Home
ಮೊಬೈಲ್

Vivo V70 ಮತ್ತು V70 Elite ನಡುವೆ ಏನು ವ್ಯತ್ಯಾಸ?...ಇಲ್ಲಿದೆ ಫುಲ್ ಡೀಟೇಲ್ಸ್!

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಇತ್ತೀಚಿಗಷ್ಟೇ ಪರಿಚಯಗೊಂಡಿರುವ Vivo V70 ಸ್ಮಾರ್ಟ್‌ಫೋನ್ ಸರಣಿಯು ಸಾಕಷ್ಟು ಸದ್ದು ಮಾಡುತ್ತಿದೆ. ದೇಶದಲ್ಲಿ ಮಧ್ಯಮ ಪ್ರೀಮಿಯಂ ವಿಭಾಗದ ಸ್ಮಾರ್ಟ್‌ಫೋನ್‌ಗಳು ಬಿಸಿಬಿಸಿಯಾಗಿ ಖರ್ಚಾಗುತ್ತಿರುವ ವೇಳೆಗೆ Vivo ತನ್ನ ಹೊಸ Vivo V70 ಸರಣಿಯನ್ನು ಇದೇ ವಿಭಾಗದಲ್ಲಿ ಪರಿಚಯಿಸಿದೆ. ಈ ಬಾರಿ ಕಂಪನಿಯು ತನ್ನ V-ಸಿರೀಸ್ ತಂತ್ರದಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದ್ದು, ಸಾಮಾನ್ಯ ಮಾದರಿಯ ಜೊತೆಗೆ ಹೊಸ "Elite" ಆವೃತ್ತಿಯನ್ನೂ ಬಿಡುಗಡೆ ಮಾಡಿದೆ. ಪ್ರೀಮಿಯಂ ವಿನ್ಯಾಸ, ಬಲಿಷ್ಠ ನಿರ್ಮಾಣ ಮತ್ತು ವೃತ್ತಿಪರ ಮಟ್ಟದ ಕ್ಯಾಮೆರಾ ಅನುಭವ ಈ ಸರಣಿಯ ಪ್ರಮುಖ ಆಕರ್ಷಣೆಗಳಾಗಿವೆ. ಹಾಗಾಗಿ, ಇಂದಿನ ಲೇಖನದಲ್ಲಿ ಬೇಸ್ Vivo V70 ಮತ್ತು Vivo V70 Elite ಎರಡೂ ಸ್ಮಾರ್ಟ್‌ಫೋನ್‌ಗಳ ಪ್ರಮುಖ ವೈಶಿಷ್ಟ್ಯಗಳನ್ನು ಹೋಲಿಸಿ ನೋಡಿದ್ದೇವೆ. ಇಲ್ಲಿ ನಮಗೆ ಸಂಪೂರ್ಣ ಫೀಚರ್ಸ್ ಜೊತೆ ವ್ಯತ್ಯಾಸಗಳು ತಿಳಿಯುತ್ತವೆ.

ಪ್ರೀಮಿಯಂ ವಿನ್ಯಾಸ ಮತ್ತು ಭದ್ರತೆ
Vivo V70 ಮತ್ತು Vivo V70 Elite ಎರಡೂ ಮಾದರಿಗಳು ಏರೋಸ್ಪೇಸ್-ಗ್ರೇಡ್ ಅಲ್ಯೂಮಿನಿಯಂ ಫ್ರೇಮ್ ಬಳಕೆ ಮಾಡಿದ್ದು, ದೃಢತೆ ಮತ್ತು ಆಕರ್ಷಕತೆಯ ಸಂಯೋಜನೆಯನ್ನು ನೀಡುತ್ತವೆ. IP68 ಮತ್ತು IP69 ರೇಟಿಂಗ್ ಹೊಂದಿರುವುದರಿಂದ, ಎರಡರಲ್ಲೂ ಧೂಳು ಹಾಗೂ ಹೆಚ್ಚು ಒತ್ತಡದ ನೀರಿನಿಂದಲೂ ರಕ್ಷಣೆ ಸಿಗುತ್ತದೆ. ಡಿಸ್‌ಪ್ಲೆ ವಿಭಾಗದಲ್ಲಿ, ಎರಡೂ ಫೋನ್‌ಗಳಲ್ಲಿ 6.59 ಇಂಚಿನ ಫ್ಲಾಟ್ AMOLED ಡಿಸ್ಪ್ಲೇ, 1.5K ರೆಸಲ್ಯೂಷನ್, 120Hz ರಿಫ್ರೆಶ್ ರೇಟ್ ಹಾಗೂ 5,000 ನಿಟ್ಸ್ ಪೀಕ್ ಬ್ರೈಟ್‌ನೆಸ್ ಸೌಲಭ್ಯವಿದೆ. ಹೊರಗೆ ಬೆಳಕಿನಲ್ಲಿ ಕೂಡ ಸ್ಪಷ್ಟ ವೀಕ್ಷಣೆಗೆ ಅತ್ಯುತ್ತಮವಾಗಿದೆ. 3D ಅಲ್ಟ್ರಾಸೋನಿಕ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನಿಂದ ಬೆವರು ಅಥವಾ ತೇವ ಇರುವ ಕೈಯಿಂದಲೂ ವೇಗವಾಗಿ ಅನ್ಲಾಕ್ ಮಾಡಬಹುದು.

