Home
ಮೊಬೈಲ್

ಭಾರತದಲ್ಲಿ 200-MP ಕ್ಯಾಮೆರಾದ ಮ್ಯಾಜಿಕ್ ಫೋನ್ Vivo V60e ಬಿಡುಗಡೆ!

ಜನಪ್ರಿಯ ಮೊಬೈಲ್ ಬ್ರ್ಯಾಂಡ್ Vivo ತನ್ನ V-ಸರಣಿಯನ್ನು ಮತ್ತಷ್ಟು ವಿಸ್ತರಿಸಿದ್ದು, ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿಶೇಷವಾಗಿ ಪೊಟೋಘ್ರಫಿ ಸಾಮರ್ಥ್ಯಗಳನ್ನು ಕೇಂದ್ರೀಕರಿಸಿದ ಹೊಸ Vivo V60e ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಪ್ರೀಮಿಯಂ ವಿಭಾಗದಲ್ಲಿ ಬಲಿಷ್ಠ ಸ್ಪರ್ಧೆ ನೀಡಲು ಸಜ್ಜಾಗಿರುವ ಈ ಫೋನ್, AI-ಚಾಲಿತ ಇಮೇಜಿಂಗ್ ವೈಶಿಷ್ಟ್ಯಗಳು ಮತ್ತು ದೈತ್ಯ ಬ್ಯಾಟರಿಯೊಂದಿಗೆ ಗ್ರಾಹಕರ ಗಮನ ಸೆಳೆಯಲು ಸಿದ್ಧವಾಗಿದೆ. ಈ ಹೊಸ Vivo V60e ಸ್ಮಾರ್ಟ್‌ಫೋನ್ ಪೀಚರ್ಸ್ ಮತ್ತು ಬೆಲೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

AI ಕ್ಯಾಮೆರಾದ ಹೊಸ ಅಧ್ಯಾಯ
Vivo V60e ಯ ಪ್ರಮುಖ ಹೈಲೈಟ್ ಎಂದರೆ ಅದರ ಕ್ಯಾಮೆರಾ ವ್ಯವಸ್ಥೆ. ಈ ಫೋನ್ ಹಿಂಭಾಗದಲ್ಲಿ 200-ಮೆಗಾಪಿಕ್ಸೆಲ್‌ನ ಪ್ರೈಮರಿ ಕ್ಯಾಮೆರಾ ಹೊಂದಿದ್ದು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ ಅತ್ಯಂತ ಸ್ಪಷ್ಟ ಮತ್ತು ಸ್ಥಿರವಾದ ಚಿತ್ರಗಳನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ. 30x ಜೂಮ್ ಸಾಮರ್ಥ್ಯ ಮತ್ತು ವೃತ್ತಿಪರ ಗುಣಮಟ್ಟದ 85mm ಪೋರ್ಟ್ರೇಟ್ ಇಮೇಜಿಂಗ್ ಮೋಡ್‌ಗಳು ನಿಮ್ಮ ಫೋಟೋಗ್ರಫಿ ಅನುಭವವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತವೆ.

ಕಡಿಮೆ ಬೆಳಕಿನಲ್ಲಿ ಅದ್ಭುತ ಚಿತ್ರೀಕರಣಕ್ಕಾಗಿ Vivo ನ ಸಿಗ್ನೇಚರ್ ವೈಶಿಷ್ಟ್ಯವಾದ ಔರಾ ಲೈಟ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ವಿಶೇಷವಾಗಿ, ಇದು AI ಫೆಸ್ಟಿವಲ್ ಪೋರ್ಟ್ರೇಟ್ ನಂತಹ ಸ್ಥಳೀಯ ಆಚರಣೆಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾದ AI ವೈಶಿಷ್ಟ್ಯಗಳನ್ನು ಹೊಂದಿರುವ ಭಾರತದ ಮೊದಲ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು ಈ ಫೋನಿನ ಮುಂಭಾಗದಲ್ಲಿ, 50-ಮೆಗಾಪಿಕ್ಸೆಲ್ ಐ ಆಟೋ-ಫೋಕಸ್ ಸೆಲ್ಫಿ ಕ್ಯಾಮೆರಾ ಇರುವುದು ಸೆಲ್ಫಿ ಪ್ರಿಯರಿಗೆ ದೊಡ್ಡ ಕೊಡುಗೆ.

ಭಾರತದಲ್ಲಿ 200-MP ಕ್ಯಾಮೆರಾದ ಮ್ಯಾಜಿಕ್ ಫೋನ್ Vivo V60e ಬಿಡುಗಡೆ!

ಕಾರ್ಯಕ್ಷಮತೆ ಮತ್ತು ಬ್ಯಾಟರಿ ಶಕ್ತಿ
Vivo V60e ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7360-ಟರ್ಬೊ ಚಿಪ್‌ಸೆಟ್ ನಿಂದ ಶಕ್ತಿ ಪಡೆದಿದೆ. ಇದು 12GB ವರೆಗಿನ RAM ಮತ್ತು 256GB ವರೆಗಿನ ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ವೇಗದ ಮಲ್ಟಿಟಾಸ್ಕಿಂಗ್ ಮತ್ತು ತಡೆರಹಿತ ಗೇಮಿಂಗ್ ಅನುಭವವನ್ನು ಖಾತ್ರಿಪಡಿಸುತ್ತದೆ.ಈ ಪ್ರೀಮಿಯಂ ಫೋನ್‌ನ ಮತ್ತೊಂದು ಪ್ರಮುಖ ಅಂಶವೆಂದರೆ ಅದರ ಬೃಹತ್ 6,500mAh ಬ್ಯಾಟರಿ. ಡೀ ದಿನದ ಬಳಕೆಗಾಗಿ ಈ ಬ್ಯಾಟರಿ ಶಕ್ತಿ ನೀಡಲಿದ್ದು, ಇದರ ಜೊತೆಗೆ 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲವು ಕ್ಷಣಾರ್ಧದಲ್ಲಿ ಫೋನ್ ಚಾರ್ಜ್ ಮಾಡಲು ನೆರವಾಗುತ್ತದೆ.

