ಅಭಿಷೇಕ್ ಯಾದವ್ ಅವರಿಂದ Vivo V70, V70 Elite ಫೋನ್ ಬೆಲೆಗಳು ಸೋರಿಕೆ!
ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮಧ್ಯಮ-ಪ್ರೀಮಿಯಂ ವಿಭಾಗದಲ್ಲಿ ಸ್ಪರ್ಧೆ ತೀವ್ರವಾಗುತ್ತಿರುವ ಸಂದರ್ಭದಲ್ಲಿ, Vivo ಕಂಪೆನಿಯ ತನ್ನ ಹೊಸ Vivo V70 ಸರಣಿಯನ್ನು ಇನ್ನೇನು ಕೆಲವು ದಿನಗಳಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಕಳೆದ ವರ್ಷ ಪರಿಚಯವಾದ ಜನಪ್ರಿಯ Vivo V60 ಗೆ ಉತ್ತರಾಧಿಕಾರಿಯಾಗಿ ಬರುತ್ತಿರುವ ಈ ಹೊಸ ಸರಣಿಯು ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿದೆ. ಇದೀಗ ಬೆಲೆ ಮತ್ತು ವೇರಿಯಂಟ್‌ಗಳ ಮೂಲಕ ವಿಭಿನ್ನ ಗ್ರಾಹಕ ವರ್ಗಗಳನ್ನು ಗುರಿಯಾಗಿಸಿಕೊಂಡಿದೆ ಎಂಬುದು ಲೀಕ್ ಮಾಹಿತಿಯಿಂದ ತಿಳಿದುಬಂದಿದೆ.
ಹೌದು, ಜನಪ್ರಿಯ ಟಿಪ್‌ಸ್ಟರ್ ಅಭಿಷೇಕ್ ಯಾದವ್ ಮುಂಬರುವ Vivo V70 ಸರಣಿಯ ಸೋರಿಕೆಯಾದ ಬೆಲೆಯನ್ನು X ( ಹಳೆದ ಟ್ವಿಟ್ಟರ್) ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಇವರ ಇವರ ಮಾಹಿತಿಯ ಪ್ರಕಾರ, Vivo V70 ಫೋನ್‌ನ ಪ್ರಾರಂಭಿಕ ಬೆಲೆ ರೂ. 45,999 ಆಗಿರಲಿದೆ . ಈ ಬೆಲೆಗೆ 8GB RAM ಮತ್ತು 256GB ಸ್ಟೋರೇಜ್ ಹೊಂದಿದ ಮಾದರಿ ದೊರೆಯುವ ಸಾಧ್ಯತೆ ಇದೆ. ಹೆಚ್ಚು ಸಾಮರ್ಥ್ಯ ಬಯಸುವವರಿಗೆ 12GB RAM + 256GB ಸ್ಟೋರೇಜ್ ಆಯ್ಕೆಯೂ ಲಭ್ಯವಾಗಬಹುದು, ಇದರ ಬೆಲೆ ಸುಮಾರು ರೂ. 49,999 ಇರಬಹುದು ಎನ್ನಲಾಗಿದೆ.
ಇದಕ್ಕಿಂತಲೂ ಹೆಚ್ಚು ಗಮನಸೆಳೆಯುತ್ತಿರುವ Vivo V70 Elite ಮಾದರಿಯು ಹೆಚ್ಚು ಪ್ರೀಮಿಯಂ ಬಳಕೆದಾರರನ್ನು ಗುರಿಯಾಗಿಸಿಕೊಂಡಿರುವಂತೆ ಕಾಣುತ್ತಿದೆ. ಇದರ ಆರಂಭಿಕ ಬೆಲೆ ರೂ. 51,999 ಇರಲಿದೆ ಎಂದು ಅಭಿಷೇಕ್ ಯಾದವ್ ಅವರು ಹೇಳಿದ್ದಾರೆ. ಹಾಗೆಯೇ, ಇದರ 12GB RAM + 256GB ಹಾಗೂ 12GB RAM + 512GB ಸ್ಟೋರೇಜ್ ವೇರಿಯಂಟ್‌ಗಳು ಕ್ರಮವಾಗಿ ರೂ. 56,999 ಮತ್ತು ರೂ. 61,999 ದರದಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ಹೆಚ್ಚಿನ ಸ್ಟೋರೇಜ್ ಆಯ್ಕೆಗಳು ವಿಡಿಯೋ ಕ್ರಿಯೇಟರ್‌ಗಳು ಮತ್ತು ಹೆವಿ ಯೂಸರ್‌ಗಳನ್ನು ಗುರಿಯಾಗಿಸಿಕೊಂಡಿರಬಹುದು.

