ಭಾರತೀಯ ಮಾರುಕಟ್ಟೆಯಲ್ಲಿ ಇದೇ ತಿಂಗಳ ಅಂತ್ಯಕ್ಕೆ ವಿವೊ ಬಿಡುಗಡೆ ಮಾಡಲು ಮುಂದಾಗಿರುವ ವಿವೊ ವಿ9 ಸ್ಮಾರ್ಟ್ ಪೋನ್ ಫೋಟೋ ಲೀಕ್ ಆಗಿದ್ದು, ಇದು ಐಫೋನ್ X ಡಿಸೈನ್ ಅನ್ನು ಕಾಪಿ ಮಾಡಿದಂತಿದೆ. ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಇದು ಹೊಸ ಅಲೆಯನ್ನು ಹುಟ್ಟಿಸಲಿದೆ ಎನ್ನಲಾಗಿದೆ. ಈ ಸ್ಮಾರ್ಟ್ ಫೋನ್ ರಷ್ಯಾ ವರ್ಲ್ಡ್ ಕಪ್ 2018 ಅಧಿಕೃತ ಸ್ಮಾರ್ಟ್ ಫೋನ್ ಆಗಿ ಮಾರಾಟವಾಗಲಿದೆ.

ವಿವೊ V9 ಸ್ಮಾರ್ಟ್ ಫೋನ್ 6 ಇಂಚಿನ ಅಮೊಲೈಡ್ FHD ಪ್ಲಸ್ ಗುಣಮಟ್ಟದ ಡಿಸ್ ಪ್ಲೇಯನ್ನು ಒಳಗೊಂಡಿದ್ದು, ಕ್ವಾಲ್ಕಮ್ ಸ್ನಾಪ್ ಡ್ರಾಗನ್ 660 ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. ಅಲ್ಲದೇ 4GB RAM ಮತ್ತು 64GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಇದೊಂದು ಮಧ್ಯಮ ಸರಣಿಯ ಸ್ಮಾರ್ಟ್ ಫೋನ್ ಆಗಲಿದೆ.

ಇದಲ್ಲದೇ ಈ ಸ್ಮಾರ್ಟ್ ಪೋನ್ ಮುಂಭಾಗದಲ್ಲಿ 24MP ಕ್ಯಾಮೆರಾವನ್ನು ನೀಡಲಾಗಿದೆ. ಅಲ್ಲದೇ ಇದರೊಂದಿಗೆ ಫ್ಲಾಷ್ ಲೈಟ್ ಅನ್ನು ಕಾಣಬಹುದಾಗಿದೆ. ಇದಲ್ಲದೇ 3250mAh ಬ್ಯಾಟರಿಯನ್ನು ನೋಡಬಹುದಾಗಿದೆ. ಅಲ್ಲದೇ ಫಾಸ್ಟ್ ಚಾರ್ಜಿಂಗ್ ಆಯ್ಕೆಯನ್ನು ಕಂಪನಿ ನೀಡಿದ್ದು, 4G LTE ಸಪೋರ್ಟ್ ಮಾಡಲಿದೆ.
ಇದಲ್ಲದೇ ಈ ಸ್ಮಾರ್ಟ್ ಪೋನ್ ರೂ.24000ಕ್ಕೆ ದೊರೆಯುವ ಸಾಧ್ಯತೆ ಇದೆ. ಈಗಾಗಲೇ ಇಂಡೋನೆಷ್ಯಾದಲ್ಲಿ ಈ ಸ್ಮಾರ್ಟ್ ಫೋನ್ ಬೆಲೆ ಲೀಕ್ ಆಗಿದೆ ಎನ್ನಲಾಗಿದೆ. ಶೀಘ್ರವೇ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ ಫೋನ್ ಹೊಸ ಅಧ್ಯಯವನ್ನು ಹುಟ್ಟಿಹಾಕಲಿದೆ.
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.