ಡಿಸ್‌ಪ್ಲೇ ಮತ್ತು ಹೆಚ್ಚುವರಿ ವೈಶಿಷ್ಟ್ಯಗಳು
ದೃಶ್ಯ ಅನುಭವಕ್ಕಾಗಿ, V60e 120Hz ಫೋನ್ ರಿಫ್ರೆಶ್ ದರದೊಂದಿಗೆ 6.77-ಇಂಚಿನ ಕ್ವಾಡ್ ಕರ್ವ್ಡ್ AMOLED ಡಿಸ್ಪ್ಲೇಯನ್ನು ಹೊಂದಿದೆ. ಈ ಪರದೆಯು 1.07 ಬಿಲಿಯನ್ ಬಣ್ಣಗಳನ್ನು ಪ್ರದರ್ಶಿಸುವ ಸಾಮರ್ಥ್ಯ ಹೊಂದಿದ್ದು, ಡೈಮಂಡ್ ಶೀಲ್ಡ್ ಗ್ಲಾಸ್‌ನಿಂದ ರಕ್ಷಿಸಲ್ಪಟ್ಟಿದೆ.ಭದ್ರತೆ ಮತ್ತು ಬಾಳಿಕೆಗೆ ಸಂಬಂಧಿಸಿದಂತೆ, ಈ ಫೋನ್ IP68 + IP69 ರೇಟಿಂಗ್ ಹೊಂದಿದ್ದು, ಧೂಳು ಮತ್ತು ನೀರಿನಿಂದ ರಕ್ಷಣೆ ನೀಡುತ್ತದೆ. ಇದು ಜೆಮಿನಿ AI ವೈಶಿಷ್ಟ್ಯಗಳ ಸೂಟ್ ಅನ್ನು ಸಹ ಒಳಗೊಂಡಿದ್ದು, ಸ್ಮಾರ್ಟ್ ಕರೆ ಸಹಾಯಕ ಮತ್ತು ಇಮೇಜ್ ಎಕ್ಸ್‌ಪಾಂಡರ್‌ನಂತಹ ಹಲವು ಕಾರ್ಯಗಳನ್ನು ನಿರ್ವಹಿಸುತ್ತದೆ.

Vivo V60e: ಬೆಲೆ ಮತ್ತು ಲಭ್ಯತೆ
ದೇಶದಲ್ಲಿ Vivo V60e ಫೋನ್ಎರಡು ಕಾನ್ಫಿಗರೇಶನ್‌ಗಳಲ್ಲಿ ಪರಿಚಯಗೊಂಡಿದೆ:
8GB RAM + 128GB ಸಂಗ್ರಹಣೆ: ₹29,999
12GB RAM + 256GB ಸಂಗ್ರಹಣೆ: ₹33,999
ಈ ಫೋನ್ ಅನ್ನು ಎಲೈಟ್ ಪರ್ಪಲ್ ಮತ್ತು ನೋಬಲ್ ಗೋಲ್ಡ್ ಎಂಬ ಆಕರ್ಷಕ ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ವಿವೋದ ಅಧಿಕೃತ ಆನ್‌ಲೈನ್ ಸ್ಟೋರ್ ಮೂಲಕ ಖರೀದಿಗೆ ಲಭ್ಯವಿದೆ.

Vivo V60e ಕ್ಯಾಮೆರಾ ಪ್ರಿಯರು ಮತ್ತು ದೀರ್ಘ ಬ್ಯಾಟರಿ ಬಾಳಿಕೆ ಬಯಸುವವರಿಗೆ ಒಂದು ಪ್ರಬಲ ಆಯ್ಕೆಯಾಗಿದೆ. ಈ ಹೊಸ ಸ್ಮಾರ್ಟ್‌ಫೋನ್ ಭಾರತೀಯ ಪ್ರೀಮಿಯಂ ವಿಭಾಗದಲ್ಲಿ ಯಾವ ರೀತಿ ತನ್ನ ಸ್ಥಾನವನ್ನು ಗಟ್ಟಿಗೊಳಿಸುತ್ತದೆ ಎಂಬುದನ್ನು ಕಾದು ನೋಡಬೇಕು. ಈ ಹೊಸ ಪೋನ್ ಕುರಿತಂತೆ ನಿಮ್ಮ ಅನಿಸಿಕೆ ಏನು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
The new Vivo V60e has arrived in India, starting at ₹29,999. Powered by the MediaTek Dimensity 7360-Turbo, this mid-premium smartphone boasts a powerful 200MP OIS main camera with advanced AI imaging features and a massive 6,500mAh battery supported by 90W fast charging.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+