ಮತ್ತೊಂದು ಹೊಸ ಅವತರದಲ್ಲಿ ವಿವೋ V9 ಸ್ಮಾರ್ಟ್ ಫೋನ್
ದೇಶಿಯ ಮಾರುಕಟ್ಟೆಯಲ್ಲಿ ಚೀನಾ ಮೂಲದ ಸ್ಮಾರ್ಟ್ ಫೋನ್ ತಯಾರಕ ವಿವೋ ಸಾಕಷ್ಟು ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡಿದೆ. ಇದೇ ಮಾದರಿಯ ಈ ವರ್ಷದ ಆರಂಭದಲ್ಲಿ ಲಾಂಚ್ ಮಾಡಿದ್ದ ವಿವೋ V9 ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು, ಅಲ್ಲದೇ ಐಪೋನ್ X ಮಾದರಿಯ ಡಿಸ್ ಪ್ಲೇಯನ್ನು ಹೊಂದಿದ್ದ ಈ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಸಾಕಷ್ಟು ಹೊಸ ಅವಕಾಶಗಳನ್ನು ನೀಡಿತ್ತು.

ಈ ಹಿನ್ನಲೆಯಲ್ಲಿ ವಿವೋ V9 ಸ್ಮಾರ್ಟ್ ಫೋನ್ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಲು ಮುಂದಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ 6 GB RAM ಹೊಂದಿರುವ ಸ್ಮಾರ್ಟ್ ಫೋನ್ ಗಳು ಹೆಚ್ಚಿನ ಸದ್ದು ಮಾಡುತ್ತಿರುವ ಹಿನ್ನಲೆಯಲ್ಲಿ ವಿವೋ V9 ಸ್ಮಾರ್ಟ್ ಫೋನ್ ಸಹ 6 GB RAM ಆವೃತ್ತಿಯನ್ನು ಬಿಡುಗಡೆ ಮಾಡಲು ಮುಂದಾಗಿದೆ. ಇದು ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸಲಿದೆ.

ವಿವೋ V9 (6 GB RAM) ಸ್ಮಾರ್ಟ್ ಫೋನ್:
ಈ ಹಿಂದಿನ ಸ್ಮಾರ್ಟ್ ಫೋನ್ ಗೆ ಹೋಲಿಕೆ ಮಾಡಿಕೊಂಡರೆ ವಿವೋ V9 (6 GB RAM) ಸ್ಮಾರ್ಟ್ ಫೋನ್ ನಲ್ಲಿ ಭಾರೀ ಬದಲಾವಣೆಯನ್ನು ಕಾಣಬಹುದಾಗಿದೆ. ಇದರಲ್ಲಿ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 660 ಪ್ರೋಸೆಸರ್ ಅನ್ನು ಅಳವಡಿಸಲಾಗಿದೆ. ಹಿಂದನ ಫೋನ್ ನಲ್ಲಿ ಸ್ನಾಪ್ ಡ್ರಾಗನ್ 626 ಅನ್ನು ನೀಡಲಾಗಿತ್ತು.

ವಿವೋ V9 (6 GB RAM) ಸ್ಮಾರ್ಟ್ ಫೋನ್ ಕ್ಯಾಮೆರಾ:
ವಿವೋ V9 (6 GB RAM) ಸ್ಮಾರ್ಟ್ ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ನೀಡಲಾಗಿದೆ. ಹಿಂಭಾದಲ್ಲಿ 13 MP + 5 MP ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಹಿಂದಿನ ಪೋನ್ ನಲ್ಲಿ 16 + 5 MP ಕ್ಯಾಮೆರಾವನ್ನು ನೀಡಲಾಗಿತ್ತು. ಅಲ್ಲದೇ ಹಳೇಯ ಫೋನ್ ನಲ್ಲಿ 24 MP ಸೆಲ್ಪಿ ಕ್ಯಾಮೆರಾವನ್ನು ನೀಡಲಾಗಿತ್ತು, ಈಗ 12 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಕ್ಯಾಮೆರಾವನ್ನು ಕಡಿಮೆ ಮಾಡಲಾಗಿದೆ.

ವಿವೋ V9 (6 GB RAM) ಸ್ಮಾರ್ಟ್ ಫೋನ್ ಡಿಸ್ ಪ್ಲೇ:
ವಿವೋ V9 (6 GB RAM) ಸ್ಮಾರ್ಟ್ ಫೋನಿನಲ್ಲಿ 6.3 ಇಂಚಿನ ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, ಇದು FHD+ ಗುಣಮಟ್ಟವನ್ನು ಹೊಂದಿದೆ. ಅಲ್ಲದೇ ಈ ಡಿಸ್ ಪ್ಲೇ ಫುಲ್ ವ್ಯೂ ಡಿಸ್ ಪ್ಲೇ 2.0 ವಿಶೇಷತೆಯನ್ನು ತನ್ನದಾಗಿಸಿಕೊಂಡಿದೆ. ಅಲ್ಲದೇ ಇದು 19.9 ಅನುಪಾತದಿಂದ ಕೂಡಿದೆ.

ಬೆಲೆ:
ವಿವೋ V9 (6 GB RAM) ಸ್ಮಾರ್ಟ್ ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಜುಲೈ 5 ರಿಂದ ಲಭ್ಯವಿರಲಿದೆ. ಆದರೆ ಈ ಹೊಸ ಸ್ಮಾರ್ಟ್ ಫೋನ್ ಬೆಲೆ ಬಗ್ಗೆ ಯಾವುದೇ ಮಾಹಿತಿಯೂ ಲಭ್ಯವಾಗಿಲ್ಲ. ಆದರೆ ಈ ಹಿಂದಿನ ಫೋನ್ ರೂ. 22990ಕ್ಕೆ ಮಾರಾಟವಾಗುತ್ತಿತ್ತು.


Click it and Unblock the Notifications