Home
ಮೊಬೈಲ್

Vivo V70 Elite ಮತ್ತು V70 ಫೋನ್‌ಗಳ ಭಾರತ ಬಿಡುಗಡೆ ದಿನಾಂಕ ಪ್ರಕಟ!

ಭಾರತೀಯ ಸ್ಮಾರ್ಟ್‌ಫೋನ್ ಪ್ರಿಯರು ಬಹುನಿರೀಕ್ಷೆಯಿಂದ ಎದುರುನೋಡುತ್ತಿರುವ Vivo V70 Elite ಮತ್ತು Vivo V70 ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುವ ಅಧಿಕೃತ ದಿನಾಂಕ ಪ್ರಕಟವಾಗಿದೆ. Vivo ಭಾರತದಲ್ಲಿ ತನ್ನ ಹೊಸ Vivo V70 ಸರಣಿಯನ್ನು ಫೆಬ್ರವರಿ ಮೂರನೇ ವಾರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅಧಿಕೃತವಾಗಿ ಘೋಷಿದ್ದು, Vivo V70 Elite ಮತ್ತು Vivo V70 ಎರಡೂ ಫೋನ್‌ಗಳನ್ನು ಫ್ಲಿಪ್‌ಕಾರ್ಟ್, ಅಮೆಜಾನ್ ಹಾಗೂ Vivo ಇಂಡಿಯಾ ಅಧಿಕೃತ ಆನ್‌ಲೈನ್ ಸ್ಟೋರ್ ಮೂಲಕ ಖರೀದಿಗೆ ಲಭ್ಯವಿರುತ್ತವೆ ಎಂದು ಪ್ರಕಟಿಸಿದೆ.

ಫೆಬ್ರವರಿ 19ರಂದು Vivo V70 ಸರಣಿ ಪರಿಚಯ
Vivo ಕಂಪನಿಯ ಪ್ರಕಟಣೆಯ ಪ್ರಕಾರ, Vivo V70 ಸರಣಿ ಫೆಬ್ರವರಿ 19ರಂದು ಮಧ್ಯಾಹ್ನ 12 ಗಂಟೆಗೆ ಭಾರತದಲ್ಲಿ ಅನಾವರಣಗೊಳ್ಳಲಿದೆ. ವಿಶೇಷವಾಗಿ ಗಮನ ಸೆಳೆಯುವ ಅಂಶವೆಂದರೆ, ರೂ. 50,000 ಒಳಗಿನ ಬೆಲೆ ವಿಭಾಗದಲ್ಲಿ ಅತ್ಯಂತ ತೆಳುವಾದ 1.25 ಮಿಮೀ ಬೆಸೆಲ್‌ಗಳನ್ನು ಹೊಂದಿರುವ ಫೋನ್‌ಗಳು ಎಂದು Vivo ಹೇಳಿಕೊಂಡಿದೆ. ಇತ್ತೀಚಿನ ಲೀಕ್‌ಗಳ ಪ್ರಕಾರ, ಈ ಸ್ಮಾರ್ಟ್‌ಫೋನ್‌ಗಳ ಬೆಲೆ ಭಾರತದಲ್ಲಿ ರೂ. 55,000 ಕ್ಕಿಂತ ಕಡಿಮೆಯಿರುವ ಸಾಧ್ಯತೆ ಇದೆ.

ಗಮನಿಸುವುದಾದರೆ, ಇತ್ತೀಚೆಗಷ್ಟೇ Vivo, V70 ಸರಣಿಯ ಅಧಿಕೃತ ವಿನ್ಯಾಸವನ್ನು ಕಂಪೆನಿಯು ಟೀಸ್ ಮಾಡಿದ್ದು, ಚೌಕಾಕಾರದ ರಿಯರ್ ಕ್ಯಾಮೆರಾ ಮಾಡ್ಯೂಲ್ ಈ ಫೋನ್‌ಗಳ ಪ್ರಮುಖ ವಿನ್ಯಾಸ ಲಕ್ಷಣವಾಗಿರಲಿದೆ. ಅಲ್ಲದೆ, Vivo V70 ಮಾದರಿ Passion Red ಮತ್ತು Lemon Yellow ಬಣ್ಣಗಳಲ್ಲಿ ಲಭ್ಯವಾಗಲಿದೆ. Vivo V70 Elite ಫೋನ್ Passion Red, Sand Beige, ಮತ್ತು Authentic Black ಬಣ್ಣ ಆಯ್ಕೆಗಳೊಂದಿಗೆ ಮಾರಾಟಕ್ಕೆ ಬರಲಿದೆ.

Vivo V70 Elite ಮತ್ತು V70 ಫೋನ್‌ಗಳ ಭಾರತ ಬಿಡುಗಡೆ ದಿನಾಂಕ ಪ್ರಕಟ!

