Home
ಮೊಬೈಲ್

ಭಾರತದಲ್ಲಿ Vivo V60 5G ಬಿಡುಗಡೆ: ಹೈ-ಎಂಡ್ ಪ್ರೊಸೆಸರ್, ಸೂಪರ್ ಕ್ಯಾಮೆರಾ!

ಭಾರತೀಯ ಸ್ಮಾರ್ಟ್‌ಫೋನ್ ಪ್ರಿಯರು ಬಹುನಿರೀಕ್ಷೆಯಿಂದ ಎದುರುನೋಡುತ್ತಿದ್ದ Vivo V60 ಸ್ಮಾರ್ಟ್‌ಫೋನ್ ಅನ್ನು ಇಂದು (ಆಗಸ್ಟ್ 12) ದೇಶದ ಮಾರುಕಟ್ಟೆಗೆ ಭರ್ಜರಿಯಾಗಿ ಬಿಡುಗಡೆಳಿಸಲಾಗಿದೆ. ಕಳೆದ ಫೆಬ್ರವರಿಯಲ್ಲಿ ಪರಿಚಯಿಸಲಾದ Vivo V50 ಫೋನಿನ ಉತ್ತರಾಧಿಕಾರಿಯಾಗಿ, ಈ ಹೊಸ Vivo V60 ಫೋನ್ ಆಕರ್ಷಕ ವಿನ್ಯಾಸ ಮತ್ತು ಶಕ್ತಿಶಾಲಿ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಬಂದಿದೆ. 120Hz ರೇಟ್ ಸಾಮರ್ಥ್ಯದ 6.77-ಇಂಚಿನ Quad-curved AMOLED ಡಿಸ್‌ಪ್ಲೇ, Snapdragon 7 Gen 4 ಪ್ರೊಸೆಸರ್ ಸೇರಿದಂತೆ ಹೈ-ಎಂಡ್ ವೈಶಿಷ್ಟ್ಯಗಳನ್ನು ಕೈಗೆಟುಕುವ ಬೆಲೆಯಲ್ಲಿ ಹೊಂದಿರುವ ಈ ಸ್ಮಾರ್ಟ್‌ಫೋನ್ ಇದೇ ಆಗಸ್ಟ್ 19 ರಿಂದ ದೇಶದಲ್ಲಿ ಲಭ್ಯವಾಗಲಿದೆ. ಹಾಗಾದರೆ. ಹೊಸ Vivo V60 ಸ್ಮಾರ್ಟ್‌ಫೋನ್ ಹೇಗಿದೆ?, ಬೆಲೆಗಳು ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ ಬನ್ನಿ.

Vivo V60: ಪ್ರಮುಖ ವೈಶಿಷ್ಟ್ಯಗಳು
ಹೊಸ Vivo V60 ಸ್ಮಾರ್ಟ್‌ಫೋನ್ 6.77-ಇಂಚಿನ Quad-curved AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಇದು 1.5K (1,080x2,392 ಪಿಕ್ಸೆಲ್‌ಗಳು) ರೆಸಲ್ಯೂಶನ್ ಹೊಂದಿದೆ. ಈ ಡಿಸ್‌ಪ್ಲೇಯು 120Hz ವರೆಗೆ ರಿಫ್ರೆಶ್ ರೇಟ್ ಮತ್ತು 5,000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮಟ್ಟವನ್ನು ಬೆಂಬಲಿಸುತ್ತದೆ. ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ ಈ ಫೋನ್ IP68 ಮತ್ತು IP69 ರೇಟಿಂಗ್‌ಗಳನ್ನು ಪಡೆದಿದೆ. ಹಾಗೂ ಬಯೋಮೆಟ್ರಿಕ್ ಸುರಕ್ಷತೆಗಾಗಿ ಇದು ಇನ್-ಡಿಸ್‌ಪ್ಲೇ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿದೆ.

ಭಾರತದಲ್ಲಿ Vivo V60 5G ಬಿಡುಗಡೆ: ಹೈ-ಎಂಡ್ ಪ್ರೊಸೆಸರ್, ಸೂಪರ್ ಕ್ಯಾಮೆರಾ!

ಕಾರ್ಯಕ್ಷಮತೆಗಾಗಿ, ಈ Vivo V60 ಫೋನ್ 16GB ವರೆಗೆ LPDDR4x RAM ಮತ್ತು 512GB ವರೆಗೆ UFS 2.2 ಮೆಮೊರಿಯೊಂದಿಗೆ 4nm ಆಕ್ಟಾ-ಕೋರ್ Snapdragon 7 Gen 4 SoC ಪ್ರೊಸೆಸರ್ ಹೊಂದಿದೆ. ಇದರಲ್ಲಿ AI ಇಮೇಜ್ ಎಕ್ಸ್‌ಪಾಂಡರ್ ಮತ್ತು AI ಸ್ಮಾರ್ಟ್ ಕಾಲ್ ಅಸಿಸ್ಟೆಂಟ್ ಸೇರಿದಂತೆ ಹಲವಾರು AI ವೈಶಿಷ್ಟ್ಯಗಳನ್ನು ನೀಡಲಾಗಿದೆ.ಸಾಫ್ಟ್‌ವೇರ್ ವಿಭಾಗದಲ್ಲಿ, ಈ ಫೋನ್ Android 15 ಆಧಾರಿತ Funtouch OS 15 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ನಾಲ್ಕು ವರ್ಷಗಳ ಪ್ರಮುಖ OS ಅಪ್‌ಗ್ರೇಡ್‌ಗಳು ಮತ್ತು ಆರು ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆಯುವ ಭರವಸೆ ನೀಡಿದೆ.

