Home
ಮೊಬೈಲ್

ವಿವೋ V60 vs ವಿವೋ X200 FE: ಸಂಪೂರ್ಣ ಹೋಲಿಕೆ ನೋಡಿ, ನಂತರ ಖರೀದಿಸಿ!

ಜನಪ್ರಿಯ ಮೊಬೈಲ್ ಬ್ರ್ಯಾಂಡ್ ವಿವೋ ತನ್ನ ಹೊಸ ವಿವೋ V60 ಸ್ಮಾರ್ಟ್‌ಫೋನನ್ನು ಮೊನ್ನೆಯಷ್ಟೇ ಬಿಡುಗಡೆಗೊಳಿಸಿದೆ. ಇತ್ತ ವಿವೋ ಪರಿಚಯಿಸಿರುವ ಮತ್ತೊಂದು ಫೋನ್ ವಿವೋ X200 FE ಕೂಡ ವಿಶೇಷ ವೈಶಿಷ್ಟ್ಯಗಳೊಂದಿಗೆ ಗ್ರಾಹಕರ ಗಮನ ಸೆಳೆಯುತ್ತಿದೆ ಈ ಎರಡೂ ಫೋನ್‌ಗಳು ವಿಭಿನ್ನ ವಿಭಾಗದ ಬಳಕೆದಾರರನ್ನು ಆಕರ್ಷಿಸಲು ವಿನ್ಯಾಸಗೊಳಿಸಲಾಗಿದೆ. ವಿವೋ V60 ಸ್ಮಾರ್ಟ್‌ಫೋನ್ ಮಧ್ಯಮ ಶ್ರೇಣಿಯಲ್ಲಿ ಸ್ಟೈಲಿಶ್ ವಿನ್ಯಾಸ ಮತ್ತು ಶಕ್ತಿಶಾಲಿ ಕ್ಯಾಮೆರಾ ಬಯಸುವವರಿಗೆ ಸೂಕ್ತವಾಗಿ ಬಂದಿದ್ದರೆ, ಇತ್ತ ವಿವೋ X200 FE ಫೋನ್‌ ಪ್ರೀಮಿಯಂ ವಿಭಾಗದಲ್ಲಿ ಫ್ಲ್ಯಾಗ್‌ಶಿಪ್ ದರ್ಜೆಯ ಕಾರ್ಯಕ್ಷಮತೆ, ಅತ್ಯುತ್ತಮ ಕ್ಯಾಮೆರಾ ಮತ್ತು ಸಾಂದ್ರವಾದ ವಿನ್ಯಾಸವನ್ನು ಬಯಸುವವರಿಗೆ ಉತ್ತಮ ಆಯ್ಕೆಯಾಗಿದೆ. ಈ ಎರಡು ಫೋನ್‌ಗಳ ವೈಶಿಷ್ಟ್ಯಗಳನ್ನು ಇಲ್ಲಿ ಹೋಲಿಕೆ ಮಾಡಲಾಗಿದೆ.

ವಿವೋ V60 vs ವಿವೋ X200 FE: ವಿನ್ಯಾಸ ಮತ್ತು ಡಿಸ್‌ಪ್ಲೇ
ವಿನ್ಯಾಸದ ವಿಚಾರದಲ್ಲಿ ಎರಡೂ ಫೋನ್‌ಗಳು ಪ್ರೀಮಿಯಂ ಲುಕ್ ಹೊಂದಿವೆ. ವಿವೋ V60 ಫೋನ್ 6.77-ಇಂಚಿನ Quad-curved AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಇದು 1.5K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್‌ಗೆ ಬೆಂಬಲ ನೀಡುತ್ತದೆ. ಈ ಡಿಸ್‌ಪ್ಲೇಯ ಗರಿಷ್ಠ ಬ್ರೈಟ್‌ನೆಸ್ ಮಟ್ಟ 5,000 ನಿಟ್ಸ್. ಇದರ ಜೊತೆಗೆ ಈ ಫೋನ್‌ IP68 ಮತ್ತು IP69 ರೇಟಿಂಗ್‌ಗಳನ್ನು ಪಡೆದಿದೆ. ಇದರಿಂದ ಇದು ಧೂಳು ಮತ್ತು ನೀರಿನಿಂದ ಉತ್ತಮ ರಕ್ಷಣೆ ಪಡೆಯುತ್ತದೆ.

