Vivo V70 ಮತ್ತು V70 Elite ಬೆಲೆ ಸೋರಿಕೆ: ಪ್ರೀಮಿಯಂ ಫೀಚರ್ಸ್, ಕಡಿಮೆ ದರ?
ಭಾರತದಲ್ಲಿ Vivo ತನ್ನ ಜನಪ್ರಿಯ V ಸೀರಿಸ್ ಅನ್ನು ಶೀಘ್ರದಲ್ಲೇ ಪರಿಚಯಿಸಲು ಸಜ್ಜಾಗಿದೆ. ಈ ಸರಣಿಯಲ್ಲಿ Vivo V70 ಮತ್ತು Vivo V70 Elite ಎಂಬ ಎರಡು ಸ್ಮಾರ್ಟ್‌ಫೋನ್‌ಗಳು ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇದ್ದರೆ, ಇವುಗಳ ಜೊತೆಗೆ ಮತ್ತೊಂದು ಹೊಸ ಮಾದರಿ Vivo V70 FE ಕೂಡ ಆಗಮನದ ನಿರೀಕ್ಷೆ ಇದೆ. ಇದೇ ವೇಳೆಗೆ ಪ್ರಖ್ಯಾತ ಟಿಪ್‌ಸ್ಟಾರ್ ಓರ್ವರು Vivo V70 ಮತ್ತು Vivo V70 Elite ಸ್ಮಾರ್ಟ್‌ಫೋನ್‌ಗಳ ಬೆಲೆಗಳನ್ನು ಮತ್ತು ಫೀಚರ್ಸ್‌ಗಳನ್ನು ಸೋರಿಕೆ ಮಾಡಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.
Vivo V70 ಸರಣಿಯ ಬೆಲೆ: ಏನನ್ನು ನಿರೀಕ್ಷಿಸಬಹುದು
ಭಾರತದಲ್ಲಿ Vivo V70 ಸರಣಿಯ ಅಧಿಕೃತ ಬಿಡುಗಡೆ ದಿನಾಂಕವಿಲ್ಲದಿದ್ದರೂ, ಟಿಪ್‌ಸ್ಟರ್ ಯೋಗೇಶ್ ಬ್ರಾರ್ ಅವರು ಮುಂಬರುವ Vivo V70 ಸರಣಿಯ ಬಗ್ಗೆ ಅದರ ಸಂಭಾವ್ಯ ಬೆಲೆ ಶ್ರೇಣಿ ಸೇರಿದಂತೆ ಪ್ರಮುಖ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಇವರ ಪ್ರಕಾರ, ಭಾರತದಲ್ಲಿ Vivo V70 ಸರಣಿಯ ಬೆಲೆ 55,000 ರೂ.ಗಿಂತ ಕಡಿಮೆ ಇರುತ್ತದೆ. ನ್ನು ಹೆಚ್ಚು ಫೀಚರ್‌ಗಳೊಂದಿಗೆ ಬರುವ Vivo V70 Elite ಮಾದರಿ ₹55,000 ಒಳಗಿನ ಬೆಲೆ ಶ್ರೇಣಿಯಲ್ಲಿ ಬರಲಿದೆ ಎನ್ನಲಾಗಿದೆ.
ಜೊತೆಗೆ, ಈ ಬೆಲೆಗಳು ಲಾಂಚ್/ಬ್ಯಾಂಕ್ ಕೊಡುಗೆಗಳನ್ನು ಒಳಗೊಂಡಿರುವುದಿಲ್ಲ ಎಂಬುದನ್ನು ಸೂಚಿಸಿದ್ದಾರೆ. ಇತ್ತೀಚಿನ ಕೆಲ ವರದಿಗಳ ಪ್ರಕಾರ, ಭಾರತದಲ್ಲಿ Vivo X200T ಬೆಲೆಯು ರೂ. 60,000 ಕ್ಕಿಂತ ಕಡಿಮೆ ಇರುವ ನಿರೀಕ್ಷೆಯಿದೆ, ಆದ್ದರಿಂದ Vivo X200T ಮತ್ತು Vivo V70 ಎಲೈಟ್ ನಡುವೆ ಹೆಚ್ಚು ಬದಲಾವಣೆ ಇರುತ್ತವೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ, V70 Elite ಮಾದರಿಯು, ಹಿಂದಿನ V ಸೀರಿಸ್‌ನ 'Pro' ಫೋನ್‌ಗಳ ಸ್ಥಾನವನ್ನು ಭರ್ತಿ ಮಾಡುವ ನಿರೀಕ್ಷೆಯಿದೆ.

Vivo V70 ಸರಣಿ: ನಿರೀಕ್ಷಿತ ವೈಶಿಷ್ಟ್ಯಗಳು
Vivo V70 ಸರಣಿಯು ಕ್ಯಾಮೆರಾ ವಿಭಾಗದಲ್ಲಿ ವಿಶೇಷವಾಗಿ ಗಮನ ಸೆಳೆಯಲಿದೆ ಎಂದು ಹೇಳಲಾಗಿದೆ. Vivo V70 ಮತ್ತು Vivo V70 Elite ಎರಡೂ ಫೋನ್‌ಗಳಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಇರಲಿದ್ದು, 50MP ಮುಖ್ಯ ಕ್ಯಾಮೆರಾ ಮತ್ತು 8MP ಅಲ್ಟ್ರಾ-ವೈಡ್ ಲೆನ್ಸ್ ದೊರೆಯಲಿದೆ. ಇದರ ಜೊತೆಗೆ ಪ್ರಮುಖ ಹೈಲೈಟ್ ಆಗಿ 50MP 3X ZEISS Night Telephoto ಕ್ಯಾಮೆರಾವನ್ನು ನೀಡಲಾಗುತ್ತದೆ ಎಂಬ ಮಾಹಿತಿ ಇದೆ.
