Geekbench ನಲ್ಲಿ Vivo V70 Elite: ಬಿಡುಗಡೆಗೆ ಕೆಲವೇ ದಿನ, ಫೀಚರ್ಸ್ ರಿವೀಲ್!
Vivo ತನ್ನ ಹೊಸ ಮತ್ತು ಬಹುನಿರೀಕ್ಷಿತ Vivo V70 ಸರಣಿಯನ್ನು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಸರಣಿಯಲ್ಲಿ Vivo V70 Elite ಮತ್ತು Vivo V70 ಎಂಬ ಎರಡು ಪ್ರಮುಖ ಮಾದರಿಗಳು ಇರಲಿದ್ದು, ಇವು ಈಗಾಗಲೇ ದೇಶದಾದ್ಯಂತ ಸ್ಮಾರ್ಟ್‌ಫೋನ್ ಪ್ರಿಯರಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿವೆ. ಇದೀಗ ಬಿಡುಗಡೆಗೂ ಮುನ್ನವೇ Vivo V70 Elite ಒಂದು ಬೆಂಚ್‌ಮಾರ್ಕ್ ಪ್ಲಾಟ್‌ಫಾರ್ಮ್‌ನಲ್ಲಿ ಕಾಣಿಸಿಕೊಂಡಿರುವುದು, ಈ ಸ್ಮಾರ್ಟ್‌ಫೋನ್‌ನ ಕಾರ್ಯಕ್ಷಮತೆ ಮತ್ತು ಹಾರ್ಡ್‌ವೇರ್ ಸಾಮರ್ಥ್ಯದ ಬಗ್ಗೆ ಸ್ಪಷ್ಟ ಚಿತ್ರಣ ನೀಡಿದೆ.
ಹೌದು, ಇತ್ತೀಚೆಗೆ Geekbench ವೆಬ್‌ಸೈಟ್‌ನಲ್ಲಿ V2548 ಮಾದರಿ ಸಂಖ್ಯೆಯ Vivo ಸ್ಮಾರ್ಟ್‌ಫೋನ್ ಲಿಸ್ಟ್ ಆಗಿದ್ದು, ಇದು ಬರಲಿರುವ Vivo V70 Elite ಆಗಿರಬಹುದು ಎಂದು ಟೆಕ್ ತಜ್ಞರು(ಟೆಕ್ ಬ್ಲಾಗರ್ ಅನ್ವಿನ್ (@ZionsAnvin) ಅಂದಾಜಿಸಿದ್ದಾರೆ. ಲಿಸ್ಟಿಂಗ್ ಪ್ರಕಾರ, ಈ ಫೋನ್ 12GB RAM ಹಾಗೂ ಹೊಸ ತಲೆಮಾರಿನ Android 16 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಬರುತ್ತದೆ. ಪರ್ಫಾರ್ಮೆನ್ಸ್ ವಿಚಾರದಲ್ಲಿ, ಇದು ಸಿಂಗಲ್-ಕೋರ್ ಪರೀಕ್ಷೆಯಲ್ಲಿ 1,973 ಅಂಕಗಳು ಮತ್ತು ಮಲ್ಟಿ-ಕೋರ್ ಪರೀಕ್ಷೆಯಲ್ಲಿ 4,863 ಅಂಕಗಳು ಗಳಿಸಿದೆ.
ಅಂದರೆ, Geekbench ವಿವರಗಳಲ್ಲಿ ಕಂಡುಬಂದ ಅಂಕಿಅಂಶಗಳ ಪ್ರಕಾರ, ಮುಂಬರುವ Vivo V70 Elite ಫೋನ್ ಒಂದು ಶಕ್ತಿಶಾಲಿ ಆಕ್ಟಾ-ಕೋರ್ ARMv8 ಚಿಪ್‌ಸೆಟ್ ಹೊಂದಿರಲಿದೆ. ಇದರಲ್ಲಿ ಮೂರು ಎನರ್ಜಿ-ಎಫಿಷಿಯಂಟ್ ಕೋರ್‌ಗಳು 2.02GHz ವೇಗದಲ್ಲಿ, ನಾಲ್ಕು ಪರ್ಫಾರ್ಮೆನ್ಸ್ ಕೋರ್‌ಗಳು 2.80GHz ವೇಗದಲ್ಲಿ ಹಾಗೂ ಒಂದು ಪ್ರೈಮ್ ಕೋರ್ 3.01GHz ಗರಿಷ್ಠ ಕ್ಲಾಕ್ ಸ್ಪೀಡ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಸಂಯೋಜಯು ಗೇಮಿಂಗ್, ಮಲ್ಟಿಟಾಸ್ಕಿಂಗ್ ಮತ್ತು ಹೆವಿ ಯೂಸ್‌ಗೆ ಸೂಕ್ತವಾಗಿರಲಿದೆ ಎಂಬುದನ್ನು ಖಚಿತಪಡಿಸುತ್ತದೆ.