ಮತ್ತೊಂದೆಡೆ, ವಿವೋ X200 FE ಸ್ವಲ್ಪ ಚಿಕ್ಕದಾದ, 6.31-ಇಂಚಿನ 1.5K AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಇದು 120Hz ರಿಫ್ರೆಶ್ ರೇಟ್ ಮತ್ತು 1,800 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಇವೆರಡರಲ್ಲಿ V60 ಹೆಚ್ಚು ಪ್ರಕಾಶಮಾನವಾದ ಡಿಸ್‌ಪ್ಲೇ ಹೊಂದಿದೆ. ಆದರೆ ಎರಡೂ ಫೋನ್‌ಗಳು ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು IP68 ಹಾಗೂ IP69 ರೇಟಿಂಗ್‌ಗಳನ್ನು ಹಂಚಿಕೊಂಡಿವೆ.

ವಿವೋ V60 vs ವಿವೋ X200 FE: ಕಾರ್ಯಕ್ಷಮತೆ
ಕಾರ್ಯಕ್ಷಮತೆಯ ವಿಷಯದಲ್ಲಿ ವಿವೋ X200 FE ಸ್ಪಷ್ಟವಾಗಿ ಮುಂದಿದೆ. ಇದು MediaTek Dimensity 9300+ ಚಿಪ್‌ಸೆಟ್ ಅನ್ನು ಹೊಂದಿದೆ. ಇದು ಪ್ರೀಮಿಯಂ ಫೋನ್ ಗಳಲ್ಲಿ ನೀಡುವ ಶಕ್ತಿಶಾಲಿ ಪ್ರೊಸೆಸರ್ ಆಗಿದೆ. ಇದು 16GB LPDDR5X RAM ಮತ್ತು 512GB ವರೆಗಿನ UFS 3.1 ಮೆಮೊರಿಯೊಂದಿಗೆ ಬರುತ್ತದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ ಫನ್‌ಟೌಚೋಸ್ 15 ನಲ್ಲಿ ಕಾರ್ಯನಿರ್ವಹಿಸಲಿದೆ. ಚಿಪ್‌ಸೆಟ್ ಸಾಮರ್ಥ್ಯದಲ್ಲಿ ವಿವೋ X200 FE ಹೆಚ್ಚು ವೇಗ ಮತ್ತು ಉತ್ತಮ ಗೇಮಿಂಗ್ ಅನುಭವವನ್ನು ನೀಡುತ್ತದೆ.

ಇತ್ತ ವಿವೋ V60 ಸ್ಮಾರ್ಟ್‌ಫೋನ್‌ Snapdragon 7 Gen 4 SoC ಪ್ರೊಸೆಸರ್ ಅನ್ನು ಬಳಸುತ್ತದೆ. ಇದು 16GB LPDDR4x RAM ಮತ್ತು 512GB ವರೆಗಿನ UFS 2.2 ಮೆಮೊರಿಯನ್ನು ಹೊಂದಿದೆ. ಇದು ಸಹ ಆಂಡ್ರಾಯ್ಡ್ 15 ಆಧಾರಿತ Funtouch OS 15 ನಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ ಇದು ನಾಲ್ಕು ವರ್ಷಗಳ ಪ್ರಮುಖ OS ಅಪ್‌ಗ್ರೇಡ್‌ಗಳು ಮತ್ತು ಆರು ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆಯುವ ಭರವಸೆ ನೀಡಿದೆ. ಇದು ವಿವೋ X200 FEಗಿಂತ ಹೆಚ್ಚು ದೀರ್ಘಾವಧಿಯ ಅಪ್‌ಡೇಟ್ ಪಡೆಯುವ ಸಾಧ್ಯತೆ ಇದೆ.

