Home
ಮೊಬೈಲ್

ನಾಳೆ Vivo X Fold 3 Pro ಫೋನ್ ಬಿಡುಗಡೆ: ಬೆಲೆ ಎಷ್ಟು? ನಿರೀಕ್ಷಿತ ಫೀಚರ್ಸ್ ಏನು?

ಪ್ರತಿದಿನ ಮಾರುಕಟ್ಟೆಯಲ್ಲಿ ಹೊಸ ಹೊಸ ಮೊಬೈಲ್‌ಗಳು ಬಿಡುಗಡೆ ಆಗುತ್ತಲೇ ಇರುತ್ತವೆ. ಟೆಕ್ನಾಲಜಿ ಬೆಳೆದಂತೆಲ್ಲ ಕಂಪನಿಗಳು ವಿನೂತನ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುತ್ತಿವೆ. ಇವುಗಳಲ್ಲಿ ಮುಖ್ಯವಾಗಿ Al ತಂತ್ರಜ್ಞಾನ ಕೂಡ ಹೊಂದಿರುತ್ತದೆ. ಅಲ್ಲದೇ, ವಿಶಿಷ್ಟವಾದ ಫಿಚರ್ಸ್‌ಗಳನ್ನು ಕೂಡ ನೀಡಿರುತ್ತಾರೆ. ಮೊಬೈಲ್‌ಗಳೆಂದರೆ ಮೊದಲು ಅದರ ಬ್ರಾಂಡ್ ನೆನಪಿಗೆ ಬರುತ್ತೆ. ಹಲವಾರು ಸ್ಮಾರ್ಟ್‌ಫೋನ್ ಬ್ರಾಂಡ್‌ಗಳು ಇಂದು ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಹೊಂದಿವೆ. ಅವುಗಳಲ್ಲಿ ವಿವೋ ಕೂಡ ಒಂದಾಗಿದೆ. ವಿವೋ ಸ್ಮಾರ್ಟ್‌ ಫೋನ್ (Vivo Smartphone) ಗಳಿಗೆ ಭಾರತದಲ್ಲಿ ವಿಶೇಷವಾದ ಬೇಡಿಕೆ ಇದ್ದು, ಈ ನಡುವೆ ಫೋಲ್ಡಬಲ್ ಫೋನ್ ಅನ್ನು ನಾಳೆ (ಜೂನ್ 6) ಬಿಡುಗಡೆಗೊಳಿಸಲಿದೆ.

ಹೌದು, ವಿವೋ ಕಂಪನಿಯು ಭಾರತದಲ್ಲಿ ತನ್ನ ಮೊದಲ ಮಡಚಬಹುದಾದ ವಿವೋ ಫೋಲ್ಡ್ 3 ಪ್ರೊ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧವಾಗಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 3 SoC ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್, 5,700mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿರಲಿದೆ. ZEISS ಆಪ್ಟಿಕ್ಸ್ ಮತ್ತು Googleನ ಜೆಮಿನಿಯಿಂದ ಚಾಲಿತವಾದ ಹಲವಾರು AI ಫೀಚರ್ಸ್‌ಗಳನ್ನು ಒಳಗೊಂಡಿದೆ. ಈ ಮೊಬೈಲ್‌ನ ಬೆಲೆ ಮತ್ತು ಫೀಚರ್ಸ್ ಬಗ್ಗೆ ತಿಳಿಯೋಣ ಬನ್ನಿ.

ನಾಳೆ Vivo X Fold 3 Pro ಫೋನ್ ಬಿಡುಗಡೆ: ಬೆಲೆ ಎಷ್ಟು? ಫೀಚರ್ಸ್ ಏನು?

ವಿವೋ X ಫೋಲ್ಡ್ 3 ಪ್ರೊನ ಫೀಚರ್ಸ್‌ಗಳೇನು?

