Home
ಮೊಬೈಲ್

ಭಾರತಕ್ಕೆ Vivo V70 FE: ಗೀಕ್‌ಬೆಂಚ್‌ನಲ್ಲಿ ಲಿಸ್ಟ್, ಪ್ರಮುಖ ಫೀಚರ್ಸ್ ಬಹಿರಂಗ!

ವಿವೋ ತನ್ನ ಮುಂದಿನ ತಲೆಮಾರಿನ Vivo V70 ಸ್ಮಾರ್ಟ್‌ಫೋನ್‌ ಸರಣಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸುವ ನಿರೀಕ್ಷೆ ಇದೆ. ಇತ್ತೀಚಿನ ಲೀಕ್‌ಗಳು ಮತ್ತು ವರದಿಗಳು Vivo V70 ಸರಣಿಯು ಮುಂದಿನ ತಿಂಗಳು ಭಾರತದಲ್ಲಿ ಅಧಿಕೃತವಾಗಿ ಪ್ರವೇಶಿಸಬಹುದು ಎಂದು ಹೇಳಿವೆ. ಇದೀಗ ಬಿಡುಗಡೆಗೂ ಮುನ್ನವೇ, ಈ ಸರಣಿಯಲ್ಲಿನ Vivo V70 FE ಮಾದರಿಯು ಗೀಕ್‌ಬೆಂಚ್ ಬೆಂಚ್‌ಮಾರ್ಕ್ ಪ್ಲಾಟ್‌ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದು, ಫೋನ್‌ನ ಪ್ರಮುಖ ಫೀಚರ್ಸ್ ಕಂಡುಬಂದಿವೆ.

ಪ್ರಸಿದ್ಧ ಟೆಕ್ ಟಿಪ್‌ಸ್ಟರ್ ಅಭಿಷೇಕ್ ಯಾದವ್ (@yabhishekhd) ಅವರು, ಮಾಡೆಲ್ ನಂಬರ್ V2550 ಹೊಂದಿರುವ Vivo V70 FE ಫೋನ್ ಅನ್ನು ಗೀಕ್‌ಬೆಂಚ್ ಲಿಸ್ಟಿಂಗ್‌ನಲ್ಲಿ ಗುರುತಿಸಿದ್ದಾರೆ. ಇಲ್ಲಿ ಫೋನ್ 2,507 OpenCL ಸ್ಕೋರ್ ದಾಖಲಿಸಿದ್ದು, ಇದರಲ್ಲಿ ಎಂಟು-ಕೋರ್ ಸಿಪಿಯು ಇರುವುದನ್ನು ಲಿಸ್ಟಿಂಗ್ ದೃಢಪಡಿಸುತ್ತದೆ. 2.0GHz ಮೂಲ ವೇಗ ಮತ್ತು 2.5GHz ಗರಿಷ್ಠ ವೇಗದ ಕೋರ್‌ಗಳು ಹಾಗೂ Mali-G615 MC2 GPU ಇರುವುದರಿಂದ, ಇದರಲ್ಲಿ MediaTek Dimensity 7300 SoC ಪ್ರೊಸೆಸರ್ ಬಳಸಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ಗೀಕ್‌ಬೆಂಚ್ ಮಾಹಿತಿಯ ಪ್ರಕಾರ, Vivo V70 FE ಸ್ಮಾರ್ಟ್‌ಫೋನ್ Android 16 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಸುಮಾರು 7.25GB RAM ಪಟ್ಟಿ ಮಾಡಲಾಗಿದೆ, ಇದು ವಾಸ್ತವಿಕವಾಗಿ 8GB RAM ವೇರಿಯಂಟ್ ಆಗಿರಬಹುದು. ಮುಂದಿನ ದಿನಗಳಲ್ಲಿ ಹೆಚ್ಚಿನ RAM ಮತ್ತು ಸ್ಟೋರೇಜ್ ಆಯ್ಕೆಗಳು ಲಭ್ಯವಾಗುವ ಸಾಧ್ಯತೆ ಕೂಡ ಇದೆ. ಈ ಸ್ಪೆಸಿಫಿಕೇಷನ್‌ಗಳು ಮಧ್ಯಮ ಶ್ರೇಣಿಯ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡಂತೆ ಕಾಣುತ್ತವೆ.