ವಿವೋ V60 vs ವಿವೋ X200 FE: ಕ್ಯಾಮೆರಾ
ಕ್ಯಾಮೆರಾ ವಿಭಾಗದಲ್ಲಿ ಎರಡೂ ಫೋನ್‌ಗಳು ಅತ್ಯುತ್ತಮ ಪರ್ಫಾರ್ಮೆನ್ಸ್ ನೀಡುತ್ತವೆ. ವಿವೋ V60 ಮತ್ತು X200 FE ಎರಡರಲ್ಲೂ ZEISS ಬೆಂಬಲಿತ ಕ್ಯಾಮೆರಾಗಳಿವೆ. ವಿವೋ V60 ಫೋನಿನಲ್ಲಿ 50MP Sony IMX766 ಪ್ರೈಮರಿ ಕ್ಯಾಮೆರಾ, 50MP Sony IMX882 ಟೆಲಿಫೋಟೋ ಲೆನ್ಸ್ ಮತ್ತು 8MP ಅಲ್ಟ್ರಾವೈಡ್ ಲೆನ್ಸ್ ಇದೆ. ಇದರ ಮುಂಭಾಗದಲ್ಲಿ 50MP ಸೆಲ್ಫಿ ಕ್ಯಾಮೆರಾ ಇದೆ.

ವಿವೋ V60 vs ವಿವೋ X200 FE: ಸಂಪೂರ್ಣ ಹೋಲಿಕೆ ನೋಡಿ, ನಂತರ ಖರೀದಿಸಿ!

ಮತ್ತೊಂದೆಡೆ, ವಿವೋ X200 FE ಫೋನ್ 50MP Sony IMX921 ಪ್ರಾಥಮಿಕ ಸಂವೇದಕ (OIS ಬೆಂಬಲದೊಂದಿಗೆ), 8MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 50MP ಪೆರಿಸ್ಕೋಪ್ ಟೆಲಿಫೋಟೋ ಸೆನ್ಸಾರ್ ಅನ್ನು ಹೊಂದಿದೆ. ಇದರ ಮುಂಭಾಗದಲ್ಲೂ 50MP ಸೆಲ್ಫಿ ಕ್ಯಾಮೆರಾ ಇದೆ. ಎರಡೂ ಫೋನ್‌ಗಳ ಪ್ರೈಮರಿ ಮತ್ತು ಸೆಲ್ಫಿ ಕ್ಯಾಮೆರಾಗಳು 4K ವಿಡಿಯೋ ರೆಕಾರ್ಡಿಂಗ್‌ಗೆ ಬೆಂಬಲ ನೀಡುತ್ತವೆ. ಪೆರಿಸ್ಕೋಪ್ ಲೆನ್ಸ್‌ನಿಂದಾಗಿ X200 FE ಹೆಚ್ಚಿನ ಜೂಮ್ ಸಾಮರ್ಥ್ಯವನ್ನು ಹೊಂದಿದೆ. ಹಾಗಾಗಿ, ಕ್ಯಾಮೆರಾದಲ್ಲಿ ಉತ್ತಮ ವೃತ್ತಿಪರ ಫಲಿತಾಂಶಗಳನ್ನು ಬಯಸುವವರಿಗೆ X200 FE ಉತ್ತಮ ಆಯ್ಕೆಯಾಗಿದೆ.

ವಿವೋ V60 vs ವಿವೋ X200 FE: ಬ್ಯಾಟರಿ, ಚಾರ್ಜಿಂಗ್
ಎರಡೂ ಫೋನ್‌ಗಳು 6,500mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿವೆ ಮತ್ತು 90W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲ ನೀಡುತ್ತವೆ. ಇದು ಬಳಕೆದಾರರಿಗೆ ದೀರ್ಘಾವಧಿಯ ಬ್ಯಾಟರಿ ಬ್ಯಾಕಪ್ ಮತ್ತು ವೇಗದ ಚಾರ್ಜಿಂಗ್ ಅನುಭವವನ್ನು ಒದಗಿಸುತ್ತದೆ. ಸಂಪರ್ಕ ಆಯ್ಕೆಗಳಲ್ಲಿ Wi-Fi, Bluetooth 5.4, GPS, NFC, ಮತ್ತು USB Type-C ಪೋರ್ಟ್ ಎರಡರಲ್ಲೂ ಸಾಮಾನ್ಯವಾಗಿದೆ.