ಪ್ರೊಸೆಸರ್‌ನಲ್ಲಿ ಪ್ರಮುಖ ವ್ಯತ್ಯಾಸ
Vivo V70 ಮತ್ತು Vivo V70 Elite ಎರಡು ಮಾದರಿಗಳ ನಡುವೆ ಪ್ರಮುಖ ವ್ಯತ್ಯಾಸವು ಪ್ರೊಸೆಸರ್‌ನಲ್ಲಿ ಕಾಣಿಸುತ್ತದೆ. Vivo V70 Elite ಮಾದರಿಯಲ್ಲಿ Qualcomm Snapdragon 8s Gen 3 ಚಿಪ್‌ಸೆಟ್ ಬಳಸಲಾಗಿದೆ. ಇದು ಹೆಚ್ಚಿನ ಗೇಮಿಂಗ್ ಮತ್ತು ಹೆವಿ ಟಾಸ್ಕ್‌ಗಳಿಗೆ ಸೂಕ್ತವಾಗಿದ್ದು, V-ಸಿರೀಸ್‌ನಲ್ಲಿ ಮೊದಲ ಬಾರಿಗೆ Snapdragon 8-ಸಿರೀಸ್ ಪ್ರೊಸೆಸರ್ ನೀಡಲಾಗಿದೆ. ಇನ್ನೊಂದೆಡೆ ಸಾಮಾನ್ಯ Vivo V70 ಮಾದರಿಯಲ್ಲಿ Snapdragon 7 Gen 4 ಪ್ರೊಸೆಸರ್ ಲಭ್ಯವಿದ್ದು, ಉತ್ತಮ ಮಲ್ಟಿಟಾಸ್ಕಿಂಗ್ ಮತ್ತು ಮಧ್ಯಮ ಮಟ್ಟದ ಗೇಮಿಂಗ್‌ಗಾಗಿ ಸಮರ್ಪಕ ಕಾರ್ಯಕ್ಷಮತೆ ನೀಡುತ್ತದೆ.

ಕಾರ್ಯಕ್ಷಮತೆಯಲ್ಲಿ Vivo V70 Elite ಗಮನಾರ್ಹವಾಗಿ ಹೆಚ್ಚಿನ ಬೆಂಚ್‌ಮಾರ್ಕ್ ಸ್ಕೋರ್‌ಗಳನ್ನು ನೀಡುತ್ತದೆ, ಸ್ಟ್ಯಾಂಡರ್ಡ್ V70 ಗಿಂತ ಸಿಂಗಲ್-ಕೋರ್‌ನಲ್ಲಿ ಸರಿಸುಮಾರು 49% ಹೆಚ್ಚು ಮತ್ತು ಮಲ್ಟಿ-ಕೋರ್ ಕಾರ್ಯಕ್ಷಮತೆಯಲ್ಲಿ 34% ಹೆಚ್ಚು. ಹಾಗೆಯೇ, ಸಂಗ್ರಹಣೆ ಮತ್ತು RAM ವಿಭಾಗದಲ್ಲಿ, V70 Elite 12GB RAM ಮತ್ತು 512GB ಸಂಗ್ರಹಣೆ ಸೇರಿದಂತೆ ಹೆಚ್ಚಿನ ಸಂರಚನಾ ಆಯ್ಕೆಗಳನ್ನು ಹೊಂದಿದೆ, ಆದರೆ ಮೂಲ ಮಾದರಿಯು 256GB ಸಂಗ್ರಹಣೆಯ ಮೇಲೆ ಕೇಂದ್ರೀಕರಿಸಿದೆ.