ಭಾರತಕ್ಕೆ Vivo V70 FE: ಗೀಕ್‌ಬೆಂಚ್‌ನಲ್ಲಿ ಲಿಸ್ಟ್, ಪ್ರಮುಖ ಫೀಚರ್ಸ್ ಬಹಿರಂಗ!

ವಿವೋ ಕಂಪನಿ ಇನ್ನೂ ಅಧಿಕೃತವಾಗಿ V70 ಸರಣಿಯ ಬಿಡುಗಡೆ ದಿನಾಂಕ ಅಥವಾ ಸಂಪೂರ್ಣ ವಿವರಗಳನ್ನು ಪ್ರಕಟಿಸಿಲ್ಲ. ಆದರೆ ಇತ್ತೀಚಿನ ವರದಿಗಳ ಪ್ರಕಾರ, Vivo V70 ಸೀರೀಸ್ ಫೆಬ್ರವರಿ ಮಧ್ಯಭಾಗದಲ್ಲಿ ಭಾರತದಲ್ಲಿ ಲಾಂಚ್ ಆಗುವ ಸಾಧ್ಯತೆ ಇದೆ. ಈ ಹೊಸ ಸರಣಿ, ಈಗಿನ Vivo V60 ಕುಟುಂಬಕ್ಕೆ ಉತ್ತರಾಧಿಕಾರಿಯಾಗಿ ಬರಲಿದೆ ಎಂದು ನಿರೀಕ್ಷಿಸಲಾಗಿದ್ದು, ಈ ಸರಣಿಯು ಸ್ಟ್ಯಾಂಡರ್ಡ್ Vivo V70, Vivo V70 FE, ಮತ್ತು ಪ್ರೀಮಿಯಂ Vivo V70 Elite ಜೊತೆಗೆ ಮಾರುಕಟ್ಟೆಗೆ ಬರಲಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಲಾಂಚ್ ವಿವರಗಳ ಬಗ್ಗೆ ಮಾತನಾಡುವುದಾದರೆ, Vivo V70 FE ಮಾದರಿ ಸ್ವಲ್ಪ ತಡವಾಗಿ ಬಿಡುಗಡೆಯಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ವದಂತಿಗಳ ಪ್ರಕಾರ, Vivo V70 ನಲ್ಲಿ Snapdragon 7 Gen 4 ಪ್ರೊಸೆಸರ್ ಇರಬಹುದು, ಮತ್ತು Vivo V70 Elite ನಲ್ಲಿ Snapdragon 8s Gen 3 SoC ದೊರೆಯುವ ನಿರೀಕ್ಷೆ ಇದೆ. ಈ ಹಿನ್ನೆಲೆ ನೋಡಿದರೆ, V70 FE ನಲ್ಲಿ ಮೀಡಿಯಾಟೆಕ್ ಚಿಪ್ ಬಳಸಿರುವುದು ಈ ಸರಣಿಗೆ ವಿಭಿನ್ನ ಆಯ್ಕೆಯಾಗಿ ಪರಿಣಮಿಸಬಹುದು.

ಒಟ್ಟಾರೆ,ಯಾಗಿ, Vivo V70 FE ಹೊಸ ಆಂಡ್ರಾಯ್ಡ್ ಆವೃತ್ತಿಯು, ಶಕ್ತಿಶಾಲಿ ಮೀಡಿಯಾಟೆಕ್ ಪ್ರೊಸೆಸರ್ ಮತ್ತು ಸಮತೋಲನವಾದ ಹಾರ್ಡ್‌ವೇರ್ ವೈಶಿಷ್ಟ್ಯಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಸ್ಪರ್ಧೆ ನೀಡುವ ಸಾಧ್ಯತೆ ಇದೆ. ಅಧಿಕೃತ ಘೋಷಣೆ ಇನ್ನೂ ಬಾಕಿ ಇದ್ದರೂ, ಲೀಕ್‌ಗಳ ಆಧಾರದ ಮೇಲೆ ನೋಡಿದರೆ, ಈ Vivo V70 FE ಫೋನ್ ಟೆಕ್ ಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗುವಂತೆ ಕಾಣುತ್ತದೆ. ಅದಾಗ್ಯೂ ನಾವು Vivo V70 FE ಬಿಡುಗಡೆಯವರೆಗೂ ಕಾದುನೋಡಬೇಕಿದೆ.

Best Mobiles in India

English summary
Vivo’s upcoming V70 FE smartphone has appeared on Geekbench ahead of its launch, revealing key performance details including the MediaTek Dimensity 7300 processor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+