ವಿವೋ V60 vs ವಿವೋ X200 FE: ಬೆಲೆ
ಬೆಲೆಯ ವಿಚಾರದಲ್ಲಿ ವಿವೋ V60 ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಇದರ ಆರಂಭಿಕ ಬೆಲೆ ₹36,999 ಆಗಿದ್ದರೆ, ವಿವೋ X200 FE ಫೋನ್‌ ಪ್ರಾರಂಭಿಕ ಬೆಲೆ ₹54,999 ಆಗಿದೆ. ಬೆಲೆಯ ವ್ಯತ್ಯಾಸವು ಇವೆರಡರ ಪ್ರೊಸೆಸರ್, ಕ್ಯಾಮೆರಾ ಮತ್ತು ನಿರ್ಮಾಣದ ಗುಣಮಟ್ಟದಲ್ಲಿ ವ್ಯತ್ಯಾಸ ಇರುವುದನ್ನು ತೋರಿಸುತ್ತದೆ.

ವಿವೋ V60 vs ವಿವೋ X200 FE: ತೀರ್ಮಾನ
ಕೊನೆಯಲ್ಲಿ ಹೇಳುವುದಾದರೆ, ನೀವು ಉತ್ತಮ ಕ್ಯಾಮೆರಾ ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಮಧ್ಯಮ ಶ್ರೇಣಿಯ ಬೆಲೆಯಲ್ಲಿ ಫೋನ್ ಹುಡುಕುತ್ತಿದ್ದರೆ ವಿವೋ V60 ಉತ್ತಮ ಆಯ್ಕೆಯಾಗಿದೆ. ಇದು ದೀರ್ಘಾವಧಿಯ ಸಾಫ್ಟ್‌ವೇರ್ ಅಪ್‌ಡೇಟ್ ಭರವಸೆಯನ್ನೂ ನೀಡುತ್ತದೆ. ಆದರೆ ನೀವು ಫ್ಲ್ಯಾಗ್‌ಶಿಪ್ ದರ್ಜೆಯ ಕಾರ್ಯಕ್ಷಮತೆ, ಅತ್ಯುತ್ತಮ ಕ್ಯಾಮೆರಾ ಲೆನ್ಸ್‌ಗಳು ಮತ್ತು ಸಾಂದ್ರವಾದ ವಿನ್ಯಾಸವನ್ನು ಬಯಸಿದರೆ, ವಿವೋ X200 FE ಫೋನ್ ಹೆಚ್ಚು ಸೂಕ್ತವಾಗಿದೆ. ಎರಡೂ ಫೋನ್‌ಗಳು ತಮ್ಮ ವಿಶಿಷ್ಟ ವೈಶಿಷ್ಟ್ಯಗಳೊಂದಿಗೆ ತಮ್ಮದೇ ಆದ ಮಾರುಕಟ್ಟೆ ವಿಭಾಗವನ್ನು ತಲುಪಲು ಸಜ್ಜಾಗಿವೆ. ನಿಮ್ಮ ಅಗತ್ಯ ಮತ್ತು ಬಜೆಟ್ ಆಧಾರದ ಮೇಲೆ ನೀವು ಇವೆರಡರಲ್ಲಿ ಸೂಕ್ತವಾದ ಫೋನ್ ಅನ್ನು ಆಯ್ಕೆ ಮಾಡಬಹುದು.

Best Mobiles in India

English summary
The Vivo V60 and X200 FE: From design and display to performance and camera capabilities, here’s how they stack up to help you decide which one’s worth your money.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+