Home
ಮೊಬೈಲ್

ಭಾರತದಲ್ಲಿ Vivo V70 ಮತ್ತು V70 Elite ಫೋನ್‌ಗಳು ಲಾಂಚ್: ಫುಲ್ ಡೀಟೇಲ್ಸ್!

ಭಾರತೀಯ ಯುವ ಸ್ಮಾರ್ಟ್‌ಫೋನ್ ಪ್ರಿಯರು ಬಹುನಿರೀಕ್ಷೆಯಿಂದ ಎದುರುನೋಡುತ್ತಿದ್ದ Vivo V70 ಸರಣಿಯು ಇಂದು (ಫೆ.19 ಗುರುವಾರ) ದೇಶದಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಿದೆ. ನಿರೀಕ್ಷೆಯಂತೆಯೇ, Vivo V70 ಸರಣಿಯಲ್ಲಿ Vivo V70 ಮತ್ತು Vivo V70 Elite ಎರಡು ಸ್ಮಾರ್ಟ್‌ಫೋನ್‌ಗಳು ಪರಿಚಯಗೊಂಡಿದ್ದು, ಶಕ್ತಿಶಾಲಿ ಸ್ನಾಪ್‌ಡ್ರಾಗನ್ ಪ್ರೊಸೆಸರ್‌ಗಳು, 6,500mAh ದೊಡ್ಡ ಬ್ಯಾಟರಿ ಮತ್ತು Zeiss ಸಹಭಾಗಿತ್ವದ ಕ್ಯಾಮೆರಾ ವ್ಯವಸ್ಥೆಯು ಈ ಸರಣಿಯ ಪ್ರಮುಖ ಆಕರ್ಷಣೆಗಳಾಗಿವೆ. ಹಾಗಾದರೆ, ಹೊಸ Vivo V70 ಮತ್ತು Vivo V70 Elite ಎರಡೂ ಸ್ಮಾರ್ಟ್‌ಫೋನ್‌ಗಳು ಹೇಗಿವೆ?, ಬೆಲೆಗಳು ಎಷ್ಟು? ಮತ್ತು ಹಾಗೂ ಪ್ರಮುಖ ಫೀಚರ್ಸ್ ಯಾವುವು? ಎಂಬುದರ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ ಬನ್ನಿ.

Vivo V70 ಮತ್ತು Vivo V70 Elite : ಭಾರತದಲ್ಲಿ ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Vivo V70 Elite ಬೆಲೆ (8GB RAM ಮತ್ತು 256GB) ₹51,999 ರೂ.ಗಳಿಂದ ಪ್ರಾರಂಭವಾಗಿದೆ. ಇದರ 12GB + 256GB ಮಾದರಿಯು ₹56,999 ರೂ.ಗೆ ಮತ್ತು 12GB + 512GB ಟಾಪ್ ಮಾದರಿಯು ₹61,999 ರೂ.ಗೆ ಲಭ್ಯವಿದೆ. ಇನ್ನೊಂದೆಡೆ Vivo V70 ಬೆಲೆ ₹45,999 ರೂ. (8GB + 256GB) ಮತ್ತು ₹49,999 ರೂ. (12GB + 256GB) ಗಳಾಗಿವೆ. ಆದರೆ, ಬಿಡುಗಡೆ ಕೊಡುಗೆಯಾಗಿ, SBI, HDFC ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್ ಕಾರ್ಡ್‌ಗಳ ಮೂಲಕ ಖರೀದಿಸಿದರೆ 10% ವರೆಗೆ ಕ್ಯಾಶ್‌ಬ್ಯಾಕ್ ಸೌಲಭ್ಯ ನೀಡಲಾಗುತ್ತಿದೆ.

ಭಾರತದಲ್ಲಿ Vivo V70 ಮತ್ತು V70 Elite ಫೋನ್‌ಗಳು ಲಾಂಚ್: ಫುಲ್ ಡೀಟೇಲ್ಸ್!

ಇನ್ನು ಲಭ್ಯತೆ ಕುರಿತಾಗಿ ನೋಡುವುದಾದರೆ, Vivo V70 ಮತ್ತು Vivo V70 Elite ಎರಡು ಸ್ಮಾರ್ಟ್‌ಫೋನ್‌ಗಳ ಮುಂಗಡ ಬುಕಿಂಗ್‌ಗಳು ಈಗಾಗಲೇ ಆರಂಭವಾಗಿದ್ದು, ಈ ಫೋನ್‌ಗಳು ಫೆಬ್ರವರಿ 26, 2026 ರಿಂದ vivo.com. ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಇಂಡಿಯಾ ಮೂಲಕ ಮಾರಾಟಕ್ಕೆ ಬರಲಿವೆ. ಬಣ್ಣಗಳ ವಿಷಯದಲ್ಲಿ, Vivo Elite ಮಾದರಿಯು ಅಥೆಂಟಿಕ್ ಕಪ್ಪು, ಪ್ಯಾಶನ್ ರೆಡ್ ಮತ್ತು ಸ್ಯಾಂಡ್ ಬೀಜ್ ಮೂರು ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಸಾಮಾನ್ಯ Vivo V70 ಲೆಮನ್ ಯಲ್ಲೋ ಮತ್ತು ಪ್ಯಾಶನ್ ರೆಟ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಾಗಲಿವೆ.

Vivo V70 ಮತ್ತು Vivo V70 Elite: ಪ್ರಮುಖ ವೈಶಿಷ್ಟ್ಯಗಳು
Vivo V70 ಮತ್ತು Vivo V70 Elite ಎರಡೂ ಸ್ಮಾರ್ಟ್‌ಫೋನ್‌ಗಳು 6.59-ಇಂಚಿನ (1,260x2,750 ಪಿಕ್ಸೆಲ್) VM9 AMOLED ಡಿಸ್‌ಪ್ಲೇಗಳನ್ನು ಹೊಂದಿವೆ. ಈ ಡಿಸ್‌ಪ್ಲೆಯು 120Hz ವರೆಗೆ ರಿಫ್ರೆಶ್ ರೇಟ್, 5,000 nits ವರೆಗೆ ಗರಿಷ್ಠ ಹೊಳಪು, 459 ppi ಪಿಕ್ಸೆಲ್ ಸಾಂದ್ರತೆ ಮತ್ತು P3 ವೈಡ್ ಕಲರ್ ಗ್ಯಾಮಟ್ ಬೆಂಬಲವನ್ನು ನೀಡಲಿದ್ದು, ಅತ್ಯುತ್ತಮ ವೀಕ್ಷಣಾ ಅನುಭವದ ಭರವಸೆಯನ್ನು ತಂದಿದೆ. ಇನ್ನು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಎರಡೂ ಫೋನ್‌ಗಳು IP68 + IP69 ರೇಟಿಂಗ್ಸ್ ಹೊಂದಿವೆ ಎಂದು ಕಂಪನಿ ತಿಳಿಸಿದೆ.

ಭಾರತದಲ್ಲಿ Vivo V70 ಮತ್ತು V70 Elite ಫೋನ್‌ಗಳು ಲಾಂಚ್: ಫುಲ್ ಡೀಟೇಲ್ಸ್!

ಕಾರ್ಯಕ್ಷಮತೆ ವಿಭಾಗದಲ್ಲಿ, Vivo V70 Elite ಅನ್ನು ಕ್ವಾಲ್ಕಾಮ್‌ನ ಆಕ್ಟಾ ಕೋರ್ 4nm ಸ್ನಾಪ್‌ಡ್ರಾಗನ್ 8s Gen 3 ಚಿಪ್‌ಸೆಟ್ ಹೊಂದಿದ್ದು, 3GHz ಗರಿಷ್ಠ ಕ್ಲಾಕ್ ಸ್ಪೀಡ್ ನೀಡುತ್ತದೆ. ಇದು 12GB ವರೆಗೆ LPDDR5x RAM ಮತ್ತು 512GB ವರೆಗೆ UFS 4.1 ಆಂತರಿಕ ಮೆಮೊರಿಯನ್ನು ಹೊಂದಿದೆ. ಮತ್ತೊಂದೆಡೆ, Vivo V70 ಆಕ್ಟಾ ಕೋರ್ 4nm ಸ್ನಾಪ್‌ಡ್ರಾಗನ್ 7 Gen 4 SoC ಹೊಂದಿದ್ದು, 2.8GHz ಕ್ಲಾಕ್ ಸ್ಪೀಡ್ ಹೊಂದಿದೆ, ಜೊತೆಗೆ 8GB LPDDR5x RAM ಮತ್ತು 256GB UFS 4.1 ಆಂತರಿಕ ಮೆಮೊರಿಯನ್ನು ಹೊಂದಿದೆ.

ಕ್ಯಾಮೆರಾ ವಿಭಾಗದಲ್ಲಿ, Vivo V70 ಮತ್ತು Vivo V70 Elite ಎರಡೂ ಝೈಸ್-ಟ್ಯೂನ್ಡ್ ಟ್ರಿಪಲ್ ರಿಯರ್ ಕ್ಯಾಮೆರಾ ಘಟಕಗಳನ್ನು ಹೊಂದಿವೆ. ಇದರಲ್ಲಿ 50-ಮೆಗಾಪಿಕ್ಸೆಲ್ (f/1.88) ಪ್ರಾಥಮಿಕ ಶೂಟರ್ (OIS) ಜೊತೆಗೆ, 50-ಮೆಗಾಪಿಕ್ಸೆಲ್ (f/2.65) ಸೂಪರ್ ಟೆಲಿಫೋಟೋ ಕ್ಯಾಮೆರಾ OIS ಜೊತೆಗೆ ಮತ್ತು 8-ಮೆಗಾಪಿಕ್ಸೆಲ್ (f/2.2) ಅಲ್ಟ್ರಾವೈಡ್ ಕ್ಯಾಮೆರಾ ಸೇರಿವೆ. ಎರಡೂ ಫೋನ್‌ಗಳು 50-ಮೆಗಾಪಿಕ್ಸೆಲ್ (f/2.0) ಸೆಲ್ಫಿ ಕ್ಯಾಮೆರಾಗಳನ್ನು ಹೊಂದಿವೆ. ಹಾಗೂ ಎರಡೂ ಫೋನ್‌ಗಳು 4K ರೆಸಲ್ಯೂಶನ್ ವೀಡಿಯೊಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿವೆ.

ಬ್ಯಾಟರಿ ವಿಭಾಗದಲ್ಲಿ, Vivo V70 ಮತ್ತು Vivo V70 Elite ಎರಡೂ 6,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತವೆ. ಪ್ಲಗ್-ಇನ್ ಗೇಮಿಂಗ್ ಸಮಯದಲ್ಲಿ ಬೈಪಾಸ್ ಚಾರ್ಜಿಂಗ್ ಬೆಂಬಲವಿದ್ದು, ಗೇಮಿಂಗ್ ಮಾಡುವಾಗ ಬ್ಯಾಟರಿಯ ಬದಲಿಗೆ ಫೋನ್‌ಗೆ ನೇರವಾಗಿ ವಿದ್ಯುತ್ ಹರಿಯಲು ಅನುವು ಮಾಡಿಕೊಡುತ್ತದೆ, ಇದು ಶಾಖ ಮತ್ತು ದೀರ್ಘಕಾಲೀನ ಬ್ಯಾಟರಿ ಸವೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇನ್ನು ಎರಡೂ ಫೋನ್‌ಗಳು ಆಂಡ್ರಾಯ್ಡ್ 16 ಆಧಾರಿತ OriginOS 6 ನಲ್ಲಿ ಕಾರ್ಯನಿರ್ವಹಿಸುತ್ತವೆ.

Best Mobiles in India

English summary
The Vivo V70 series has been launched in India featuring the Vivo V70 and Vivo V70 Elite smartphones. The new lineup comes with powerful Snapdragon processors, a large 6,500mAh battery, and a Zeiss co-engineered camera system, along with launch offers and pre-bookings now open ahead of the February 26 sale.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+