Vivo V60: ಭಾರತದಲ್ಲಿ ಬಿಡುಗಡೆ ದಿನಾಂಕ, ಬೆಲೆ ಮತ್ತು ಫೀಚರ್ಸ್ ಮಾಹಿತಿ ಲೀಕ್!
ಭಾರತದಲ್ಲಿ ಬಹುನಿರೀಕ್ಷಿತ Vivo V60 ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಸ್ಮಾರ್ಟ್‌ಫೋನ್ ಶಕ್ತಿಯು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 Gen 4 SoC ನಿಂದ ಕಾರ್ಯನಿರ್ವಹಿಸಲಿದೆ ಮತ್ತು 6,500mAh ಬ್ಯಾಟರಿ ಹೊಂದಿರಲಿದೆ ಎಂಬ ವದಂತಿಯ ಸುದ್ದಿಗಳು ಹೀಗಾಗಲೇ ಹೊರಬಿದ್ದಿದ್ದವು. ಇದೀಗ ಮುಂಬರುವ Vivo V60 ಸ್ಮಾರ್ಟ್‌ಫೋನ್‌ನ ಬೆಲೆ, ಲಭ್ಯತೆ ಮತ್ತು ಮತ್ತಷ್ಟು ಪ್ರಮುಖ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ಸೋರಿಕೆಯಾಗಿದೆ.! ಈ ಕುರಿತ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.
Vivo V60: ನಿರೀಕ್ಷಿತ ಬೆಲೆ ಮತ್ತು ಲಭ್ಯತೆ
ಸ್ಮಾರ್ಟ್‌ಪ್ರಿಕ್ಸ್ ವರದಿಯ ಪ್ರಕಾರ, Vivo V60 ಸ್ಮಾರ್ಟ್‌ಫೋನ್ ಭಾರತದಲ್ಲಿ ರೂ. 37,000 ರಿಂದ ರೂ. 40,000 ಬೆಲೆಯ ಶ್ರೇಣಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದೆ. ಇಷ್ಟೇ ಅಲ್ಲದೆ, ಈ Vivo V60 ಪೋನ್ ಮಿಸ್ಟ್ ಗ್ರೇ, ಮೂನ್‌ಲೈಟ್ ಬ್ಲೂಮತ್ತು ಆಸ್ಪಿಯಸ್ ಗೋಲ್ಡ್ ಮೂರು ಆಕರ್ಷಕ ಬಣ್ಣಗಳಲ್ಲಿ ಇದೇ ಆಗಸ್ಟ್ 12 ರಂದು ದೇಶದಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಯಲ್ಲಿ ಸೂಚಿಸಿದೆ. ಗಮನಿಸುವುದಾದರೆ, ಈ ಹಿಂದೆ Vivo V60 ಆಗಸ್ಟ್ 19 ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು.

Vivo V60: ನಿರೀಕ್ಷಿತ ವೈಶಿಷ್ಟ್ಯಗಳು ಮತ್ತು ವಿನ್ಯಾಸ
- ಹಲವಾರು ಸೋರಿಕೆಗಳ ಪ್ರಕಾರ, ಮುಂಬರುವ Vivo V60 ಸ್ಮಾರ್ಟ್‌ಫೋನ್ ಈ ಕೆಳಗಿನ ವೈಶಿಷ್ಟ್ಯಗಳನ್ನು ಹೊಂದಿರಬಹುದಾದ ಸಾಧ್ಯತೆ ಇದೆ.
- ಡಿಸ್ಪ್ಲೇ: Vivo V60 ಸ್ಮಾರ್ಟ್‌ಫೋನ್ 1.5K ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 1,300 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ 6.67-ಇಂಚಿನ ಫ್ಲಾಟ್ AMOLED ಡಿಸ್ಪ್ಲೇ ಹೊಂದಿರಬಹುದು.