ಈ Vivo X Fold 3 Pro ಸ್ಮಾರ್ಟ್‌ಫೋನ್ ಡ್ಯುಯಲ್ ಡಿಸ್‌ಪ್ಲೇಯನ್ನು ಹೊಂದಿದ್ದು, 6.53-ಇಂಚಿನ ಕವರ್ ಡಿಸ್‌ಪ್ಲೇ ಮತ್ತು 8.03 ಇಂಚಿನ ಒಳಗಿನ ಅಮೋಲೆಡ್ LTPO ಫೋಲ್ಡಿಂಗ್ ಡಿಸ್‌ಪ್ಲೇ ಹೊಂದಿದೆ. ಎರಡೂ ಡಿಸ್‌ಪ್ಲೇಗಳು 2480 x 2200 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. 120Hz ರಿಫ್ರೆಶ್ ದರ ಮತ್ತು ಡಾಲ್ಬಿ ವಿಷನ್, ಹೆಚ್‌ಡಿಆರ್‌ 10+ ನಂತಹ ಇತರ ಫೀಚರ್ಸ್ ಜೊತೆಗೆ 4,500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಹೊಂದಿರಲಿದೆ.

ವಿವೋ X ಫೋಲ್ಡ್ 3 ಪ್ರೊನ ಪ್ರೊಸೆಸರ್ ಏನಿರಲಿದೆ?

Vivo X Fold 3 Pro ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 3 SoC ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಉತ್ತಮ ಗ್ರಾಫಿಕ್ಸ್ ಕಾರ್ಯಕ್ಷಮತೆಗಾಗಿ ಅಡ್ರಿನೋ ಜಿಪಿಯು ಅನ್ನು ಇದರಲ್ಲಿ ಜೋಡಿಸಲಾಗಿದೆ. ಜೊತೆಗೆ, ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಆಧಾರಿತ ಒರ್ಜಿನ್‌ಓಎಸ್ 4 ನಲ್ಲಿ ರನ್ ಆಗುತ್ತದೆ. ಬ್ಯಾಟರಿ ಬಗ್ಗೆ ಹೇಳುವುದಾದರೆ, ಇದು 5,700mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಆಯ್ಕೆ ಹೊಂದಿರಲ್ಲಿದೆ.

50 MP ಕ್ಯಾಮೆರಾ, 32MP ಸೆಲ್ಫಿ ಶೂಟರ್

ಇನ್ನು ಈ ವಿವೋ ಎಕ್ಸ್ ಪೋಲ್ಡ್ 3 ಪ್ರೊ (Vivo X Fold 3 Pro) ಸ್ಮಾರ್ಟ್‌ಫೋನ್‌ನ ಕ್ಯಾಮರಾ ಬಗ್ಗೆ ನೋಡುವುದಾದರೆ, ಓಐಎಸ್‌ನೊಂದಿಗೆ 50 ಮೆಗಾಪಿಕ್ಸೆಲ್‌ ಅಲ್ಟಾಸೆನ್ಸಿಂಗ್ ಪ್ರಾಥಮಿಕ ಕ್ಯಾಮೆರಾ ಹೊಂದಿದೆ. ಜೊತೆಗೆ, 64 ಮೆಗಾಪಿಕ್ಸೆಲ್ 3x ಟೆಲಿಫೋಟೋ ಲೆನ್ಸ್ ಮತ್ತು 50 ಮೆಗಾಪಿಕ್ಸೆಲ್ ಅಲ್ಟಾ-ವೈಡ್ ಲೆನ್ಸ್ ಅನ್ನು ಹೊಂದಿದೆ. ಇನ್ನು ಸೆಲ್ಫಿ (ಸೆಲ್ಫಿ ಶೂಟರ್) ಮತ್ತು ವೀಡಿಯೊ ಕರೆಗಳಿಗಾಗಿ 32 ಮೆಗಾಪಿಕ್ಸೆಲ್ (32MP) ಕ್ಯಾಮೆರಾ ಆಯ್ಕೆ ಪಡೆದಿದೆ.

ವಿವೋ X ಫೋಲ್ಡ್ 3 ಪ್ರೊನ ಬೆಲೆ ಎಷ್ಟು?

ಈ ಡಿವೈಸ್ 16GBವರೆಗೆ LPDDR5X RAM ಮತ್ತು 1TB ವರೆಗೆ UFS4.0 ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಭಾರತದಲ್ಲಿ ಈ Vivo X Fold 3 Proನ ಬೆಲೆ 1.5 ಲಕ್ಷ ರೂ.ಗಿಂತ ಕಡಿಮೆ ಇರುತ್ತದೆ. ಆದರೂ, ಮಾರುಕಟ್ಟೆಯಲ್ಲಿ ಈ ಫೋನ್‌ನ ಬೆಲೆ ಎಷ್ಟು ಎಂದು ತಿಳಿಯಲು Vivo ಅಧಿಕೃತ ಪ್ರಕಟಣೆ ಹೊರಡಿಸುವವರೆಗೂ ಕಾಯಬೇಕಾಗಿದೆ. ಇನ್ನೂ ಫ್ಲಿಪ್‌ಕಾರ್ಟ್, ವಿವೋ ಇಂಡಿಯಾದ ಆನ್‌ಲೈನ್ ಸ್ಟೋರ್ ಮತ್ತು ಇತರ ಆಫ್‌ಲೈನ್ ಸ್ಟೋರ್‌ಗಳಲ್ಲಿ ಈ ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯವಿರುತ್ತದೆ.

ಇದು ಬೆಸ್ಟ್ ಫೋಲ್ಡಬಲ್ ಸ್ಮಾರ್ಟ್‌ಫೋನ್

ಕೆಲವು ಮಾಹಿತಿಗಳ ಪ್ರಕಾರ, ಈ Vivo X Fold 3 Proನ ಹಿಂಜ್ ಕಾರ್ಯವಿಧಾನದಲ್ಲಿ ಕಾರ್ಬನ್ ಫೈಬರ್ ಕೀಲ್ ಘಟಕವನ್ನು ಪಡೆದಿರುವ ಮೊದಲ ಫೋಲ್ಡ್ ಫೋನ್ ಎನ್ನಲಾಗಿದೆ. ಈ ತಂತ್ರಜ್ಞಾನವು ಡಿವೈಸ್‌ನ ವರ್ಧಿತ ಪೋರ್ಟಬಿಲಿಟಿಗಾಗಿ ಹಾಗೂ ಹಗುರವಾದ ಅನುಭವ ನೀಡಲಿದೆ. ದೀರ್ಘಕಾಲದ ಬಳಕೆಯನ್ನು ಸಹಿಸಿಕೊಳ್ಳುವಷ್ಟು ದೃಢವಾಗಿರಲಿದೆ. ಅಲ್ಲದೆ, TA"V Rheinlandನ ಪರೀಕ್ಷೆಯಲ್ಲಿ ಈ ಡಿವೈಸ್ 500,000 ಫೋಲ್ಡ್ ವರೆಗೆ ತಡೆದುಕೊಳ್ಳಬಲ್ಲದು. ಅಂದರೆ, ಸುಮಾರು 12 ವರ್ಷಗಳ ಬಳಕೆಗೆ ಯೋಗ್ಯವಾಗಿದೆ.

ಒಟ್ಟಾರೆ, ಕಳೆದ ವರ್ಷ ಭಾರತದಲ್ಲಿ ಹಲವಾರು ಬ್ರಾಂಡ್‌ನ ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದರು. ಇದೀಗ ವಿವೋ, ತನ್ನ ಹೊಸ ಫೋಲ್ಡಬಲ್ Vivo X Fold 3 Pro ಅನ್ನು ಬಿಡುಗಡೆಗೊಳಿಸಿ, ವಿವಿಧ ಸ್ಮಾರ್ಟ್‌ಫೋನ್ ಕಂಪನಿಗಳಿಗೆ ಪೈಪೋಟಿ ನೀಡಲಿದೆ. ಇನ್ನು, ವಿವೋ X ಫೋಲ್ಡ್ 3 ಪ್ರೊ ಫೋನ್ ಬಿಡುಗಡೆಗೂ ಮೊದಲೇ ಭಾರತದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಸ್ಮಾರ್ಟ್‌ಫೋನ್ ಖರೀದಿಸಲು ಸ್ಮಾರ್ಟ್‌ಫೋನ್ ಪ್ರಿಯರು ಕಾತುರರಾಗಿದ್ದಾರೆ.

Best Mobiles in India

English summary
The Vivo X Fold 3 Pro, which features AI capabilities, will debut in India on June 6. The smartphone has been confirmed to be powered by the flagship Snapdragon 8 Gen 3 SoC. Here are the expected specifications and price of the phone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+