Home
ಮೊಬೈಲ್

Vivo V60 Lite 5G ಫೋನ್ ಬಿಡುಗಡೆ: ಭಾರತಕ್ಕೆ Vivo V60e ಆಗಿ ಬರುವ ಫೋನ್ ಇದೆನಾ?

ಜನಪ್ರಿಯ ಮೊಬೈಲ್ ಬ್ರ್ಯಾಂಡ್ Vivo ತನ್ನ ಮಧ್ಯವ ಶ್ರೇಣಿಯ ಹೊಸ ಸ್ಮಾರ್ಟ್‌ಫೋನ್ Vivo V60 Lite 5G ಅನ್ನು ತೈವಾನ್‌ನಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ ಅತ್ಯಾಧುನಿಕ ಫೀಚರ್‌ಗಳೊಂದಿಗೆ, ಬೃಹತ್ ಬ್ಯಾಟರಿ ಮತ್ತು ವೇಗದ ಚಾರ್ಜಿಂಗ್ ಸಾಮರ್ಥ್ಯದೊಂದಿಗೆ ಮಾರುಕಟ್ಟೆಗೆ ಪರಿಚಯಗೊಂಡಿದ್ದು, ಇದೇ ಫೋನ್ ಭಾರತದಲ್ಲಿ Vivo V60e ಎಂಬ ಹೆಸರಿನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಹಾಗಾದರೆ, ಹೊಸ Vivo V60 Lite 5G ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು ಯಾವುವು ಮತ್ತು ಬೆಲೆ ಎಷ್ಟು ಎಂಬುದನ್ನು ನೋಡೋಣ ಬನ್ನಿ.

Vivo V60 Lite 5G: ಬೆಲೆ ಮತ್ತು ಲಭ್ಯತೆ
ತೈವಾನ್‌ನಲ್ಲಿ Vivo V60 Lite 5G ಫೋನ್ ಅನ್ನು ಎರಡು ಆವೃತ್ತಿಗಳಲ್ಲಿ ಬಿಡುಗಡೆ ಮಾಡಲಾಗಿದೆ. 8GB RAM ಮತ್ತು 256GB ಸಂಗ್ರಹಣೆಯ ಮೂಲ ಮಾದರಿಗೆ TWD 12,990 (ಸುಮಾರು ₹38,000) ದರ ನಿಗದಿಪಡಿಸಲಾಗಿದೆ. ಮತ್ತೊಂದು, 12GB RAM ಮತ್ತು 256GB ಸಂಗ್ರಹಣೆಯ ಆವೃತ್ತಿಗೆ TWD 13,990 (ಸುಮಾರು ₹41,000) ಬೆಲೆ ಇದೆ.

Vivo V60 Lite 5G: ಪ್ರಮುಖ ವೈಶಿಷ್ಟ್ಯಗಳು
Vivo V60 Lite 5G ಫೋನ್ 6.77-ಇಂಚಿನ ಪೂರ್ಣ-HD+ (1,080x2,392 ಪಿಕ್ಸೆಲ್‌ಗಳು) AMOLED ಡಿಸ್ಪ್ಲೇಯನ್ನು ಹೊಂದಿದ್ದು, 120Hz ರಿಫ್ರೆಶ್ ರೇಟ್ ಬೆಂಬಲಿಸುತ್ತದೆ. ಇದರ ಸ್ಕ್ರೀನ್ ಟು ಬಾಡಿ ಅನುಪಾತ 94.20 ಪ್ರತಿಶತದಷ್ಟಿದ್ದುದೆ. ಫೋನ್‌ನ ಕಾರ್ಯಕ್ಷಮತೆಗಾಗಿ ಮೀಡಿಯಾ ಟೆಕ್ ಡೈಮೆನ್ಸಿಟಿ 7360 ಟರ್ಬೊ ಚಿಪ್‌ಸೆಟ್ ಬಳಸಲಾಗಿದ್ದು, ಇದು ದೈನಂದಿನ ಕಾರ್ಯಗಳು ಮತ್ತು ಗೇಮಿಂಗ್‌ಗೆ ಸೂಕ್ತವಾಗಿದೆ. ಈ ಫೋನ್ 12GB LPDDR4x RAM ಮತ್ತು 256GB UFS3.1 ಸಂಗ್ರಹಣೆಯೊಂದಿಗೆ ಲಭ್ಯವಿದೆ. ಇದರ RAM ಅನ್ನು 12GB ವರೆಗೆ ವಿಸ್ತರಿಸುವ ಆಯ್ಕೆಯೂ ಇದೆ.

