ಕೃತಕ ಬುದ್ದಿಮತ್ತೆಯ ವಿವೋ V9 ಪ್ರೋ ಲಾಂಚ್: ಈ ಬೆಲೆಗೆ ದೊರೆಯುವ ಬೆಸ್ಟ್ ಫೋನ್..!
ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ದೊಡ್ಡ ಮಾದರಿಯ ಯಶಸ್ಸು ಕಂಡಿರುವ ವಿವೋ V9 ಸ್ಮಾರ್ಟ್ ಫೋನ್ ಮುಂದುವರೆದ ಆವೃತ್ತಿಯೂ ಕಾಣಿಸಿಕೊಂಡಿದ್ದು, ವಿವೋ V9 ಪ್ರೋ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಲಾಂಚ್ ಆಗಿದೆ. 6 GB RAM ಮತ್ತು ಸ್ನಾಪ್‌ಡ್ರಾಗನ್ 660 ಪ್ರೋಸೆಸರ್ ನೊಂದಿಗೆ ಕಾಣಿಸಿಕೊಂಡಿರುವ ವಿವೋ V9 ಪ್ರೋ ಸ್ಮಾರ್ಟ್ ಫೋನ್ ಹೊಸ ಮಾದರಿಯ AI ಅನುಭವನ್ನು ಬಳಕೆದಾರರಿಗೆ ನೀಡಲಿದೆ.

ವಿವೋ V9 ಪ್ರೋ ಸ್ಮಾರ್ಟ್‌ಫೋನ್ ಮಧ್ಯಮ ಸರಣಿಯಲ್ಲಿ ಲಾಂಚ್ ಆಗಿದ್ದು, ಈ ಮಾದರಿಯಲ್ಲಿಯೇ ಹಲವು ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ವಿವೋ V9 ಪ್ರೋ ಸ್ಮಾರ್ಟ್ ಫೋನ್ ವಿಶೇಷತೆಗಳ ಕುರಿತು ಮಾಹಿತಿಯನ್ನು ನೀಡುವ ಪ್ರಯತ್ನ ಇದಾಗಿದೆ.

ಡಿಸ್‌ಪ್ಲೇ:
ವಿವೋ V9 ಪ್ರೋ ಸ್ಮಾರ್ಟ್‌ಫೋನ್ 6.3 ಇಂಚಿನ್ 1080x2280p ಗುಣಮಟ್ಟದ ಫುಲ್ ಪ್ಯೂವ್ 2.0 ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದಲ್ಲದೇ ಈ ಸ್ಮಾರ್ಟ್‌ಫೋನಿನಲ್ಲಿ ಸ್ನಾಪ್‌ಡ್ರಾಗನ್ 660 ಪ್ರೋಸೆಸರ್ ಅಳವಡಿಸಲಾಗಿದ್ದು, ಇದು ಬಳಕೆದಾರರಿಗೆ ಹೊಸ ಮಾದರಿಯ AI ಅನುಭವನ್ನು ಬಳಕೆದಾರರಿಗೆ ನೀಡಲಿದೆ. ಇದರೊಂದಿಗೆ ಆಡ್ರಿನೋ 512 GPUವನ್ನು ಕಾಣಬಹುದಾಗಿದೆ.

6GB RAM:
ವಿವೋ V9 ಪ್ರೋ ಸ್ಮಾರ್ಟ್‌ಫೋನ್ 6GB RAMನಲ್ಲಿ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ 64 GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಅಲ್ಲದೇ 256GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಇದಕ್ಕಾಗಿಯೇ ಡೆಡಿಕೇಟೆಡ್ ಸ್ಲಾಟ್ ಅನ್ನು ನೀಡಲಾಗಿದೆ.

ಡ್ಯುಯಲ್ ಕ್ಯಾಮೆರಾ:
ವಿವೋ V9 ಪ್ರೋ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದೆ. 13 MP + 2 MP ಕ್ಯಾಮೆರಾ ಸೆಪಟ್ ಅನ್ನು ಅಳವಡಿಸಲಾಗಿದೆ. ಇದಲ್ಲದೇ ಮುಂಭಾಗದಲ್ಲಿ 16 MP ಸೆಲ್ಪಿ ಕ್ಯಾಮೆರಾವನ್ನು ನೀಡಲಾಗಿದೆ. ಇದರಿಂದಾಗಿ ವಿವೋ V9 ಪ್ರೋ ಸ್ಮಾರ್ಟ್‌ಫೋನ್ ಉತ್ತಮ ಫೋಟೋಗ್ರಫಿಗೆ ಹೇಳಿ ಮಾಡಿಸಿದಂತೆ ಇದೆ. ಸೆಲ್ಫಿಗಾಗಿ AI ಅನ್ನು ನೀಡಿದೆ.

ವಿವೋ V9 ಪ್ರೋ ಸ್ಮಾರ್ಟ್‌ಫೋನ್ ವಿಶೇಷತೆ:
ಡ್ಯುಯಲ್ ಸಿಮ್ ಹಾಕಿಕೊಳ್ಳುವ ವಿಶೇಷತೆಯನ್ನು ಹೊಂದಿರುವ ವಿವೋ V9 ಪ್ರೋ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಒರಿಯೊ 8.1 ನಲ್ಲಿ ಕಾರ್ಯನಿರ್ವಹಿಸಲಿಸದ್ದು, ಇದರೊಂದಿಗೆ ಫನ್ ಟೆಚ್ OS 4.0 ಸಹ ಇದರಲ್ಲಿ ಇರಲಿದೆ. 4G VoLTE, ಡ್ಯುಯಲ್ ಬ್ಯಾಂಡ್ Wi-Fi (2.4GHz ಮತ್ತು 5GHz), ಬ್ಲೂಟೂತ್ v4.2, GPS/ A-GPS, 3.5mm ಹೆಡ್ ಪೋನ್ ಜಾಕ್ , USB OTG, ಮೈಕ್ರೋ-USB ಪ್ರೋರ್ಟ್. ಜೊತೆಗೆ 3,260mAh ಬ್ಯಾಟರಿ ಕಾಣಬಹುದಾಘಿದೆ.

ಬೆಲೆ:
ವಿವೋ V9 ಪ್ರೋ ಸ್ಮಾರ್ಟ್‌ಫೋನ್ ರೂ.19,990ಕ್ಕೆ ಮಾರಾಟವಾಗಲಿದೆ. ಈ ಸ್ಮಾರ್ಟ್‌ಫೋನ್ ಅಮೆಜಾನ್ ಗ್ರೇಟ್ ಇಂಡಿಯಾ ಸೇಲ್‌ನಲ್ಲಿ ರೂ.17990ಕ್ಕೆ ಲಭ್ಯವಿರಲಿದೆ. ಇದರಿಂದಾಗಿ ಈ ಸ್ಮಾರ್ಟ್‌ಫೋನ್ ಖರೀದಿ ಮಾಡುವವರಿಗೆ ಅಮೆಜಾನ್ ಗ್ರೇಟ್ ಇಂಡಿಯಾ ಸೇಲ್ ಭರ್ಜರಿಯಾಗಲಿದೆ.


Click it and Unblock the Notifications