- ಕ್ಯಾಮೆರಾ: Vivo V60 ZEISS-ಬ್ರಾಂಡೆಡ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರುವ ನಿರೀಕ್ಷೆಯಿದೆ. ಇದು 50-ಮೆಗಾಪಿಕ್ಸೆಲ್ ಪ್ರಾಥಮಿಕ ಶೂಟರ್, 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಮತ್ತು 50-ಮೆಗಾಪಿಕ್ಸೆಲ್ 3X ಪೆರಿಸ್ಕೋಪ್ ಟೆಲಿಫೋಟೋ ಸೆನ್ಸಾರ್ ಅನ್ನು ಒಳಗೊಂಡಿರುತ್ತದೆ. ಸೆಲ್ಫಿಗಳಿಗಾಗಿ, ಮುಂಭಾಗದಲ್ಲಿ 50-ಮೆಗಾಪಿಕ್ಸೆಲ್ ಕ್ಯಾಮೆರಾ ಇರಲಿದೆ ಎನ್ನಲಾಗಿದೆ.
- ಪ್ರೊಸೆಸರ್ ಮತ್ತು ಬ್ಯಾಟರಿ: ಹಿಂದಿನ ಸೋರಿಕೆಗಳ ಪ್ರಕಾರ, Vivo V60 ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 Gen 4 SoC ನಿಂದ ಕಾರ್ಯನಿರ್ವಹಿಸಲಿದೆ. ಇದು 6,500mAh ಬ್ಯಾಟರಿ ಪ್ಯಾಕ್‌ನೊಂದಿಗೆ ಜೋಡಿಯಾಗಲಿದೆ ಮತ್ತು 90W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿರುತ್ತದೆ.
- ಸಾಫ್ಟ್‌ವೇರ್: ಈ ಫೋನ್ ಆಂಡ್ರಾಯ್ಡ್ 16 ಆಧಾರಿತ ಫನ್‌ಟಚ್ ಓಎಸ್ ನಲ್ಲಿ ರನ್ ಆಗುತ್ತದೆ.
- ಹೆಚ್ಚುವರಿ ವೈಶಿಷ್ಟ್ಯಗಳು:, Vivo V60 ಫೋನ್ ಸ್ಟೀರಿಯೊ ಸ್ಪೀಕರ್‌ಗಳು, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ರೀಡರ್ ಮತ್ತು IP68 ಹಾಗೂ IP69 ನೀರು ಮತ್ತು ಧೂಳು ನಿರೋಧಕ ರೇಟಿಂಗ್‌ಗಳನ್ನು ಒಳಗೊಂಡಿರಬಹುದು
- ವಿನ್ಯಾಸ: ಇತ್ತೀಚಿಗಷ್ಟೇ Vivo V60 ರೆಂಡರ್‌ಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದವು. ಇದರಲ್ಲಿ ಫೋನ್ ಮಾತ್ರೆ ಆಕಾರದ ಹಿಂಭಾಗದ ಕ್ಯಾಮೆರಾ ಸೆಟಪ್ ಹೊಂದಿರುವುದನ್ನು ತೋರಿಸುತ್ತದೆ.
Vivo V50 ನೊಂದಿಗೆ ಹೋಲಿಕೆ ನೋಡುವುದಾದರೆ,
ಪ್ರಸ್ತುತ Vivo V50 ಸ್ಮಾರ್ಟ್‌ಫೋನ್ 6.77-ಇಂಚಿನ ಕ್ವಾಡ್-ಕರ್ವ್ಡ್ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು ಸ್ನಾಪ್‌ಡ್ರಾಗನ್ 7 Gen 3 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ ಮತ್ತು 6,000mAh ಬ್ಯಾಟರಿಯನ್ನು ಹೊಂದಿದೆ. Vivo V50 ಭಾರತದಲ್ಲಿ 8GB + 128GB ಆಯ್ಕೆಗೆ ರೂ. 34,999 ರ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಿತ್ತು. Vivo V60 ಅದರ ಹಿಂದಿನ ಮಾದರಿಗಿಂತ ಗಮನಾರ್ಹ ಅಪ್‌ಗ್ರೇಡ್‌ಗಳನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಮುಂಬರುವ Vivo V50 ಸ್ಮಾರ್ಟ್‌ಫೋನ್ ಕುರಿತು ನಿಮ್ಮ ನಿರೀಕ್ಷೆಗಳೇನು?. ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