ಕಾರ್ಯಕ್ಷಮತೆಯ ವಿಚಾರಕ್ಕೆ ಬಂದರೆ, Vivo V70 Elite ಫೋನ್‌ನಲ್ಲಿ Qualcomm ನ ಶಕ್ತಿಶಾಲಿ Snapdragon 8s Gen 3 ಚಿಪ್‌ಸೆಟ್ ನೀಡಲಾಗಿದೆ. ಇನ್ನೊಂದೆಡೆ, ಸಾಮಾನ್ಯ Vivo V70 ಮಾದರಿ Snapdragon 7 Gen 4 ಪ್ರೊಸೆಸರ್ ಹೊಂದಿರಲಿದೆ. ಎರಡೂ ಫೋನ್‌ಗಳು 6.59 ಇಂಚಿನ 1.5K ಡಿಸ್ಪ್ಲೇ, 120Hz ರಿಫ್ರೆಶ್ ರೇಟ್, 459ppi ಪಿಕ್ಸೆಲ್ ಡೆನ್ಸಿಟಿ ಮತ್ತು ಗರಿಷ್ಠ 5,000 ನಿಟ್ಸ್ ಬ್ರೈಟ್ನೆಸ್‌ನ್ನು ಬೆಂಬಲಿಸುವುದಾಗಿ ಕಂಪನಿ ತಿಳಿಸಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್ ವಿಷಯದಲ್ಲಿ Vivo V70 ಸರಣಿ ಗಮನಾರ್ಹ ಅಪ್‌ಗ್ರೇಡ್‌ಗಳನ್ನು ಹೊಂದಿದೆ. ಈ ಫೋನ್‌ಗಳಲ್ಲಿ 6,500mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಇದ್ದು, 90W ವೇಗದ ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲ ದೊರೆಯಲಿದೆ. ಜೊತೆಗೆ, ಫೋನ್‌ಗಳು IP68 ಮತ್ತು IP69 ರೇಟಿಂಗ್‌ಗಳೊಂದಿಗೆ ಧೂಳು ಮತ್ತು ನೀರಿಗೆ ಉತ್ತಮ ರಕ್ಷಣೆಯನ್ನು ಒದಗಿಸಲಿವೆ.

ಕ್ಯಾಮೆರಾ ವಿಭಾಗದಲ್ಲೂ Vivo ದೊಡ್ಡ ನಿರೀಕ್ಷೆ ಮೂಡಿಸಿದೆ. Vivo V70 ಸರಣಿಯಲ್ಲಿ Zeiss ಸಹಯೋಗದ 50 ಮೆಗಾಪಿಕ್ಸೆಲ್ Sony IMX882 ಪ್ರಾಥಮಿಕ ಕ್ಯಾಮೆರಾ (OIS ಸಹಿತ), 50 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಮತ್ತು ಒಂದು ಅಲ್ಟ್ರಾ-ವೈಡ್ ಲೆನ್ಸ್ ಇರಲಿದೆ. ಸೆಲ್ಫಿ ಪ್ರಿಯರಿಗಾಗಿ, ಮುಂಭಾಗದಲ್ಲಿ 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ನೀಡಲಾಗುವುದು ಎಂದು ತಿಳಿಸಲಾಗಿದೆ.

ಒಟ್ಟಾರೆಯಾಗಿ, ಪ್ರೀಮಿಯಂ ವಿನ್ಯಾಸ, ಶಕ್ತಿಶಾಲಿ ಪ್ರೊಸೆಸರ್, ದೊಡ್ಡ ಬ್ಯಾಟರಿ ಮತ್ತು ಸುಧಾರಿತ ಕ್ಯಾಮೆರಾ ವೈಶಿಷ್ಟ್ಯಗಳೊಂದಿಗೆ Vivo V70 ಸರಣಿಯು ಭಾರತೀಯ ಮಾರುಕಟ್ಟೆಯಲ್ಲಿ ಮಧ್ಯಮ-ಪ್ರೀಮಿಯಂ ವಿಭಾಗಕ್ಕೆ ತೀವ್ರ ಸ್ಪರ್ಧೆ ನೀಡುವ ಸಾಧ್ಯತೆ ಇದೆ. ಫೆಬ್ರವರಿ 19ರ ಲಾಂಚ್ ಬಳಿಕ ಈ Vivo V70 Elite ಮತ್ತು Vivo V70 ಸ್ಮಾರ್ಟ್‌ಫೋನ್‌ಗಳು ದೇಶದ ಗ್ರಾಹಕರಲ್ಲಿ ಎಷ್ಟು ಮೆಚ್ಚುಗೆ ಪಡೆಯುತ್ತವೆ ಎಂಬುದು ಕಾದು ನೋಡಬೇಕು. ಆದರೆ, ಸಾಕಷ್ಟು ನಿರೀಕ್ಷೆಯಂತೂ ಮೂಡಿದೆ.

Best Mobiles in India

English summary
Vivo has officially confirmed the India launch of its much-anticipated V70 series, including the Vivo V70 and Vivo V70 Elite. The smartphones will debut on February 19 and will be available via Flipkart, Amazon, and Vivo’s official online store, offering premium design with ultra-slim bezels in the sub-₹55,000 segment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+