ನಾವು ಈಗಾಗಲೇ ತಿಳಿದಿರುವಂತೆ, Vivo V70 ಸರಣಿಯ ಫೋನ್‌ಗಳು ಫೆಬ್ರವರಿ 19ರಂದು ( ಬಹಶಃ ಮಧ್ಯಾಹ್ನ 12 ಗಂಟೆಗೆ) ಭಾರತದಲ್ಲಿ ಅನಾವರಣಗೊಳ್ಳಲಿವೆ. ಅಧಿಕೃತ ಮಾರಾಟ ಫೆಬ್ರವರಿ 25ರಿಂದ ಆರಂಭವಾಗುವ ನಿರೀಕ್ಷೆಯಿದೆ. ಲಾಂಚ್ ಅವಧಿಯಲ್ಲಿ ಬ್ಯಾಂಕ್ ಆಫರ್‌ಗಳು ಅಥವಾ ಎಕ್ಸ್ಚೇಂಜ್ ಡೀಲ್‌ಗಳು ಘೋಷಣೆಯಾಗುವ ಸಾಧ್ಯತೆಯೂ ಇದೆ. ಅಭಿಷೇಕ್ ಯಾದವ್ ಅವರ ಮಾಹಿತಿಯನ್ನು ಪೂರ್ಣವಾಗಿ ನಂಬುವುದಾದರೆ, ದೇಶದ ಮಧ್ಯಮ-ಪ್ರೀಮಿಯಂ ವಿಭಾಗದಲ್ಲಿ ಮತ್ತೊಮ್ಮೆ ದೊಡ್ಡ ಸ್ಪರ್ಧೆ ಏರ್ಪಡಬಹುದು ಮತ್ತು ಯುವಕರು ಈ ವಿಭಾಗಕ್ಕೆ ಹೆಚ್ಚು ಆಕರ್ಷಿತರಾಗಬಹುದು.
Vivo V70 ಸರಣಿಯು ಡಿಸೈನ್ ವಿಭಾಗದಲ್ಲಿಸೆಳೆಯುತ್ತಿದೆ. ಈ ಫೋನ್‌ಗಳು 1.25 ಮಿಮೀ ಅಳತೆಯ ಅತಿ ಸಣ್ಣ ಬೆಝೆಲ್ ಹೊಂದಿರಬಹುದು ಎಂಬ ಮಾಹಿತಿ ಹೊರಬಂದಿದೆ. ರೂ. 50,000 ಒಳಗಿನ ವಿಭಾಗದಲ್ಲಿ ಇಂತಹ ನ್ಯಾರೋ ಬೆಝೆಲ್ ಹೊಂದಿರುವ ಫೋನ್ ಅಪರೂಪವಾಗಿದ್ದು, ಇದು ಬಳಕೆದಾರರಿಗೆ ಹೆಚ್ಚು ಇಮರ್ಸಿವ್ ಡಿಸ್ಪ್ಲೇ ಅನುಭವ ನೀಡಬಹುದು. ಇನ್ನು ಸ್ಪೆಸಿಫಿಕೇಶನ್‌ಗಳತ್ತ ಗಮನಹರಿಸಿದರೆ, Vivo V70 Elite ಫೋನ್ ಅತ್ಯಾಧುನಿಕ ಹಾರ್ಡ್‌ವೇರ್‌ನೊಂದಿಗೆ ಬರುತ್ತಿದೆ. ಇದರಲ್ಲಿ 6.59 ಇಂಚಿನ 1.5K ರೆಸಲ್ಯೂಷನ್ ಹೊಂದಿರುವ LTPS OLED ಡಿಸ್‌ಪ್ಲೇ ಇರುವುದು ಖಚಿತವಾಗಿದೆ.
