ಭಾರತದಲ್ಲಿ ಮುಂದಿನ ವಾರ Vivo V60e ಲಾಂಚ್: 200MP ಕ್ಯಾಮೆರಾ, ಕಡಿಮೆ ಬೆಲೆ!
ಜನಪ್ರಿಯ ಮೊಬೈಲ್ ಬ್ರ್ಯಾಂಡ್ Vivo ತನ್ನ ಹೊಸ ಸ್ಮಾರ್ಟ್‌ಫೋನ್ Vivo V60e ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಬಹುನಿರೀಕ್ಷಿತವಾದ ಈ Vivo V60e ಫೋನ್ ಇದೇ ಅಕ್ಟೋಬರ್ 7ರಂದು ಅಧಿಕೃತವಾಗಿ ಅನಾವರಣಗೊಳ್ಳಲಿದ್ದು, Vivo V60 ಸರಣಿಯ ಹೊಸ ಸದಸ್ಯನಾಗಿರುವ ಈ ಸಾಧನವು ಅತ್ಯುತ್ತಮ ಇಮೇಜಿಂಗ್ ಸಾಮರ್ಥ್ಯ, ದೀರ್ಘಕಾಲೀನ ಬ್ಯಾಟರಿ ಬಾಳಿಕೆ ಹಾಗೂ ಕೃತಕ ಬುದ್ಧಿಮತ್ತೆಯ (AI) ತಂತ್ರಜ್ಞಾನಗಳನ್ನು ಹೊಂದಿರುವುದು ಖಚಿತವಾಗಿದೆ. ಹಾಗಾದರೆ, ಮುಂಬರುವ Vivo V60e ಫೋನ್ ಹೇಗಿರಲಿದೆ?, ಬೆಲೆ ಎಷ್ಟು ಎಂಬುದನ್ನು ನೋಡೋಣ ಬನ್ನಿ.
Vivo V60e: ಕ್ಯಾಮೆರಾ ವಿಭಾಗದಲ್ಲಿ ಕ್ರಾಂತಿ?
ದೇಶದಲ್ಲಿ ಈ ಹೊಸ Vivo V60e ಫೋನ್ ಬಿಡುಗಡೆಗೂ ಮೊದಲೇ ಕಂಪೆನಿಯು ಫೋನ್‌ನ ಪ್ರಮುಖ ಫೀಚರ್ಸ್‌ಗಳನ್ನು ಬಹಿರಂಗಪಡಿಸುತ್ತಿದೆ. ಅವುಗಳಲ್ಲಿ ಈ ಫೋನಿನ ಪ್ರಮುಖ ಆಕರ್ಷಣೆ 200MP ಪೋರ್ಟ್ರೇಟ್ ಕ್ಯಾಮೆರಾ. ಇದರಲ್ಲಿ OIS (Optical Image Stabilization) ಸೌಲಭ್ಯವಿದ್ದು, 30x ಜೂಮ್ ಮತ್ತು 85mm ಪ್ರೊಫೆಷನಲ್ ಪೋರ್ಟ್ರೇಟ್ ಇಮೇಜಿಂಗ್ ಅನ್ನು ಬೆಂಬಲಿಸುತ್ತದೆ. ಜೊತೆಗೆ, 8MP ಅಲ್ಟ್ರಾವೈಡ್-ಆಂಗಲ್ ಲೆನ್ಸ್ ಲಭ್ಯವಿದ್ದು, ಎಲ್ಲವೂ Aura Light ತಂತ್ರಜ್ಞಾನದಿಂದ ಬೆಂಬಲಿತವಾಗಿದೆ. ಮುಂಭಾಗದಲ್ಲಿ 92 ಡಿಗ್ರಿ ಫೀಲ್ಡ್ ಆಫ್ ವ್ಯೂ ಹೊಂದಿರುವ 50MP ಸೆಲ್ಫಿ ಕ್ಯಾಮೆರಾ ನೀಡಲಾಗಿರುವುದನ್ನು ಧೃಢಪಡಿಸಲಾಗಿದೆ. ಇದು ಕ್ಯಾಮೆರಾ ಪ್ರಿಯರಿಗೆ ದೊಡ್ಡ ಆಕರ್ಷಣೆಯಾಗಲಿದೆ.