ಕ್ಯಾಮೆರಾ ವಿಭಾಗದಲ್ಲಿ, ಈ Vivo V60 ಫೋನ್ ಹಿಂಭಾಗದಲ್ಲಿ ZEISS-ಬೆಂಬಲಿತ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 50-ಮೆಗಾಪಿಕ್ಸೆಲ್ Sony IMX766 ಪ್ರೈಮರಿ ಕ್ಯಾಮೆರಾ, 50-ಮೆಗಾಪಿಕ್ಸೆಲ್ Sony IMX882 ಟೆಲಿಫೋಟೋ ಲೆನ್ಸ್ ಮತ್ತು 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್-ಆಂಗಲ್ ಲೆನ್ಸ್ ಸೇರಿವೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಫೋನ್ 50-ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಹಿಂಭಾಗ ಮತ್ತು ಮುಂಭಾಗದ ಎರಡೂ ಕ್ಯಾಮೆರಾಗಳು 4K ವಿಡಿಯೋ ರೆಕಾರ್ಡಿಂಗ್‌ಗೆ ಬೆಂಬಲ ನೀಡುತ್ತವೆ.

ಭಾರತದಲ್ಲಿ Vivo V60 5G ಬಿಡುಗಡೆ: ಹೈ-ಎಂಡ್ ಪ್ರೊಸೆಸರ್, ಸೂಪರ್ ಕ್ಯಾಮೆರಾ!

ಬ್ಯಾಟರಿ ವಿಭಾಗದಲ್ಲಿ, ಈ ಫೋನ್ 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 6,500mAh ಬ್ಯಾಟರಿಯನ್ನು ಹೊಂದಿದೆ. ಸಂಪರ್ಕ ಆಯ್ಕೆಗಳಲ್ಲಿ Wi-Fi, Bluetooth 5.4, GPS, NFC ಮತ್ತು USB Type-C ಪೋರ್ಟ್ ಸೇರಿವೆ. ಇನ್ನು ಈ ಫೋನಿನ ಪ್ರಮುಖ ವಿಶೇಷತೆ ಎಂದರೆ, ಆವೃತ್ತಿಯನ್ನು ಅವಲಂಬಿಸಿ ಫೋನಿನ ತೂಕ ಮತ್ತು ದಪ್ಪವು ಬದಲಾಗುತ್ತದೆ. Mist Gray ಮಾದರಿಯು 7.53mm ದಪ್ಪ ಇದೆ ಮತ್ತು ಇದು 192g ತೂಗುತ್ತದೆ. Asphious Gold ಮತ್ತು Moonlight Blue ಮಾದರಿಗಳು ಕ್ರಮವಾಗಿ 7.65mm ಮತ್ತು 7.75mm ದಪ್ಪವನ್ನು ಹಾಗೂ 200g ಮತ್ತು 201g ತೂಗುತ್ತದೆ.

Vivo V60: ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Vivo V60 ಆರಂಭಿಕ ಆವೃತ್ತಿ 8GB RAM + 128GB ಮೆಮೊರಿ ಫೋನ್ ಬೆಲೆ 36,999 ರಿಂದ ಪ್ರಾರಂಭವಾಗುತ್ತದೆ. ಇತರ ಆವೃತ್ತಿಗಳ ಬೆಲೆಗಳು ಹೀಗಿವೆ: 8GB + 256GB (38,999), 12GB + 256GB (40,999), ಮತ್ತು 16GB + 512GB (45,999). ಇನ್ನು ಈ ಫೋನ್ ಆಗಸ್ಟ್ 19 ರಿಂದ ಮಾರಾಟಕ್ಕೆ ಲಭ್ಯವಿರುತ್ತದೆ ಮತ್ತು Asphious Gold, Mist Gray ಮತ್ತು Moonlight Blue ಮೂರು ಆಕರ್ಷಕ ಬಣ್ಣಗಳಲ್ಲಿ ದೊರೆಯುತ್ತದೆ. ಗ್ರಾಹಕರು Vivo India e-store, ಪ್ರಮುಖ ಇ-ಕಾಮರ್ಸ್ ವೆಬ್‌ಸೈಟ್‌ಗಳು ಮತ್ತು ಆಯ್ದ ಆಫ್‌ಲೈನ್ ಮಳಿಗೆಗಳಲ್ಲಿ ಫೋನ್ ಅನ್ನು ಖರೀದಿಸಬಹುದು.

Best Mobiles in India

English summary
Launched in India at ₹36,999, the Vivo V60 5G comes with Zeiss triple cameras, a massive 6500mAh battery, and the Snapdragon 7 Gen 4 processor, promising powerful performance and long-lasting battery life.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+