Vivo ಕಂಪನಿ ಈಗಾಗಲೇ ಭಾರತದಲ್ಲಿ Vivo V70 ಸರಣಿಯನ್ನು ಬಿಡುಗಡೆ ಮಾಡುವುದನ್ನು ದೃಢಪಡಿಸಿದೆ. ಈ ಫೋನ್‌ಗಳು Amazon, Flipkart ಮತ್ತು Vivo India ಅಧಿಕೃತ ವೆಬ್‌ಸೈಟ್ ಮೂಲಕ ಗ್ರಾಹಕರಿಗೆ ಲಭ್ಯವಾಗಲಿವೆ. ಬಣ್ಣಗಳ ಆಯ್ಕೆಯಲ್ಲಿಯೂ ಕಂಪನಿ ವಿಶೇಷ ಗಮನ ನೀಡಿದ್ದು, Vivo V70 Elite ಅನ್ನು Passion Red, Sand Beige ಮತ್ತು Authentic Black ಬಣ್ಣಗಳಲ್ಲಿ ಪರಿಚಯಿಸಲಿದೆ. ಇನ್ನು ಸಾಮಾನ್ಯ Vivo V70 ಮಾದರಿ Passion Red ಮತ್ತು Lemon Yellow ಶೇಡ್‌ಗಳಲ್ಲಿ ದೊರೆಯಲಿದೆ.
ಸ್ಪೆಸಿಫಿಕೇಶನ್‌ಗಳ ವಿಚಾರಕ್ಕೆ ಬಂದರೆ, Vivo V70 Elite ನಲ್ಲಿ ಪ್ರೀಮಿಯಂ ವರ್ಗದ Snapdragon 8s Gen 3 ಪ್ರೊಸೆಸರ್ ಇರಲಿದೆ. ಇತ್ತ, Vivo V70 ಮಾದರಿಯಲ್ಲಿ Snapdragon 7 Gen 4 ಚಿಪ್‌ಸೆಟ್ ಬಳಕೆಯಾಗಲಿದೆ. Vivo V70 ಸರಣಿಯ ಎರಡೂ ಫೋನ್‌ಗಳು 6.59 ಇಂಚಿನ 1.5K ಡಿಸ್ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್, 459ppi ಪಿಕ್ಸೆಲ್ ಡೆನ್ಸಿಟಿ, 5,000 ನಿಟ್ಸ್ ಪೀಕ್ ಬ್ರೈಟ್ನೆಸ್ ಮತ್ತು 1.07 ಬಿಲಿಯನ್ ಬಣ್ಣಗಳ ಬೆಂಬಲ ನೀಡಲಿವೆ. ಜೊತೆಗೆ, ಕೇವಲ 1.25mm ತೆಳುವಾದ ಬೇಜಲ್‌ಗಳು ಫೋನ್‌ಗೆ ಪ್ರೀಮಿಯಂ ಲುಕ್ ನೀಡಲಿವೆ.

ಬ್ಯಾಟರಿ ವಿಷಯದಲ್ಲಿಯೂ Vivo ದೊಡ್ಡ ಅಪ್‌ಗ್ರೇಡ್ ನೀಡುತ್ತಿದೆ. Vivo V70 ಸರಣಿಯಲ್ಲಿ 6,500mAh ಸಾಮರ್ಥ್ಯದ ಬ್ಯಾಟರಿ ಇರಲಿದ್ದು, 90W ಫಾಸ್ಟ್ ವೈರ್ಡ್ ಚಾರ್ಜಿಂಗ್ ಬೆಂಬಲವಿರುತ್ತದೆ. ಒಟ್ಟಾರೆಯಾಗಿ, Vivo V70 ಸರಣಿಯು ಕಾರ್ಯಕ್ಷಮತೆ, ಡಿಸ್ಪ್ಲೇ ಮತ್ತು ಬ್ಯಾಟರಿ ವಿಭಾಗಗಳಲ್ಲಿ ಭಾರತೀಯ ಬಳಕೆದಾರರನ್ನು ಗುರಿಯಾಗಿಸಿಕೊಂಡಿರುವ ಶಕ್ತಿಶಾಲಿ ಪ್ಯಾಕೇಜ್ ಆಗಿ ಕಾಣುತ್ತಿದೆ. ಇನ್ನು ಈ ಸರಣಿಯ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ದೃಢಪಡಿಸಿಲ್ಲವಾದರೂ, ಸೋರಿಕೆಗಳ ಪ್ರಕಾರ ಫೆಬ್ರವರಿ 19 ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ.


Click it and Unblock the Notifications