ಈ ಫೋನ್ ಕ್ವಾಡ್-ಕರ್ವ್ಡ್ ಡಿಸ್ಪ್ಲೇ ಹಾಗೂ ಡೈಮಂಡ್ ಶೀಲ್ಡ್ ಗ್ಲಾಸ್ ಸಹಿತ ಲಭ್ಯವಿದ್ದು, ಪ್ರೀಮಿಯಂ ವಿನ್ಯಾಸವನ್ನು ಹೊಂದಿದೆ. ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ ಸಾಧನವು IP68 + IP69 ರೇಟಿಂಗ್ ಪಡೆದಿದೆ. ಇದು ಫೋನ್‌ನ ದೀರ್ಘಾವಧಿ ಬಳಕೆಯನ್ನು ಖಚಿತಪಡಿಸುತ್ತದೆ.ಇದರ ಜೊತೆಗೆ, ಈ VivoV60e ಫೋನಿನ ಮತ್ತೊಂದು ದೊಡ್ಡ ಹೈಲೈಟ್ ಎಂದರೆ 6,500mAh ಬ್ಯಾಟರಿ. ಇದಕ್ಕೆ 90W ಫಾಸ್ಟ್ ಚಾರ್ಜಿಂಗ್ ಸೌಲಭ್ಯವಿದ್ದು, ಬಳಕೆದಾರರು ಹೆಚ್ಚಿನ ಸಮಯ ಫೋನ್ ಉಪಯೋಗಿಸಬಹುದು ಮತ್ತು ತ್ವರಿತವಾಗಿ ಚಾರ್ಜ್ ಮಾಡಿಕೊಳ್ಳಬಹುದು. ಸಾಫ್ಟ್‌ವೇರ್ ವಿಭಾಗದಲ್ಲಿ, ಈ ಫೋನ್ Android 15 ಆಧಾರಿತ Funtouch OS 15 ನಲ್ಲಿ ಕಾರ್ಯನಿರ್ವಹಿಸಲಿದೆ. Vivo ಮೂರು ದೊಡ್ಡ Android OS ಅಪ್‌ಡೇಟ್‌ಗಳು ಮತ್ತು ಐದು ವರ್ಷದ ಭದ್ರತಾ ನವೀಕರಣಗಳು ನೀಡುವುದಾಗಿ ಘೋಷಿಸಿದೆ.

ಕೃತಕ ಬುದ್ಧಿಮತ್ತೆಯ (AI) ತಂತ್ರಜ್ಞಾನವನ್ನು ಮತ್ತಷ್ಟು ಬಳಕೆಗೆ ತರುವ ದೃಷ್ಟಿಯಿಂದ, ಈ Vivo V60e ಫೋನಿನಲ್ಲಿ ಆಧುನಿಕ AI ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಇದರಲ್ಲಿ AI ಕ್ಯಾಪ್ಶನ್ಸ್, ಗೂಗಲ್ Gemini ಏಕೀಕರಣ, ಜೊತೆಗೆ ಭಾರತಕ್ಕೆ ವಿಶೇಷವಾಗಿ AI ಫೆಸ್ಟಿವಲ್ ಪೋರ್ಟ್ರೇಟ್ ಮತ್ತು ಇಮೇಜ್ ಎಕ್ಸ್‌ಪಾಂಡರ್ ಸೌಲಭ್ಯಗಳನ್ನು ಪರಿಚಯಿಸಲಾಗುತ್ತಿದೆ ಎಂದು ಕಂಪೆನಿಯು ಅಧಿಕೃತವಾಗಿ ತಿಳಿಸಿದೆ. ಇವಿಷ್ಟು ಮಾಹಿತಿಗಳು ಈಗ ಅಧಿಕೃತವಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಮಾಹಿತಿಗಳು ಹೊರಬೀಳಬಹುದು. ಆದರೆ, ಅದಕ್ಕೂ ಮೊದಲೇ ಈ ಫೋನಿನ ಬೆಲೆ ಶ್ರೇಶಿಯು ಲೀಕ್ ಆಗಿದೆ.!
ನಿರೀಕ್ಷಿತ ಬೆಲೆ ಮತ್ತು ಮಾದರಿಗಳು
ವರದಿಗಳ ಪ್ರಕಾರ, Vivo V60e ಫೋನ್ ಎಲೈಟ್ ಪರ್ಪಲ್ ಮತ್ತು ನೋಬಲ್ ಗೋಲ್ಡ್ ಬಣ್ಣಗಳಲ್ಲಿ ಲಭ್ಯವಿರಲಿದೆ. ಮತ್ತು ಬೆಲೆ ಶ್ರೇಣಿ ಹೀಗಿರಬಹುದು:
8GB + 256GB (ಮೂಲ ಮಾದರಿ) - ₹28,999
8GB + 256GB (ಎನ್‌ಹಾನ್ಸ್ಡ್) - ₹30,999
12GB + 256GB (ಟಾಪ್ ಮಾದರಿ) - ₹31,999
200MP ಕ್ಯಾಮೆರಾ, 6,500mAh ಬ್ಯಾಟರಿ, 90W ಚಾರ್ಜಿಂಗ್ ಮತ್ತು ಪ್ರೀಮಿಯಂ AI ವೈಶಿಷ್ಟ್ಯಗಳೊಂದಿಗೆ, ಹೊಸ Vivo V60e ಫೋನ್ ಭಾರತದ ಮಧ್ಯಮ ಶ್ರೇಣಿಯ ಮಾರುಕಟ್ಟೆಯಲ್ಲಿ ಬಲಿಷ್ಠ ಸ್ಪರ್ಧಿಯಾಗುವ ನಿರೀಕ್ಷೆ ಇದೆ. ಅಕ್ಟೋಬರ್ 7ರಂದು ಅಧಿಕೃತವಾಗಿ ಬಿಡುಗಡೆಯಾದಾಗ ಈ ಫೋನಿನ ಸಂಪೂರ್ಣ ಮಾಹಿತಿಗಳು ನಮಗೆ ಲಭ್ಯವಾಗುತ್ತವೆ. ಅಲ್ಲಿಯವರೆಗೂ ಕನ್ನಡ ಗಿಜ್‌ಬಾಟ್‌ನಲ್ಲಿ ಲೈವ್ ಆಗಿರಿ. ಮತ್ತು ಈ ಫೋನ್ ಕುರಿತು ನಿಮ್ಮ ಅನಿಸಿಕೆಗಳನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








