Subscribe to Gizbot

24MP ಸೆಲ್ಪಿ ಕ್ಯಾಮೆರಾ ಹೊಂದಿರುವ ವಿವೋ ಫೋನ್: ಐಫೋನ್ X ಕಾಪಿಯೇ ಸರಿ..!

Written By:

ಭಾರತೀಯ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ವಿವೋ, ಮಾರ್ಚ್ 23ಕ್ಕೆ ಸೆಲ್ಫಿ ಕೇಂದ್ರಿತ ಸ್ಮಾರ್ಟ್‌ಫೋನ್ ವಿವೋ V9 ಲಾಂಚ್ ಮಾಡಲಿದೆ. ಈ ಸ್ಮಾರ್ಟ್‌ಫೋನ್ ಅಧಿಕೃತವಾಗಿ ಈಗಾಗಲೇ ಥೈಲ್ಯಾಂಡ್ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ವಿವೋ V9 ಸ್ಮಾರ್ಟ್‌ಫೋನ್ ಕುರಿತ ಸಂಪೂರ್ಣ ಮಾಹಿತಿಯೂ ಈ ಮುಂದಿನಂತಿದೆ.

24MP ಸೆಲ್ಪಿ ಕ್ಯಾಮೆರಾ ಹೊಂದಿರುವ ವಿವೋ ಫೋನ್: ಐಫೋನ್ X ಕಾಪಿಯೇ ಸರಿ..!

ವಿವೋ V9 ಸ್ಮಾರ್ಟ್‌ಫೋನ್ ನೋಡಲು ಐಫೋನ್ X ಮಾದರಿಯಲ್ಲಿ ಕಾಣಿಸಿಕೊಂಡಿದ್ದು, ಹಿಂಭಾಗದಲ್ಲಿ ಒಂದರ ಕೆಳಗೊಂದು ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಇದೇ ಮಾದರಿಯಲ್ಲಿ ಮುಂಭಾಗದಲ್ಲಿ ಡಿಸ್‌ಪ್ಲೇ ಮಧ್ಯಭಾಗದಲ್ಲಿ ನೋಚ್ ಅನ್ನು ನೀಡಲಾಗಿದ್ದು, ವಿನ್ಯಾಸದಲ್ಲಿ ಸಂಫೂರ್ಣವಾಗಿ ಐಫೋನ್ X ಅನ್ನು ಕಾಪಿ ಮಾಡಿದಂತೆಯೇ ಕಾಣುತ್ತಿದೆ.

ಬ್ರೆಸಿಲ್ ಲೈಸ್ ವಿನ್ಯಾಸವನ್ನು ಹೊಂದಿರುವ ವಿವೋ V9 ಸ್ಮಾರ್ಟ್‌ಫೋನಿನಲ್ಲಿ 6.3 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, ಇದು 19:9 ಅನುಪಾತದಿಂದ ಕೂಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿ 19:9 ಅನುಪಾತದ ಡಿಸ್‌ಪ್ಲೇ ಹೊಸ ಟ್ರೆಂಡ್ ಹುಟ್ಟಿ ಹಾಕಿದ್ದು, ಅತೀ ಹೆಚ್ಚಿನ ಸಂಖ್ಯೆಯ ಸ್ಮಾರ್ಟ್‌ಫೋನ್‌ಗಳು ಇದೇ ಅನುಪಾತದಲ್ಲಿ ಕಾಣಿಸಿಕೊಳ್ಳುತ್ತಿವೆ. ಈ ಡಿಸ್‌ಪ್ಲೇ ಮೆಲ್ಭಾಗದಲ್ಲಿ 2.5D ಕರ್ವಡ್ ಗ್ಲಾಸ್ ಸುರಕ್ಷತೆಯನ್ನು ನೀಡಲಾಗಿದೆ.

24MP ಸೆಲ್ಪಿ ಕ್ಯಾಮೆರಾ ಹೊಂದಿರುವ ವಿವೋ ಫೋನ್: ಐಫೋನ್ X ಕಾಪಿಯೇ ಸರಿ..!

ವಿವೋ V9 ಸ್ಮಾರ್ಟ್‌ಫೋನಿನಲ್ಲಿ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 626 ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, 4GB RAM ಮತ್ತು 64GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಇದಲ್ಲದೇ 256GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 12MP+5MPಯ ಡ್ಯುಯಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

How To Link Aadhaar With EPF Account Without Login (KANNADA)

ಇದಲ್ಲದೇ ವಿವೋ V9 ಸ್ಮಾರ್ಟ್‌ಫೋನ್ ಸೆಲ್ಫಿಗೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದು, ಇದಕ್ಕಾಗಿ 24MP ಸೆಲ್ಪಿ ಕ್ಯಾಮೆರಾವನ್ನು ಒಳಗೊಂಡಿದೆ. ಇದಲ್ಲದೇ ಫೇಸ್‌ ಆನ್‌ಲಾಕ್‌ಗಾಗಿಯೂ ಈ ಕ್ಯಾಮೆರಾವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದರೊಂದಿಗೆ 3260mAh ಬ್ಯಾಟರಿಯನ್ನು ನೀಡಲಾಗಿದೆ. ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನ್ ರೂ.30000ದ ಅಸುಪಾಸಿನಲ್ಲಿ ಲಾಂಚ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

English summary
Vivo has further trimmed the chin to give V9 the look of an edge-to-edge display design. The smartphone features a 6.3-inch IPS LCD display with a resolution of 2280 x 1080 pixels, translating to an aspect ratio of 19:9. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot