Home
ಮೊಬೈಲ್

Vivo; ಭಾರತದಲ್ಲಿ ಇಂದೇ ಲಾಂಚ್ ಆಗಲಿದೆ ವಿವೋ X ಫೋಲ್ಡ್‌ 3 pro: ಬೆಲೆ, ಫೀಚರ್ಸ್ ತಿಳಿಯಿರಿ

ತನ್ನ ವಿಭಿನ್ನ ಫೀಚರ್ಸ್‌ಗಳ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿರುವ ಮತ್ತು ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಭಾರೀ ಬೇಡಿಕೆ ಹೊಂದಿರುವ ವಿವೋ (Vivo) ಇದೀಗ ಭಾರತದಲ್ಲಿ ನೂತನ ಮೊಬೈಲ್‌ ಒಂದನ್ನು ಬಿಡುಗಡೆ ಮಾಡಲು ಸಿದ್ದವಾಗಿದೆ, ಅದು ಕೂಡ ಇದೀಗ ಬಾರೀ ನಿರೀಕ್ಷೆ ಹುಟ್ಟುಹಾಕಿರುವ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ ಅನ್ನು ಇಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಲು ಸಂಸ್ಥೆ ಸಂಪೂರ್ಣ ತಯಾರಿ ಮಾಡಿಕೊಂಡಿದೆ. ಹಾಗಾದ್ರೆ ವಿವೋದ ಮಡಚಬಹುದಾದ ಈ ಸ್ಮಾರ್ಟ್‌ಫೋನ್‌ ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ, ಬೆಲೆ ಎಷ್ಟಿರಲಿದೆ ಎಂಬುದರ ಕುರಿತು ಸಂಪೂರ್ಣ ವಿವರ ಈ ಲೇಖನದ ಮೂಲಕ ತಿಳಿಯೋಣ.

Vivo X Fold 3 Pro ಇಂದು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ವಿವೋ ಸಂಸ್ಥೆ ತನ್ನ ವಿವೋ X ಫೋಲ್ಡ್‌ 3 ಮತ್ತು X ಫೋಲ್ಡ್‌ 3 Pro ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಈ ವರ್ಷಾರಂಭದಲ್ಲಿ ಚೀನಾದಲ್ಲಿ ಬಿಡುಗಡೆ ಮಾಡಿರುವುದನ್ನು ನಾವು ಗಮನಿಸಬಹುದು. ಆದರೆ 'ಪ್ರೊ' ಮಾದರಿಯ ಸ್ಮಾರ್ಟ್‌ಫೋನ್ ಮಾತ್ರ ಭಾರತದಲ್ಲಿ ಬಿಡುಗಡೆಯಾಗುತ್ತಿದೆ.

Vivo; ಭಾರತದಲ್ಲಿ ಇಂದೇ ಲಾಂಚ್ ಆಗಲಿದೆ ವಿವೋ X ಫೋಲ್ಡ್‌ 3 pro

ಭಾರತದಲ್ಲಿ Vivo X Fold 3 Pro ಲಾಂಚ್: ಇಂದು ಅಂದರೆ ಜೂನ್ 6ರಂದು ಮಧ್ಯಾಹ್ನ 12 ಗಂಟೆಗೆ ಭಾರತದಲ್ಲಿ ಈ ಮೊಬೈಲ್ ಬಿಡುಗಡೆಯಾಗುತ್ತಿದೆ. ಬಿಡುಗಡೆಯ ಬಳಿಕ ಭಾರತದಲ್ಲಿ ಫ್ಲಿಪ್‌ಕಾರ್ಟ್‌ (Flipkart) ಮೂಲಕ ಮಾರಾಟ ಆರಂಭಿಸಲಿದೆ. ಲಾಂಚ್ ಈವೆಂಟ್ ಅನ್ನು ಕಂಪನಿ ತನ್ನ ಅಧಿಕೃತ ಯೂಟ್ಯೂಬ್ ಚಾನಲ್ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಲೈವ್ ಸ್ಟ್ರೀಮ್‌ ಮಾಡಲಿದೆ.

ಚೀನಾದಲ್ಲಿ Vivo X Fold 3 Pro ನ ಮೂಲ ಬೆಲೆ CNY 9,999 ರಿಂದ ಪ್ರಾರಂಭವಾಗುತ್ತದೆ ಅಂದರೆ ಸುಮಾರು ರೂ 1,15,050 ಆದರೆ, ಭಾರತದಲ್ಲಿ ಇದರ ಆರಂಭಿಕ ಬೆಲೆ 1,30,000 ರೂ. ನಿಂದ 1,50,000 ರೂ.ಗಳ ನಡುವೆ ಇರಬಹುದು ಎಂದು ಊಹಿಸಲಾಗಿದೆ.

Vivo X Fold 3 Pro ವಿಶೇಷತೆಗಳು:

ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 3 ಚಿಪ್‌ಸೆಟ್‌ನಿಂದ 16GB ವರೆಗೆ LPDDR5X RAM ಮತ್ತು 1TB ವರೆಗಿನ UFS 4.0 ಸ್ಟೋರೆಜ್ ಸಾಮರ್ಥ್ಯ ಹೊಂದಿದೆ. ಮಡಿಚಬಹುದಾದ ಸ್ಮಾರ್ಟ್‌ಫೋನ್ ವಿವೋದ ಬ್ಲೂ LM AI ಜೊತೆಗೆ ಆಂಡ್ರಾಯ್ಡ್‌ 14 ಆಧಾರಿತ OriginOS 4.0 ನಲ್ಲಿ ರನ್ ಮಾಡುತ್ತದೆ. ಇದು 100W ವೈಯರ್ಡ್ ಮತ್ತು 50W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,700 mAh ಬ್ಯಾಟರಿ ಹೊಂದಿದೆ.