ಕ್ಯಾಮೆರಾ ವಿಭಾಗವೂ Vivo V70 Eliteನ ಪ್ರಮುಖ ಆಕರ್ಷಣೆಯಾಗಿದೆ. ಹಿಂಭಾಗದಲ್ಲಿ 50MP Sony IMX766 ಮುಖ್ಯ ಕ್ಯಾಮೆರಾ OIS ಬೆಂಬಲದೊಂದಿಗೆ ಇರಲಿದೆ. ಇದಕ್ಕೆ ಜೊತೆಯಾಗಿ 8MP ಅಲ್ಟ್ರಾ ವೈಡ್ ಲೆನ್ಸ್ ಮತ್ತು 3x ಆಪ್ಟಿಕಲ್ ಜೂಮ್ ನೀಡುವ 50MP Sony IMX882 ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಲಭ್ಯವಾಗಲಿದೆ. ಸೆಲ್ಫಿ ಪ್ರಿಯರಿಗಾಗಿ 50MP ಫ್ರಂಟ್ ಕ್ಯಾಮೆರಾವನ್ನೂ Vivo ನೀಡಲಿದೆ ಎಂದು ತಿಳಿದುಬಂದಿದೆ. ಲೀಕ್ ಪ್ರಕಾರ, Vivo V70 Elite ಫೋನ್ 6,500mAhಕ್ಕಿಂತ ಹೆಚ್ಚಿನ ಬ್ಯಾಟರಿಯನ್ನು ಹೊಂದಿರಲಿದೆ. ಇದಕ್ಕೆ 90W ಫಾಸ್ಟ್ ಚಾರ್ಜಿಂಗ್ ಬೆಂಬಲವಿರಲಿದೆ ಎನ್ನಲಾಗಿದೆ.
ಒಟ್ಟಾರೆಯಾಗಿ, Vivo V70 ಸರಣಿ ಭಾರತದಲ್ಲಿ ಮಧ್ಯಮ-ಪ್ರೀಮಿಯಂ ಸೆಗ್ಮೆಂಟ್‌ನಲ್ಲಿ ಹೊಸ ಆಯ್ಕೆಯನ್ನು ನೀಡುವ ಸಾಧ್ಯತೆ ಇದೆ. ಬೆಲೆ, RAM-ಸ್ಟೋರೇಜ್ ಆಯ್ಕೆಗಳು ಮತ್ತು ವಿನ್ಯಾಸದ ಮೂಲಕ ಈ ಸರಣಿ ಗ್ರಾಹಕರ ಗಮನ ಸೆಳೆಯುತ್ತದೆಯೇ ಎಂಬುದು ಬಿಡುಗಡೆ ನಂತರ ಸ್ಪಷ್ಟವಾಗಲಿದೆ. ಅಧಿಕೃತ ವಿವರಗಳು ಹೊರಬರುವವರೆಗೆ, ಈ ಮಾಹಿತಿ ಲೀಕ್ ವರದಿಗಳ ಆಧಾರಿತವಾಗಿದ್ದು, ಅಂತಿಮ ಬೆಲೆಯಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆ ಇದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು? ಈ ಬೆಲೆಗಳು ಅಧಿಕೃತವಾದರೆ ನಿಮ್ಮ ಆಯ್ಕೆ ಏನಾಗಿರಲಿದೆ ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications