Home
ಮೊಬೈಲ್

ಆಂಡ್ರಾಯ್ಡ್ ಐಪೋನ್ X ಖ್ಯಾತಿಯ ವಿವೋ V9 ಲಾಂಚ್: ಇಲ್ಲಿದೇ ಸಂಪೂರ್ಣ ಮಾಹಿತಿ..!

By Srinidhi

ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ವಿವೋ ಭಾರತೀಯ ಮಾರುಕಟ್ಟೆಯಲ್ಲಿ ವಿವೋ V9 ಸ್ಮಾರ್ಟ್‌ಫೋನ್ ಲಾಂಚ್ ಮಾಡಿದ್ದು, ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಐಫೋನ್ X ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ವಿವೋ V9 ಸ್ಮಾರ್ಟ್‌ಫೋನ್ ಈ ಹಿಂದೆಯೇ ತಿಳಿಸಿದಂತೆ ನೋಡಲು ಐಫೋನ್ X ಮಾದರಿ ಹಿಂಭಾಗದಲ್ಲಿ ಒಂದರ ಕೆಳಗೊಂದು ಡ್ಯುಯಲ್ ಕ್ಯಾಮೆರಾ, ಮುಂಭಾಗದಲ್ಲಿ ಡಿಸ್‌ಪ್ಲೇ ಮಧ್ಯಭಾಗದಲ್ಲಿ ನೋಚ್ ಅನ್ನು ಒಳಗೊಂಡಿದೆ.

ಆಂಡ್ರಾಯ್ಡ್ ಐಪೋನ್ X ಖ್ಯಾತಿಯ ವಿವೋ V9 ಲಾಂಚ್: ಇಲ್ಲಿದೇ ಸಂಪೂರ್ಣ ಮಾಹಿತಿ..!

ವಿನ್ಯಾಸದಲ್ಲಿ ಸಂಫೂರ್ಣವಾಗಿ ಐಫೋನ್ X ಅನ್ನು ಕಾಪಿ ಮಾಡಿದಂತೆಯೇ ಕಾಣುತ್ತಿದೆ. ಬ್ರೆಸಿಲ್ ಲೈಸ್ ವಿನ್ಯಾಸವನ್ನು ಹೊಂದಿರುವ ವಿವೋ V9 ಸ್ಮಾರ್ಟ್‌ಫೋನಿನಲ್ಲಿ ಈಗಾಗಲೇ ಥೈಲ್ಯಾಂಡ್ ಮತ್ತು ಫಿಲಿಫೈನ್ಸ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ ಆಫ್‌ಲೈನ್‌ ಮತ್ತು ಆನ್‌ಲೈನ್‌ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದ್ದು, ಮುಂದಿನ ತಿಂಗಳಿನಿಂದ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಈ ಹಿನ್ನಲೆಯಲ್ಲಿ ವಿವೋ V9 ಸ್ಮಾರ್ಟ್‌ಫೋನ್ ಕುರಿತ ಮಾಹಿತಿಯೂ ಇಲ್ಲಿದೆ.

ಐಫೋನ್ X ಮಾದರಿ ಡಿಸ್‌ಪ್ಲೇ:

ಐಫೋನ್ X ಮಾದರಿ ಡಿಸ್‌ಪ್ಲೇ:

ವಿವೋ V9 ಸ್ಮಾರ್ಟ್‌ಫೋನಿನಲ್ಲಿ 6.3 ಇಂಚಿನ FHD ಪ್ಲಸ್ ಗುಣಮಟ್ಟದ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, ಇದು IPS ಫುಲ್‌ವ್ಯೂವ್ 2.0 ನೊಂದಿಗೆ 19:9 ಅನುಪಾತದಿಂದ ಕೂಡಿದೆ. ಇದರೊಂದಿಗೆ ಡಿಸ್‌ಪ್ಲೇ ಮೇಲ್ಭಾಗದಲ್ಲಿ 2.5D ಕರ್ವಡ್ ಗ್ಲಾಸ್ ಸುರಕ್ಷತೆಯನ್ನು ನೀಡಲಾಗಿದೆ.

ಮಧ್ಯಮ ವೇಗದ ಪ್ರೋಸೆಸರ್

ಮಧ್ಯಮ ವೇಗದ ಪ್ರೋಸೆಸರ್

ವಿವೋ V9 ಸ್ಮಾರ್ಟ್‌ಫೋನಿನ್ ಮಧ್ಯಮ ಸರಣಿಯ ಸ್ಮಾರ್ಟ್‌ಫೋನ್ ಆಗಿದ್ದು, ಇದಕ್ಕಾಗಿಯೇ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 626 ಪ್ರೋಸೆಸರ್ ಅನ್ನು ಅಳವಡಿಸಲಾಗಿದೆ. ಇದೊಂದಿಗೆ 4GB DDR3 RAM ಮತ್ತು 64GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದ್ದು, SD ಕಾರ್ಡ್‌ ಮೂಲಕ 256GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

24MP ಸೆಲ್ಪಿ ಕ್ಯಾಮೆರಾ:

24MP ಸೆಲ್ಪಿ ಕ್ಯಾಮೆರಾ:

ವಿವೋ V9 ಸ್ಮಾರ್ಟ್‌ಫೋನ್ ಸೆಲ್ಫಿಗೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದು, ಇದಕ್ಕಾಗಿ 24MP ಸೆಲ್ಪಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದಕ್ಕಾಗಿಯೇ ಕೃತಕ ಬುದ್ದಿಮತೆಯನ್ನು ನೀಡಲಾಗಿದ್ದು, ಇದನ್ನು ಬಳಕೆ ಮಾಡಿಕೊಂಡು ಉತ್ತಮ ಸೆಲ್ಪಿಗಳನ್ನು ನೀಡಲು ವಿವೋ V9 ಸ್ಮಾರ್ಟ್‌ಫೋನ್ ಶಕ್ತವಾಗಿದೆ. ಇದಲ್ಲದೇ ಫೇಸ್‌ ಆನ್‌ಲಾಕ್‌ಗಾಗಿಯೂ ಕೃತಕ ಬುದ್ದಿಮತೆಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಡ್ಯುಯಲ್ ಕ್ಯಾಮೆರಾ

ಡ್ಯುಯಲ್ ಕ್ಯಾಮೆರಾ

ವಿವೋ V9 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಐಪೋನ್ ಮಾದರಿಯಲ್ಲಿಯೇ ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದ್ದು 12MP + 5MPಯ ಡ್ಯುಯಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. LED ಫ್ಲ್ಯಾಶ್ ಹಾಗೂ 3260mAh ಬ್ಯಾಟರಿಯನ್ನು ಈ ಸ್ಮಾರ್ಟ್‌ಫೋನ್‌ನೊಂದಿಗೆ ನೀಡಲಾಗಿದೆ.

How to Download e-Aadhaar Card! ಸ್ಮಾರ್ಟ್‌ಫೋನ್‌ನಲ್ಲಿ ಇ-ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ..?
ಬೆಲೆ:

ಬೆಲೆ:

ವಿವೋ V9 ಸ್ಮಾರ್ಟ್‌ಫೋನ್ ಒಂದು ಆವೃತ್ತಿಯಲ್ಲಿ ಮಾತ್ರವೇ ಲಭ್ಯವಿದ್ದು, ರೂ.22,990ಕ್ಕೆ ಮಾರಾಟವಾಗಲಿದೆ. ಸಪೈರ್ ಬ್ಲೂ, ಪಿಯರ್ಲ್ ಬ್ಲ್ಯಾಕ್ ಮತ್ತು ಗೋಲ್ಡ್ ಬಣ್ಣಗಳಲ್ಲಿ ದೊರೆಯಲಿದೆ. ಏಪ್ರಿಲ್ 2ಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಸ್ಮಾರ್ಟ್‌ಫೋನ್‌ಗೆ ಈಗಾಗಲೇ ಪ್ರೀ ಬುಕಿಂಗ್ ಶುರುವಾಗಿದೆ.

Best Mobiles in India

English summary
Vivo V9 With 24-Megapixel Front Camera, 19:9 Display Launched at Rs. 22,990; Pre-Orders Open. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+