Vivo V70 ಮತ್ತು V70 Elite ನಡುವೆ ಏನು ವ್ಯತ್ಯಾಸ?...ಇಲ್ಲಿದೆ ಫುಲ್ ಡೀಟೇಲ್ಸ್!

ZEISS ಜೊತೆಗೆ ಫ್ಲಾಗ್‌ಶಿಪ್ ಕ್ಯಾಮೆರಾ ಅನುಭವ
ಕ್ಯಾಮೆರಾ ವಿಭಾಗದಲ್ಲಿ Vivo ತನ್ನ ಜರ್ಮನ್ ಆಪ್ಟಿಕಲ್ ಬ್ರ್ಯಾಂಡ್ ಜೊತೆಗೆ ಸಹಕಾರ ಮುಂದುವರಿಸಿದೆ. ಎರಡು ಮಾದರಿಗಳಲ್ಲೂ ZEISS ಆಪ್ಟಿಕ್ಸ್ ಹೊಂದಿರುವ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಇದೆ. ಇದರ ಮುಖ್ಯ ಕ್ಯಾಮೆರಾ 50MP ಸೆನ್ಸರ್ ಹೊಂದಿದ್ದು, OIS (Optical Image Stabilization) ಸಹಿತ ಉತ್ತಮ ಲೈಟ್ ಮತ್ತು ಲೋ ಲೈಟ್ ಫೋಟೋಗಳನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ. ಜೊತೆಗೆ 50MP ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ 3x ಆಪ್ಟಿಕಲ್ ಜೂಮ್ ಹಾಗೂ 100x ಡಿಜಿಟಲ್ ಜೂಮ್ ಸೌಲಭ್ಯ ಒದಗಿಸುತ್ತದೆ. ಮುಂಭಾಗದಲ್ಲಿ 50MP ಗ್ರೂಪ್ ಸೆಲ್ಫಿ ಕ್ಯಾಮೆರಾ ನೀಡಲಾಗಿದ್ದು, 92 ಡಿಗ್ರಿ ವೈಡ್ ವ್ಯೂ ಹಾಗೂ ಆಟೋಫೋಕಸ್ ಸಪೋರ್ಟ್ ಇದೆ. ZEISS ಮಲ್ಟಿಫೋಕಲ್ ಪೋರ್ಟ್‌ರೇಟ್ ಮೋಡ್ (85mm, 100mm) ಮತ್ತು AI ಸ್ಟೇಜ್ ಮೋಡ್ ಮುಂತಾದ ವೈಶಿಷ್ಟ್ಯಗಳು ದೂರದ ಸಬ್ಜೆಕ್ಟ್‌ಗಳನ್ನು ಸ್ಪಷ್ಟವಾಗಿ ಕ್ಲಿಕ್ ಮಾಡಲು ಸಹಕಾರಿಯಾಗಿವೆ.

