋರೇಜ್‌ನೊಂದಿಗೆ ಮಾರಾಟ ಮಾಡಲಾಗುತ್ತದೆ. ಈ ಫೊನಿನ ಆರಂಭಿಕ ಬೆಲೆ 28,999 ರೂ. ಆಗಿದೆ. ಟಾಪ್ ವೇರಿಯಂಟ್ 30,999 ರೂ.ಗೆ ಬಿಡುಗಡೆಯಾಗಿದೆ. ಈ ಮೊಬೈಲ್ ನೀಲಿ ಮತ್ತು ಪರ್ಲ್ ವೈಟ್ ಬಣ್ಣಗಳಲ್ಲಿ ಬರುತ್ತದೆ. ಇದೇ ಏಪ್ರಿಲ್ 17 ರಿಂದ ಈ ವಿವೋ V50e 5G ಫೋನಿನ ಮೊದಲ ಮಾರಾಟ ಪ್ರಾರಂಭವಾಗಲಿದೆ.

ಹೆಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಎಸ್‌ಬಿಐ ಕಾರ್ಡ್ ವಹಿವಾಟುಗಳಿಗೆ ಶೇ.10 ರಷ್ಟು ತ್ವರಿತ ರಿಯಾಯಿತಿ ಲಭ್ಯವಿದೆ. ಹಾಗೆಯೇ ಶೇ.10 ರಷ್ಟು ಎಕ್ಸ್‌ಚೇಂಜ್ ಬೋನಸ್ ನೀಡಲಾಗುವುದು. ಜೊತೆಗೆ 6 ತಿಂಗಳ ನೋ ಕಾಸ್ಟ್ ಇಎಂಐ ಆಯ್ಕೆ ಲಭ್ಯವಿದೆ. ಇನ್ನು ಈ ವಿವೋ V50e ಖರೀದಿಯ ಮೇಲೆ ಕೇವಲ 1,499 ರೂ.ಗಳ ವಿಶೇಷ ಬಂಡಲ್ ಬೆಲೆಯಲ್ಲಿ vivo TWS ಇಯರ್‌ಬಡ್‌ಗಳನ್ನು ಪಡೆಯಬಹುದು.

Best Mobiles in India

English summary
Vivo V50e With MediaTek Dimensity 7300 SoC And 50MP Selfie Camera Launched In India: Price, Specs And More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+