ವಿವೋದ ಮುಂಬರುವ ಫೋಲ್ಡಬಲ್ ಸ್ಮಾರ್ಟ್‌ಫೋನ್ 2480 x 2200 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರುವ 8.03 ಇಂಚಿನ 8T LTPO OLED ಡಿಸ್‌ಪ್ಲೇಯನ್ನು ಹೊಂದಿದೆ. ಫಲಕದ ಹೊಂದಾಣಿಕೆಯ 120Hz ರಿಫ್ರೆಶ್ ರೇಟ್ ಮತ್ತು 4:3.55 ಆಸ್ಪೆಕ್ಟ್‌ ರೇಶ್ಯೂ ಹೊಂದಿದೆ. ಡಿಸ್‌ಪ್ಲೇ HDR10+ ಮತ್ತು ಡಾಲ್ಬಿ ವಿಷನ್ ಫಾರ್ಮ್ಯಾಟ್‌ಗಳು ಮತ್ತು 4,500 nits ನಷ್ಟು ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಜೊತೆಗೆ ಸ್ಟಿರಿಯೊ ಸ್ಪೀಕರ್‌ಗಳು ವೈರ್‌ಲೆಸ್ ಲಾಸ್‌ಲೆಸ್ ಹೈ-ಫೈ ಆಡಿಯೊದೊಂದಿಗೆ ಬರುತ್ತದೆ.

ಹೊರಭಾಗದಲ್ಲಿ, 2748 x 1172 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.53 ಇಂಚಿನ 8T LTPO OLED ಕವರ್ ಡಿಸ್‌ಪ್ಲೇ ಹೊಂದಿದೆ. ಫಲಕವು 4,500 nits ಬ್ರೈಟ್‌ನೆಸ್, 120Hz ರಿಫ್ರೆಶ್ ರೇಟ್ ಮತ್ತು 21.1:9 ಆಕಾರ ಅನುಪಾತವನ್ನು ಹೊಂದಿದೆ. ಕವರ್ ಡಿಸ್‌ಪ್ಲೇ ಮೇಲೆ ಡಾಲ್ಬಿ ವಿಷನ್ ಮತ್ತು HDR10+ ಬೆಂಬಲವೂ ಇದೆ. 5G, Wi-Fi 7, NFC, USB 3.2 Gen 2 ಪೋರ್ಟ್ ಮತ್ತು ಹೆಚ್ಚಿನ ಕನೆಕ್ಟ್‌ ಆಯ್ಕೆ ಹೊಂದಿದೆ.

Vivo X Fold 3 Pro ಕ್ಯಾಮೆರಾಗಳು: ಇದು 50 MP VCS ಬಯೋನಿಕ್‌ ಓಮ್ನಿವಿಷನ್ OV50H ಪ್ರಾಥಮಿಕ ಸೆನ್ಸಾರ್‌ f/1.68 ಅಪರ್ಚರ್ ಮತ್ತು OIS ಬೆಂಬಲ ಹೊಂದಿದೆ. ಹೆಚ್ಚುವರಿಯಾಗಿ ಮುಖ್ಯ ಕ್ಯಾಮೆರಾವು f/2.0 ಡ್ಯುಯಲ್ ಕ್ಯಾಮೆರಾ 50 MP ಸ್ಯಾಮ್‌ಸಂಗ್ JN1 ಅಲ್ಟ್ರಾವೈಡ್ ಲೆನ್ಸ್ ಮತ್ತು f/2.57 ಅಪರ್ಚರ್, OIS ಮತ್ತು 3x ಆಪ್ಟಿಕಲ್ ಜೂಮ್‌ನೊಂದಿಗೆ 64 MP OV64B ಟೆಲಿಫೋಟೋ-ಪೆರಿಸ್ಕೋಪ್ ಶೂಟರ್‌ ಹೊಂದಿದೆ.

ಇದರ ಕ್ಯಾಮೆರಾಗಳನ್ನು ZEISS ನೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಫೋನ್ ಕಸ್ಟಮ್ V3 ISPಯೊಂದಿಗೆ ಬರುತ್ತದೆ. ಇದರ ಬ್ಯಾಕ್‌ ಕ್ಯಾಮೆರಾದಿಂದ 4K ಮತ್ತು 8K ರೆಸಲ್ಯೂಶನ್ ಎರಡರಲ್ಲೂ ವೀಡಿಯೊವನ್ನು ರೆಕಾರ್ಡ್ ಮಾಡಬಹುದು. ಇದರ ಪ್ರತಿ ಡಿಸ್‌ಪ್ಲೇಗಳಲ್ಲಿ f/2.4 ಅಪರ್ಚರ್‌ನೊಂದಿಗೆ 32 MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

Best Mobiles in India

English summary
Vivo X Fold 3 Pro is all set to launch officially in India today. We can see that Vivo launched its Vivo X Fold 3 and X Fold 3 Pro series of smartphones in China earlier this year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+