ಸಾಫ್ಟ್‌ವೇರ್ ಮತ್ತು ಬ್ಯಾಟರಿ
ಎರಡೂ ಫೋನ್‌ಗಳು Android 16 ಆಧಾರಿತ OriginOS 6 ಮೇಲೆ ಕಾರ್ಯನಿರ್ವಹಿಸುತ್ತವೆ. ಕಂಪನಿ ನಾಲ್ಕು ವರ್ಷಗಳ OS ಅಪ್‌ಗ್ರೇಡ್ ಮತ್ತು ಆರು ವರ್ಷಗಳ ಭದ್ರತಾ ಅಪ್ಡೇಟ್ ಭರವಸೆ ನೀಡಿದೆ. ದೀರ್ಘಾವಧಿ ಬಳಕೆಗೆ ಇದು ಮಹತ್ವದ ಅಂಶವಾಗಿದೆ. ಬ್ಯಾಟರಿ ವಿಭಾಗದಲ್ಲಿ, Vivo V70 ಮತ್ತು Vivo V70 Elite ಎರಡೂ ಫೋನ್‌ಗಳಲ್ಲಿ 6,500mAh ದೊಡ್ಡ ಬ್ಯಾಟರಿ ಹಾಗೂ 90W ಫ್ಲ್ಯಾಶ್ ಚಾರ್ಜ್ ಸಪೋರ್ಟ್ ಇದದ್ದು, ಬ್ಯುಸಿ ಜೀವನಶೈಲಿಯವರಿಗೆ ಉತ್ತಮ ಬ್ಯಾಟರಿ ಬಾಳಿಕೆಯ ಭರವಸೆಯಿಂದ ಎರಡೂ ಸ್ಮಾರ್ಟ್‌ಫೋನ್‌ಗಳು ಉಪಯುಕ್ತವಾಗಿವೆ. ಸಂಪರ್ಕ ಆಯ್ಕೆಗಳು ಏರಿದಂತೆ ಇನ್ನುಳಿದ ಎಲ್ಲಾ ವೈಶಿಷ್ಟ್ಯಗಳನ್ನು ಹಂಚಿಕೊಂಡಿಬೆ.

ಭಾರತದಲ್ಲಿನ ಬೆಲೆ ಮತ್ತು ಬಣ್ಣ ಆಯ್ಕೆಗಳು
Vivo V70:
8GB + 256GB - ₹45,999
12GB + 256GB - ₹49,999
ಬಣ್ಣಗಳು: Passion Red, Lemon Yellow, Alpine Gray, Sandalwood Brown, Authentic Black
V70 Elite:
8GB + 256GB - ₹51,999
12GB + 256GB - ₹56,999
12GB + 512GB - ₹61,999
ಬಣ್ಣಗಳು: Passion Red, Sand Beige, Authentic Black

ಯಾವುದು ನಿಮಗೆ ಸೂಕ್ತ?
ನಿಮಗೆ ಹೆಚ್ಚಿನ ಗೇಮಿಂಗ್, ಹೆವಿ ಎಡಿಟಿಂಗ್ ಅಥವಾ ಉನ್ನತ ಮಟ್ಟದ ಕಾರ್ಯಕ್ಷಮತೆ ಬೇಕಾದರೆ V70 Elite ಉತ್ತಮ ಆಯ್ಕೆ. ಆದರೆ ಸಾಮಾನ್ಯ ಬಳಕೆ, ಉತ್ತಮ ಕ್ಯಾಮೆರಾ ಮತ್ತು ದೀರ್ಘ ಬ್ಯಾಟರಿ ಬ್ಯಾಕಪ್ ಮುಖ್ಯವಾದರೆ V70 ಮಾದರಿಯೂ ಮೌಲ್ಯಯುತ ಆಯ್ಕೆಯಾಗಿದೆ.ಒಟ್ಟಿನಲ್ಲಿ, Vivo V70 ಸರಣಿ ಪ್ರೀಮಿಯಂ ವಿನ್ಯಾಸ, ಶಕ್ತಿಶಾಲಿ ಕಾರ್ಯಕ್ಷಮತೆ ಮತ್ತು ZEISS ಕ್ಯಾಮೆರಾ ತಂತ್ರಜ್ಞಾನವನ್ನು ಒಟ್ಟುಗೂಡಿಸಿ ಭಾರತೀಯ ಬಳಕೆದಾರರಿಗೆ ಸ್ಪರ್ಧಾತ್ಮಕ ಆಯ್ಕೆಯನ್ನು ನೀಡುತ್ತದೆ ಎಂಬುದು ನಮ್ಮ ಅಭಿಪ್ರಾಯ.

More from GizBot

Best Mobiles in India

English summary
The Vivo V70 series has officially entered the Indian premium mid-range market, featuring the standard V70 and the new V70 Elite variant. While both models offer a premium design, AMOLED display, and IP68/IP69 protection, the V70 Elite stands out with the powerful Snapdragon 8s Gen 3 processor and higher performance capabilities. Here’s a complete comparison of features and key differences between the two models.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+