Vivo V60 Lite 5G ಫೋನ್ ಬಿಡುಗಡೆ: ಭಾರತಕ್ಕೆ Vivo V60e ಆಗಿ ಬರುವ ಫೋನ್ ಇದೆನಾ?

ಕ್ಯಾಮೆರಾ ವಿಭಾಗದಲ್ಲಿ, Vivo V60 Lite 5G ಫೋನ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ, 50-ಮೆಗಾಪಿಕ್ಸೆಲ್ ಸೋನಿ IMX882 ಮುಖ್ಯ ಸಂವೇದಕ ಮತ್ತು 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಸೇರಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 32-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ನೀಡಲಾಗಿದೆ.ಈ ಫೋನ್ 6,500mAh ಬೃಹತ್ ಬ್ಯಾಟರಿ ಹೊಂದಿದ್ದು, 90W ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ. ಇದರಿಂದಾಗಿ ಕಡಿಮೆ ಸಮಯದಲ್ಲಿ ಬ್ಯಾಟರಿ ಚಾರ್ಜ್ ಆಗುತ್ತದೆ.

ಈ ಫೋನ್ ಒಂದೇ ಚಾರ್ಜ್‌ನಲ್ಲಿ 27.5 ಗಂಟೆಗಳ YouTube ಪ್ಲೇಬ್ಯಾಕ್ ಮತ್ತು 14 ಗಂಟೆಗಳ ನ್ಯಾವಿಗೇಶನ್ ಸಮಯವನ್ನು ಇದು ಒದಗಿಸುತ್ತದೆ ಎಂದು ಹೇಳಲಾಗಿದೆ. ಇತರೆ ವೈಶಿಷ್ಟ್ಯಗಳಲ್ಲಿ Vivo V60 Lite 5G ಫೋನ್ IP65-ರೇಟೆಡ್ ಬಿಲ್ಡ್ ಹೊಂದಿದ್ದು, ಇದು ನೀರು ಮತ್ತು ಧೂಳಿನಿಂದ ರಕ್ಷಣೆ ನೀಡುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ 5.4, NFC, Wi-Fi 6 ಮತ್ತು USB ಟೈಪ್-C ಪೋರ್ಟ್ ಸೇರಿವೆ. ಇದು ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳನ್ನು ಹೊಂದಿದ್ದು, ಉತ್ತಮ ಆಡಿಯೊ ಅನುಭವ ನೀಡುತ್ತದೆ. ಈ ಫೋನ್ 163.77x76.28x7.59mm ಅಳತೆ ಮತ್ತು 194g ತೂಗುತ್ತದೆ.

ಭಾರತದಲ್ಲಿ ಬಿಡುಗಡೆ ಯಾವಾಗ?
ಭಾರತದಲ್ಲಿ Vivo V60e ಆಗಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಆದಾಗ್ಯೂ, ವಿವೋ ಕಂಪನಿಯು ಈ ಕುರಿತು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆದರೆ, ತೈವಾನ್‌ನಲ್ಲಿ ಬಿಡುಗಡೆಯಾದ ಕೆಲವೇ ಸಮಯದಲ್ಲಿ ಇದು ಭಾರತದ ಮಾರುಕಟ್ಟೆಯನ್ನು ಪ್ರವೇಶಿಸುವ ನಿರೀಕ್ಷೆ ಇದೆ. ಈ ಫೋನ್‌ನ ಫೀಚರ್‌ಗಳು ಮತ್ತು ಬೆಲೆಯನ್ನು ಗಮನಿಸಿದರೆ, ಇದು ಭಾರತೀಯ ಗ್ರಾಹಕರಿಗೆ ಒಂದು ಉತ್ತಮ ಆಯ್ಕೆಯಾಗಲಿದೆ. ಇದು ಮಧ್ಯಮ ಬೆಲೆಯ ಶ್ರೇಣಿಯಲ್ಲಿ ಸ್ಪರ್ಧೆಯನ್ನು ಹೆಚ್ಚಿಸಬಹುದು. ಆದಾಗ್ಯೂ, Vivo V60e ಭಾರತಕ್ಕೆ ಬರುವ ದಿನಾಂಕದ ಬಗ್ಗೆ ಯಾವುದೇ ಖಚಿತ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ನಾವು Vivo ಕಂಪನಿಯ ಅಧಿಕೃತ ಪ್ರಕಟಣೆಗಾಗಿ ಕಾಯಬೇಕು.!

Best Mobiles in India

English summary
Vivo V60 Lite 5G launched in Taiwan: Is it coming to India as Vivo V60e? Price, specs, and everything you need to know.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+