ಈ 50MP 3X ZEISS Night Telephoto ಕ್ಯಾಮೆರಾ ಟೆಲಿಫೋಟೋ ಕ್ಯಾಮೆರಾ ದೊಡ್ಡ ಗಾತ್ರದ ಸೆನ್ಸರ್ ಹೊಂದಿದ್ದು, ಕಡಿಮೆ ಬೆಳಕಿನಲ್ಲೂ ಹೆಚ್ಚು ವಿವರಗಳಿರುವ ಪೋರ್ಟ್ರೇಟ್ ಫೋಟೋಗಳನ್ನು ಸೆರೆಹಿಡಿಯಲು ಸಹಾಯ ಮಾಡಲಿದೆ. ಜೊತೆಗೆ Vivo ತನ್ನ ಹೊಸ NICE 1.0 AI ಇಮೇಜಿಂಗ್ ಅಲ್ಗಾರಿದಮ್ ಅನ್ನು ಪರಿಚಯಿಸಬಹುದು. ಇದು ಫೋಟೋಗಳಲ್ಲಿ ನಾಯ್ಸ್ ಕಡಿಮೆ ಮಾಡಿ, ನೈಸರ್ಗಿಕ ಬಣ್ಣಗಳು ಮತ್ತು ಟೆಕ್ಸ್ಚರ್‌ಗಳನ್ನು ಉಳಿಸುವುದಕ್ಕೆ ಸಹಕಾರಿಯಾಗುವ ನಿರೀಕ್ಷೆ ಇದೆ.
ಕಾರ್ಯಕ್ಷಮತೆಯ ವಿಷಯದಲ್ಲಿ Vivo V70 Elite ದೊಡ್ಡ ಅಪ್‌ಗ್ರೇಡ್ ಆಗಲಿದೆ. ಈ ಮಾದರಿಯಲ್ಲಿ Snapdragon 8s Gen 3 ಪ್ರೊಸೆಸರ್ ಇರಬಹುದು ಎಂದು ನಿರೀಕ್ಷಿಸಲಾಗಿದ್ದು, ಇದು V ಸೀರಿಸ್‌ನಲ್ಲೇ ಅತ್ಯಂತ ಶಕ್ತಿಶಾಲಿ ಚಿಪ್‌ಸೆಟ್ ಆಗಿರಲಿದೆ. ಇನ್ನೊಂದೆಡೆ, ಸಾಮಾನ್ಯ Vivo V70 ಫೋನ್‌ನಲ್ಲಿ Snapdragon 7 Gen 4 ಚಿಪ್‌ಸೆಟ್ ಇರಬಹುದು. ಇದು ದಿನನಿತ್ಯದ ಬಳಕೆ, ಉತ್ತಮ ಬ್ಯಾಟರಿ ದಕ್ಷತೆ ಮತ್ತು ಸ್ಥಿರ ಕಾರ್ಯಕ್ಷಮತೆಯ ಸಮತೋಲನವನ್ನು ನೀಡುವ ಪ್ರೊಸೆಸರ್ ಆಗಿರಲಿದೆ.
Vivo V70 ಸೀರಿಸ್ ಹೊಸ OriginOS 6 ಸಾಫ್ಟ್‌ವೇರ್‌ನೊಂದಿಗೆ ಲಾಂಚ್ ಆಗುವ ನಿರೀಕ್ಷೆಯಿದೆ. ಈ OS ನಲ್ಲಿ Origin Island, Office Kit ಇಂಟಿಗ್ರೇಷನ್ ಮತ್ತು ಇಂಟರಾಕ್ಟಿವ್ Flip Cards ಮುಂತಾದ ಹೊಸ ಫೀಚರ್‌ಗಳು ಇರಲಿವೆ. ಜೊತೆಗೆ, ಭಾರತೀಯ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ವಿಶೇಷ AI ವೈಶಿಷ್ಟ್ಯಗಳನ್ನು Vivo ಪರಿಚಯಿಸಬಹುದು. AI Holi Festive Portraits, AI Magic Weather ಮತ್ತು Flower Blessing ಮುಂತಾದ ಫೀಚರ್‌ಗಳು ಇರಬಹುದು.
ಒಟ್ಟಾರೆಯಾಗಿ, ಪ್ರೀಮಿಯಂ ಕ್ಯಾಮೆರಾ, ಶಕ್ತಿಶಾಲಿ ಪ್ರೊಸೆಸರ್ ಮತ್ತು ಭಾರತಕ್ಕೆ ತಕ್ಕಂತೆ ರೂಪುಗೊಂಡ AI ಫೀಚರ್‌ಗಳೊಂದಿಗೆ Vivo V70 ಮತ್ತು V70 Elite ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಬಲವಾದ ಸ್ಪರ್ಧೆ ನೀಡುವ ಸಾಧ್ಯತೆ ಇದೆ. ಅಧಿಕೃತ ಬಿಡುಗಡೆ ವೇಳೆ ನಿಖರ ಬೆಲೆ ಮತ್ತು ಸಂಪೂರ್ಣ ಸ್ಪೆಸಿಫಿಕೇಷನ್‌ಗಳು ಬಹಿರಂಗವಾಗಲಿವೆ. ಇತ್ತೀಚಿನ ಕೆಲವು ವರದಿಗಳ ಪ್ರಕಾರ, ಫೆಬ್ರವರಿ 2026 ರ ಮಧ್ಯದಲ್ಲಿ Vivo V70 ಸರಣಿ ಫೋನ್‌ಗಳು ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.


Click it and Unblock the Notifications








